ನ.19ಕ್ಕೆ ಶತಮಾನದ ಸುದೀರ್ಘ ಚಂದ್ರ ಗ್ರಹಣ, ರಾಜ್ಯದಲ್ಲಿ ಗೋಚರಿಸುತ್ತಾ?

By Suvarna News  |  First Published Nov 7, 2021, 4:27 PM IST

ಈ ಶತಮಾನದ ಸುದೀರ್ಘ ಚಂದ್ರ ಗ್ರಹಣವು ನವೆಂಬರ್ 19ರಂದು ಘಟಿಸಲಿದೆ. ಈ ವಿಸ್ಮಯಕಾರಿ ಆಕಾಶ ಘಟನೆಯನ್ನು ಕಣ್ಣುತುಂಬಿಕೊಳ್ಳಲು ಖಗೋಳ ಶಾಸ್ತ್ರಜ್ಞರು, ಆಕಾಶ ಕಾಯ ವೀಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಚಂದ್ರ ಗ್ರಹಣವು ಅಸ್ಸಾಮ್, ಅರುಣಾಚಲ ಪ್ರದೇಶ ಸೇರಿದಂತೆ ಈಶಾನ್ಯ  ಭಾರತದ ಕೆಲವು ರಾಜ್ಯಗಳಲ್ಲಿ ಗೋಚರಿಸಲಿದೆ. 


ಈ ತಿಂಗಳ ಕಾರ್ತಿಕ ಪೂರ್ಣಿಮೆ (Kartik Purnima) ವಿಶೇಷವಾಗಿರಲಿದೆ. ಯಾಕೆಂದರೆ, ಅಂದು ಅಂದರೆ ನವೆಂಬರ್ 19 ಕಾರ್ತಿಕ ಪೂರ್ಣಿಮೆಯ ದಿನ ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರ ಗ್ರಹಣ (lunar eclipse) ನಡೆಯಲಿದೆ. ನಮ್ಮ ರಾಜ್ಯದಲ್ಲಿ ಈ ಗ್ರಹಣ ಗೋಚರಿಸುವ ಬಗ್ಗೆ ಸ್ಪಷ್ಟತೆ ಇಲ್ಲ.

ಈಗಾಗಲೇ ಖಗೋಳಶಾಸ್ತ್ರಜ್ಞರು (Astronomers) ಹಾಗೂ ಆಕಾಶ ಕಾಯವೀಕ್ಷಕರಲ್ಲಿ ಕುತೂಹಲ ಮನೆ ಮಾಡಿದ್ದು,  ಸುದೀರ್ಘ ಚಂದ್ರಗ್ರಹಣ ಗಳಿಗೆಗಾಗಿ ಕಾಯುತ್ತಿದ್ದಾರೆ. ಇದೊಂದು ಅಪೂರ್ವ ಚಂದ್ರಗ್ರಹಣ ಎನಿಸಿಕೊಳ್ಳಲಿದೆ. ಕಾತ್ರಿಕ ಪೂರ್ಣಿಮೆ ಎಂದರೆ, ನವೆಂಬರ್ 19ರಂದು ಸೂರ್ಯ ಮತ್ತು ಚಂದ್ರರ ನಡುವೆ ಭೂಮಿಯಾ ಹಾದು ಹೋಗಲಿದೆ. ಆಗ ಚಂದ್ರನ ಮೇಲೆ ನೆರಳು ಮೂಡಲಿದ್ದು, ಅವಿಸ್ಮರಣೀಯ ಎನಿಸಿಕೊಳ್ಳಿದೆ. 

Latest Videos

ಚಂದ್ರನ ಕಪ್ಪು ಭಾಗದಲ್ಲಿ ಮಂಜುಗಡ್ಡೆ ಪತ್ತೆ!

ಈ ವೇಳೆ, ಸುಮಾರು 1:30 pm ನಂತರ ಪೂರ್ಣ ಚಂದ್ರಗ್ರಹಣವು ಪೂರ್ಣ ಪ್ರಮಾಣದಲ್ಲಿರಲಿದೆ. ಈ ಸಂದರ್ಭದಲ್ಲಿ ಭೂಮಿಯು 97 ಪ್ರತಿಶತದಷ್ಟು ಪೂರ್ಣ ಚಂದ್ರನನ್ನು ಸೂರ್ಯ (SUN) ನ ಕಿರಣಗಳಿಂದ ಮರೆಮಾಡುತ್ತದೆ ಎಂದು ನಾಸಾ (NASA) ಹೇಳಿದೆ. ಈ ಅದ್ಭುತವಾದ ಆಕಾಶ ಘಟನೆಯ ಸಮಯದಲ್ಲಿ, ಚಂದ್ರನು ಕೆಂಪು ಬಣ್ಣವನ್ನು ಪಡೆಯುತ್ತಾನೆ. ಇದು ಭಾರತ (India)ದ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ. ಹಾಗಾಗಿ, ಭಾರತದಲ್ಲೆಡೆಯೂ ಚಂದ್ರಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗದೇ ಹೋಗಬಹುದು. ಇದು ಅವಿಸ್ಮರಣೀಯ ಆಕಾಶ ಘಟನೆಯಾಗಲಿದೆ.

ಈ ಚಂದ್ರ ಗ್ರಹಣವು 3 ಗಂಟೆ 28 ನಿಮಿಷ ಹಾಗೂ 23 ಸೆಕೆಂಡುಗಳ ಕಾಲ ಇರಲಿದೆ. ಹಾಗಾಗಿಯೇ ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ (lunar eclipse) ಎನಿಸಿಕೊಳ್ಳಲಿದೆ. 2001ರಿಂದ 2100ವರೆಗಿನ ಅವಧಿಯಲ್ಲಿ ಇಷ್ಟು ಸುದೀರ್ಘವಾದ ಯಾವುದೇ ಚಂದ್ರ ಗ್ರಹಣ ಇರುವುದಿಲ್ಲ. ಹಾಗಾಗಿಯೇ ಇದನ್ನ ಶತಮಾನದ ಸುದೀರ್ಘ ಚಂದ್ರ ಗ್ರಹಣ ಎಂದು ಕರೆಯಲಾಗುತ್ತಿದೆ ದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಹೇಳಿಕೊಂಡಿದೆ.

21 ಶತಮಾನದಲ್ಲಿ  ಭೂಮಿಯು ಒಟ್ಟು 228 ಚಂದ್ರ ಗ್ರಹಣ (lunar eclipse) ಗಳಿಗೆ ಸಾಕ್ಷಿಯಾಗಲಿದೆ. ಹೆಚ್ಚಾಗಿ ತಿಂಗಳಲ್ಲಿ ಎರಡು ಚಂದ್ರಗ್ರಹಣಗಳು ಇರಲಿದ್ದು, ಕೆಲವೊಮ್ಮೆ ಮೂರು ಚಂದ್ರ ಗ್ರಹಣಗಳೂ ಕೂಡ ಆಗಬಹುದು ಎಂದು ನಾಸಾ ಅಭಿಪ್ರಾಯಪಟ್ಟಿದೆ.

ಸೌರಮಂಡಲದ ಉಗಮದ ಬಗ್ಗೆ ಅಧ್ಯಯನ ನಡೆಸಲಿರುವ NASAದ ಬಾಹ್ಯಾಕಾಶ ನೌಕೆ Lusy

ಸಾಮಾನ್ಯವಾಗಿ, ಚಂದ್ರ (Moon) ನ ಮುಖವು ಅದರ ಮೇಲ್ಮೈಯಿಂದ ಪ್ರತಿಫಲಿಸುವ ಸೂರ್ಯ (Sun) ನ ಬೆಳಕಿನಿಂದ ಪ್ರಕಾಶಿಸಲ್ಪಡುತ್ತದೆ. ಆದರೆ ಚಂದ್ರಗ್ರಹಣದ ಸಮಯದಲ್ಲಿ, ಚಂದ್ರ (Moon), ಸೂರ್ಯ (Sun) ಮತ್ತು ಭೂಮಿ (Earth) ಯು ನೇರ ರೇಖೆಯಲ್ಲಿ ಹೊಂದಿಕೆಯಾಗುತ್ತದೆ. ಭೂಮಿಯು ಸೂರ್ಯನ ಬೆಳಕನ್ನು ಚಂದ್ರನನ್ನು ತಲುಪದಂತೆ ನಿರ್ಬಂಧಿಸುತ್ತದೆ ಮತ್ತು ಹೀಗಾಗಿ, ಚಂದ್ರನ ವಸ್ತುವು ಭೂಮಿಯಿಂದ ತಿನ್ನಲ್ಪಟ್ಟಂತೆ ಕಾಣುತ್ತದೆ. ಸಂಪೂರ್ಣ ಚಂದ್ರಗ್ರಹಣದ ಸಮಯದಲ್ಲಿ, ಚಂದ್ರನ 100 ಪ್ರತಿಶತವು ಭೂಮಿಯ ಶಂಕುವಿನಾಕಾರದ ನೆರಳಿನಿಂದ ಅಸ್ಪಷ್ಟವಾಗಿದೆ, ಇದನ್ನು ಅಂಬ್ರಾ (Umbar) ಎಂದು ಕರೆಯಲಾಗುತ್ತದೆ.

ಚಂದ್ರನು ಕ್ಷಿತಿಜ ಮೇಲಿರುವ ಕಡೆ ಶತಮಾನದ ಸುದೀರ್ಘ ಚಂದ್ರ ಗ್ರಹಣವು (lunar eclipse) ಗೋಚರಿಸಲಿದೆ. ಹಾಗಾಗಿ, ಅಸ್ಸಾಮ್ (Assam) ಮತ್ತು ಅರುಣಾಚಲ ಪ್ರದೇಶ (Aurunachal Pradesh) ರಾಜ್ಯಗಳು ಸೇರಿದಂತೆ ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಈ ಶತಮಾನದ ಸುದೀರ್ಘ ಚಂದ್ರಗ್ರಹಣವು ಗೋಚರವಾಗಲಿದೆ. 

ಭೂಮಿ ರಕ್ಷಣೆಗೆ, ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಡಿಕ್ಕಿ ಹೊಡೆಸಲು ನಾಸಾ ಸಿದ್ಧತೆ

ಇದೇ ವೇಲೆ ಉತ್ತರ ಅಮೆರಿಕದಲ್ಲಿ ಈ ಚಂದ್ರ ಗ್ರಹಣ ಪೂರ್ಣ ಪ್ರಮಾಣದಲ್ಲಿ ಗೋಚರವಾಗಲಿದೆ. ಇಲ್ಲಿನ ಜನರು ಪೂರ್ತಿಯಾಗಿ ಚಂದ್ರ ಗ್ರಹಣವನ್ನು ವೀಕ್ಷಿಸಬಹುದಾಗಿದೆ. ಅಮೆರಿಕದ 50 ರಾಜ್ಯಗಳು, ಮೆಕ್ಸಿಕೋ (Mexico) ದಲ್ಲಿ ಗೋಚರವಾಗಲಿದೆ. ಹಾಗೆಯೇ, ಆಸ್ಟ್ರೇಲಿಯಾ (Australia), ಉತ್ತರ ಯುರೋಪ್ (Northern Europe), ಪೆಸಿಫಿಕ್ ಒಸಿಯನ್ ಪ್ರದೇಶ (Pacific Ocean Region) ದಲ್ಲೂ ಶತಮಾನದ ಸುದೀರ್ಘ ಚಂದ್ರಗ್ರಹಣ ಗೋಚರವಾಗಲಿದೆ.

click me!