ಪ್ರಳಯದ ಸೂಚನೆ ನೀಡಿತಾ ಮೆಗಾಫ್ಲಾಶ್, ಬರೋಬ್ಬರಿ 829 ಕಿ.ಮಿ ವ್ಯಾಪ್ತಿಯಲ್ಲಿ ಅಪ್ಪಳಿಸಿದ ಮಿಂಚು

Published : Aug 02, 2025, 04:47 PM IST
Life-saving tips to avoid lightning strikes

ಸಾರಾಂಶ

ಇದೇ ಮೊದಲ ಬಾರಿಗೆ ಅತೀ ದೊಡ್ಡ ಮಿಂಚು ಅಪ್ಪಳಿಸಿದೆ. ಬರೋಬ್ಬರಿ 829 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಿಂಚು ಕಾಣಿಸಿಕೊಂಡಿದೆ. ಇದು ಮತ್ತೊಂದು ಪ್ರಾಕೃತಿಕ ವಿಕೋಪದ ಮುನ್ಸೂಚನೆಯೇ?

ಡಲ್ಲಾಸ್ (ಆ.02) ಭಾರತ, ಚೀನಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಪ್ರವಾಹ, ಪ್ರಾಕೃತಿಕ ವಿಕೋಪ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಇದರ ನಡುವೆ ರಷ್ಯಾ, ಜಪಾನ್‌ನಲ್ಲಿ ಸುನಾಮಿ ತೀವ್ರ ಆತಂಕ ಪರಿಸ್ಥಿತಿ ಸೃಷ್ಟಿಸಿದೆ. ಇದರ ನಡುವೆ ಸಂಭವಿಸಿದ ಘಟನೆ ಇದೀಗ ಮತ್ತೊಂದು ಪ್ರಾಕೃತಿಕ ವಿಕೋಪದ ಸೂಚನೆ ನೀಡಿತಾ ಅನ್ನೋ ಆತಂಕ ಎದುರಾಗಿದೆ. ಕಾರಣ ಇದೇ ಮೊದಲ ಬಾರಿಗೆ ಬರೋಬ್ಬರಿ 829 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಿಂಚು ಅಪ್ಪಳಿಸಿದ ಘಟನೆ ನಡೆದಿದೆ. ಅಮೆರಿಕದ ಡಲ್ಲಾಸ್‌ನಿಂದ ಕಾನ್ಸಾಸ್ ನಗರದ ವರೆಗೆ ಈ ಮಿಂಚು ಕಾಣಿಸಿಕೊಂಡಿದೆ.

829 ಕಿಲೋಮೀಟರ್ ಇದುವರೆಗೆ ದಾಖಲಾದ ಅತೀದೊಡ್ಡ ಮಿಂಚು

ಮಳೆಗಾಲದ ಆರಂಭದಲ್ಲಿ ಮಿಂಚು, ಗುಡುಗು ಸಾಮಾನ್ಯ. ಆದರೆ ಇದೇ ಮಿಂಚು ಗುಡುಗು ಹಲೆವೆಡೆ ಅವಾಂತರ ಸೃಷ್ಟಿಸಿದೆ. ಗುಡುಗು ಮಿಂಚಿಗೆ ಹಲವರು ಬಲಿಯಾಗಿದ್ದಾರೆ. ಇದೀಗ ಮೊದಲ ಬಾರಿಗೆ 829 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಿಂಚು ಅಪ್ಪಳಿಸಿದ ಘಟನೆ ನಡೆದಿದೆ. ಇದಕ್ಕೂ ಮೊದಲು ಅಂದರೆ 2017ರಲ್ಲಿ 800 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಿಂಚು ಕಾಣಿಸಿಕೊಂಡಿತ್ತು. ಇದು ಬೃಹತ್ ಮಿಂಚು ಎಂದು ದಾಖಲಾಗಿತ್ತು. ಇದೀಗ ಇದನ್ನು ಮೀರಿಸಿದ ಘಟನೆ ನಡೆದಿದೆ.

ಆಗಸದ ಸಂಪೂರ್ಣ ಮಿಂಚು

ಡಲ್ಲಾಸ್‌ನಿಂದ ಹಿಡಿದು ಕನ್ಸಾನ್ಸ್ ನಗರದ ವರೆಗೆ ಆಗಸದ ತುಂಬ ಮಿಂಚು ಕಾಣಿಸಿಕೊಂಡಿದೆ. ಸ್ಯಾಟಲೈಟ್ ಚಿತ್ರದಲ್ಲಿ ಈ ಮಿಂಚು ಸೆರೆಯಾಗಿದೆ. ಇಡೀ ಆಗಸದಲ್ಲಿ ಸಂಪೂರ್ಣ ಮಿಂಚು ಕಾಣಿಸಿಕೊಂಡಿದೆ. ಒಂದೇ ಬಾರಿ ಮಿಂಚು ಕಾಣಿಸಿಕೊಂಡ ಕಾರಣ ಭೂಮಿ ಬೆಳಕು ಆವರಿಸಿಕೊಂಡಿದೆ. ಅಮೆರಿಕದ WMO ಈ ಅತೀ ದೊಡ್ಡ ಮಿಂಚನ್ನು ಮೆಗಾಫ್ಲಾಶ್ ಎಂದು ಕರೆದಿದೆ.

ದಾಖಲೆ ಖಚಿತಪಡಿಸಿದ ತಂಡ

ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್, ಜರ್ಮನಿ, ಸ್ಪೇನ್, ನೇಪಾಳ, ಇಸ್ರೇಲ್‌ನಲ್ಲಿರುವ 11 ಸದಸ್ಯರ ತಜ್ಞರ ಸಮಿತಿಯು ಹೊಸ ದಾಖಲೆಯನ್ನು ಪ್ರಮಾಣೀಕರಿಸಿದೆ. ಉಪಗ್ರಹ ಆಧಾರಿತ ಮಿಂಚಿನ ಮ್ಯಾಪಿಂಗ್ 2016 ರಿಂದ ಮಾತ್ರ ಕಾರ್ಯನಿರ್ವಹಿಸುತ್ತಿದೆ - ತೀವ್ರತೆ, ಸ್ಥಳ ಅಥವಾ ಆವರ್ತನದಲ್ಲಿ ಮಾದರಿಗಳು ಅಥವಾ ಪ್ರವೃತ್ತಿಗಳನ್ನು ನಿರ್ಧರಿಸಲು ಸಮಯದ ಚೌಕಟ್ಟನ್ನು ಕಡಿಮೆ ಮಾಡಲು. ಇನ್ನೊಂದು ದಶಕದ ಡೇಟಾವನ್ನು ನಮಗೆ ನೀಡಿ ಮತ್ತು ನಾವು ಅದನ್ನು ಪರಿಹರಿಸಲು ಪ್ರಾರಂಭಿಸಬಹುದು," ಎಂದು ಸೆರ್ವೆನಿ AFP ಗೆ ತಿಳಿಸಿದರು. ಯುನೈಟೆಡ್ ಸ್ಟೇಟ್ಸ್‌ನ ತೀವ್ರ ಬಿರುಗಾಳಿಗಳ ಸಂಶೋಧನಾ ಕೇಂದ್ರದ ಮೈಕೆಲ್ ಜೆ. ಪೀಟರ್ಸನ್, ಕಾಲಾನಂತರದಲ್ಲಿ ಡೇಟಾ ದಾಖಲೆಯು ವಿಸ್ತರಿಸಿದಂತೆ, "ನಾವು ಭೂಮಿಯ ಮೇಲಿನ ಅಪರೂಪದ ರೀತಿಯ ತೀವ್ರ ಮಿಂಚನ್ನು ಸಹ ಗಮನಿಸಲು ಸಾಧ್ಯವಾಗುತ್ತದೆ ಮತ್ತು ಮಿಂಚಿನ ವ್ಯಾಪಕ ಪರಿಣಾಮಗಳನ್ನು ತನಿಖೆ ಮಾಡಲು ಸಾಧ್ಯವಾಗುತ್ತದೆ.

 

 

ಅದ್ಭುತದ ಮಾರಕ ಮೂಲ

ಹೊಸ ಸಂಶೋಧನೆಗಳು ಮಿಂಚಿನ ಬಿರುಗಾಳಿಗಳಿಂದ ಉಂಟಾಗುವ ಅಪಾಯಗಳನ್ನು ಎತ್ತಿ ತೋರಿಸಿದೆ ಎಂದು WMO ಹೇಳಿದೆ. 2027 ರ ಅಂತ್ಯದ ವೇಳೆಗೆ ಅಪಾಯಕಾರಿ ಹವಾಮಾನ ಘಟನೆಗಳಿಗಾಗಿ ಸುಧಾರಿತ ಆರಂಭಿಕ ಎಚ್ಚರಿಕೆ ವ್ಯವಸ್ಥೆಗಳಿಂದ ಗ್ರಹದಲ್ಲಿರುವ ಪ್ರತಿಯೊಬ್ಬರೂ ಸಂಪೂರ್ಣವಾಗಿ ಆವರಿಸಲ್ಪಡಬೇಕೆಂದು ಏಜೆನ್ಸಿ ಒತ್ತಾಯಿಸುತ್ತಿದೆ - ಮಿಂಚು ಸೇರಿದಂತೆ. "ಮಿಂಚು ಅದ್ಭುತದ ಮೂಲವಾಗಿದೆ ಆದರೆ ಪ್ರತಿ ವರ್ಷ ವಿಶ್ವಾದ್ಯಂತ ಅನೇಕ ಜೀವಗಳನ್ನು ಬಲಿ ತೆಗೆದುಕೊಳ್ಳುವ ಪ್ರಮುಖ ಅಪಾಯವಾಗಿದೆ" ಎಂದು WMO ಮುಖ್ಯಸ್ಥ ಸೆಲೆಸ್ಟೆ ಸೌಲೋ ಹೇಳಿದರು.

WMO ನ ಇತರ ಮೂರು ಮಿಂಚಿನ ದಾಖಲೆಗಳು:

ಅತಿ ಉದ್ದದ ಅವಧಿಯ ಮಿಂಚು: ಜೂನ್ 18, 2020 ರಂದು ಉರುಗ್ವೆ ಮತ್ತು ಉತ್ತರ ಅರ್ಜೆಂಟೀನಾದ ಮೇಲೆ ಗುಡುಗು ಸಹಿತ ಮಳೆಯ ಸಮಯದಲ್ಲಿ 17.102 ಸೆಕೆಂಡುಗಳು (ದೋಷದ ಅಂತರ 0.002 ಸೆಕೆಂಡುಗಳು).

ಅತಿ ಹೆಚ್ಚು ಮರಣ: 1994 ರಲ್ಲಿ ಈಜಿಪ್ಟ್‌ನ ಡ್ರೊಂಕಾದಲ್ಲಿ ತೈಲ ಟ್ಯಾಂಕ್‌ಗಳ ಗುಂಪನ್ನು ಮಿಂಚು ಹೊಡೆದಾಗ, ಸುಡುವ ತೈಲವು ಪಟ್ಟಣವನ್ನು ಪ್ರವಾಹಕ್ಕೆ ಕಾರಣವಾದಾಗ ಪರೋಕ್ಷವಾಗಿ 469 ಜನರು ಸಾವನ್ನಪ್ಪಿದರು.

ಅತಿ ಹೆಚ್ಚು ಮರಣ (ಏಕ ಹೊಡೆತ): 1975 ರಲ್ಲಿ ಜಿಂಬಾಬ್ವೆಯಲ್ಲಿ ಗುಡಿಸಲಿನಲ್ಲಿ ಸುರಕ್ಷತೆಗಾಗಿ ಸೇರಿದ್ದಾಗ ನೇರ ಮಿಂಚಿನ ಹೊಡೆತದಿಂದ 21 ಜನರು ಸಾವನ್ನಪ್ಪಿದರು.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ