NASA JW Telescope: ಸೆಲ್ಫಿ ಜತೆಗೆ ಬಾಹ್ಯಾಕಾಶದಿಂದ ಮೊದಲ ಚಿತ್ರ ಕಳುಹಿಸಿದ ಜೇಮ್ಸ್ ವೆಬ್ ಟೆಲಿಸ್ಕೋಪ್!

By Suvarna NewsFirst Published Feb 12, 2022, 12:22 PM IST
Highlights

ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ತನ್ನ ಮೊದಲ ನಕ್ಷತ್ರವನ್ನು ಗುರುತಿಸಿದೆ ಮತ್ತು ಸೆಲ್ಫಿಯನ್ನು ಸೆರೆಹಿಡಿದಿದೆ ಎಂದು ನಾಸಾ ಶುಕ್ರವಾರ ಪ್ರಕಟಿಸಿದೆ

Tech Desk: ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು (James Webb Space Telescope) ತನ್ನ ಮೊದಲ ನಕ್ಷತ್ರವನ್ನು ಗುರುತಿಸಿದೆ ಮತ್ತು ಸೆಲ್ಫಿಯನ್ನು ಸೆರೆಹಿಡಿದಿದೆ ಎಂದು ನಾಸಾ ಶುಕ್ರವಾರ ಪ್ರಕಟಿಸಿದೆ. ನಾಸಾದ ಈ ಉಪಕ್ರಮವು ಬ್ರಹ್ಮಾಂಡ ಮೂಲ ಹಾಗೂ ಇತರೆ ಗ್ರಹಗಳನ್ನು ತಿಳಿಯುವ ಬಗ್ಗೆ ಪ್ರಮುಖ ಪಾತ್ರವನ್ನು ನಿರ್ವಹಿಸಲಿದೆ ಎಂಬುದ ವಿಜ್ಞಾನಿಗಳು ಅಭಿಪ್ರಾಯಪಡುತ್ತಿದ್ದಾರೆ. ಒಂದೊಮ್ಮೆ ಸಂಪೂರ್ಣವಾಗಿ ಯಶಸ್ವಿಯಾದರೆ  ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ದೊರೆಯಲಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಬಾಹ್ಯಾಕಾಶದಿಂದ ಕಳುಹಿಸಲಾದ ಮೊದಲ ಚಿತ್ರವು ಅದ್ಭುತವಾಗಿದ್ದು ಕಪ್ಪು ಹಿನ್ನೆಲೆಯಲ್ಲಿ 18 ಮಸುಕಾದ ಬಿಳಿ ಚುಕ್ಕೆಗಳು, ಎಲ್ಲವೂ HD 84406 ಉರ್ಸಾ ಮೇಜರ್ (Ursa Major) ನಕ್ಷತ್ರಪುಂಜದಲ್ಲಿ ಪ್ರಕಾಶಮಾನವಾದ, ಪ್ರತ್ಯೇಕವಾದ ನಕ್ಷತ್ರವನ್ನು ತೋರಿಸುತ್ತಿವೆ. ಇದು ಒಂದು ಪ್ರಮುಖ ಮೈಲಿಗಲ್ಲು ಪ್ರತಿನಿಧಿಸುತ್ತದೆ. 18 ಚುಕ್ಕೆಗಳನ್ನು ಪ್ರಾಥಮಿಕ ಕನ್ನಡಿಯ 18 ​​ಪ್ರತ್ಯೇಕ ವಿಭಾಗಗಳಿಂದ ಸೆರೆಹಿಡಿಯಲಾಗಿದೆ - ಮತ್ತು ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ನಲ್ಲಿ ಆ ಷಡ್ಭುಜೀಯ ತುಣುಕುಗಳನ್ನು ಜೋಡಿಸಲು ಮತ್ತು ಕೇಂದ್ರೀಕರಿಸಲು ಚಿತ್ರವು ಈಗ ಆಧಾರವಾಗಿದೆ.

ಇದನ್ನೂ ಓದಿ: NASA JW Telescope: ಭೂಮಿಯಿಂದ 15,00,000 ಕಿ.ಮೀ ದರೂದಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಸ್ಥಿರ!

ಜೇಮ್ಸ್ ವೆಬ್ ಟೆಲಿಸ್ಕೋಪ್ ಸ್ಥಿರ: ಕಳೆದ ಕ್ರಿಸ್ಮಸ್ ದಿನದಂದು ಟೇಕ್ ಆಫ್ ಆಗಿದ್ದ ಜೇಮ್ಸ್ ವೆಬ್ ಬಾಹ್ಯಾಕಾಶ ಟೆಲಿಸ್ಕೋಪ್ (Mames Web Space Telescope- JWST) ತನ್ನ ತವರು ಗ್ರಹದಿಂದ ಸುಮಾರು ಒಂದು ಮಿಲಿಯನ್ ಮೈಲುಗಳಷ್ಟು ದೂರದಲ್ಲಿರುವ ಭೂಮಿ ಮತ್ತು ಸೂರ್ಯನ ನಡುವೆ ಶಾಶ್ವತ ಮತ್ತು  ಸ್ಥಿರವಾದ ಸ್ಥಾನಕ್ಕೆ ತನ್ನನ್ನು ತಾನು ಇರಿಸಿಕೊಳ್ಳಲು ನಿಗದಿತ ರಾಕೆಟ್ ಆನ್-ಕೋರ್ಸ್ ಕರೆಕ್ಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ನಾನಾ (NASA) ಘೋಷಿಸಿತ್ತು.

ತುಂಬಾ ಸಂತೋಷವಾಯಿತು : "ಇಡೀ ವೆಬ್ ತಂಡವು ಚಿತ್ರಗಳನ್ನು ತೆಗೆದುಕೊಳ್ಳುವ ಮತ್ತು ದೂರದರ್ಶಕವನ್ನು ಜೋಡಿಸುವ ಮೊದಲ ಹಂತಗಳು ಎಷ್ಟು ಚೆನ್ನಾಗಿ ನಡೆಯುತ್ತಿದೆ ಎಂಬುದರ ಕುರಿತು ಭಾವಪರವಶವಾಗಿದೆ. ಬೆಳಕು NIRCamಗೆ ದಾರಿ ಮಾಡುವುದನ್ನು ನೋಡಿ ನಮಗೆ ತುಂಬಾ ಸಂತೋಷವಾಯಿತು ಎಂದು NIRCam ಉಪಕರಣದ ಪ್ರಧಾನ ತನಿಖಾಧಿಕಾರಿ ಮತ್ತು ಅರಿಜೋನಾ ವಿಶ್ವವಿದ್ಯಾಲಯದ ಖಗೋಳಶಾಸ್ತ್ರದ ರೀಜೆಂಟ್ಸ್ ಪ್ರಾಧ್ಯಾಪಕ ಮಾರ್ಸಿಯಾ ರೈಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Space Film Studio: ಜಗತ್ತಿನ ಮೊದಲ ಸ್ಪೇಸ್ ಫಿಲ್ಮ್ ಸ್ಟುಡಿಯೋ 2024ರಲ್ಲಿ ಶುರು!

ಚಿತ್ರ ಸೆರೆಹಿಡಿಯುವ ಪ್ರಕ್ರಿಯೆಯು ಫೆಬ್ರವರಿ 2 ರಂದು ಪ್ರಾರಂಭವಾಯಿತು, ವೆಬ್ ನಕ್ಷತ್ರದ ಮುನ್ಸೂಚಿತ ಸ್ಥಳದ ಸುತ್ತಲೂ ವಿವಿಧ ಸ್ಥಾನಗಳನ್ನು ತೋರಿಸುತ್ತದೆ. ವೆಬ್‌ನ ಆರಂಭಿಕ ಹುಡುಕಾಟವು ಹುಣ್ಣಿಮೆಯ ಗಾತ್ರಕ್ಕೆ ಸಮನಾದ ಆಕಾಶದ ಪ್ರದೇಶವನ್ನು ಆವರಿಸಿದ್ದರೂ, ಚುಕ್ಕೆಗಳೆಲ್ಲವೂ ಕೇಂದ್ರ ಭಾಗದ ಬಳಿ ನೆಲೆಗೊಂಡಿವೆ, ಅಂದರೆ ವೀಕ್ಷಣಾಲಯವು ಈಗಾಗಲೇ ಅಂತಿಮ ಜೋಡಣೆಗಾಗಿ ತುಲನಾತ್ಮಕವಾಗಿ ಉತ್ತಮ ಸ್ಥಾನದಲ್ಲಿದೆ.

ಸೆಲ್ಫಿ ಸಾಧ್ಯವಿಲ್ಲ ಎಂದು ಹೇಳಿದ್ದ ನಾಸಾ: ಪ್ರಕ್ರಿಯೆಗೆ ಸಹಾಯ ಮಾಡಲು, ತಂಡವು ಬಾಹ್ಯವಾಗಿ ಅಳವಡಿಸಲಾದ ಕ್ಯಾಮೆರಾ NIRCam ಬೋರ್ಡ್‌ನಲ್ಲಿರುವ ವಿಶೇಷ ಲೆನ್ಸ್ ಮೂಲಕ ತೆಗೆದ "ಸೆಲ್ಫಿ" ಅನ್ನು ಸಹ ಸೆರೆಹಿಡಿಯಿತು . ನಾಸಾ ಈ ಹಿಂದೆ ಸೆಲ್ಫಿ ಸಾಧ್ಯವಿಲ್ಲ ಎಂದು ಹೇಳಿತ್ತು, ಆದ್ದರಿಂದ ಈ ಸುದ್ದಿ ಬಾಹ್ಯಾಕಾಶ ಅಭಿಮಾನಿಗಳಿಗೆ ಸಂತಸ ತಂದಿದೆ. 

"ಪ್ರತಿಕ್ರಿಯೆಯು ಬಹುಮಟ್ಟಿಗೆ ಆಶ್ಚರ್ಯಕರವಾಗಿತ್ತು ಎಂದು ನಾನು ಭಾವಿಸುತ್ತೇನೆ" ಎಂದು ವೆಬ್ ಆಪ್ಟಿಕಲ್ ಟೆಲಿಸ್ಕೋಪ್ ಎಲಿಮೆಂಟ್ ಮ್ಯಾನೇಜರ್ ಲೀ ಫೀನ್‌ಬರ್ಗ್ ಹೇಳಿದ್ದಾರೆ. ಸ್ಟಾರ್‌ಲೈಟ್ ಅನ್ನು ಮಾತ್ರ ಬಳಸಿಕೊಂಡು ಅಂತಹ ಚಿತ್ರವನ್ನು ಪಡೆಯುವುದು ಸಾಧ್ಯ ಎಂದು ತಂಡವು ಖಚಿತವಾಗಿರಲಿಲ್ಲ ಎಂದು ಫೀನ್‌ಬರ್ಗ್ ವಿವರಿಸಿದರು.

click me!