ಗೂಗಲ್ ಅರ್ಥ್ ಮ್ಯಾಪ್‌ನಲ್ಲಿ ಭೂಗತ ಟವರ್ ಪತ್ತೆ, ಏಲಿಯನ್ ಲಾಂಚ್ ಪ್ಯಾಡ್ ಶಂಕೆ

ಗೂಗಲ್ ಅರ್ಥ್ ಮ್ಯಾಪ್‌ನಲ್ಲಿ ರಹಸ್ಯ ಟವರ್ ಪತ್ತೆಯಾಗಿದೆ. ಏರಿಯಾ 51 ಅನ್ನೋ ವಿಳಾಸದ ಸ್ಥಳದಲ್ಲಿ ತ್ರಿಕೋನ ಆವೃತ್ತಿಯ ಗಗನ ಚುಂಬಿ ಕಟ್ಟಡದಂತಿರುವ ಟವರ್ ಪತ್ತೆಯಾಗಿದೆ. ನಿರ್ಜನ ಪ್ರದೇಶದಲ್ಲಿರುವ ಈ ಟವರ್ ಏಲಿಯನ್ ತನ್ನ ಸ್ವ ಗ್ರಹಕ್ಕೆ ತೆರಳಲು ಇರುವ ಉಡಾವಣಾ ಕೇಂದ್ರವೇ? 

Google earth Discover Mysterious tower at area 51 sparked Alien Launch pad theory

ವಾಶಿಂಗ್ಟನ್(ಏ.12) ಗೂಗಲ್ ಮ್ಯಾಪ್ ಹಾಗೂ ಗೂಗಲ್ ಆರ್ಥ್ ಮ್ಯಾಪ್‌ ಮೂಲಕ ಭೂಮಿಯ ಮೂಲೆ ಮೂಲೆಯನ್ನು ಜಾಲಾಡಬಹುದು, ಪರಿಶೀಲಿಸಬಹುದು. ಹೀಗೆ ಪರಿಶೀಲನೆ ವೇಳೆ ಅಚ್ಚರಿ ಮಾಹಿತಿಯೊಂದು ಬಯಲಾಗಿದೆ. ರಹಸ್ಯವಾಗಿ ಉಳಿದುಕೊಂಡರುವ, ಯಾರಿಗೂ ತಿಳಿಯದ ಬೃಹತ್ ತ್ರಿಕೋನ ಆಕೃತಿಯ ಟವರ್ ಒಂದು ಏರಿಯಾ 51 ವಿಳಾಸದಲ್ಲಿ ಪತ್ತೆಯಾಗಿದೆ. ಈ ಟವರ್ ಇಲ್ಲಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಕಾರಣ 2.3 ಮಿಲಿಯನ್ ಏಕರೆ ಈ ಪ್ರದೇಶದಲ್ಲಿ ಯಾವುಗೇ ಜನವಸತಿ ಇಲ್ಲ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಆಗುತ್ತಿದ್ದಂತೆ ಹಲವರು ಇದು ಏಲಿಯನ್ ಲಾಂಚ್ ಪ್ಯಾಡ್ ಎಂದಿದ್ದಾರೆ. ಏಲಿಯನ್ ಭೂಮಿಯಿಂದ ಅದರ ವಾಸಸ್ಥಾನದ ಗ್ರಹಕ್ಕೆ ತೆರಳಲು ಈ ಲ್ಯಾಂಚ್ ಪ್ಯಾಡ್ ಬಳಕೆ ಮಾಡುತ್ತಿರಬಹುದು ಅನ್ನೋ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಅನ್ಯಗ್ರಹ ಜೀವಿ ಅನುಮಾನ
ಗೂಗಲ್ ಅರ್ಥ್ ಮ್ಯಾಪ್ ಮೂಲಕ ಬೇರೆ  ಏನೋ ಶೋಧಿಸಲು ಹೊರಟವನಿಗೆ ಈ ಟವರ್ ಕಣ್ಣಿಗೆ ಬಿದ್ದಿದೆ. ಇದು ಏರಿಯಾ 51 ವಿಳಾಸದಲ್ಲಿ ಪತ್ತೆಯಾಗಿದೆ. ಈ ವಿಳಾಸದಲ್ಲಿ ಅಮೆರಿಕನ್ ವಾಯು ಸೇನಾ ನೆಲೆಯಿದೆ. ಆದರೆ ಈ ಸೇನಾ ನೆಲೆ ಹಾಗೂ ಪತ್ತೆಯಾಗಿರುವ ಟವರ್ ನಡುವೆ ಭಾರಿ ಅಂತರವಿದೆ. ಇಷ್ಟೇ ಅಲ್ಲ ಅಮೆರಿಕನ್ ಸೇನಾ ನೆಲೆ, ವಾಯು ನೆಲೆ ಸೇರಿದಂತೆ ಭದ್ರತಾ ಪಡೆಗಳ ಯಾವುದೇ ಮಾಹಿತಿ ಗೂಗಲ್ ಅರ್ಥ್ ಮ್ಯಾಪ್‌ನಲ್ಲಿ ಲಭ್ಯವಾಗುವುದಿಲ್ಲ. ಇದರ ಜೊತೆಗೆ ಹಲವು ಕಾರಣಗಳಿಂದ  ಈ ಏಕೈಕ ಟವರ್ ಏಲಿಯನ್ ಅನುಮಾನ ಹೆಚ್ಚಿಸಿದೆ.

Latest Videos

ಆಳ ಸಮುದ್ರದಲ್ಲಿ ಮೀನುಗಾರರ ಬಲೆಗೆ ಸಿಕ್ಕ ವಿಚಿತ್ರ ಜೀವಿ, ಇದು ಏಲಿಯನ್ ಇರಬಹುದೇ?

ನಿರ್ಜನ ಪ್ರದೇಶದಲ್ಲಿದೆ ಟವರ್
ಅಮೆರಿಕ ಲಾಸ್ ವೆಗಾಸ್‌ನಿಂದ 150 ಕಿಲೋಮೀಟರ್ ದೂರದಲ್ಲಿರುವ ನೆವಾಡ ಎಂಬ ಸ್ಥಳದಲ್ಲಿದೆ. ಇದು ನಿರ್ಜನ ಪ್ರದೇಶ. ಇಲ್ಲಿ ಜನವಸತಿ ಇಲ್ಲ.ವಾಯು ಸೇನೆಯ ನೆಲೆ ಕೂಡ ಇಲ್ಲಿಂದ ಸಾಕಷ್ಟು ದೂರದಲ್ಲಿದೆ. ಗೂಗಲ್ ಮ್ಯಾಪ್ ಈ ಟವರ್ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ನಿಗೂಢ ಟವರ್ ಫೋಟೋ ನೋಡಿದ ಹಲವರು ಇದು ಏಲಿಯನ್ ಟವರ್, ಲಾಂಚ್ ಪ್ಯಾಡ್ ಎಂದು ವ್ಯಾಖ್ಯಾನಿಸಿದ್ದಾರೆ. ಏಲಿಯನ್ ಚಾರ್ಜಿಂಗ್ ಟವರ್ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Tall triangle shaped tower at Area 51
byu/james-HIMself ininterestingasfuck

 

ಗೂಗಲ್ ಅರ್ಥ ವಿಳಾಸ
ಗೂಗಲ್ ಅರ್ಥ್ ಮ್ಯಾಪ್‌ನಲ್ಲಿ  37°14’46.5"N 115°49’24.0"W ಈ ವಿಳಾಸದಲ್ಲಿ ಹುಡುಕಿದರೂ ನಿಗೂಢ ಟವರ್ ಪತ್ತೆಯಾಗುತ್ತಿದೆ.ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಭಾರಿ ಚರ್ಚೆಯಾಗುತ್ತಿದೆ. ಏಲಿಯನ್ ಟವರ್‌ನಲ್ಲೇ ಅನ್ಯಗ್ರಹ ಜೀವಿಗಳು ವಾಸವಾಗಿರುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೇ ವೇಳೆ ಇದು ಅಮೆರಿಕನ್ ಸೇನೆ ಪಡೆಯ ಭಾಗವಾಗಿರುವ ಸಾಧ್ಯತೆ ಹೆಚ್ಚು ಅನ್ನೋ ಮಾತುಗಳು ಕೇಳಿಬಂದಿದೆ. ಇಷ್ಟೇ ಅಲ್ಲ ಈ ಟವರ್ ಪಕ್ಕದಲ್ಲಿ ರಸ್ತೆಗಳು ಕಾಣಿಸುತ್ತಿದೆ. ಹೀಗಾಗಿ ಇಲ್ಲಿ ಅಮೆರಿಕನ್ ಸೇನಾ ವಾಹನಗಳ ಸಂಚಾರ ಇದೆ. ಇಷ್ಟೇ ಅಲ್ಲ ಸೇನೆಯ ಹಲವು ಮಾಹಿತಿಗಳು ಗೌಪ್ಯವಾಗಿರುತ್ತದೆ. ಹೀಗಾಗಿ ಗೂಗಲ್ ಅರ್ಥನಲ್ಲಿ ಕೇವಲ ಈ ಟವರ್ ಮಾತ್ರ ನೀಡಲಾಗಿದೆ. ಹೀಗಾಗಿ ಏಲಿಯನ್ ಗೊಂದಲ ಅನಗತ್ಯ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. 

ಆಗಸದಲ್ಲಿ ಪತ್ತೆಯಾಯ್ತಾ ಆನ್ಯಗ್ರಹ ಜೀವಿ ವಿಮಾನ? ಅನುಮಾನ ಹೆಚ್ಚಿಸಿದ ಘಟನೆ ವಿಡಿಯೋ

vuukle one pixel image
click me!