ಬೃಹತ್ ಗಾತ್ರದ ಕ್ಷುದ್ರಗ್ರಹವೊಂದು ಭೂಮಿಯತ್ತ ಶರವೇಗದಲ್ಲಿ ನುಗ್ಗಿ ಬರುತ್ತಿರುವ ಬಗ್ಗೆ ನಾಸಾ ಎಚ್ಚರಿಕೆ ನೀಡಿದೆ. ಈ ಬಾಹ್ಯಾಕಾಶ ಶಿಲೆಯು ಸಂಭಾವ್ಯ ಅಪಾಯಕಾರಿಯಾಗಿದ್ದು.. ವಿಜ್ಞಾನಿಗಳು ಇದರ ಮೇಲೆ ಕಣ್ಣಿಟ್ಟಿದ್ದಾರೆ,
ಭೂಮಿಯ ಕಡೆಗೆ ಧಾವಿಸುತ್ತಿರುವ ಕ್ಷುದ್ರಗ್ರಹ: 2014 TN17 ಹೆಸರಿನ ದೈತ್ಯ ಕ್ಷುದ್ರಗ್ರಹವು ಭೂಮಿಯತ್ತ ವೇಗವಾಗಿ ನುಗ್ಗುತ್ತಿರುವ ಬಗ್ಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತೆ ಎಚ್ಚರಿಕೆ ಕೊಟ್ಟಿದೆ. ಇದು ಅಂತಿಂಥ ಕ್ಷುದ್ರಗ್ರಹವಲ್ಲ ಬಾಹ್ಯಾಕಾಶ ಶಿಲೆ ಗಂಟೆಗೆ 77282 ಕಿ.ಮೀ ವೇಗದಲ್ಲಿ ಭೂಮಿಯತ್ತ ಬರುತ್ತಿದೆ. ಈ ಕ್ಷುದ್ರಗ್ರಹವು ಮುಂದಿನ ದಿನಗಳಲ್ಲಿ ನಮ್ಮ ಗ್ರಹದ ಬಳಿ ಹಾದು ಹೋಗಲಿದೆ. ಈ ಕ್ಷುದ್ರಗ್ರಹವು ಭೂಮಿಯಿಂದ ಸುರಕ್ಷಿತ ದೂರವನ್ನು ಕಾಯ್ದುಕೊಳ್ಳುತ್ತದೆಯಾದರೂ, ನಾಸಾ ಇದನ್ನು ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹ (PHA) ಎಂದು ತಿಳಿಸಿದೆ.
ಭೂಮಿಯ ಕಡೆಗೆ ಸಾಗುತ್ತಿರುವ ಕ್ಷುದ್ರಗ್ರಹ
ಈ ಕ್ಷುದ್ರಗ್ರಹದ ಸುಮಾರು 540 ಅಡಿಗಳಷ್ಟು ಅಗಲವಾಗಿದೆ. ತುಂಬಾ ಅಪಾಯಕಾರಿಯಾಗಿರುವ ಹಿನ್ನೆಲೆ ಈ ಕ್ಷುದ್ರಗ್ರಹವನ್ನು ವಿಜ್ಞಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾಸಾ ವಿಜ್ಞಾನಿಗಳ ಪ್ರಕಾರ, ಅದರ ಗಾತ್ರ ಮತ್ತು ವೇಗವನ್ನು ಗಮನಿಸಿದರೆ ಈ ಶಿಲೆಯು ಗಂಟೆಗೆ 77,282 ಕಿ.ಮೀ ವೇಗದಲ್ಲಿ ಭೂಮಿಯ ಕಡೆಗೆ ಚಲಿಸುತ್ತಿದೆ. ನಾಸಾ ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದರ ದೊಡ್ಡ ಗಾತ್ರ ಮತ್ತು ಭೂಮಿಗೆ ಸಾಮೀಪ್ಯ ಇರುವುದರಿಂದ, ಇದನ್ನು ಭವಿಷ್ಯದ ಸಂಭಾವ್ಯ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಭೂಮಿಯ ಮೇಲೆ ಕೊನೆಯ ಬಾರಿ ಕ್ಷುದ್ರಗ್ರಹ ಬಿದ್ದಿದ್ದು ಯಾವಾಗ?
ಭವಿಷ್ಯದಲ್ಲಿ ಅಪಾಯ
ಭೂಮಿಯ ಸಮೀಪ ಹಾದುಹೋಗುವ ವಸ್ತುಗಳನ್ನು ನಾಸಾ ಕೇಂದ್ರವು ಸೂಕ್ಷ್ಮವಾಗಿ ಅಧ್ಯಯನ, ನಿರಂತರ ನಿಗಾ ಇಡುವ ಕೆಲಸ ಮಾಡುತ್ತಿದೆ. ಈ ಬಾಹ್ಯಾಕಾಶಿಲೆಯನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಪ್ರಸ್ತುತ ಯಾವುದೇ ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆಯುವ ಅಪಾಯವಿಲ್ಲ, ಆದರೆ ಭವಿಷ್ಯದಲ್ಲಿ ಕಕ್ಷೆಯಲ್ಲಾಗುವ ಸಣ್ಣ ಬದಲಾವಣೆ ಕೂಡ ಅಪಾಯವನ್ನುಂಟುಮಾಡಬಹುದು. ಈ ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆದಿದ್ದರೆ, ಅದರ ಪರಿಣಾಮ ಸುನಾಮಿಗಳು, ಭೂಕಂಪಗಳು ಮತ್ತು ವಾತಾವರಣದ ಬದಲಾವಣೆಗಳಂತ ಘಟನೆಗಳು ನಡೆಯಬಹುದು. ಈ ಕಾರಣಕ್ಕಾಗಿ, ವಿಜ್ಞಾನಿಗಳು ಈ ಆಕಾಶಕಾಯಗಳ ಬಗ್ಗೆ ನಿರಂತರವಾಗಿ ಸಂಶೋಧನೆ ನಡೆಸುತ್ತಿದ್ದಾರೆ, ಇದರಿಂದಾಗಿ ಯಾವುದೇ ಸಂಭವನೀಯ ಅಪಾಯವನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸಬಹುದು ಮುಖ್ಯವಾಗಿದೆ.