
ಬೆಂಗಳೂರು(ಫೆ.17) ಭಾರತದ ಬಾಹ್ಯಾಕಾಶ ಕೇಂದ್ರ ಇಸ್ರೋ ಪ್ರತಿ ದಿನ ಸಾಧನೆಯ ಮೆಟ್ಟಿಲು ಹತ್ತುತ್ತಿದೆ. ಅತೀ ಕಡಿಮೆ ಖರ್ಚಿನಲ್ಲಿ ಚಂದ್ರನ ಮೇಲೆ ಉಪಗ್ರಹ ಇಳಿಸಿದ ಇಸ್ರೋ, ಬಳಿಕ ಸೂರ್ಯನ ಅಧ್ಯಯನಕ್ಕೆ ಉಪಗ್ರಹ ಉಡಾವಣೆ ಮಾಡಿ ಯಶಸ್ವಿಯಾಗಿದೆ. ಅಮೆರಿಕ, ಚೀನಾ ಸೇರಿದಂತೆ ಬಾಹ್ಯಕಾಶದಲ್ಲಿ ದಿಗ್ಗಜರೆನಿಸಿರುವ ದೇಶಗಳೇ ಇದೀಗ ಇಸ್ರೋ ಮಾಡೆಲ್ ಅನುಸರಿಸಲು ಮುಂದಾಗುತ್ತಿದೆ. ಈ ಬೆಳವಣಿಗೆ ನಡುವೆ ಇಸ್ರೋ ಸಾಧನೆ ಮತ್ತೆ ವಿಶ್ವವನ್ನೇ ಬೆರುಗುಗೊಳಿಸಿದೆ. ಬರೋಬ್ಬರಿ 17 ವರ್ಷಗಳ ಹಿಂದೆ ಉಡಾವಣೆ ಮಾಡಿದ ಕಾರ್ಟೋಸ್ಯಾಟ್ 2 ಉಪಗ್ರಹವನ್ನು ಮತ್ತೆ ಸಕ್ರಿಯ ಮಾಡಿ, ಭೂಮಿ ವಾತಾವರಣಕ್ಕೆ ತರುವುಲ್ಲಿ ಇಸ್ರೋ ಯಶಸ್ವಿಯಾಗಿದೆ.
ಹೈ ರೆಸಲ್ಯೂಶನ್ ಫೋಟೋಗಳನ್ನು ತೆಗೆಯಬಲ್ಲ 2ನೇ ತಲೆಮಾರಿನ ಉಪಗ್ರಹವಾದ ಕಾರ್ಟೋಸ್ಯಾಟ್-2 ಉಪಗ್ರಹವನ್ನು ಮತ್ತೆ ಭೂಮಿಯ ವಾತಾವರಣಕ್ಕೆ ತರಲಾಗಿದೆ. ಈ ಉಪಗ್ರಹ ಭೂಮಿಯ ವಾತಾವರಣ ಪ್ರವೇಶಿಸುತ್ತಿದ್ದಂತೆ ಉರಿದು ಬೂದಿಯಾಗಲಿದೆ. ಅವಶೇಷಗಳು ಸಮುದ್ರದಲ್ಲಿ ಬೀಳಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈಫಲ್ಯ ಭೀತಿಯೇ ಯಶಸ್ಸಿಗೆ ಕಾರಣ: ಇಸ್ರೋ ಅಧ್ಯಕ್ಷ ಸೋಮನಾಥ್ ಮುಕ್ತ ಮಾತು
ಈ ಉಪಗ್ರಹವನ್ನು 17 ವರ್ಷಗಳ ಹಿಂದೆ, 2007ರ ಜ.10ರಂದು ಉಡಾವಣೆ ಮಾಡಲಾಗಿತ್ತು. 2019ರವರೆಗೆ 635 ಕಿ.ಮೀ. ಎತ್ತರದಿಂದ ಕಾರ್ಯ ನಿರ್ವಹಿಸಿದ ಈ ಉಪಗ್ರಹ, ನಗರ ಪ್ರದೇಶಗಳ ಪ್ಲಾನಿಂಗ್‌ಗಾಗಿ ಉತ್ತಮ ಚಿತ್ರಗಳನ್ನು ಒದಗಿಸಿತ್ತು. 2019ರ ನಂತರ ಕೆಲಸ ನಿಲ್ಲಿಸಿತ್ತು.
ಪ್ರತಿ ದೇಶಗಳು ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ. ಇದರಿಂದ ಬಾಹ್ಯಾಕಾಶದಲ್ಲಿ ಇದೀಗ ನಿಷ್ಕ್ರೀಯಗೊಂಡಿರುವ ಉಪಗ್ರಹಗಳ ಸಂಖ್ಯೆ ಹೆಚ್ಚಿದೆ. ಪ್ರಯೋಗ, ಪ್ರಯತ್ನಗಳಿಂದ ಬಾಹ್ಯಾಕಾಶದಲ್ಲಿನ ಅವಶೇಷಗಳಿಂದ ಮುಂದೊಂದು ದಿನ ಆಪತ್ತು ಸಂಭವಿಸು ಸಾಧ್ಯತೆ ಇದೆ. ಹೀಗಾಗಿ ಇಸ್ರೋ, ನಾಸಾ ಸೇರಿದಂತೆ ಪ್ರಮುಖ ಬಾಹ್ಯಾಕಾಶ ಕೇಂದ್ರಗಳು ಬಾಹ್ಯಾಕಾಶದಲ್ಲಿನ ಅವಶೇಷಗಳನ್ನು ಕಡಿಮೆ ಮಾಡಲು ಮಹತ್ವದ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಇಸ್ರೋ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ.
ಸರಿಯಾದ ಸ್ಥಳದಲ್ಲಿ ಆದಿತ್ಯ ನಿಂತಿದ್ದಾನೆ, ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹರ್ಷ!
ಬಾಹ್ಯಾಕಾಶದಲ್ಲಿ ಅವಶೇಷಗಳನ್ನು ಕಡಿಮೆ ಮಾಡಬೇಕು ಎಂಬ ನಿಯಮದಂತೆ, ಕಾರ್ಯಸ್ಥಗಿತಗೊಂಡಿರುವ ಈ ಉಪಗ್ರಹವನ್ನು ಇಸ್ರೋ ಭೂವಾತಾವರಣಕ್ಕೆ ತಂದು ಪತನಗೊಳಿಸಿದೆ. ಕಾರ್ಯಾಚರಣೆ ನಿಲ್ಲಿಸಿರುವ ಉಪಗ್ರಹಗಳನ್ನು ಭೂಮಿಯ ವಾತಾವರಣಕ್ಕೆ ತಂದರೆ, ಸೂರ್ಯನ ಶಾಕ ಹಾಗೂ ಭೂಮಿಯ ವಾತಾವರಣದಿಂದ ಈ ಉಪಗ್ರಹಗಳು ಉರಿದು ಬೂದಿಯಾಗಲಿದೆ. ಸಮುದ್ರದ ಮೇಲಿನ ಭೂಮಿಯ ವಾತಾವರಣಕ್ಕೆ ಈ ಉಪಗ್ರಹಗಳನ್ನು ತರಲಾಗುತ್ತದೆ. ಭೂಮಿ ವಾತಾವರಣ ಪ್ರವೇಶಿಸುತ್ತಿದ್ದಂತೆ ಈ ಅವಶೇಷಗಳು ಬೂದಿಯಾಗಲಿದೆ. ಈ ಬೂದಿ ಸಮುದ್ರಕ್ಕೆ ಬೀಳಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.