ಸೂರ್ಯಯಾನ ತಾಲೀಮು ಪೂರ್ಣ: ಆಂತರಿಕ ತಪಾಸಣೆ ಯಶಸ್ವಿ ಸೆ.2ರಂದು ನಭಕ್ಕೆ ಆದಿತ್ಯ L1

By Kannadaprabha News  |  First Published Aug 31, 2023, 7:30 AM IST

ಚಂದ್ರಯಾನದ 3ರ ಯಶಸ್ಸಿನ ಬೆನ್ನಲ್ಲೇ ಸೂರ್ಯಯಾನಕ್ಕೆ ಸಜ್ಜಾಗಿರುವ ಬೆಂಗಳೂರು ಮೂಲದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರವು (ಇಸ್ರೋ), ಉಡ್ಡಯನದ ಪೂರ್ವಾಭ್ಯಾಸವನ್ನು ಬುಧವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ.


ಬೆಂಗಳೂರು: ಚಂದ್ರಯಾನದ 3ರ ಯಶಸ್ಸಿನ ಬೆನ್ನಲ್ಲೇ ಸೂರ್ಯಯಾನಕ್ಕೆ ಸಜ್ಜಾಗಿರುವ ಬೆಂಗಳೂರು ಮೂಲದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರವು (ಇಸ್ರೋ), ಉಡ್ಡಯನದ ಪೂರ್ವಾಭ್ಯಾಸವನ್ನು ಬುಧವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಶ್ರೀಹರಿಕೋಟದ ಉಡ್ಡಯನ ನೆಲೆಯಿಂದ ಸೆ.2ರಂದು ಬೆಳಗ್ಗೆ 11.50ಕ್ಕೆ ನೌಕೆಯ ಉಡ್ಡಯನ ನಡೆಯಲಿದ್ದು, ಈ ಸಂಬಂಧ ನೌಕೆಯ ಉಡ್ಡಯನ ಪ್ರಕ್ರಿಯೆ ಮತ್ತು ರಾಕೆಟ್‌ನ ಆಂತರಿಕ ತಪಾಸನಾ ಪರೀಕ್ಷೆಗಳನ್ನು ಬುಧವಾರ ನಡೆಸಲಾಯಿತು ಎಂದು ಇಸ್ರೋ ಮಾಹಿತಿ ನೀಡಿದೆ.

ಚಂದ್ರನ ಕಡೆಗೆ ಈಗಾಗಲೇ ಮೂರು ಉಡ್ಡಯನ ಕೈಗೊಂಡಿರುವ ಇಸ್ರೋ, ಇದೇ ಮೊದಲ ಬಾರಿಗೆ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್‌-1 ಎಂಬ ನೌಕೆಯೊಂದನ್ನು ರವಾನಿಸುತ್ತಿದೆ. ನೌಕೆಯನ್ನು ಪಿಎಸ್‌ಎಲ್‌ವಿ-ಸಿ 57 ರಾಕೆಟ್‌ ಮೂಲಕ ಉಡ್ಡಯನ ಮಾಡಲಾಗುತ್ತಿದ್ದು, ಅದನ್ನು ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಎಲ್‌1 ಎಂದು ಕರೆಯಲಾಗುವ ಸ್ಥಳದಲ್ಲಿ ನಿಯೋಜಿಸಲಾಗುತ್ತದೆ. ಎಲ್‌1 ಸ್ಥಳಕ್ಕೆ ತಲುಪಲು ಅದಕ್ಕೆ 4 ತಿಂಗಳು ಹಿಡಿಯಲಿದೆ. ಅದು ಅಲ್ಲಿಂದಲೇ ಸೂರ್ಯನ ಕುರಿತು ಸಂಶೋಧನೆ ನಡೆಸಿ ಭೂಮಿಗೆ ಮಾಹಿತಿ ರವಾನಿಸಲಿದೆ.

Latest Videos

undefined

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಟಾಯ್ಲೆಟ್ ಹೇಗೆ ಬಳಸ್ತಾರೆ ಗೊತ್ತಾ?

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಏನು ಮಾಡುತ್ತಿದೆ? ಫೋಟೋ ಕಳುಹಿಸಿದ ಪ್ರಗ್ಯಾನ್ ರೋವರ್!

click me!