
ನವದೆಹಲಿ: ತನ್ನದೇ ಆದ ಬಾಹ್ಯಾಕಾಶ ಕೇಂದ್ರ ಸ್ಥಾಪನೆಯ ಗುರಿ ಸಾಧನೆಯ ಭಾಗವಾಗಿ ಇಸ್ರೋ ಸೋಮವಾರ ಹಾರಿಬಿಟ್ಟಿದ್ದ ಎರಡು ಉಪಗ್ರಹಗಳು ಆಗಸದಲ್ಲಿ ಒಂದನ್ನೊಂದು ಹಿಂಬಾಲಿಸುತ್ತಿರುವ ಸುಂದರ ದೃಶ್ಯಗಳು ಸೆರೆಯಾಗಿವೆ. ಸ್ಪೇಡೆಕ್ಸ್‌ನ ಎರಡು ಉಪಗ್ರಹಗಳು ಹಿಂಬಾಲಿಸುತ್ತಿರುವ ದೃಶ್ಯವನ್ನು ದಕ್ಷಿಣ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಸೆರೆ ಹಿಡಿದಿದೆ. ಜ.7ರಂದು ಎರಡು ಉಪಗ್ರಹಗಳ ಪೈಕಿ ಒಂದರಲ್ಲಿ ಒಂದು ಜೋಡಣೆಯಾಗಲಿದೆ. ಇದನ್ನು ಡಾಕಿಂಗ್ ಏನ್ನಲಾಗುತ್ತದೆ. ಭವಿಷ್ಯಷದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಇಸ್ರೋ ತನ್ನ ನೌಕೆಯನ್ನು ಡಾಕಿಂಗ್ ಮಾಡುವ ಸಲುವಾಗಿ ಈ ಪ್ರಯೋಗ ನಡೆಸುತ್ತಿದೆ.
ಶ್ರೀಹರಿಕೋಟಾ: ಭಾರತದ ಬಾಹ್ಯಾಕಾಶ ಸಂಸ್ಥೆಯಾಗಿರುವ ಇಸ್ರೋ ಮುಂದಿನ ವರ್ಷ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಿರುವ ಉಪಗ್ರಹ ಉಡ್ಡಯನವು, ಈ ಉಡ್ಡಯನ ಕೇಂದ್ರದಿಂದ ಮಾಡಲಾಗುವ 100ನೇ ಉಡಾವಣೆಯಾಗಲಿದೆ ಎಂದು ಇಸ್ರೋ ಸಂತಸ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಇಸ್ರೋ SpaDeX ಉಡಾವಣೆ ಯಶಸ್ವಿ,ಸ್ವದೇಶಿ ಬಾಹ್ಯಾಕಾಶ ಕೇಂದ್ರ ಸ್ಥಾಪನೆಗೆ ಮಹತ್ವದ ಹೆಜ್ಜೆ!
ಸ್ಪೇಸ್ ಡಾಕಿಂಗ್‌ಗಾಗಿ ಸೋಮವಾರ ಪಿಎಸ್‌ಎಲ್‌ವಿ-ಸಿ60 ಮಿಷನ್ ಉಡ್ಡಯನದ ಬಳಿಕ ಮಾತನಾಡಿದ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್, ‘ಈ ಸ್ಪೇಡೆಕ್ಸ್ ರಾಕೆಟ್ ಉಡಾವಣೆಯು ಇಲ್ಲಿ ನಡೆದ 99ನೇ ಉಡ್ಡಯನವಾಗಿದ್ದು, ಮುಂದಿನ ವರ್ಷದ ಆರಂಭದಲ್ಲಿ 100ನೇ ಉಡ್ಡಯನ ಕೈಗೊಳ್ಳಲಿದ್ದೇವೆ. ಜನವರಿಯಲ್ಲಿ ನಡೆಯಲಿರುವ ಜಿಎಸ್‌ಎಲ್‌ವಿ ಎನ್‌ವಿಎಸ್-02 ಉಡ್ಡಯನ ಸೇರಿದಂತೆ 2025ರಲ್ಲಿ ಅನೇಕ ಯೋಜನೆಗಳನ್ನು ಕೈಗೊಳ್ಳಲಿದ್ದೇವೆ’ ಎಂದು ಮುಂದಿನ ವರ್ಷದ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.