ಚಂದ್ರಯಾನ 3 ಉಪಗ್ರಹದ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ. ಇತ್ತೀಚಗಷ್ಟೆ ಚಂದ್ರ ಮೇಲ್ಮೈ ಫೋಟೋ ಕಳುಹಿಸಿದ್ದ ಚಂದ್ರಯಾನ3 ಉಪಗ್ರಹ ಇದೀಗ ಹೊಸ ಫೋಟೋಗಳನ್ನು ಕಳುಹಿಸುವ ಮೂಲಕ ಕುತೂಹಲ ಮಾಹಿತಿ ರವಾನಿಸಿದೆ.
ನವದೆಹಲಿ(ಆ.10) ಇಸ್ರೋ ಕಳುಹಿಸಿದ ಚಂದ್ರಯಾನ 3 ಉಪಗ್ರಹವನ್ನು ಆಗಸ್ಟ್ 5 ರಂದು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ. ಈ ವೇಳೆ ಚಂದ್ರ ಮೇಲ್ಮೆ ಫೋಟೋ ಕಳುಹಿಸಿದ್ದ ಉಪಗ್ರಹ ಇದೀಗ ಮತ್ತಷ್ಟು ಫೋಟೋಗಳನ್ನು ಕಳುಹಿಸುವ ಮೂಲಕ ಕುತೂಹಲ ಮಾಹಿತಿಯನ್ನು ರವಾನಿಸಿದೆ. ಇದೀಗ ಉಪಗರ್ಹ ಬಾಹ್ಯಾಕಾಶದಿಂದ ಭೂಮಿಯ ಚಿತ್ರ ಹಾಗ ಚಂದ್ರನ ಹತ್ತಿರದ ಚಿತ್ರವನ್ನು ಕಳುಹಿಸಿದೆ. ಲ್ಯಾಂಡರ್ ಕಳುಹಿಸಿರುವ ಫೋಟೋವನ್ನು ಉಪಗ್ರಹ LHVC ಕ್ಯಾಮರ ಮೂಲಕ ತೆಗೆದಿದೆ. ಈ ಫೋಟೋವನ್ನು ಅಹಮ್ಮಾದಾಬಾದ್‌ನ ಬಾಹ್ಯಾಕಾಶ ಕೇಂದ್ರ ಹಾಗೂ ಬೆಂಗಳೂರಿನ ಎಲೆಕ್ಟ್ರೋ ಆಪ್ಟಿಕ್ ಸಿಸ್ಟಮ್ ಲ್ಯಾಬರೋಟರಿ ಅಭಿವೃದ್ಧಿಪಡಿಸಿದೆ.
ಬಾಹ್ಯಾಕಾಶದಿಂದ ಭೂಮಿ ಹೇಗೆ ಕಾಣುತ್ತಿದೆ ಅನ್ನೋ ಫೋಟೋವನ್ನ ಚಂದ್ರಯಾನ 3 ಉಪಗ್ರಹ ಕಳುಹಿಸಿದೆ. ಇದರ ಜೊತೆಗೆ ಆಗಸ್ಟ್ 6 ರಂದು ತೆಗೆದ ಚಂದ್ರನ ಮೇಲ್ಮೈನ ಹತ್ತಿರ ಫೋಟೋವನ್ನು ರವಾನಿಸಿದೆ. ಸುಂದರ ಫೋಟೋಗಳು ಇದೀಗ ವಿಶ್ವದ ಗಮನಸೆಳೆದಿದೆ.
ಚಂದ್ರಯಾನ 3 ಉಪಗ್ರಹ ತೆಗೆದ ಚಂದ್ರನ ಮೊದಲ ಚಿತ್ರ ಬಹಿರಂಗ ಪಡಿಸಿದ ಇಸ್ರೋ!
ಇತ್ತೀಚಗೆ ಚಂದ್ರನ ಕಕ್ಷೆಗೆ ಸೇರ್ಪಡೆಯಾಗಿದ್ದ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ಇದೀಗ ಹತ್ತಿರದಿಂದ ಚಂದ್ರನ ದೃಶ್ಯಗಳನ್ನು ಸೆರೆ ಹಿಡಿದು ರವಾನಿಸಿತ್ತು. ಕಕ್ಷೆ ಪ್ರವೇಶಿಸಿದ ಬಳಿಕ ನೌಕೆ ತಾನು ಮೊದಲ ಬಾರಿಗೆ ಸೆರೆಹಿಡಿದ ಚಂದ್ರನ ದೃಶ್ಯಗಳನ್ನು ರವಾನಿಸಿದ್ದು ಇದನ್ನು ಇಸ್ರೋ ಟ್ವೀಟರ್‌ನ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿತ್ತು.
ಚಂದ್ರನ ಅಧ್ಯಯನಕ್ಕೆಂದು ಇಸ್ರೋ ಜು.14ರಂದು ಹಾರಿಬಿಟ್ಟಿದ ಚಂದ್ರಯಾನ-3 ನೌಕೆ ಇದೀಗ ಶಶಾಂಕನಿಗೆ ಮತ್ತಷ್ಟುಸನಿಹವಾಗಿದೆ. ಅ.5ರಂದು ಚಂದ್ರನ ಕಕ್ಷೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದ ನೌಕೆಯ ಕಕ್ಷೆಯ ಎತ್ತರವನ್ನು ಮತ್ತಷ್ಟುಇಳಿಸುವ ಮೂಲಕ ಅದನ್ನು ಚಂದ್ರನಿಗೆ ಸಮೀಪ ಮಾಡುವ ಪ್ರಕ್ರಿಯೆಯನ್ನು ಇಸ್ರೋ ವಿಜ್ಞಾನಿಗಳು ಬುಧವಾರ ಯಶಸ್ವಿಯಾಗಿ ನೆರವೇರಿಸಿದ್ದಾರೆ. ಇದೇ ರೀತಿಯ ಮತ್ತೊಂದು ಪ್ರಕ್ರಿಯೆ ಆ.14ರಂದು ನಡೆಯಲಿದೆ. ಅಂತಿಮವಾಗಿ ನೌಕೆಯನ್ನು ಚಂದ್ರನಿಂದ 100 ಕಿ.ಮೀ ಕಕ್ಷೆಗೆ ತಂದು ಆ.23ರಂದು ಚಂದ್ರನ ಮೇಲೆ ಇಳಿಸುವ ಸಾಹಸವನ್ನು ಇಸ್ರೋ ವಿಜ್ಞಾನಿಗಳು ಮಾಡಲಿದ್ದಾರೆ.
ಇಸ್ರೋಗೂ ಮೊದಲೇ ಚಂದ್ರನ ದಕ್ಷಿಣ ಧ್ರುವಕ್ಕಿಳಿಯಲು ರಷ್ಯಾ ಸಾಹಸ
ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಭಾರತವು ‘ಚಂದ್ರಯಾನ-3’ ಯೋಜನೆ ಕೈಗೊಂಡಿದೆ. ಚಂದ್ರಯಾನ-3 ಮಿಷನ್‌ನ ಒಟ್ಟು ವೆಚ್ಚ 615 ಕೋಟಿ ರೂಪಾಯಿ. ಇದು ಚಂದ್ರಯಾನ-2ರ ವೆಚ್ಚಕ್ಕಿಂತಲು ಕಡಿಮೆ ಎನ್ನಬಹುದು. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ ರೋವರ್‌ನ್ನು ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿ ಕಡೆಗೆ ಪ್ರಯಾಣ ಬೆಳೆಸಿದೆ. ಕ್ಷಣಕ್ಷಣಕ್ಕೂ ಭಾರತದ ’ಚಂದ್ರಯಾನ-3’ ನೌಕೆ ಚಂದ್ರನಿಗೆ ಹತ್ತಿರವಾಗುತ್ತಿದೆ. ಮುಂದಿನ ಹಂತಗಳಿಗೆ ಚಂದ್ರಯಾನ ನೌಕೆ ಸಜ್ಜಾಗುತ್ತಿದ್ದು ಭಾರತ ಇತಿಹಾಸ ನಿರ್ಮಿಸಲಿದೆ. ಇಸ್ರೋ ವಿಜ್ಞಾನಿಗಳು ಕೂಡ ಈ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಚಂದ್ರಯಾನ-3, ಆಗಸ್ಟ್ 23ರ ಸಂಜೆ 5.47ಕ್ಕೆ ಅಂತಿಮ ಸವಾಲನ್ನು ಎದುರಿಸಲಿದೆ.