ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ದೇಶ ಎಂಬ ಹಿರಿಮೆ ಪಡೆಯುವ ಭಾರತದ ಯತ್ನಕ್ಕೆ ಇದೀಗ ರಷ್ಯಾ ಅಡ್ಡಗಾಲಾಗಿದೆ ಬಂದಿದೆ. ಚಂದ್ರನ ಅಧ್ಯಯನಕ್ಕಾಗಿ ರಷ್ಯಾ ಲುನಾ-25 ನೌಕೆಯನ್ನು ಹಾರಿಬಿಟ್ಟಿದ್ದು, ಅದು ಇಸ್ರೋ ಹಾರಿಬಿಟ್ಟಿರುವ ಚಂದ್ರಯಾನ-3 ನೌಕೆಗಿಂತ ಮೊದಲೇ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯಲು ಸಜ್ಜಾಗಿದೆ.
ನವದೆಹಲಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ದೇಶ ಎಂಬ ಹಿರಿಮೆ ಪಡೆಯುವ ಭಾರತದ ಯತ್ನಕ್ಕೆ ಇದೀಗ ರಷ್ಯಾ ಅಡ್ಡಗಾಲಾಗಿದೆ ಬಂದಿದೆ. ಚಂದ್ರನ ಅಧ್ಯಯನಕ್ಕಾಗಿ ರಷ್ಯಾ ಲುನಾ-25 ನೌಕೆಯನ್ನು ಹಾರಿಬಿಟ್ಟಿದ್ದು, ಅದು ಇಸ್ರೋ ಹಾರಿಬಿಟ್ಟಿರುವ ಚಂದ್ರಯಾನ-3 ನೌಕೆಗಿಂತ ಮೊದಲೇ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯಲು ಸಜ್ಜಾಗಿದೆ.
ಚಂದ್ರಯಾನ-3 (chandrayaan-3) ಉಡಾವಣೆಗೊಂಡ 4 ವಾರಗಳ ತರುವಾಯ ಉಡಾವಣೆಗೊಂಡ ಲುನಾ-25 ಆ.22/23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ರಷ್ಯಾ ಗುರುತಿಸಿರುವ 3 ಪ್ರದೇಶಗಳಲ್ಲಿ ಒಂದರಲ್ಲಿ ಇಳಿಯಲಿದೆ. ಈ ಯೋಜನೆ ಚಂದ್ರಯಾನ-3 ಲ್ಯಾಂಡರ್‌ಗೆ ಯಾವುದೇ ರೀತಿಯ ತಡೆಯನ್ನು ಉಂಟು ಮಾಡುವುದಿಲ್ಲ. 2 ದೇಶಗಳು ಇಳಿಯಲು ಬೇರೆ ಸ್ಥಳಗಳನ್ನು ನಿರ್ಧರಿಸಿವೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ (Russia Space reserch center) ಹೇಳಿದೆ. ಈ ಯೋಜನೆಗೆ ಉಡ್ಡಯನದ ಬಳಿಕ ಮಾತನಾಡಿರುವ ರಷ್ಯಾದ ವಿಜ್ಞಾನಿ, ಚಂದ್ರ ಭೂಮಿಯ 7ನೇ ಖಂಡವಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ಮಾನವನ ಸಂತತಿ ಬೆಳೆಸುವುದಕ್ಕೆ ಪ್ರಯೋಗಗಳಿಗೆ ಮತ್ತೆ ಭರವಸೆ ಒದಗಿಸಿದ್ದಾರೆ. 1.8 ಟನ್ ತೂಕದ ಲುನಾ-25, 31 ಕೇಜಿ ತೂಕದ ವೈಜ್ಞಾನಿಕ ಉಪಕರಣವನ್ನು ಚಂದ್ರನ ಮೇಲೆ ಇಳಿಸಲಿದೆ.
ಎಲ್ಲಾ ವ್ಯವಸ್ಥೆ ಫೇಲ್ ಆದರೂ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯೋದು ಖಂಡಿತ: ಇಸ್ರೋ ಚೀಫ್
ಈ ಉಪಕರಣ ಚಂದ್ರನ ಮೇಲ್ಮೈನಿಂದ 15 ಸೆಂ.ಮೀ. ಆಳದಲ್ಲಿನ ಶಿಲೆಗಳ ಮಾದರಿಯನ್ನು ಸಂಗ್ರಹಿಸಲಿದ್ದು, ಇದರಿಂದ ನೀರಿನ ಇರುವಿಕೆ ಬಗ್ಗೆ ಸಂಶೋಧನೆ ಕೈಗೊಳ್ಳಲಾಗುತ್ತದೆ. ಇದು 2021ರಲ್ಲಿ ಕೈಗೊಳ್ಳಬೇಕಾದ ಯೋಜನೆಯಾಗಿದ್ದು, ಫ್ರಾನ್ಸ್‌ನಿಂದ ಕ್ಯಾಮರಾಗಳ ಹಸ್ತಾಂತರ ಮತ್ತು ಉಕ್ರೇನ್ ಯುದ್ಧದಿಂದಾಗಿ 2 ವರ್ಷಗಳ ಕಾಲ ವಿಳಂಬವಾಗಿತ್ತು.
ಚಂದ್ರಯಾನ -3 ನೌಕೆ ಚಂದ್ರನಿಗೆ ಇನ್ನಷ್ಟು ಸನಿಹ
ಬೆಂಗಳೂರು: ಚಂದ್ರನ ಅಧ್ಯಯನಕ್ಕೆಂದು ಇಸ್ರೋ ಜು.14ರಂದು ಹಾರಿಬಿಟ್ಟಿದ ಚಂದ್ರಯಾನ-3 ನೌಕೆ ಇದೀಗ ಶಶಾಂಕನಿಗೆ ಮತ್ತಷ್ಟು ಸನಿಹವಾಗಿದೆ. ಅ.5ರಂದು ಚಂದ್ರನ ಕಕ್ಷೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದ ನೌಕೆಯ ಕಕ್ಷೆಯ ಎತ್ತರವನ್ನು ಮತ್ತಷ್ಟು ಇಳಿಸುವ ಮೂಲಕ ಅದನ್ನು ಚಂದ್ರನಿಗೆ ಸಮೀಪ ಮಾಡುವ ಪ್ರಕ್ರಿಯೆಯನ್ನು ಇಸ್ರೋ ವಿಜ್ಞಾನಿಗಳು (ISRO scientist) ಬುಧವಾರ ಯಶಸ್ವಿಯಾಗಿ ನೆರವೇರಿಸಿದ್ದಾರೆ. ಇದೇ ರೀತಿಯ ಮತ್ತೊಂದು ಪ್ರಕ್ರಿಯೆ ಆ.14ರಂದು ನಡೆಯಲಿದೆ. ಅಂತಿಮವಾಗಿ ನೌಕೆಯನ್ನು ಚಂದ್ರನಿಂದ 100 ಕಿ.ಮೀ ಕಕ್ಷೆಗೆ ತಂದು ಆ.23ರಂದು ಚಂದ್ರನ ಮೇಲೆ ಇಳಿಸುವ ಸಾಹಸವನ್ನು ಇಸ್ರೋ ವಿಜ್ಞಾನಿಗಳು ಮಾಡಲಿದ್ದಾರೆ.
100 ಕಿ.ಮೀ.ನಿಂದ ಚಂದ್ರನ ಮೇಲ್ಮೈಗೆ ಚಂದ್ರಯಾನ-3 ನೌಕೆ ಇಳಿಸುವುದು ಸವಾಲಿನ ಕೆಲಸ: ಇಸ್ರೋ