ಚಂದ್ರನ ಕಪ್ಪು ಭಾಗದಲ್ಲಿ ಮಂಜುಗಡ್ಡೆ ಪತ್ತೆ!

By Suvarna News  |  First Published Sep 10, 2021, 4:53 PM IST

* ಹಿಂದಿನ ಅಧ್ಯ​ಯ​ನ​ಗ​ಳನ್ನು ಖಚಿ​ತ​ಪ​ಡಿ​ಸಿ​ದ ಚಂದ್ರಯಾನ-2

* ಧ್ರುವಗಳಲ್ಲಿ ಧೂಳಿನ ಕಣಗಳ ಜೊತೆ ಸೇರಿಕೊಂಡಿರುವ ಮಂಜುಗಡ್ಡೆ

* ವೈಜ್ಞಾನಿಕ ದತ್ತಾಂಶಗಳನ್ನು ವಿಶ್ಲೇಷಿಸಿ ಇಸ್ರೋದಿಂದ ಸಂಗತಿ ಬಹಿರಂಗ


ನವದೆಹಲಿ(ಸೆ.10): ಚಂದ್ರನ ಮೇಲೆ ನೀರಿನ ಕಣಗಳ ಇರುವಿಕೆಯನ್ನು ಪತ್ತೆಹಚ್ಚಿದ್ದ ಇಸ್ರೋದ ಚಂದ್ರಯಾನ-2 ನೌಕೆ ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ಚಂದ್ರದ ಕಪ್ಪುಭಾಗದಲ್ಲಿ ಮಂಜುಗಡ್ಡೆಗಳು ಇರುವುದನ್ನು ಖಚಿತಪಡಿಸಿದೆ.

ಸದಾ ನೆರಳಿನಲ್ಲಿ ಇರುವ ಕಾರಣ ಚಂದ್ರನ ಕಪ್ಪು ಭಾಗದಲ್ಲಿ ಏನಿದೆ ಎನ್ನುವುದನ್ನು ಸಂಶೋಧಿಸಲು ಸಾಧ್ಯವಾಗಿರಲಿಲ್ಲ. ಚಂದ್ರಯಾನ-2 ನೌಕೆ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಇಸ್ರೋ ಬಿಡುಗಡೆ ಮಾಡಿರುವ ವೈಜ್ಞಾನಿಕ ದತ್ತಾಂಶಗಳಿಂದ ಈ ಸಂಗತಿ ಬೆಳಕಿಗೆ ಬಂದಿದೆ. ಚಂದ್ರನ ಧ್ರುವ ಪ್ರದೇಶದಲ್ಲಿ ಧೂಳಿನ ಕಣಗಳ ಜೊತೆ ಮಂಜುಗಡ್ಡೆಗಳು ಕೂಡ ಸೇರಿಕೊಂಡಿದೆ ಎಂದು ಇಸ್ರೋ ತಿಳಿಸಿದೆ.

Latest Videos

undefined

ಚಂದ್ರನ ಧ್ರುವ ಪ್ರದೇಶದಲ್ಲಿ ಈ ಹಿಂದೆ ರಾಡಾರ್‌ಗಳ ಆಧರಿತ ಅಧ್ಯಯನಗಳು ‘ಚಂದ್ರ​ನಲ್ಲಿ ಮಂಜು​ಗಡ್ಡೆ ಇವೆ’ ಎಂದು ಹೇಳಿ​ದ್ದವು. ಈ ಸಂಶೋಧನೆಯನ್ನು ಇಸ್ರೋದ ಚಂದ್ರಯಾನ- 2 ಖಚಿತಪಡಿಸಿದೆ. ಮಂಜುಗಡ್ಡೆಗಳು ಇರಬಹುದಾದ ಸಂಭಾವ್ಯ ಸ್ಥಳಗಳನ್ನು ಕೂಡ ಚಂದ್ರಯಾನ-2 ಗುರುತಿಸಿದೆ.

ಮಂಜುಗಡ್ಡೆ ಪತ್ತೆ ಹೇಗೆ?:

ಚಂದ್ರನ ದಕ್ಷಿಣ ಧ್ರುವದಲ್ಲಿ ಶಾಶ್ವತ ಕತ್ತಲು ನೆಲೆಸಿರುತ್ತದೆ. ಅದರ ಮೇಲೆ ಸೂರ್ಯನ ಒಂದೇ ಒಂದು ಕಿರಣವೂ ಬೀಳುವುದಿಲ್ಲ. 200 ಕೋಟಿ ವರ್ಷ​ದಿಂದ ಇಲ್ಲಿ ಸೂರ‍್ಯನ ಒಂದು ಕಿರ​ಣವೂ ಬಿದ್ದಿ​ಲ್ಲ. ಹೀಗಾಗಿ ಚಂದ್ರಯಾನ-2 ನೌಕೆಯಲ್ಲಿ ಧ್ರುವ ಪ್ರದೇಶಗಳ ಅಧ್ಯಯನಕ್ಕೆ ಡ್ಯೂಯಲ್‌ ಫ್ರೀಕ್ವೆನ್ಸಿ ಇಮೇಜಿಂಗ್‌ ರಾಡಾರ್‌ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಇವು ಧ್ರುವ ಪ್ರದೇಶಗಳ ಕರಾರುವಾಕ್ಕಾದ ಮಾಹಿತಿಯನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ. ಫ್ರೀಕ್ವೆನ್ಸಿ ಇಮೇಜಿಂಗ್‌ ರಾಡಾರ್‌ ಮಂಜುಗಡ್ಡೆಗಳು ಇರಬಹುದಾದ ಸಂಭಾವ್ಯ ಸ್ಥಳಗಳ ಮಾಹಿತಿಯನ್ನು ರವಾನಿಸಿತ್ತು.

click me!