ಸತತ 90 ದಿನ ಹಾರಬಲ್ಲ ಗುಪ್ತಚರ ವಿಮಾನ ಬೆಂಗ್ಳೂರಲ್ಲಿ ಅಭಿವೃದ್ಧಿ: ರಕ್ಷಣಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ

By Kannadaprabha News  |  First Published Sep 15, 2024, 12:45 PM IST

ಹೈ-ಆಲ್ಟಿಟ್ಯೂಡ್ ಪ್ಲಾಟ್‌ಫಾರ್ಮ್ (ಎಚ್‌ಎಪಿ) ಎಂಬ ಹೆಸರಿನ ಈ ವಿಮಾನ ಭೂಮಿಯಿಂದ 17 ರಿಂದ 20 ಕಿ.ಮೀ. ಎತ್ತರದಲ್ಲಿ ಹಾರುತ್ತದೆ. ಇದು 12 ಮೀ. ಉದ್ದವಿದ್ದು, ಸುಸಜ್ಜಿತವಾದಾಗ 22 ಕೆ.ಜಿ. ತೂಗುತ್ತದೆ. 'ಈ ವಿಮಾನವು ಸಂಘರ್ಷದ ಸಮಯದಲ್ಲಿ ಸೃಷ್ಟಿಯಾಗಬಲ್ಲ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಜೊತೆಗೆ ಗುಪ್ತಚರ, ಕಣ್ಣಾವಲು, ಸ್ಥಳ ಪರಿಶೀಲನೆ, ಹಾಗೂ ಸಂವಹನಕ್ಕೆ ಸಹಕಾರಿಯಾಗಿದೆ. 


ನವದೆಹಲಿ(ಸೆ.15):  90 ದಿನ ಸತತವಾಗಿ ಹಾರಾಟ ನಡೆಸಬಲ್ಲ ಸೋಲಾರ್ ವಿಮಾನವನ್ನು ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯ (ಎನ್‌ಎಎಲ್) ಅಭಿವೃದ್ಧಿಪಡಿಸಿದ್ದು, ಇದು ರಕ್ಷಣಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಎನ್ನಲಾಗಿದೆ. 

ಹೈ-ಆಲ್ಟಿಟ್ಯೂಡ್ ಪ್ಲಾಟ್‌ಫಾರ್ಮ್ (ಎಚ್‌ಎಪಿ) ಎಂಬ ಹೆಸರಿನ ಈ ವಿಮಾನ ಭೂಮಿಯಿಂದ 17 ರಿಂದ 20 ಕಿ.ಮೀ. ಎತ್ತರದಲ್ಲಿ ಹಾರುತ್ತದೆ. ಇದು 12 ಮೀ. ಉದ್ದವಿದ್ದು, ಸುಸಜ್ಜಿತವಾದಾಗ 22 ಕೆ.ಜಿ. ತೂಗುತ್ತದೆ. 'ಈ ವಿಮಾನವು ಸಂಘರ್ಷದ ಸಮಯದಲ್ಲಿ ಸೃಷ್ಟಿಯಾಗಬಲ್ಲ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಜೊತೆಗೆ ಗುಪ್ತಚರ, ಕಣ್ಣಾವಲು, ಸ್ಥಳ ಪರಿಶೀಲನೆ, ಹಾಗೂ ಸಂವಹನಕ್ಕೆ ಸಹಕಾರಿಯಾಗಿದೆ. ವಾಯುರಕ್ಷಣಾ ಸೇವೆಗಳಿಗೆ ಬಳಸಿದಾಗ, ಕಾರ್ಯಾಚರಣೆಗಳನ್ನು ನಿರ್ದೇಶಿಸುವಲ್ಲಿಯೂ ಇದು ಪ್ರಮುಖ ಪಾತ್ರ ನಿರ್ವಹಿಸುತ್ತದೆ' ಎಂದು ಎನ್‌ಎಎಲ್ ಹೇಳಿದೆ. 

Latest Videos

undefined

ದೋಹಾಗೆ ಹೊರಟಿದ್ದ ವಿಮಾನ ವಿಳಂಬ : 5 ಗಂಟೆ ಪ್ರಯಾಣಿಕರ ವಿಮಾನದೊಳಗೆ ಕಾಯಿಸಿದ ಇಂಡಿಗೋ ಏರ್‌ಲೈನ್ಸ್

ಈಗಾಗಲೇ ಸತತವಾಗಿ 64 ಗಂಟೆ ಹಾರಬಲ್ಲ ಏರ್‌ಬಸ್ ಜೆಫಿರ್‌ ಎಂಬ ಎಪಿಯನ್ನು ಅಮೆರಿಕ ಹೊಂದಿದೆ. ಬ್ರಿಟನ್, ಜರ್ಮನಿ, ನ್ಯೂಜಿಲೆಂಡ್ ದೇಶಗಳು ಇಂತಹ ವಿಮಾನ ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿವೆ. ಇದೇ ವೇಳೆ, ಬೆಂಗಳೂರಿನ ನ್ಯೂ ಸ್ಪೇಸ್ ರಿಸರ್ಚ್ ಸಂಸ್ಥೆ ಸತತ 24 ಗಂಟೆ ಹಾರುವ ಮೂಲ ಮಾದರಿಯನ್ನು ತಯಾರಿಸಿದೆ. 

click me!