Math Neurons: ಗಣಿತ ಲೆಕ್ಕಾಚಾರ ವೇಳೆ ಮೆದುಳಿನಲ್ಲಾಗುವ ಬದಲಾವಣೆಗಳ ಬಗ್ಗೆ ನಿಮಗೆಷ್ಟು ಗೊತ್ತು?

By Suvarna News  |  First Published Feb 16, 2022, 12:17 PM IST

'ಕರೆಂಟ್ ಬಯಾಲಜಿ' ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಗಳು ಗಣಿತದ ಸಮಸ್ಯೆಗಳನ್ನು ಪರಿಹರಿಸುವಾಗ ಮೆದುಳಿನಲ್ಲಿ ಸಕ್ರಿಯವಾಗುವ ನರಕೋಶಗಳ ಇಂಟರಿಸ್ಟಿಂಗ್‌ ಮಾಹಿತಿಯನ್ನು ಬಹಿರಂಗಪಡಿಸಿದೆ. 
 


Tech Desk: ಸಂಕಲನ, ವ್ಯವಕಲನ, ಗುಣಾಕಾರದಂತಹ  ಗಣಿತದ ಲೆಕ್ಕಗಳನ್ನು ಮಾಡುವ ಸಮಯದಲ್ಲಿ ನಿಮ್ಮ ಮೆದುಳಿನಲ್ಲಾಗುವ ವಿವಿಧ ರೀತಿಯ ಬದಲಾವಣೆಗಳ ಬಗ್ಗೆ ನಿಮಗೆ ತಿಳಿದಿದೆಯೇ? ಶಾಲಾ ಮಕ್ಕಳಿಗೆ ಸಾಮಾನ್ಯವಾಗಿ  ಮೂರು ಸೇಬುಗಳು ಮತ್ತು ಎರಡು ಸೇಬುಗಳು ಸೇರಿದಾಗ ಐದು ಸೇಬುಗಳಾಗುತ್ತವೆ ಎಂಬ ಸರಳ ಲೆಕ್ಕಗಳನ್ನು ಅಭ್ಯಾಸ ಮಾಡಿಸುತ್ತಾರೆ. ಆದರೆ ಅಂತಹ ಲೆಕ್ಕಾಚಾರಗಳ ಸಮಯದಲ್ಲಿ ಮೆದುಳಿನಲ್ಲಾಗುವ ಪ್ರಕ್ರಿಯೆಗಳ ಬಗ್ಗೆ ಈವರೆಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ಬಾನ್ ಮತ್ತು ಟ್ಯೂಬಿಂಗನ್ ವಿಶ್ವವಿದ್ಯಾನಿಲಯಗಳ ಹೊಸ ಅಧ್ಯಯನವು ಈ ವಿಷಯದ ಮೇಲೆ ಬೆಳಕು ಚೆಲ್ಲಿದೆ. 

ಹೌದು! ಟ್ಯೂಬಿಂಗೆನ್ ಮತ್ತು ಬಾನ್ (Universities of Tubingen and Bonn) ವಿಶ್ವವಿದ್ಯಾನಿಲಯಗಳು ನಡೆಸಿದ ಇತ್ತೀಚಿನ ಅಧ್ಯಯನವು ಕೆಲವು ಗಣಿತದ ಕಾರ್ಯಾಚರಣೆಗಳ ಸಮಯದಲ್ಲಿ ಮೆದುಳಿನಲ್ಲಿ  ನಿರ್ದಿಷ್ಟವಾದ  ನರಕೋಶಗಳು ಸಕ್ರಿಯವಾಗುತ್ತವೆ  ಎಂದು ಬಹಿರಂಗಪಡಿಸಿದೆ. 'ಕರೆಂಟ್ ಬಯಾಲಜಿ' ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಗಳು ಗಣಿತದ ಸಮಸ್ಯೆಗಳನ್ನು ಪರಿಹರಿಸುವಾಗ ಮೆದುಳಿನಲ್ಲಿ ಸಕ್ರಿಯವಾಗುವ ನರಕೋಶಗಳ ಇಂಟರಿಸ್ಟಿಂಗ್‌ ಮಾಹಿತಿಯನ್ನು ಬಹಿರಂಗಪಡಿಸಿದೆ. 

Latest Videos

undefined

ಇದನ್ನೂ ಓದಿ: Plastic Pollution: ಜೀವ ಸಂಕಟದಲ್ಲಿ ಜಲಚರ: ಸಮುದ್ರದ ಉದ್ದಗಲಕ್ಕೂ ಹಬ್ಬಿದ ಪ್ಲಾಸ್ಟಿಕ್‌ ಮಾಲಿನ್ಯ!

ಅಧ್ಯಯನದ ವೇಳೆ ಪತ್ತೆಯಾದ ಕೆಲವು ನ್ಯೂರಾನ್‌ಗಳು ಸಂಕಲನ ಲೆಕ್ಕಗಳ ಸಮಯದಲ್ಲಿ ಪ್ರತ್ಯೇಕವಾಗಿ ಸಕ್ರಿಯವಾಗಿದ್ದರೆ, ಇತರವು ವ್ಯವಕಲನದ ಸಮಯದಲ್ಲಿ ಸಕ್ರಿಯವಾಗಿವೆ ಎಂದು ಸೂಚಿಸಿದೆ. ಈ ಲೆಕ್ಕಾಚಾರಗಳು ಪದ ಅಥವಾ ಚಿಹ್ನೆಗಳು: ಎರಡೂ ರೂಪದಲ್ಲಿ ಲೆಕ್ಕಗಳನ್ನು ಬರೆಯಲಾಗಿದ್ದರೂ ಈ ನರಕೋಶಗಳು ಸಕ್ರಿಯವಾಗುತ್ತವೆ ಎಂದು ಅಧ್ಯಯನ ತಿಳಿಸಿದೆ.   

ವಿಭಿನ್ನ ನ್ಯೂರಾನ್‌ಗಳು ಸಕ್ರಿಯ: ಯೂನಿವರ್ಸಿಟಿ ಹಾಸ್ಪಿಟಲ್ ಬಾನ್‌ನಲ್ಲಿ ಎಪಿಲೆಪ್ಟಾಲಜಿ ವಿಭಾಗದಲ್ಲಿರುವ ವಿಶೇಷ ವೈಶಿಷ್ಟ್ಯಗಳನ್ನು ಬಳಸಿ  ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಇದು ಎಪಿಲೆಪ್ಸಿಯಿಂದ ಬಳಲುತ್ತಿರುವ ಜನರ ಮೆದುಳಿನ ಮೇಲೆ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಪರಿಣತಿಯನ್ನು ಪಡೆದಿದೆ. ಪ್ರಸ್ತುತ ಅಧ್ಯಯನದಲ್ಲಿ ಐದು ಮಹಿಳೆಯರು ಮತ್ತು ನಾಲ್ಕು ಪುರುಷರು ಭಾಗವಹಿಸಿದ್ದಾರೆ. ನರ ಕೋಶಗಳ ಚಟುವಟಿಕೆಯನ್ನು ದಾಖಲಿಸಲು ಅವರು ಮೆದುಳಿನ ಎಂಪರೋಲ್ ಲೋಬ್ (Temporal Lobe)ಗಳಲ್ಲಿ ವಿದ್ಯುದ್ವಾರಗಳನ್ನು ಅಳವಡಿಸಿದ್ದರು. 

ಇದನ್ನೂ ಓದಿ: Mosquitoes are Seeing Red: ಸೊಳ್ಳೆ ಕಡಿತ ತಪ್ಪಿಸಬೇಕಾ? ಹಾಗಾದ್ರೆ ಈ ಬಣ್ಣದ ಬಟ್ಟೆ ಧರಿಸಬೇಡಿ ಎನ್ನುತ್ತೆ ಅಧ್ಯಯನ!

ಅಧ್ಯಯನದಲ್ಲಿ ಭಾಗವಹಿಸುವವರು ಸರಳವಾದ ಅಂಕಗಣಿತದ ಲೆಕ್ಕಗಳನ್ನು ಮಾಡಬೇಕಾಗಿತ್ತು. "ವ್ಯವಕಲನದ ಸಮಯದಲ್ಲಿ ವಿಭಿನ್ನ ಹಾಗೂ ಸಂಕಲನದ ಸಮಯದಲ್ಲಿ ವಿಭಿನ್ನ ನ್ಯೂರಾನ್‌ಗಳು ಸಕ್ರಿಯವಾಗುತ್ತವೆ ಎಂದು ನಾವು ಕಂಡುಕೊಂಡಿದ್ದೇವೆ" ಎಂದು ಯೂನಿವರ್ಸಿಟಿ ಹಾಸ್ಪಿಟಲ್ ಬಾನ್‌ನಲ್ಲಿ ಎಪಿಲೆಪ್ಟಾಲಜಿ ವಿಭಾಗದ ಪ್ರೊ. ಫ್ಲೋರಿಯನ್ ಮಾರ್ಮನ್ ವಿವರಿಸಿದ್ದಾರೆ.

ಕೆಲವು ನ್ಯೂರಾನ್‌ಗಳು "+" ಚಿಹ್ನೆಗೆ ಮತ್ತು ಇತರವು "-" ಚಿಹ್ನೆಗೆ ಮಾತ್ರ ಪ್ರತಿಕ್ರಿಯಿಸಿದವು: "ನಾವು ಗಣಿತದ ಚಿಹ್ನೆಗಳನ್ನು ಪದಗಳಿಂದ ಬದಲಾಯಿಸಿದಾಗಲೂ, ಪರಿಣಾಮವು ಒಂದೇ ಆಗಿರುತ್ತದೆ"  ಎಂದು ಪ್ರೊ. ಮಾರ್ಮನ್‌ರ ಸಂಶೋಧನಾ ತಂಡದಲ್ಲಿ ಡಾಕ್ಟರೇಟ್‌ ಪದವಿ ಪಡೆಯುತ್ತಿರುವ ಎಸ್ತರ್ ಕಟ್ಟರ್ ವಿವರಿಸಿದ್ದಾರೆ. 

"ಉದಾಹರಣೆಗೆ, '5 ಮತ್ತು 3' ಅನ್ನು ಲೆಕ್ಕಹಾಕಲು ಕೇಳಿದಾಗ, ಅವರ ಸಂಕಲನ ನ್ಯೂರಾನ್‌ಗಳು ಮತ್ತೆ ಕಾರ್ಯರೂಪಕ್ಕೆ ಬಂದವು; ಆದರೆ '7ರಲ್ಲಿ 4ನ್ನು ಕಳೆಯಲು ಹೇಳಿದಾಗ,' ಅವರ ವ್ಯವಕಲನ ನ್ಯೂರಾನ್‌ಗಳು ಕೆಲಸ ಮಾಡಿದವು." ಎಂದು ಅವರು ಹೇಳಿದ್ದಾರೆ. ಈ ರೀತಿಯಾಗಿ ಮೆದುಳಿನ ಚಟುವಟಿಕೆಯು ಪ್ರಸ್ತುತ ಯಾವ ರೀತಿಯ ಕಾರ್ಯಗಳನ್ನು ಲೆಕ್ಕಾಚಾರ ಮಾಡುತ್ತಿವೆ ಎಂಬುದನ್ನು ಹೆಚ್ಚಿನ ನಿಖರತೆಯೊಂದಿಗೆ ತೋರಿಸಿವೆ. 

ಡೈನಾಮಿಕ್ ಕೋಡಿಂಗ್: ಸಾಂಕೇತಿಕವಾಗಿ ಹೇಳುವುದಾದರೆ, ಕ್ಯಾಲ್ಕುಲೇಟರ್‌ನಲ್ಲಿನ ಪ್ಲಸ್ ಕೀ ಅಥವಾ ಮೈನಸ್‌ ಕೀ ನಿರಂತರವಾಗಿ ತನ್ನ ಸ್ಥಳವನ್ನು ಬದಲಾಯಿಸುತ್ತಿರುವಂತೆಯೇ  ಇದು ಕಾರ್ಯನಿರ್ವಹಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ. ಸಂಶೋಧಕರು ಇದನ್ನು "ಡೈನಾಮಿಕ್ ಕೋಡಿಂಗ್" ಎಂದೂ ಕರೆಯುತ್ತಾರೆ. "ಈ ಅಧ್ಯಯನವು ನಮ್ಮ ಮೆದುಳಿನ ಸಾಂಕೇತಿಕ ಸಾಮರ್ಥ್ಯಗಳಲ್ಲಿ ಒಂದನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುವತ್ತ ಪ್ರಮುಖ ಹೆಜ್ಜೆಯನ್ನು ಸೂಚಿಸುತ್ತದೆ, ಅವುಗಳೆಂದರೆ ಸಂಖ್ಯೆಗಳೊಂದಿಗೆ ಲೆಕ್ಕಾಚಾರ ಮಾಡುವುದು" ಎಂದು ಮಾರ್ಮನ್ ಹೇಳಿದ್ದಾರೆ. 

click me!