ವಿಶ್ವದಲ್ಲೇ ಅತ್ಯಂತ ಚಿಕ್ಕ ಮೆದುಳು ಭಾರತೀಯರದ್ದಂತೆ| ಇದೇ ಮೊದಲ ಬಾರಿಗೆ ಭಾರತೀಯ ಮೆದುಳಿನ ಅಟ್ಲಾಸ್ ರಚನೆ| ಭಾರತೀಯರ ಮೆದುಳಿನ ಅಟ್ಲಾಸ್ ರಚಿಸಿರುವ ಹೈದರಾಬಾದ್ ಐಐಟಿ ಸಂಶೋಧಕರು| 'ಭಾರತೀಯರ ಮೆದುಳು ಗಾತ್ರ ಹಾಗೂ ತೂಕದಲ್ಲಿ ಇಡೀ ವಿಶ್ವದಲ್ಲೇ ಅತ್ಯಂತ ಚಿಕ್ಕದು'| ಮಾಂಟ್ರಿಯಲ್ ನ್ಯೂರಾಜಿಕಲ್ ಇನ್ಸಿಟ್ಯೂಟ್ ಮಾನದಂಡ ಸರಿಯಿಲ್ಲ ಎಂದ ಸಂಶೋಧಕರು| ಹೈದರಾಬಾದ್ ಐಐಟಿಯ ಜಯಂತಿ ಶಿವಸ್ವಾಮಿ ಹಾಗೂ ತಂಡದ ಮಾಹಿತಿ|
ಹೈದರಾಬಾದ್(ಅ.30): ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತಾರೆ ಹಿರಿಯರು. ಈ ಮಾತು ಅದೆಷ್ಟು ನಿಜ ನೋಡಿ. ತಮ್ಮ ವಿದ್ವತ್ತಿನಿಂದಲೇ ಇಡೀ ವಿಶ್ವದ ಗಮನ ಸೆಳೆದಿರುವ ಭಾರತೀಯರ ಮೆದುಳು ವಿಶ್ವದಲ್ಲೇ ಅತ್ಯಂತ ಚಿಕ್ಕದು.
ಇದೇ ಮೊದಲ ಬಾರಿಗೆ ಭಾರತೀಯರ ಮೆದುಳಿನ ಅಟ್ಲಾಸ್ ರಚಿಸಿರುವ ಹೈದರಾಬಾದ್ ಐಐಟಿ ಸಂಶೋಧಕರು, ಭಾರತೀಯರ ಮೆದುಳು ಗಾತ್ರ ಹಾಗೂ ತೂಕದಲ್ಲಿ ಇಡೀ ವಿಶ್ವದಲ್ಲೇ ಅತ್ಯಂತ ಚಿಕ್ಕದು ಎಂದು ತಿಳಿಸಿದ್ದಾರೆ.
ಈ ಕುರಿತು ಸಂಶೋಧನೆ ನಡೆಸಿರುವ ಹೈದರಾಬಾದ್ ಐಐಟಿಯ ಜಯಂತಿ ಶಿವಸ್ವಾಮಿ ಹಾಗೂ ತಂಡ, ಪಶ್ಚಿಮದ ರಾಷ್ಟ್ರಗಳ ಜನೆತೆಯ ಮೆದುಳಿಗೆ ಹೋಲಿಸಿದರೆ ಭಾರತೀಯರ ಮೆದುಳು ಗಾತ್ರದಲ್ಲಿ ಚಿಕ್ಕದು ಎಂದು ತಿಳಿಸಿದೆ.
ಇದೇ ವೇಳೆ ಬ್ರೈನ್ ಮ್ಯಾಪಿಂಗ್ ಮಾಡುವ ಅಂತಾರಾಷ್ಟ್ರೀಯ ಸಂಸ್ಥೆ ಮಾಂಟ್ರಿಯಲ್ ನ್ಯೂರಾಜಿಕಲ್ ಇನ್ಸಿಟ್ಯೂಟ್, ಭಾರತೀಯರ ಮೆದುಳಿನ ಮ್ಯಾಪಿಂಗ್ ಮಾಡುವಾಗ ಬಳಸಿರುವ ಮಾನದಂಡ ಸರಿಯಿಲ್ಲ ಎಂದು ಜಯಂತಿ ಶಿವಸ್ವಾಮಿ ಹೇಳಿದ್ದಾರೆ.
ಸುಮಾರು 50 ಭಾರತೀಯ ಪುರುಷ ಹಾಗೂ ಮಹಿಳೆಯ ಮೆದುಳಿನ ಅಧ್ಯಯನದ ಬಳಿಕ ಮೊಟ್ಟ ಮೊದಲ ಭಾರತೀಯ ಮೆದುಳಿನ ಅಟ್ಲಾಸ್ ತಯಾರಿಸಲಾಗಿದೆ ಎಂದು ಜಯಂತಿ ಮಾಹಿತಿ ನೀಡಿದ್ದಾರೆ.
ಕೊರಿಯಾ ಹಾಗೂ ಚೀನಿಯರ ಮೆದುಳಿನ ರಚನೆಯಲ್ಲಿ ಕೂಡ ಭಿನ್ನತೆಯಿದ್ದು, ಈ ಮೊದಲಿನ ಮಾನದಂಡಗಳಿಗೂ ಭಿನ್ನವಾಗಿ ಭಾರತೀಯರ ಮೆದುಳಿನ ರಚನೆಯ ಕುರಿತು ಅಧ್ಯಯನ ನಡೆಸಲಾಗಿದೆ ಎಂದು ಜಯಂತಿ ಹೇಳಿದ್ದಾರೆ.
ಅಕ್ಟೋಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: