ಮೊದಲ ಗಡಿಯಾರ ತಯಾರಿಸಿದವನಿಗೆ ಸಮಯ ಗೊತ್ತಾಗಿದ್ದು ಹೇಗೆ? ಇತಿಹಾಸದ ರೋಚಕ ಅಧ್ಯಾಯ

Published : Aug 14, 2026, 03:52 PM IST
US Clock Fall Back

ಸಾರಾಂಶ

ಮೊದಲು ಗಡಿಯಾರ ತಯಾರಿಸಿ ಟೈಮ್ ಸೆಟ್ ಮಾಡಿದ್ದು ಹೇಗೆ? ಗಡಿಯಾರ ತಯಾರಿಸುವ ಮೊದಲು ಸಮಯ ಅಳೆಯುತ್ತಿದ್ದದ್ದು ಹೇಗೆ? ಗಡಿಯಾರಕ್ಕೆ ಮುಳ್ಳುಗಳನ್ನೇ ಇಟ್ಟಿದ್ದು ಯಾಕೆ? ರೋಚಕ ಅಧ್ಯಾಯದ ಡಿಟೇಲ್ಸ್

ಮೊದಲ ಗಡಿಯಾರ ತಯಾರಿಸಿದ ವ್ಯಕ್ತಿಗೆ ಸಮಯ ಸೆಟ್ ಮಾಡಿದ್ದು ಹೇಗೆ? ಊಹೆ, ತನಗಿಷ್ಟ ಬಂದ ಸಮಯವನ್ನು ಸೆಟ್ ಮಾಡಿ ಇದೇ ಸರಿಯಾದ ಸಮಯ ಎಂದು ಹೇಳಲಿಲ್ಲ. ಮೊದಲ ಗಡಿಯಾರದಲ್ಲಿ ನಿಖರವಾದ ಸಮಯ ಸೆಟ್ ಮಾಡಲಾಗಿತ್ತು. ಹಾಗಂತ ಗಡಿಯಾರ ಬರುವುದಕ್ಕೂ ಮೊದಲು ಸಮಯವೇ ಇರಲಿಲ್ಲ ಎಂದಲ್ಲ. ಆಗಲೂ ಜನ ಸಮಯ ನೋಡುತ್ತಿದ್ದರು, ಸಮಯಕ್ಕೆ ಸರಿಯಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು.

ಭಾರತೀಯರಿಗೆ ಸಮಯ ಅಳೆಯಲು ತಿಳಿದಿತ್ತು. ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಭೂಮಿ ಮೇಲೆ ಮಾತ್ರವಲ್ಲ, ಗೃಹಗಳ ಸಮಯವನ್ನು, ದೂರವನ್ನು ನಿಖರವಾಗಿ ಹೇಳಿದ್ದರು. ದುರಾದೃಷ್ಠವಶಾತ್ ನಮ್ಮ ಮೇಲಿನ ದಾಳಿಯಲ್ಲಿ ನಮ್ಮ ದಾಖಲೆಗಳು ನಶಿಸಿ ಹೋಗಿತ್ತು. ಇನ್ನು ಬ್ರಟಿಷರಾಗಲಿ, ದಾಳಿಕೋರರಾಗಲಿ ಭಾರತವನ್ನು ನಿಕೃಷ್ಠವಾಗಿ ತೋರಿಸಿದರೆ ಹೊರತು ಅಸಲಿ ಜ್ಞಾನ ಸಂಪತ್ತನ್ನು ಹೇಳಲೇ ಇಲ್ಲ. ಹೀಗಾಗಿ ಗಡಿಯಾರ, ಸಮಯ ವಿಚಾರದ ಇತಿಹಾಸದಲ್ಲಿ ಭಾರತದ ಉಲ್ಲೇಖವಿಲ್ಲ. ಸೂರ್ಯನ ಚಲನೆಯನ್ನು ವೀಕ್ಷಿಸಿ ಸಮಯ ಹೇಳುತ್ತಿದ್ದರು. ಅಂದು ಪ್ರತಿ ನಿಮಿಷ, ಗಂಟೆಗಳು ಇರಲಿಲ್ಲ. ಬೆಳಗ್ಗೆ , ಮಧ್ಯಾಹ್ನ, ಸಂಜೆ ಹಾಗೂ ರಾತ್ರಿಯಾಗಿ ವಿಂಗಡಿಸಲಾಗಿತ್ತು.

ಸಮಯ ನೋಡುವ ಪರಿ, ಗಡಿಯಾರ ಅಭಿವೃದ್ಧಿ

ಭೂಮಿ ಮೇಲೆ ಒಂದು ವಸ್ತವನ್ನುಟ್ಟು, ಕೋಲನ್ನಿಟ್ಟು ಅದರ ನೆರಳು ಭೂಮಿ ಮೇಲೆ ಹೇಗೆ ಬೀಳುತ್ತದೆ ಎಂಬುದು ಅಧರಿಸಿ ಸಮಯ ನಿಗದಿ ಮಾಡಲಾಗಿತ್ತು. ಕ್ರಿ.ಪೂ 1500ಕ್ಕೂ ಮೊದಲು ಈಜಿಪ್ಟ್‌ನಲ್ಲಿ ಸೂರ್ಯಗಡಿಯಾರಗಳು ಬಳಕೆಯಲ್ಲಿತ್ತು ಎಂಬ ಉಲ್ಲೇಖವಿದೆ. ನೀರು ಹರಿಸಿ ಅದರ ವೇಗದ ಮೂಲಕ ಸಮಯವನ್ನು ಅಳೆಯಲಾಗುತ್ತಿತ್ತು. ನಕ್ಷತ್ರಗಳು, ಸೂರ್ಯ ಚಂದ್ರನ ಚಲನೆ ಮೂಲಕವೂ ಸಮಯ ನೋಡಲಾಗುತ್ತಿತ್ತು. ಮೊದಲ ಮೆಕಾನಿಕಲ್ ಗಡಿಯಾರವನ್ನು 1092ರಲ್ಲಿ ಚೀನಾದ ವಿಜ್ಞಾನಿ ಸು ಸಾಂಗ್ ನಿರ್ಮಿಸಿದ ಅನ್ನೋ ಉಲ್ಲೇಖವಿದೆ. ಆದರೆ ಸಂಪೂರ್ಣ ಯಾಂತ್ರಿಕ ಗಡಿಯಾರ ಕ್ರಿ.ಶ 1283ರಲ್ಲಿ ಇಂಗ್ಲೆಂಡ್‌ನಲ್ಲಿ ನಿರ್ಮಾಣಗೊಂಡಿತ್ತು.

ಹಳೇ ಪದ್ಧತಿಗಳಲ್ಲಿ ನಿಖರವಾಗಿ ಸಮಯ ಹೇಳಲಾಗುತ್ತಿತ್ತು. ಪ್ರಮುಖವಾಗಿ ಸೂರ್ಯನ ಬೆಳಕಿನ ಮೂಲಕ. ಆದರೆ ತೀವ್ರ ಮಳೆಗಾಲದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಗಡಿಯಾರ ತಯಾರಿಸುವ ಮೊದಲು ವಿಜ್ಞಾನಿಗಳು ಸೂರ್ಯನ ಬೆಳಕಿನ ಮೂಲಕ ಅಳೆಯುವ ವಿದ್ಯೆಯನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡು ಮೆಕಾನಿಕಲ್ ಗಡಿಯಾರಗಳನ್ನು ತಯಾರಿಸಲಾಗಿತ್ತು. ಆರಂಭದಲ್ಲಿ ಸೆಕೆಂಡ್, ನಿಮಿಷಗಳು ಇರಲಿಲ್ಲ. ನಿಖರ ಸಮಯ ಇಲ್ಲದಿದ್ದರೂ ಆಯಾ ಪ್ರದೇಶಕ್ಕ ಅನುಗುಣವಾದ ಸಮಯ ಹೇಳಲಾಗುತ್ತಿತ್ತು. ಇಂಗ್ಲೆಂಡ್‌ನ 'ಸಾಲಿಸ್‌ಬರಿ ಕ್ಯಾಥೆಡ್ರಲ್ ಗಡಿಯಾರ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಇದು ಅತ್ಯಂತ ಹಳೇ ಗಡಿಯಾರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸೋಲಾರ್ ನೂನ್

ಸೂರ್ಯನ ಬೆಳಕು ಹರಿಯುತ್ತಿದ್ದಂತೆ ಬೆಳಗ್ಗೆ ಎಂದು ಗುರುತಿಸಲಾಗಿತ್ತು. ಆದರೆ ಮಧ್ಯಾಹ್ನ ಗುರುತಿಸುವುದು ಕಷ್ಟವಾಗಿತ್ತು. ಹೀಗಾಗಿ ಸೋಲಾರ್ ನೂನ್ ಅಂದರೆ ಸೂರ್ಯ ನೆತ್ತನ ಮೇಲೆ ಬರುವಾಗ ಸೋಲಾರ್ ನೂನ್ ಎಂದು ಗುರುತಿಸಲಾಗಿತ್ತು. ಇದಕ್ಕೆ ಅನುಗುಣವಾಗಿ ಗಡಿಯಾರದ ಸಮಯ ಸೆಟ್ ಮಾಡಲಾಗಿತ್ತು. ಮೊದಲ ಗಡಿಯಾರಕ್ಕೆ ಸಮಯ ಹೊಂದಿಸಿದ ವ್ಯಕ್ತಿ ಎಂಬುದಕ್ಕೆ ನಿಖರ ಉತ್ತರವಿಲ್ಲ.

ಡಚ್ ವಿಜ್ಞಾನಿ ಕ್ರಿಸ್ಟಿಯನ್ ಹೈಜೆನ್ಸ್ 1656ರಲ್ಲಿ ಪೆಂಡುಲಮ್ ಗಡಿಯಾರ ಅಭಿವೃದ್ಧಿ ಪಡಿಸಿದ್ದರು. ತೂಗಾಟದ ಮೂಲಕ ಗಡಿಯಾರದ ಮುಳ್ಳುಗಳು ತಿರುಗುವ ತಂತ್ರಜ್ಞಾನ ಬಳಸಲಾಯಿು. ಈಗಲೂ ಹಲವರ ಮನೆಯಲ್ಲಿ ಈ ತೂಗುವ ಹಾಗೂ ಶಬ್ದ ಮಾಡುವ ಗಡಿಯಾರ ಕಾಣಸಿಗುತ್ತದೆ. ಬ್ಯಾಲೆನ್ಸ್ ವ್ಹೀಲ್ ತಂತ್ರಜ್ಞಾನ ಮೂಲಕ ಗಡಿಯಾದ ಗಾತ್ರಗಳು ಚಿಕ್ಕದಾಗಲು ಆರಂಭಿಸಿತು. 16ನೇ ಶತಮಾನದ ವೇಳೆ ಗಡಿಯಾರ ನಿಖರ ಸ್ವರೂಪ, ನಿಖರ ಸಮಯ ಹೇಳುವ ಅಮೂಲ್ಯ ವಸ್ತುಗಳಾಗಿತ್ತು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಸೂರ್ಯ ಏಕೆ ಕೊತ ಕೊತ ಬಿಸಿ, ಹೊರ ಪದರದ ರಹಸ್ಯ ಭೇದಿಸಿದ ಭಾರತದ ಆದಿತ್ಯ-L1, ವಿಜ್ಞಾನಿಗಳಿಂದ ಬೆಂಗಳೂರಿನಲ್ಲಿ ಸಂಶೋಧನೆ!
ವರ್ಷಕ್ಕೆ 365 ಅಲ್ಲ, 372 ದಿನಗಳು!: ವಿಜ್ಞಾನಿಗಳಿಗೆ ಸಿಕ್ಕ ಅಪರೂಪದ ಶಂಖ ಬಿಚ್ಚಿಟ್ಟಿತು ಪ್ರಾಚೀನ ಭೂಮಿಯ ಗುಟ್ಟು!