Good News for Farmers: ರೈತರಿಗೆ ಬಂಪರ್: ಭತ್ತದ ಡಿಎನ್​ಎ ಬದಲಿಸಿ ವಿಜ್ಞಾನಿಗಳಿಂದಲೇ ಹೊಸ ತಳಿ ರೆಡಿ! ವಿಶ್ವದಲ್ಲೇ ಮೊದಲು...

Published : May 25, 2025, 12:53 PM IST
First genome edited rice

ಸಾರಾಂಶ

ಭಾರತದ ವಿಜ್ಞಾನಿಗಳು ಜೀನೋಮ್ ಆಧರಿತ ಅಕ್ಕಿ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಹೊಸ ತಳಿಗಳು ರೋಗ ನಿರೋಧಕ, ಹೆಚ್ಚು ಇಳುವರಿ ನೀಡುತ್ತವೆ ಮತ್ತು ನೀರು ಸಂರಕ್ಷಣೆಗೆ ನೆರವಾಗುತ್ತವೆ.

ಭತ್ತದ ಡಿಎನ್​ಎಯನ್ನು ಬದಲು ಮಾಡಿ ಅಕ್ಕಿಯನ್ನು ತಯಾರು ಮಾಡಿದ್ದಾರೆ ಭಾರತದ ವಿಜ್ಞಾನಿಗಳು. ಈ ಮೂಲಕ ಜೀನೋಮ್ ಆಧರಿತ ಅಕ್ಕಿ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ದೇಶವಾಗಿದೆ ಭಾರತ. ಇದೀಗ ಈ ಅಕ್ಕಿಯ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಬಿಹಾರ, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು, ಛತ್ತೀಸ್‌ಗಢ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶಗಳಿಗೆ ಅಭಿವೃದ್ಧಿಪಡಿಸಲಾಗಿದೆ. ಈಚೆಗೆ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಎರಡು ಜೀನೋಮ್ ಅಕ್ಕಿ ಪ್ರಭೇದಗಳನ್ನು ಬಿಡುಗಡೆ ಮಾಡುವ ಮೂಲಕ, ಹೊಸ ಆವಿಷ್ಕಾರದ ಬಗ್ಗೆ ವಿವರಣೆ ನೀಡಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆಯ ಪೌಷ್ಠಿಕಾಂಶದ ಬೇಡಿಕೆಗಳನ್ನು ಪೂರೈಸಲು, ದೇಶವು ತನ್ನ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿರುವ ಹಿನ್ನೆಲೆಯಲ್ಲಿ, ಕೃಷಿ ವಿಜ್ಞಾನಿಗಳ ಆವಿಷ್ಕಾರದಿಂದ ಇದು ರೂಪುಗೊಂಡಿರುವುದಾಗಿ ಸಚಿವರು ಹೇಳಿದ್ದಾರೆ. ಈ ಎರಡು ಪ್ರಭೇದಗಳು ರೈತರಿಗೆ ಮಾತ್ರವಲ್ಲದೆ ಸಾರ್ವಜನಿಕರಿಗೂ ಪ್ರಯೋಜನಕಾರಿ ಎಂದಿದ್ದಾರೆ ಅವರು.

 

ಇನ್ನು ಜೀವಕೋಶದ ಬದಲಾವಣೆ ಎಂದರೇನು ಎನ್ನುವ ಬಗ್ಗೆ ವಿವರಿಸಿ ಹೇಳುವುದಾದರೆ, ಪ್ರತಿಯೊಂದು ಜೀವಿಗಳ ಪ್ರತಿಯೊಂದು ಜೀವಕೋ ಶದಲ್ಲೂ ತಳಿಸೂತ್ರಗಳು ಇರುತ್ತವೆ. ಜೀವಕೋಶದ ಡಿಎನ್ಎಯನ್ನು ಕೃತಕವಾಗಿ ಬದಲಿಸುವ ವಿಧಾನಕ್ಕೆ ಜೀನೋಮ್ ಎಡಿಟಿಂಗ್ ಮಾಡಲಾಗುತ್ತದೆ. ಅಂದರೆ, ಜೀವಿಯೊಂದರ ವಂಶವಾಹಿಯನ್ನು ತೆಗೆದು ಅದನ್ನು ಮತ್ತೊಂದು ಜೀವಿಗೆ ಸೇರಿಸಿ ಅದರ ದೈಹಿಕ ಗುಣಲಕ್ಷಣಗಳಲ್ಲಿ ಬದಲಾವಣೆ ತರುವ ಕಾರ್ಯ ಇದು. ಆ ಮೂಲಕ ನಿಸರ್ಗದಲ್ಲಿ ಕಾಣದಿದ್ದ ಹೊಸ ಜೀವಿ ಅಥವಾ ಸಸ್ಯಗಳ ತಳಿ ಸೃಷ್ಟಿಸಲು ಸಾಧ್ಯವಾಗಲಿದೆ. ಸಾಮಾನ್ಯವಾಗಿ ಮನೆಗಳಲ್ಲಿ ಎರಡು ಗಿಡಗಳನ್ನು ಕಸಿ ಮಾಡುವ ಮೂಲಕ ಮತ್ತೊಂದು ತಳಿ ಸೃಷ್ಟಿಸಲಾಗುತ್ತದೆಯಲ್ಲ, ಅದೇ ರೀತಿ ಇದು ಕೂಡ.

ಅಂದಹಾಗೆ ಈ ಎರಡು ತಳಿಗಳಿಗೆ, ‘ಡಿಆರ್​ಆರ್​ ಧನ್ 100’ (ಕಮಲಾ) ಮತ್ತು ‘ಪೂಸಾ ಡಿಎಸ್ಟಿ ರೈಸ್ 1’ ಎಂದು ಹೆಸರು ಇಡಲಾಗಿದೆ. ಈ ತಳಿಗಳ ವಿಶೇಷತೆ ಏನೆಂದರೆ, ಹೆಸರಿನ ಈ ತಳಿಗಳು ರೋಗ ನಿರೋಧಕ ಗುಣ ಹೊಂದಿದ್ದು, ಶೇಕಡಾ 30ರಷ್ಟು ಹೆಚ್ಚು ಇಳುವರಿ ನೀಡುತ್ತವೆ. ಮಾತ್ರವಲ್ಲದೇ ನೀರು ಸಂರಕ್ಷಣೆ ಮತ್ತು ಹಸಿರುಮನೆ ಅನಿಲಹೊರಸೂಸುವಿಕೆಯ ಪ್ರಮಾಣ ತಗ್ಗಿಸುವಲ್ಲಿ ಕೂಡ ಇದು ಸಾಕಷ್ಟು ನೆರವಾಗಲಿವೆ. ಶೀಘ್ರವೇ , ದೇಶದ ರೈ ತರಿಗೆ ಈ ತಳಿಗಳನ್ನು ವಿತರಿಸುವ ಮೂಲಕ ಈ ತಳಿಗಳಿಗೆ ಇನ್ನಷ್ಟು ಉತ್ತೇಜನ ನೀಡುವುದು ಸರ್ಕಾರದ ಗುರಿ. ಅಂದಹಾಗೆ, ಭಾರತದಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಸಾಂಬಾ ಮಹಸೂರಿ (ಬಿಪಿಟಿ5204) ಮತ್ತು ಕೊಟ್ಟೊಂ ಡೊರಾ ಸನ್ನಾಲು (ಎಂ ಟಿಯು1010) ಭತ್ತದ ತಳಿ ಬಳಸಿಕೊಂಡು ಈ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಶಿಫಾರಸು ಮಾಡಲಾದ ಪ್ರದೇಶದ ಸುಮಾರು 5 ಮಿಲಿಯನ್ ಹೆಕ್ಟೇರ್‌ನಲ್ಲಿ ಈ ಪ್ರಭೇದಗಳನ್ನು ಬೆಳೆಸುವುದರಿಂದ 4.5 ಮಿಲಿಯನ್ ಟನ್ ಹೆಚ್ಚುವರಿ ಭತ್ತವನ್ನು ಉತ್ಪಾದಿಸಬಹುದು. ಇದೊಂದು ಐತಿಹಾಸಿಕ ಘಟನೆ ಎಂದು ಸಚಿವ ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ. ಈ ಎರಡು ಪ್ರಭೇದಗಳು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಇಳುವರಿಯನ್ನು ಹೆಚ್ಚಿಸುತ್ತದೆ. ದೇಶದ ಹೆಚ್ಚುತ್ತಿರುವ ಜನಸಂಖ್ಯೆಯ ಪೌಷ್ಠಿಕಾಂಶದ ಬೇಡಿಕೆಗಳನ್ನು ಪೂರೈಸುವಲ್ಲಿ ಇವು ಹೆಚ್ಚು ಪರಿಣಾಮಕಾರಿಯಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ