ಗಂಟೆಗೆ 47,880 ವೇಗದಲ್ಲಿ ಭೂಮಿಯ ಸಮೀದಿಂದ ಹಾದುಹೋಗಲಿದೆ ಐದು ಭಾರೀ ಕ್ಷುದ್ರಗ್ರಹಗಳು, ನಾಸಾ ಹೇಳೋದೇನು?

Published : Nov 19, 2026, 07:45 PM IST
Nasa

ಸಾರಾಂಶ

ನವೆಂಬರ್ 19 ಮತ್ತು 20ರಂದು ಐದು ಬೃಹತ್ ಕ್ಷುದ್ರಗ್ರಹಗಳು ಭೂಮಿಯ ಸಮೀಪದಿಂದ ಹಾದುಹೋಗಲಿವೆ ಎಂದು ನಾಸಾ ತಿಳಿಸಿದೆ. ಈ ಕ್ಷುದ್ರಗ್ರಹಗಳು ಅತಿ ವೇಗವಾಗಿ ಸಾಗುತ್ತಿದ್ದರೂ ಭೂಮಿಗೆ ಯಾವುದೇ ಅಪಾಯವಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ವಾಷಿಂಗ್ಟನ್‌ (ನ.19): ನವೆಂಬರ್ 19 ಮತ್ತು 20ರ ನಡುವೆ ಬರೋಬ್ಬರಿ ಐದು ಕ್ಷುದ್ರಗ್ರಹಗಳು (Asteroids) ಭೂಮಿಯ ಸಮೀಪದಿಂದ ಹಾದುಹೋಗಲಿವೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಮಾಹಿತಿ ನೀಡಿದೆ. ಗಂಟೆಗೆ 47,880 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿರುವ 10ರಿಂದ 120 ಮೀಟರ್ ಗಾತ್ರದ ಈ ಕ್ಷುದ್ರಗ್ರಹಗಳ ಚಲನವಲನಗಳ ಮೇಲೆ ವಿಜ್ಞಾನಿಗಳು ಹದ್ದಿನ ಕಣ್ಣಿಟ್ಟಿದ್ದು, ಇವು ಭೂಮಿಯಿಂದ ಸುರಕ್ಷಿತ ಅಂತರದಲ್ಲಿ ಹಾದುಹೋಗಲಿವೆ ಎಂದು ನಾಸಾ ಸ್ಪಷ್ಟಪಡಿಸಿದೆ!.

ವಿಜ್ಞಾನಿಗಳ ಪ್ರಕಾರ, ಭೂಮಿಯ ಸಮೀಪದಿಂದ ಹಾದುಹೋಗಲಿರುವ ಈ ಕ್ಷುದ್ರಗ್ರಹಗಳ ಗಾತ್ರ 10 ಮೀಟರ್‌ನಿಂದ 120 ಮೀಟರ್‌ವರೆಗೆ ಇರಲಿದೆ. ಇವುಗಳ ಬೃಹತ್ ಗಾತ್ರ ಮತ್ತು ಅತಿ ವೇಗದ ಕಾರಣದಿಂದಾಗಿ ಜಗತ್ತಿನಾದ್ಯಂತ ಬಾಹ್ಯಾಕಾಶ ಸಂಸ್ಥೆಗಳು ಆಗಸದತ್ತ ತೀವ್ರ ನಿಗಾ ಇರಿಸಿವೆ. ಆದರೆ, ನವೆಂಬರ್ 19-20ರಂದು ಹಾದುಹೋಗಲಿರುವ ಈ ಕ್ಷುದ್ರಗ್ರಹಗಳಿಂದ ಭೂಮಿಗೆ ಯಾವುದೇ ಅಪಾಯವಿಲ್ಲ ಎಂದು ನಾಸಾ ಭರವಸೆ ನೀಡಿದೆ. ಭೂಮಿಯ ಸಮೀಪದಿಂದ ಹಾದುಹೋಗಲಿರುವ ಈ ಐದು ಕ್ಷುದ್ರಗ್ರಹಗಳಿಗೆ 2026 VA11, 2026 TB84, 2026 VD6, 2018 NE1 ಮತ್ತು 2007 WK3 ಎಂದು ಹೆಸರಿಸಲಾಗಿದೆ. (ಕ್ಷುದ್ರಗ್ರಹಗಳ ಹೆಸರಿನ ಆರಂಭಿಕ ಅಂಕಿಯು ಅವುಗಳನ್ನು ಪತ್ತೆಹಚ್ಚಿದ ವರ್ಷವನ್ನು ಆಧರಿಸಿರುತ್ತದೆ).

ಭೂಮಿಯ ಸಮೀಪ ಬರುತ್ತಿರುವ 5 ಕ್ಷುದ್ರಗ್ರಹಗಳ ಸಂಪೂರ್ಣ ವಿವರ

ಕ್ಷುದ್ರಗ್ರಹದ ಹೆಸರುಸಮೀಪಿಸುವ ದಿನಾಂಕಭೂಮಿಯಿಂದ ಇರುವ ಅಂತರಅಂದಾಜು ಗಾತ್ರ (Size)ಚಲಿಸುವ ವೇಗ (Speed)
2026 VA11ನವೆಂಬರ್ 19ಸುಮಾರು 3.35 ಮಿಲಿಯನ್ ಕಿ.ಮೀ10 ರಿಂದ 22 ಮೀಟರ್ಗಂಟೆಗೆ 32,040 ಕಿ.ಮೀ (ಸಾಪೇಕ್ಷ ವೇಗ)
2026 TB84ನವೆಂಬರ್ 19ಸುಮಾರು 4.64 ಮಿಲಿಯನ್ ಕಿ.ಮೀ50 ರಿಂದ 110 ಮೀಟರ್ಗಂಟೆಗೆ ಸುಮಾರು 35,640 ಕಿ.ಮೀ
2018 NE1ನವೆಂಬರ್ 19ಸುಮಾರು 6.38 ಮಿಲಿಯನ್ ಕಿ.ಮೀಬೃಹತ್ ಗಾತ್ರಗಂಟೆಗೆ 47,880 ಕಿ.ಮೀ (ಸೆಕೆಂಡಿಗೆ 13.3 ಕಿ.ಮೀ - ಅತಿ ವೇಗ)
2007 WK3ನವೆಂಬರ್ 19ಸುಮಾರು 5.47 ಮಿಲಿಯನ್ ಕಿ.ಮೀ14 ರಿಂದ 30 ಮೀಟರ್ನಾಸಾ ನಿಗಾದಲ್ಲಿದೆ
2026 VD6ನವೆಂಬರ್ 20ಸುಮಾರು 4.1 ಮಿಲಿಯನ್ ಕಿ.ಮೀ12 ರಿಂದ 28 ಮೀಟರ್ನಾಸಾ ನಿಗಾದಲ್ಲಿದೆ

ಪ್ರತಿ ಕ್ಷುದ್ರಗ್ರಹದ ವಿಶೇಷತೆಗಳೇನು?

ಕ್ಷುದ್ರಗ್ರಹ 2026 VA11: ಇದು ನವೆಂಬರ್ 19ರಂದು ಭೂಮಿಯ ಸಮೀಪದಿಂದ ಹಾದುಹೋಗಲಿದ್ದು, ಈ ವೇಳೆ ಭೂಮಿಯಿಂದ 3.35 ಮಿಲಿಯನ್ ಕಿಲೋಮೀಟರ್ ದೂರದಲ್ಲಿರಲಿದೆ. ಇದರ ಗಾತ್ರ 10ರಿಂದ 22 ಮೀಟರ್ ಇದ್ದು, ಸಾಪೇಕ್ಷ ವೇಗ (Relative velocity) ಗಂಟೆಗೆ 32,040 ಕಿಲೋಮೀಟರ್ ಇರಲಿದೆ.

ಕ್ಷುದ್ರಗ್ರಹ 2026 TB84: ನವೆಂಬರ್ 19ರಂದು ಭೂಮಿಯಿಂದ ಸುಮಾರು 4.64 ಮಿಲಿಯನ್ ಕಿಲೋಮೀಟರ್ ದೂರದಲ್ಲಿ ಹಾದುಹೋಗಲಿರುವ ಈ ಕ್ಷುದ್ರಗ್ರಹವು 50ರಿಂದ 110 ಮೀಟರ್‌ವರೆಗಿನ ದೊಡ್ಡ ಗಾತ್ರವನ್ನು ಹೊಂದಿದೆ. ಇದರ ವೇಗ ಗಂಟೆಗೆ ಸುಮಾರು 35,640 ಕಿಲೋಮೀಟರ್ ಆಗಿದೆ.

ಕ್ಷುದ್ರಗ್ರಹ 2018 NE1 (ಅತ್ಯಂತ ವೇಗದ ಕ್ಷುದ್ರಗ್ರಹ): ನವೆಂಬರ್ 19ರಂದು ಭೂಮಿಯಿಂದ ಸುಮಾರು 6.38 ಮಿಲಿಯನ್ ಕಿಲೋಮೀಟರ್ ದೂರದಲ್ಲಿ ಸಾಗಲಿರುವ ಈ ಕ್ಷುದ್ರಗ್ರಹವು ಉಳಿದವುಗಳಿಗಿಂತ ಅತಿ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ. ಇದರ ವೇಗ ಸೆಕೆಂಡಿಗೆ 13.3 ಕಿಲೋಮೀಟರ್ ಅಥವಾ ಗಂಟೆಗೆ 47,880 ಕಿಲೋಮೀಟರ್ ಇರಲಿದೆ.

ಕ್ಷುದ್ರಗ್ರಹ 2007 WK3: ಇದು ನವೆಂಬರ್ 19ರಂದು ಭೂಮಿಯಿಂದ ಸುಮಾರು 5.47 ಮಿಲಿಯನ್ ಕಿಲೋಮೀಟರ್ ದೂರದಿಂದ ಹಾದುಹೋಗಲಿದ್ದು, ಇದರ ಗಾತ್ರ 14ರಿಂದ 30 ಮೀಟರ್ ನಡುವೆ ಇರಲಿದೆ ಎಂದು ಅಂದಾಜಿಸಲಾಗಿದೆ.

ಕ್ಷುದ್ರಗ್ರಹ 2026 VD6: 12ರಿಂದ 28 ಮೀಟರ್ ಗಾತ್ರದ ಈ ಕ್ಷುದ್ರಗ್ರಹವು ಭೂಮಿಯಿಂದ ಸುಮಾರು 4.1 ಮಿಲಿಯನ್ ಕಿಲೋಮೀಟರ್ ದೂರದಿಂದ ಹಾದುಹೋಗುವ ನಿರೀಕ್ಷೆಯಿದೆ. ನವೆಂಬರ್ 20ರಂದು ಹಾದುಹೋಗುವ 5 ಕ್ಷುದ್ರಗ್ರಹಗಳ ಪಟ್ಟಿಯಲ್ಲಿ ಇದನ್ನು ಪರಿಗಣಿಸಲಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಶಾಲೆ ಬಿಟ್ಟು ವೇದ ಕಲಿತ ಬಾಲಕ ಈಗ ಇಸ್ರೋ ವಿಜ್ಞಾನಿ; ಮೂಡುಬಿದಿರೆ ಆಳ್ವಾಸ್‌ನಲ್ಲೂ ಓದಿದ್ದ ಸಾಧಕ
ಬಾಹ್ಯಾಕಾಶದಲ್ಲಿ ಕನ್ನಡ: ಭೂಮಿಯಿಂದ 1 ಬೆಳಕಿನ ದಿನದ ದೂರ ತಲುಪಿದ ನಾಸಾದ ವೊಯೇಜರ್ 1