"ಜಿಎಮ್ ಬೆಳೆಗಳನ್ನು ಮಾಪಿಸುವ ತಾಂತ್ರಿಕ ಜ್ಞಾನ ಮತ್ತು ನೈಪುಣ್ಯತೆ ಜಿಇಎಸಿಗೆ ಇದೆ. ಆದರೆ ರಾಜ್ಯ ಸಂಸ್ಥೆಗಳು ಮತ್ತು ಇಲಾಖೆಗಳು, ಆ ಪಾತ್ರವನ್ನು ನಿರ್ವಹಿಸಲು ಅಗತ್ಯವಾದ ಜ್ಞಾನ ಅಥವಾ ಸಂಪನ್ಮೂಲಗಳಿಂದ ಸಜ್ಜಾಗಿಲ್ಲ" ಎಂದು ಬೀಜ ಉದ್ಯಮ ಮಹಾಮಂಡಳಿಯದ ಚೇರ್ಮನ್, ಮಹಾನಿರ್ದೇಶಕ ರಾಮ್ ಕೌಂಡಿನ್ಯ ಹೇಳಿದ್ದಾರೆ.
ಬೆಂಗಳೂರು (ಜ. 14): ಜಿಎಮ್ ಬೆಳೆಗಳ (Genetically Modified Crops) ವೈಜ್ಞಾನಿಕ ಕ್ಷೇತ್ರ ಪ್ರಯೋಗಳ ಎರಡನೇ ಹಂತಕ್ಕಾಗಿ ಸಂಸ್ಥೆಯೊಂದು ಮಾಡಿದ ಕೋರಿಕೆಗೆ ಪ್ರತಿಕ್ರಿಯೆಯಾಗಿ ಕರ್ನಾಟಕ ಸರ್ಕಾರವು ಇತ್ತೀಚೆಗೆ ಸಾರ್ವಜನಿಕರಿಂದ ಅಭಿಪ್ರಾಯ/ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಇದು, ಪ್ರಯೋಗಗಳನ್ನು ನಡೆಸಲು ನಿಯಂತ್ರಣ ಮಂಡಳಿಯಾದ ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿ(GEAC) ಅನುಮೋದನೆ ಪಡೆಯುವ ಮುನ್ನ ರಾಜ್ಯದಿಂದ ಅನಾಕ್ಷೇಪಣಾ ಪತ್ರ (Non-compliance Letter) ಪಡೆದುಕೊಳ್ಳಬೇಕೆಂದು ಇತ್ತೀಚೆಗೆ ಮಾಡಿರುವ ನೀತಿಗಳಲ್ಲಿನ ಬದಲಾವಣೆಯ ಅನುಸರಣೆಯಲ್ಲಿ ಬಂದಿದೆ.
ಇತ್ತೀಚೆಗೆ ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು , ಪ್ರಯೋಗಗಳು ನಡೆಯಬೇಕೆಂದು ಪ್ರಸ್ತಾವಿಸಲಾಗಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಶಿಫಾರಸು ಇಲ್ಲದೆ, ಜಿಇಎಸಿಯ ಪರಿಗಣನೆಗಾಗಿ ಬೀಜ ತಯಾರಕರು ಜಿಎಮ್ ಬೆಳೆಗಳ ವೈಜ್ಞಾನಿಕ ಕ್ಷೇತ್ರ ಪ್ರಯೋಗಕ್ಕೆ ಪ್ರಸ್ತಾವನೆ ಕಳುಹಿಸುವಂತಿಲ್ಲ ಎಂದು ತಿಳಿಸಿತ್ತು. ಇದರ ಪರಿಣಾಮವಾಗಿ, ಈ ಮೊದಲು ಜಿಇಎಸಿಯು ನಿರ್ವಹಿಸುತ್ತಿದ್ದ ಪ್ರಯೋಗ ಕೋರಿಕೆಗಳನ್ನು ಇನ್ನುಮುಂದೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿರ್ವಹಿಸಲಿವೆ.
undefined
ಆಹಾರ ಸುರಕ್ಷತೆ ಖಾತರಿಪಡಿಸಲು ಕ್ಷೇತ್ರ ಪ್ರಯೋಗಗಳು ಅಗತ್ಯ!
ಈ ಬೆನ್ನಲ್ಲೇ ಮಾತನಾಡಿದ ಭಾರತದ ಬೀಜ ಉದ್ಯಮ ಮಹಾಮಂಡಳಿಯ(FSII)ದ ಚೇರ್ಮನ್, ಮಹಾನಿರ್ದೇಶಕ ರಾಮ್ ಕೌಂಡಿನ್ಯ (Ram Kaundinya), “ತಾಂತ್ರಿಕ ಸಾಮರ್ಥ್ಯ, ನೀತಿ ರಚನೆ ಹಾಗೂ ಒಪ್ಪಂದ ನಿರ್ಮಾಣದೆಡೆಗಿನ ಜವಾಬ್ದಾರಿಯು ಕೇಂದ್ರದ್ದಾಗಿದೆ. ಜಿಎಮ್ ಬೆಳೆಗಳನ್ನು ಮಾಪಿಸುವ ತಾಂತ್ರಿಕ ಜ್ಞಾನ ಮತ್ತು ನೈಪುಣ್ಯತೆ ಜಿಇಎಸಿಗೆ ಇದೆ. ಆದರೆ ರಾಜ್ಯ ಸಂಸ್ಥೆಗಳು ಮತ್ತು ಇಲಾಖೆಗಳು, ಆ ಪಾತ್ರವನ್ನು ನಿರ್ವಹಿಸಲು ಅಗತ್ಯವಾದ ಜ್ಞಾನ ಅಥವಾ ಸಂಪನ್ಮೂಲಗಳಿಂದ ಸಜ್ಜಾಗಿಲ್ಲ. ಜಿಇಎಸಿದ ತಾಂತ್ರಿಕ ನೆರವಿಲ್ಲದೆ ಇಂತಹ ವಿಷಯಗಳಲ್ಲಿ ಅವುಗಳು ತೀರ್ಮಾನ ತೆಗೆದುಕೊಳ್ಳುವುದನ್ನು ನಿರೀಕ್ಷಿಸುವುದು ಅನುಚಿತವಾಗುತ್ತದೆ." ಎಂದರು
ಇದನ್ನೂ ಓದಿ: Ban Glyphosate: ಗ್ಲೈಫೋಸೇಟ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ: ಸ್ವದೇಶಿ ಜಾಗರಣ್ ಮಂಚ್!
“ಕ್ಷೇತ್ರ ಪ್ರಯೋಗಗಳು ಇಲ್ಲದಿದ್ದರೆ, ದೇಶದಲ್ಲಿ ಹೊಸಹೊಸ ಜಿಎಮ್ ಬೀಜಗಳ ಬಿತ್ತನೆಯಾಗಲೀ, ಹೊಸ ತಂತ್ರಜ್ಞಾನಗಳೆಡೆಗೆ ಚಲಿಸುವ ಪ್ರಯತ್ನವಾಗಲೀ ಇರುವುದಿಲ್ಲ. ಆದ್ದರಿಂದ, ಸಾಧ್ಯಂತವಾಗಿ ಮುಂದಿನ ಎರಡು ತಿಂಗಳುಗಳೊಳಗೆ ಮುಂಚೂಣಿ ತಜ್ಞರು ಹಾಗೂ ತತ್ಸಂಬಂಧಿತ ಇಲಾಖೆಗಳೊಡನೆ ಸಮಾಲೋಚಿಸಿ ಆದ್ಯತೆಯ ಮೇರೆಗೆ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಶಿಫಾರಸು ಮಾಡಲಾಗಿದೆ.” ಎಂದು ರಾಮ್ ಕೌಂಡಿನ್ಯ ಹೇಳಿದರು.
ಮತ್ತೊಂದು ಬೆಳವಣಿಗೆಯಲ್ಲಿ, ಜಿಇಎಸಿ ಅನುಮೋದನೆಗಾಗಿ ಕಾಯುತ್ತಿದ್ದ ಜಿನೋಮ್ ಸಂಸ್ಕರಿಸಿದ ಬೆಳೆಗಳ ಅನುಮೋದನೆಗಾಗಿ, ನಿಯಂತ್ರಣ ಪ್ರಾಧಿಕಾರಗಳ ಮಾರ್ಗಸೂಚಿಗಳ ಅನುಮೋದನೆಯನ್ನು ಜಿಇಎಸಿಯು ಭಾಗಶಃ ರಾಜ್ಯಗಳಿಗೆ, ಅವುಗಳ ಅಭಿಪ್ರಾಯಕ್ಕಾಗಿ, ಕಳುಹಿಸಿದೆ. ಬಹುತೇಕ ರಾಷ್ಟ್ರಗಳಲ್ಲಿ ಅನುಸರಿಸಲಾಗುತ್ತಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿರುವ, ನಿಯಂತ್ರಣ ಪ್ರಾಧಿಕಾರಗಳ ನಿಯಂತ್ರಣದಿಂದ ವಿನಾಯಿತಿಗೊಳ್ಳಬೇಕೆಂದು ಪ್ರಸ್ತಾವಿಸಲಾಗಿರುವ SDN1 ಮತ್ತು SDN2 ಗಳಿಂದ ಪಡೆದ ಬೀಜಗಳ ನಿಯಂತ್ರಣ ಪ್ರಕ್ರಿಯೆಯ ಮಾರ್ಗಸೂಚಿಗಳನ್ನು ಈಗ ಜಿಇಎಸಿ, ರಾಜ್ಯಗಳಿಗೆ, ಅವುಗಳ ಅಭಿಪ್ರಾಯಕ್ಕಾಗಿ ಕಳುಹಿಸಿದೆ.
ಜಿಎಮ್ ಬೆಳೆಗಳ ಅಗತ್ಯ
ಕಡಿಮೆ ವೆಚ್ಚದ, ಅಧಿಕ ಇಳುವರಿಯ ಕೃಷಿಯನ್ನು ತರುವುದಕ್ಕೆ, ಕಡಿಮೆ ನೀರು ಬಳಸಿಕೊಳ್ಳುವ ಬೆಳೆಗಳ ಬಿತ್ತನೆ, ಮಣ್ಣು-ವಿಶ್ಲೇಷಣೆ-ಆಧಾರಿತ ರಸಗೊಬ್ಬರಗಳ ಬಳಕೆ, ಮತ್ತು ಕೃಷಿಯ ಸಂರಕ್ಷಣೆ ಮಾಡುವುದು ಅಗತ್ಯ. ಕೃಷಿಯ ಮೇಲೆ ಹವಾಮಾನದ ಪ್ರಭಾವವನ್ನು ಎದುರಿಸಲು, ಬೆಳೆ ವೈವಿಧ್ಯತೆಯನ್ನು ಅಳವಡಿಸಿಕೊಂಡು, ಎಣ್ಣೆಬೀಜ ಬೆಳೆಗಳು, ಧಾನ್ಯಕಾಳುಗಳು, ಮತ್ತು ಒರಟು ಧಾನ್ಯಗಳ ಇಳುವರಿಯನ್ನು ಹೆಚ್ಚಿಸಬೇಕಾಗುತ್ತದೆ. ಭವಿಷ್ಯತ್ತಿನಲ್ಲಿ ಕೀಟಗಳು ಮತ್ತು ರೋಗಕಾರಕಗಳನ್ನು ಹೆಚ್ಚುಪರಿಣಾಮಕಾರಿಯಾಗಿ ನಿರ್ವಹಿಸಬೇಕಾಗುತ್ತದೆ.
ಇದನ್ನೂ ಓದಿ: Plants Respond to Pain: ಪ್ರಾಣಿಗಳಷ್ಟೇ ಅಲ್ಲ, ನೋವಾದಾಗ ಸಸ್ಯಗಳೂ ಕಿರುಚುತ್ತವೆ ಗೊತ್ತಾ?
ಅದೃಷ್ಟವಶಾತ್, ಕೀಟಗಳು ಮತ್ತು ರೋಗಕಾರಕಗಳ ಸಮಸ್ಯೆಯನ್ನು ಹೋಗಲಾಡಿಸಲು, ನಮ್ಮಲ್ಲಿ ಮಾರ್ಕರ್-ನೆರವಿನ ತಳಿವರ್ಧನೆ, ಜೆನೆಟಿಕ್ ಇಂಜಿನಿಯರಿಂಗ್(ಜಿಇ), ಜೀನ್ ಎಡಿಟಿಂಗ್, ಮತ್ತು ಜಿನೋಮಿಕ್ಸ್‍ನಂತಹ ಹೊಸ ಸಸ್ಯ ತಳಿವರ್ಧನೆ ತಂತ್ರಜ್ಞಾನಗಳಿವೆ. ಜಿಇ ತಂತ್ರಜ್ಞಾನಗಳು, ವೈವಿಧ್ಯಮಯವಾದ ಸೂಕ್ಷ್ಮಾಣುಗಳ ವಂಶವಾಹಿ ಮಾಹಿತಿಯನ್ನು ಸಸ್ಯದೊಳಕ್ಕೆ ಅಳವಡಿಸಿಕೊಳ್ಳುವುದಕ್ಕೆ ಅನುವುಮಾಡಿಕೊಟ್ಟರೆ, ಜೀನ್ ಎಡಿಟಿಂಗ್‍ನಿಂದ ಗುರಿಯಿರಿಸಲಾದ ವಂಶವಾಹಿಯಲ್ಲಿ ಬದಲಾವಣೆಗಳನ್ನು ಸೃಷ್ಟಿಸಬಹುದು. ಜಿಇ ಮತ್ತು ಜೀನ್ ಎಡಿಟಿಂಗ್ ತಂತ್ರಜ್ಞಾನಗಳು, ಬೆಳೆಗಳನ್ನು ಕೀಟಗಳು ಮತ್ತು ರೋಗಕಾರಕಗಳಿಂದ ಸಂರಕ್ಷಿಸಿ ಅವುಗಳ ಪೌಷ್ಟಿಕಾಂಶ ಮೌಲ್ಯವನ್ನು ಸುಧಾರಿಸುತ್ತವೆ ಎಂದು ಈಗಾಗಲೇ ತೋರಿಸಿವೆ.
ಜಿಇ ಬೆಳೆಗಳು ಹಾಗೂ ಜಿನೋಮ್ ಎಡಿಟಿಂಗ್ ತಂತ್ರಜ್ಞಾನದಲ್ಲಿ ಜಾಗತಿಕ ಬೆಳವಣಿಗೆಗಳಾಗಿವೆ. ಜಿಇ ಬೆಳೆಗಳ ಬಗ್ಗೆ ಈ ಮೊದಲು ವಿರೋಧ ವ್ಯಕ್ತಪಡಿಸಿದ್ದ ಜಪಾನ್‍ನಂತಹ ದೇಶಗಳು ಈಗಾಗಲೇ ಜೀನ್ ಎಡಿಟೆಡ್(ಜಿಇ) ಬೆಳೆಗಳನ್ನು ಬಿಡುಗಡೆ ಮಾಡಿವೆ. ಕೃಷಿಯಲ್ಲಿ ಆಧುನಿಕತೆ ಸಾಧಿಸಿರುವ ಯುಎಸ್‍ಎ, ಕೆನಡ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ಕೂಡ ಜೀನ್ ಎಡಿಟೆಡ್ ಬೆಳೆಗಳ ಜೈವಿಕ ಸುರಕ್ಷತಾ ಅಗತ್ಯಗಳಿಗೆ ವಿನಾಯಿತಿ ನೀಡಿವೆ.
ಆಹಾರ ಭದ್ರತೆಯ ಮೇಲೆ ಹೆಚ್ಚಾಗುತ್ತಿರುವ ಒತ್ತಡ
ಇತ್ತೀಚಿನ ಕೋವಿಡ್-19 ಮತ್ತು ಸಾಂಕ್ರಾಮಿಕ ಸಂಬಂಧಿತ ನಿರ್ಬಂಧನೆಗಳು ಭಾರತದಲ್ಲಿ ಲಕ್ಷಾಂತರ ಮಂದಿಯ ಆಹಾರ ಭದ್ರತೆಯ ಮೇಲೆ ತೀವ್ರವಾದ ಪ್ರಭಾವ ಬೀರಿದೆ. ಸದಾ ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ, 2020ದಲ್ಲಿ ಲ್ಯಾನ್ಸೆಟ್‍ನಲ್ಲಿ ಪ್ರಕಟಗೊಂಡ ಹೊಸ ಭವಿಷ್ಯತ್ತು, 2048ರ ವೇಳೆಗೆ ಭಾರತದ ಜನಸಂಖ್ಯೆ 1.6 ಬಿಲಿಯನ್‍ಗೆ ಏರಲಿದೆ ಎಂದು ಸೂಚಿಸಿದೆ. ವರದಿಯ ಪ್ರಕಾರ, ಆಹಾರ ಭದ್ರತೆಯು ಅನೇಕ ಕ್ಷೇತ್ರಗಳಲ್ಲಿ ತೀವ್ರವಾಗಿ ಬಾಧಿಸಲ್ಪಟ್ಟಿದೆ. ಹದಗೆಡುತ್ತಿರುವ ಸಂಘರ್ಷಗಳು, ಜಾಗತಿಕ ಹವಾಮಾನ ಬದಲಾವಣೆಯ ಜೊತೆಗೆ ಹವಾಮಾನ ವೈಪರೀತ್ಯಗಳು, ಮತ್ತು ಕೋವಿಡ್-19 ಸಾಂಕ್ರಾಮಿಕದೊಂದಿಗೆ ಸಂಬಂಧಿಸಿದ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳು ಎಲ್ಲರನ್ನೂ ಹಸಿವಿನೆಡೆಗೆ ತಳ್ಳುತ್ತಿದೆ.
ಕೃಷಿಯು, ಆರ್ಥಿಕತೆಯ ಮುಖ್ಯ ಕೊಡುಗೆಗಳ ಪೈಕಿ ಒಂದು. ಎಕನಾಮಿಕ್ ಸರ್ವೆಯ ಪ್ರಕಾರ, ಕಳೆದ 17 ವರ್ಷಗಳಲ್ಲಿ ಪ್ರಪ್ರಥಮ ಬಾರಿಗೆ ನಿವ್ವಳ ದೇಶೀಯ ಉತ್ಪನ್ನ(GDP)ದಲ್ಲಿ ಕೃಷಿಯ ಪಾಲು ಸರಿಸುಮಾರು ಶೇಕಡ 20ಕ್ಕೆ ಬಂದು ತಲುಪಿ, 2021ರಲ್ಲಿ ಕೃಷಿಯನ್ನು ಜಿಡಿಪಿ ಕಾರ್ಯಕ್ಷಮತೆಯ ಏಕೈಕ ಉಜ್ವಲ ಕ್ಷೇತ್ರವನ್ನಾಗಿ ಮಾಡಿತ್ತು.ಕೃಷಿಯಲ್ಲಿ ಪ್ರಸ್ತುತ ಇರುವ ಸವಾಲೆಂದರೆ, ಪರಿಸರದ ಮೇಲಿನ ಹೆಜ್ಜೆಗುರುತುಗಳನ್ನು ಕಡಿಮೆ ಮಾಡಿ ಕೃಷಿ ಕಾರ್ಯಾಚರಣೆಗಳ ದೀರ್ಘಾವಧಿ ನೆಲೆನಿಲ್ಲುವಿಕೆಯನ್ನು ಖಾತರಿಪಡಿಸುವ ಸಮಯದಲ್ಲೇ ಉತ್ಪಾದಕತೆಯನ್ನು ಹೆಚ್ಚಿಸುವುದಾಗಿದೆ. ದೀರ್ಘಕಾಲ ಇರಬಲ್ಲ ಅಧಿಕ ಇಳುವರಿಯ ಕೃಷಿಯು, ಒಂದು ಬೆಳೆಯುತ್ತಿರುವ ಜನಸಂಖ್ಯೆಗಾಗಿ ದೀರ್ಘಾವಧಿ ಆಹಾರಭದ್ರತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಅತ್ಯಗತ್ಯವಾಗಿದೆ.