Asianet Suvarna News Asianet Suvarna News

Ban Glyphosate: ಗ್ಲೈಫೋಸೇಟ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ: ಸ್ವದೇಶಿ ಜಾಗರಣ್ ಮಂಚ್!

*ಗ್ಲೈಫೋಸೇಟ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ
*RSS ಅಂಗಸಂಸ್ಥೆ  ಸ್ವದೇಶಿ ಜಾಗರಣ್ ಮಂಚ್ ಒತ್ತಾಯ
*ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಿಗೆ ಪತ್ರ
*ಎರಡು ಲಕ್ಷಕ್ಕೂ ಹೆಚ್ಚು ಜನರ ಸಹಿ ಮಾಡಿರುವ ಮನವಿ!

Swadeshi Jagaran Manch demands complete ban on use of glyphosate mnj
Author
Bengaluru, First Published Dec 12, 2021, 1:22 PM IST
  • Facebook
  • Twitter
  • Whatsapp

ನವದೆಹಲಿ(ಡಿ. 12): ಗ್ಲೈಫೋಸೇಟ್ ಬಳಕೆಯನ್ನು  ಸಂಪೂರ್ಣವಾಗಿ (Ban on use of Glyphosate) ನಿಷೇಧಿಸಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಅಂಗ ಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ (Swadeshi Jagaran Manch ) ಶನಿವಾರ ಒತ್ತಾಯಿಸಿದೆ. ಇದು ಕ್ಯಾನ್ಸರ್‌ಕಾರಕವಾಗಿದ್ದು ರೈತರು ಹಾಗೂ ಗ್ರಾಹಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜತೆಗೆ ಇದು ಪರಿಸರಕ್ಕೂ ಅಪಾಯಕಾರಿ ಎಂದು  ಜಾಗರಣ್ ಮಂಚ್ ಹೇಳಿದೆ. ಕಳೆನಾಶಕದ ಸಂಪೂರ್ಣ ನಿಷೇಧದ ಪರವಾಗಿ ಎರಡು ಲಕ್ಷಕ್ಕೂ ಹೆಚ್ಚು ಜನರ ಸಹಿ ಮಾಡಿರುವ ಮನವಿಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ (Narendra Singh Tomar) ಅವರಿಗೆ ಸಲ್ಲಿಸಲಾಗಿದೆ ಎಂದು ಸ್ವದೇಶಿ ಜಾಗರಣ್ ಮಂಚ್ (ಎಸ್‌ಜೆಎಂ) ಸಹ ಸಂಚಾಲಕ ಅಶ್ವನಿ ಮಹಾಜನ್ ತಿಳಿಸಿದ್ದಾರೆ.

"ಗ್ಲೈಫೋಸೇಟ್ ಬಳಕೆಯಿಂದಾಗುವ ಅಪಾಯಗಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಜುಲೈ 2020 ರಲ್ಲಿ ಬಳಕೆಯನ್ನು ನಿಷೇಧಿಸಿದೆ. ಕೀಟ ನಿಯಂತ್ರಣಕ್ಕೆ ಹೊರತುಪಡಿಸಿ  ಗ್ಲೈಫೋಸೇಟ್ ಬಳಕೆಗೆ ಅವಕಾಶವಿಲ್ಲ "ಈ ಕ್ರಮಗಳು ಅರ್ಥಹೀನವೆಂದು ಜಾಗರಣ್‌ ಮಂಚ್ ನಂಬುತ್ತದೆ. ಪ್ರಸ್ತುತ ಗ್ಲೈಫೋಸೇಟ್ ಅನ್ನು ಬಳಸುತ್ತಿರುವ ಅಕ್ರಮ ಹರ್ಬಿಸೈಡ್‌  ಟೊಲರೆಂಟ್‌  (ರೋಗ ಬಾರದಂತೆ ಸಸ್ಯಗಳ ಅಭಿವೃದ್ಧಿ ತಂತ್ರಜ್ಞಾನ- herbicide tolerant) ಬೆಳೆಗಳಂತಹ ಇತರ ಕಾನೂನುಬಾಹಿರ ಅಭ್ಯಾಸಗಳನ್ನು ನಿಯಂತ್ರಿಸಲು ಸಾಧ್ಯವಾಗದಂತೆ ಇದನ್ನು ಕಾರ್ಯಗತಗೊಳಿಸಲು ಅಸಾಧ್ಯವಾಗಿದೆ. ಸರ್ಕಾರದ ಅರ್ಥಹೀನ ಆದೇಶ ಮತ್ತು ಇದನ್ನು ಕಾರ್ಯಗತಗೊಳಿಸುವಲ್ಲಿರುವ ಅಸಮರ್ಥತೆಯನ್ನು ಗಮನಿಸಿದರೆ, ಇದು ಗ್ರಾಹಕರ ಆರೋಗ್ಯ, ರೈತ ಹಿತಾಸಕ್ತಿ, ಕೃಷಿ ಕಾರ್ಮಿಕರ ಜೀವನೋಪಾಯ ಮತ್ತು ಪರಿಸರ ವಿಜ್ಞಾನಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ" ಎಂದು ಮಂಚ್ ಪ್ರಕಟನೆಯಲ್ಲಿ ತಿಳಿಸಿದೆ.

 

 

ಕಳೆನಾಶದ ಕಾನೂನುಬಾಹಿರ ಬಳಕೆ!

ಚಹಾ ತೋಟಗಳು ಮತ್ತು ಬೆಳೆಯೇತರ ಪ್ರದೇಶಗಳಿಗೆ ಹೊರತುಪಡಿಸಿ ಗ್ಲೈಫೋಸೇಟ್ ಬಳಕೆಗೆ ನಿರ್ಬಂಧವಿದ್ದರೂ, ಕಳೆನಾಶಕವನ್ನು ಕಾನೂನುಬಾಹಿರವಾಗಿ ಬೆಳೆದ ಹರ್ಬಿಸೈಡ್‌  ಟೊಲರೆಂಟ್‌ ಕಾಟನ್‌ ( Herbicide Tolerant cotton) ಬೆಳೆಸಲು  ನಿಸ್ಸಂಶಯವಾಗಿ ಬಳಸಲಾಗುತ್ತಿದೆ ಎಂದು ಮಹಾಜನ್ ನೇತೃತ್ವದ ತಂಡವು ಕೃಷಿ ಸಚಿವರಿಗೆ ತಿಳಿಸಿದೆ.  ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿ ಮತ್ತು ರಾಜ್ಯ ಸರ್ಕಾರಗಳ ಸರ್ಪಗಾವಲಿನಲ್ಲೇ ಇದು ಹಲವು ವರ್ಷಗಳಿಂದ ನಡೆಯುತ್ತಿದೆ ಎಂದು ಸಚಿವರಿಗೆ ತಿಳಿಸಲಾಯಿತು ಎಂದು ಸಂಸ್ಥೆ ಹೇಳಿದೆ.

Gaganyaan 2023: ಗಗನಯಾನಕ್ಕೂ ಮುನ್ನ ಮೊದಲ ಮಾನವ ರಹಿತ ಮಿಷನ್ ಉಡಾವಣೆ!

ಗ್ಲೈಫೋಸೇಟ್ ಬಳಕೆಯನ್ನು ಉತ್ತೇಜಿಸಲು ಪ್ರಸ್ತುತ ಕೆಲವು ಬೀಜ ಉತ್ಪಾದಿಸುವ ಕಂಪನಿಗಳು ಲಕ್ಷಾಂತರ ಎಕರೆ ಭೂಮಿಯಲ್ಲಿ ಹರ್ಬಿಸೈಡ್‌  ಟೊಲರೆಂಟ್‌ ಹತ್ತಿಯನ್ನು ಅಕ್ರಮವಾಗಿ ಹರಡಲು ಪ್ರಯತ್ನಿಸುತ್ತಿವೆ ಎಂದು ನಿಯೋಗವು ಸಚಿವರಿಗೆ ತಿಳಿಸಿದೆ. "ಸಚಿವರು ನಿಯೋಗದ ಜತೆ ಮಾತನಾಡಿದ್ದಾರೆ ಮತ್ತು ಈ ವಿಷಯವನ್ನು ತಮ್ಮ ಸಚಿವಾಲಯವು  ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ" ಎಂದು ಜಾಗರಣ್‌ ಮಂಚ್‌ ಹೇಳಿದೆ.

ಹಲವು ರಾಜ್ಯಗಳಲ್ಲಿ "ಗ್ಲೈಫೋಸೇಟ್ ನಿಷೇಧ!

"ಗ್ಲೈಫೋಸೇಟ್ ಅನ್ನು ಕಳೆ ನಿಯಂತ್ರಣಕ್ಕಾಗಿ ಮತ್ತು ಕೊಯ್ಲು ಮಾಡುವ ಮೊದಲು ಬೆಳೆಗಳನ್ನು ಒಣಗಿಸಲು ಬಳಸಲಾಗುತ್ತಿದೆ ಎಂದು ವರದಿಯಾಗಿದೆ. ಹೀಗೆ ಮಾಡಿದಾಗ ಬೆಳೆಯೂ ಕಳೆನಾಶಕವನ್ನು ಹೀರಿಕೊಳ್ಳುತ್ತದೆ. ಹಾಗಾಗಿ ಇದರ ಸೇವನೆ ಅಪಾಯಕಾರಿ ಹಾಗಾಗಿ ಇದಕ್ಕೆ ಬಲವಾದ ವಿರೋಧವಿದೆ. ಗ್ಲೈಫೋಸೇಟ್ ಕ್ಯಾನ್ಸರ್ ಜನಕ ಮತ್ತು  ಇದು ಹಲವಾರು ಗಂಭೀರ ಕಾಯಿಲೆಗಳಿಗೆ ಸಂಬಂಧಿಸಿದೆ" ಎಂದು  ಮಂಚ್‌ ಹೇಳಿದೆ.

NASA’s 10 New Astronauts: ನಾಸಾ ಆಯ್ಕೆ ಮಾಡಿದ 10 ಗಗನಯಾತ್ರಿಗಳ ಪೈಕಿ ಭಾರತೀಯ ಮೂಲದ ಅನಿಲ್ ಮೆನನ್!

ಪಂಜಾಬ್, ಮಹಾರಾಷ್ಟ್ರ, ಆಂಧ್ರಪ್ರದೇಶ ತೆಲಂಗಾಣ ಮತ್ತು ಹಲವಾರು ಇತರ ರಾಜ್ಯಗಳು "ಗ್ರಾಹಕರು, ರೈತರು ಮತ್ತು ಪರಿಸರದ ಕಾಳಜಿಯಿಂದಾಗಿ ಗ್ಲೈಫೋಸೇಟ್ ಅನ್ನು ನಿಷೇಧಿಸಿವೆ. ಪ್ರಮುಖ ಚಹಾ ಬೆಳೆಯುವ ರಾಜ್ಯ ಕೇರಳವು ಗ್ಲೈಫೋಸೇಟ್ ಅನ್ನು ನಿಷೇಧಿಸುವಂತೆ ಒತ್ತಾಯಿಸಿದೆ ಜತೆಗೆ ಮತ್ತೊಂದು ಚಹಾ ಬೆಳೆಯುವ ರಾಜ್ಯ ಪಶ್ಚಿಮ ಬಂಗಾಳವು ಗ್ಲೈಫೋಸೇಟ್ ಬಳಕೆಯನ್ನು ಕೇವಲ ಆರು ಚಹಾ ಬೆಳೆಯುವ ಜಿಲ್ಲೆಗಳಿಗೆ ಸೀಮಿತಗೊಳಿಸಿದೆ ಎಂದು ಸಂಸ್ಥೆ ತಿಳಿಸಿದೆ.

Follow Us:
Download App:
  • android
  • ios