ಹಿಂದೂಸ್ತಾನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ STEAM ಎಕ್ಸಿಬಿಷನ್ 2019

By Suvarna NewsFirst Published Dec 21, 2019, 8:52 AM IST
Highlights

ಹಿಂದೂಸ್ತಾನ್ ಇಂಟರ್ ನ್ಯಾಷನಲ್ ಶಾಲಾ ವತಿಯಿಂದ ಯುರೇಕಾ 2019 ಸ್ಟೀಮ್ ಎಕ್ಸಿಬಿಷನ್ 

ವಿದ್ಯಾರ್ಥಿಗಳ ಕಲಿಕೆಗೆ ವೇದಿಕೆಯಾಗಿದ್ದ ಎಕ್ಸಿಬಿಷನ್ 

ಗಿಂಡಿ [ಡಿ.21]: ಹಿಂದೂಸ್ತಾನ್ ಇಂಟರ್ ನ್ಯಾಷನಲ್ ಶಾಲಾ ವತಿಯಿಂದ ಯುರೇಕಾ 2019 ಸ್ಟೀಮ್ ಎಕ್ಸಿಬಿಷನ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. 

ತಮಿಳುನಾಡಿದ ಗಿಂಡಿಯ ಹಿಂದೂಸ್ತಾನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆದ  ಕಾರ್ಯಕ್ರಮವು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಅನುಕೂಲ ಒದಗಿಸಿದ್ದು, ಈ ಮೂಲಕ ನೂತನ ಆವಿಷ್ಕಾರ ಹಾಗೂ  ಕಲ್ಪನೆಗೂ ನಿಲುಕದ ವಸ್ತುಗಳನ್ನು ಕಾಣುವ ಅವಕಾಶ ಒದಗಿತ್ತು.  

ಹಲವು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸಂಶೋಧನೆಗಳನ್ನು ಪ್ರದರ್ಶಿಸಿದರು. 

ಇದನ್ನೂ ಓದಿ | ಅನಾವರಣವಾಯ್ತು ಬಾಲ ಪ್ರತಿಭೆ; ಹಿಂದೂಸ್ತಾನ್ ಸ್ಕೂಲ್‌ನಲ್ಲಿ ಸೃಜನಶೀಲತೆಗೆ ರೆಕ್ಕೆ..

ಇನ್ನು ಕಾರ್ಯಕ್ರಮದಲ್ಲಿ ನಿವೃತ್ತ ಇಸ್ರೋ ವಿಜ್ಞಾನಿ ಪ್ರೋ. ವಿ.ರಾಮ್ ಮೂರ್ತಿ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ವಿದ್ಯಾರ್ಥಿಗಳನ್ನು, ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಅವರು ಇಂತಹ ಪ್ರದರ್ಶನಗಳು ಕಲಿಕೆಯ ಸ್ಫೂರ್ತಿಯನ್ನು ಹೆಚ್ಚುತ್ತವೆ ಎಂದರು.  

ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಕಲೆ ಮತ್ತು ಗಣಿತ ಶಾಸ್ತ್ರದ ವಿಷಯಗಳಿಗೆ ಸಂಬಂಧಿಸಿದಂತೆ ಎಕ್ಸಿಬಿಷನ್ ನಲ್ಲಿ ಅವಕಾಶ  ಕಲ್ಪಿಸಲಾಗಿತ್ತು.  ಈ ಪ್ರದರ್ಶನ ಕಾರ್ಯಕ್ರಮವು  ತಮ್ಮ ಸಾಮರ್ಥ್ಯದ ಪ್ರದರ್ಶನಕ್ಕೆ ಒಂದು ಅತ್ಯುತ್ತಮ ವೇದಿಕೆಯೂ ಕೂಡ ಆಗಿತ್ತು. 

click me!