
ನವದೆಹಲಿ (ಜು.03) ಬಾಹ್ಯಾಕಾಶ, ಭೂಮಿ, ಸಮುದ್ರ ಸೇರಿದಂತೆ ಬ್ರಹ್ಮಾಂಡದ ಕೌತುಕ ಬಗೆದಷ್ಟು ಹೊರಬರುತ್ತಲೇ ಇರುತ್ತದೆ. ಆದರೆ ಕೆಲ ಘಟನೆಗಳು ಆತಂಕ ತರುತ್ತದೆ. ಈ ಘಟನೆಗಳಿಂದ ಭೂಮಿಯಲ್ಲೂ ಕೆಲ ಅಲ್ಲೋಲ ಕಲ್ಲೋಲಗಳಾಗುತ್ತದೆ. ಇದೀಗ ಜುಲೈ 6 ರಂದು ಅಪರೂಪದ ವಿದ್ಯಮಾನವೊಂದು ಬ್ರಹ್ಮಾಂಡದಲ್ಲಿ ಘಟಿಸುತ್ತಿದೆ. ಹೌದು, ಜುಲೈ 6 ರಂದು ಭೂಮಿಯು ಸೂರ್ಯನಿಂದ ಅತ್ಯಂದ ದೂರ ಸರಿಯಲಿದೆ. ಭೂಮಿ ತನ್ನ ಕಕ್ಷೆಯಲ್ಲೇ ಇದ್ದರೂ ಭೂಮಿಯಿಂದ ಅತ್ಯಂತ ಗರಿಷ್ಠ ದೂರಕ್ಕೆ ತೆರಳಲಿದೆ.
ಎಲ್ ನಿನೋ ಪರಿಣಾಮದಿಂದ ಭಾರತದಲ್ಲಿ ತೀವ್ರ ಬರಗಾಲದ ಪರಿಸ್ಥಿತಿಗಳು ಸೃಷ್ಟಿಯಾಗುತ್ತಿದೆ.ಜೂನ್ ಕಳೆದು ಜುಲೈ ತಿಂಗಳಾದರೂ ಮಳೆ ಇಲ್ಲ. ಕೆಲವೆಡೆ ವಿಪರೀತ ಮಳೆಯಿಂದ ಪ್ರವಾಹ ಸೃಷ್ಟಿಯಾಗಿದೆ. ಇದಕ್ಕೆ ಭೂಮಿ ಹಾಗೂ ಸೂರ್ಯನ ನಡುವಿನ ಅಫೆಲಿಯನ್ ಕೂಡ ಸೇರಿಕೊಳ್ಳಲಿದೆ. ಸೂರ್ಯನಿಂದ ಭೂಮಿ ದೂರ ಸರಿಯುತ್ತಿದ್ದಂತೆ ಭೂಮಿಯ ಮೇಲಿನ ಹವಾಮಾನದ ಮೇಲೆ ತೀವ್ರ ಪರಿಣಾಮವಾಗುದಿಲ್ಲ. ಸಾಮಾನ್ಯವಾಗಿ ಸೂರ್ಯನಿಂದ ದೂರ ಸರಿಯುತ್ತಿದ್ದಂತೆ ಭೂಮಿಯಲ್ಲಿ ತಾಪಮಾನ ಕಡಿಮೆ ಅಥವಾ ಚಳಿ ಹೆಚ್ಚಾಗಬೇಕು. ಆದರೆ ಈ ಅಫೆಲಿಯನ್ ಘಟನೆಯಿಂದ ಉತ್ತರ ಗೋಳಾರ್ಧದಲ್ಲಿ ಅಂದರೆ ಭಾರತ ಇರುವ ಪ್ರದೇಶದಲ್ಲಿ ಬೇಸಿಗೆ ಧಗ ಇರಲಿದೆ. ಸದ್ಯ ಮಳೆಯೂ ಇಲ್ಲದ ಕಾರಣ ಈ ಉರಿ ಬಿಸಿಲು ಹಾಗೇ ಇರಲಿದೆ. ಇನ್ನು ದಕ್ಷಿಣ ಗೋಳಾರ್ಧದಲ್ಲಿ ಚಳಿಗಾಲ ಇರಲಿದೆ.
ಸೂರ್ಯ ಹಾಗೂ ಭೂಮಿ ಕುರಿತು ಪ್ರತಿ ಅಧ್ಯಯನವೂ ಅತ್ಯಂತ ಕುತೂಹಲಕಾರಿ. ಖಗೋಳಶಾಸ್ತ್ರಜ್ಞ ಜೊಹಾನ್ಸ್ ಕೆಪ್ಲರ್ ಪ್ರಕಾರ ಸೂರ್ಯನ ಸುತ್ತ ಭೂಮಿ ಸಂಪೂರ್ಣ ವೃತ್ತಾಕಾರದಲ್ಲಿ ಸುತ್ತುವುದಿಲ್ಲ. ಇದರ ಬದಲು ಲಂಬವೃತ್ತಾಕಾರದ (Elliptical Orbit) ಕಕ್ಷೆಯಲ್ಲಿ ಸುತ್ತಲಿದೆ. ಈ ರೀತಿ ಸುತ್ತುವ ಕಾರಣ ಸಾಮಾನ್ಯವಾಗಿ ವರ್ಷದಲ್ಲಿ ಒಂದು ದಿನ ಸೂರ್ಯನ ಹತ್ತಿರ ಭೂಮಿ ಬರಲಿದೆ. ಇದೇ ರೀತಿ ಒಂದು ದಿನ ಸೂರ್ಯನಿಂದ ಅತ್ಯಂತ ದೂರ ಸರಿಯಲಿದೆ. ಇದು ಭೂಮಿ ಲಂಭಾಸಾರದಲ್ಲಿ ಸೂರ್ಯನ ಸುತ್ತ ಸುತ್ತುವ ಕಾರಣ ಘಟಿಸುವ ಸಾಮಾನ್ಯ ವಿದ್ಯಮಾನವಾಗಿದೆ. ಇದೀಗ ಜುಲೈ 6 ರಂದು ಸೂರ್ಯನಿಂದ ಭೂಮಿ ಅತ್ಯಂತ ದೂರ ಸರಿಯಲಿದೆ. ಅಂದರೆ ಜುಲೈ 6 ರಂದು ಭೂಮಿ, ಸೂರ್ಯನಿಂದ 15.21 ಕೋಟಿ ಕಿಲೋಮೀಟರ್‌ನಷ್ಟು ದೂರದಲ್ಲಿ ಇರಲಿದೆ.
ಭೂಮಿ ತನ್ನ ಅಕ್ಷದಲ್ಲಿ 23.5 ಡಿಗ್ರಿಯಷ್ಟು ವಾಲಿಕೊಂಡಿದೆ. ಇದರಿಂದ ಭೂಮಿಯ ಮೇಲಿನ ಋತುಗಳ ಬದಲಾಗುತ್ತದೆ. ಸರಿಸುಮಾರು ಜುಲೈ ತಿಂಗಳಲ್ಲಿ ಭೂಮಿಯ ಉತ್ತರ ಧ್ರುವ ಸೂರ್ಯನ ಕಡೆ ವಾಲಿಕೊಂಡಿರುತ್ತದೆ. ಇದರ ಪರಿಣಾಮ ಸೂರ್ಯನ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುತ್ತದೆ. ಈ ವೇಳೆ ತಾಪಮಾನ ಹೆಚ್ಚಾಗಲಿದೆ. ಇನನು ಸುಮಾರು ಜನವರಿ ವೇಳೆಗೆ ಭೂಮಿ ಸೂರ್ಯನಿಗೆ ಹತ್ತಿರವಾದರೂ ಭಾರತದಲ್ಲಿ ಚಳಿಗಾಲ ಇರುತ್ತದೆ.
ಭೂಮಿ ಲಂಭಾಕಾರದ ವೃತ್ತದಲ್ಲಿ ಸುತ್ತುವ ಕಾರಣ ಜುಲೈ ತಿಂಗಳಿನಲ್ಲಿ ಭೂಮಿ ಸೂರ್ಯನಿಂದ ದೂರ ಸರಿಯತ್ತಾ ಹೋಗಿ ಗರಿಷ್ಠ ದೂರ ತಲುಪುತ್ತದೆ. ಹೀಗಾಗಿ ಜೂನ್ ಅಂತ್ಯ ಹಾಗೂ ಜುಲೈ ತಿಂಗಳಲ್ಲಿ ಸೂರ್ಯನಿಂದ ಗರಿಷ್ಠ ದೂರದಲ್ಲಿ ಭೂಮಿ ಇರಲಿದೆ. ಇದರ ಪರಿಣಾಮ ಸೂರ್ಯನ ಬೆಳಕು ಶೇಕಡಾ 7ರಷ್ಟು ಕಡಿಮೆಯಾಗಿ ಭೂಮಿಗೆ ತಲುಪಲಿದೆ. ವಿಶೇಷ ಅಂದರೆ ಜುಲೈ 6 ರಂದು ಸೂರ್ಯನ ಗಾತ್ರ ಭೂಮಿಯಿಂದ ನೋಡಿದಾಗ ಶೇಕಡಾ 3ರಷ್ಟು ಚಿಕ್ಕದಾಗಿ ಗೋಚರಿಸುತ್ತದೆ. ಆದರೆ ಸೂರ್ಯನ ಬರಿಗಣ್ಣಿನಿಂದ ನೋಡಲು ಸಾಧ್ಯವಾಗದ ಕಾರಣ ಈ ವ್ಯತ್ಯಾಸವನ್ನು ಗಮನಿಸುವುದು ಕಷ್ಟ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.