
ವರ್ಜಿನಿಯಾ (ಅ.23) ಮನುಷ್ಯನ ಸಾವಿನ ಬಳಿಕ ಪುನರ್ಜನ್ಮ ಕುರಿತು ಹಲವು ಘಟನೆಗಳು, ಪೌರಾಣಿಕ ಕತೆಗಳು, ಇತ್ತೀಚೆಗಿನ ಕೆಲ ಊಹೆಗೂ ನಿಲುಕದ ಘಟನೆಗಳು ಹಲವರನ್ನು ಅಚ್ಚರಿಗೊಳಿಸಿದೆ. ಪ್ರಮುಖವಾಗಿ ಭಾರತದಲ್ಲಿ ಪುನರ್ಜನ್ಮ, ಕರ್ಮಫಲ ಸೇರಿದಂತೆ ಹಲವು ಘಟನೆಗಳು ಹೊಸದೇನಲ್ಲ. ಇದೀಗ ಪುನರ್ಜನ್ಮ ಕುರಿತು ಅಮೆರಿಕದ ವರ್ಜಿನಿಯಾ ವಿಶ್ವವಿದ್ಯಾಲಯ ಮಹತ್ವದ ಅಧ್ಯಯನವೊಂದನ್ನು ಕೈಗೊಂಂಡಿದೆ. ಸಂಶೋಧಕರು ಹಲವರ ಅಂಕಿ ಅಂಶಗಳು, ಜನನ-ಮರಣ, ಕುಟುಂಬಸ್ಥರು, ಆಪ್ತರು, ಸ್ಥಳೀಯರ ಮಾಹಿತಿಗಳನ್ನು ಆಧರಿಸಿ ಅಧ್ಯಯನ ನಡೆಸಿ ಸ್ಫೋಟಕ ವರದಿ ನೀಡಿದೆ. ಈ ವರದಿ ಪ್ರಕಾರ ಪುನರ್ಜನ್ಮದ ಸರಾಸರಿ ಅವಧಿ 16 ತಿಂಗಳು. ಪುನರ್ಜನ್ಮ ಮನುಷ್ಯನಿಗೆ ಗೊತ್ತಾಗುತ್ತಾ? ಈ ಕುರಿತು ಹಲವು ವಿಚಾರಗಳನ್ನು ಈ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ಹಠಾತ್ ಸಾವಿನ ಬಳಿಕ ಅವರ ಆತ್ಮ ಮತ್ತೊಬ್ಬರ ಮೂಲಕ ಪುನರ್ಜನ್ಮ ಪಡೆಯುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ಹಲವು ಬಾರಿ ನಿಧನದ ವ್ಯಕ್ತಿಯ ಹಲವು ಗುಣಗಳನ್ನು ಇತರರಲ್ಲಿ ಕಾಣುತ್ತಾರೆ. ಹಲವು ಹೋಲಿಕೆಗಳನ್ನು ಮಾಡುತ್ತಾರೆ. ಕೆಲ ಸಂದರ್ಭಗಳಲ್ಲಿ ತನಗೆ ನಿಧನ ಹೊಂದಿದೆ ಈ ವ್ಯಕ್ತಿಯ ಹಲವು ನೆನಪುಗಳಿವೆ ಎನ್ನುತ್ತಾರೆ. ಈ ಮೂಲಕ ಪುನರ್ಜನ್ಮದ ಕತಗಳಿಗೆ ಪುಷ್ಠಿ ನೀಡುವ ಹಲವು ಘಟನೆಗಳಿರುತ್ತದೆ. ಅಧ್ಯಯನ ವರದಿ ಪ್ರಕಾರ ಸಾವಿನ ನಂತರ ಆ ವ್ಯಕ್ತಿಯ ಪುನರ್ಜನ್ಮಕ್ಕೆ ಕಡಿಮೆ ತಿಂಗಳ ಅವಧಿ ಇರುತ್ತದೆ. ಸರಿಸುಮಾರು 16 ತಿಂಗಳು ಎಂದು ವರ್ಜಿನಿಯಾ ವಿಶ್ವವಿದ್ಯಾಲಯದ ಅಧ್ಯಯನ ವರದಿ ಹೇಳುತ್ತಿದೆ.
ವರ್ಜಿನಿಯಾ ವಿಶ್ವವಿದ್ಯಾಲದ ಸಂಶೋಧಕರು ಈ ರೀತಿ ಪುನರ್ಜನ್ಮ ಎಂದು ಗುರುತಿಸಿಕೊಂಡಿದ್ದ, ಹೇಳಿಕೊಂಡಿದ್ದ, ಸ್ಥಳೀಯರು, ಆಪ್ತರು ಹೋಲಿಕೆ ಮಾಡಿದ್ದ 1678 ಮಂದಿಯ ಡೇಟಾ ಪರಿಶೀಲಿಸಲಾಗಿದೆ. ಇನ್ನು ಈ ವ್ಯಕ್ತಿಗಳು ಯಾವ ವ್ಯಕ್ತಿಗಳ ಪುನರ್ಜನ್ಮ ಎಂದು ಹೇಳುವ ವ್ಯಕ್ತಿಗಳ ಡೇಟಾವನ್ನು ಕಲೆ ಹಾಕಿ ಅಧ್ಯಯನ ಮಾಡಲಾಗಿದೆ. ಈ ವೇಳೆ ಪುನರ್ಜನ್ಮದ ಅವಧಿ ಸರಾಸರಿ 16 ತಿಂಗಳು ಎಂಬುದು ಗೊತ್ತಾಗಿದೆ. ಆದರೆ ಇದು ಪುನರ್ಜನ್ಮ ಎಂದು ಹೇಳಲು ನಿಖರ ಕಾರಣಗಳಿಲ್ಲ ಎಂದು ಅಧ್ಯಯನ ವರದಿ ಹೇಳಿದೆ.
ಕೇವಲ ಜನನ ಹಾಗೂ ನಿಧನ ಅಂಕಿ ಅಂಶ ಮಾತ್ರವಲ್ಲ, ಹಠಾತ್, ಅಸಹಜ ಸೇರಿದಂತೆ ದಿಢೀರ್ ಸಾವಾಗಿತ್ತಾ ಅನ್ನೋದು ಪರಿಶೀಲಿಸಲಾಗಿದೆ. ಈ ವೇಳೆ ಹಠಾತ್ ಸಾವಿನ ಬಳಿಕ ಪುನರ್ಜನ್ಮದ ಸಾಧ್ಯತೆಗಳು ಹೆಚ್ಚಾಗಿ ಕಂಡು ಬಂದಿದೆ. ಇದರಲ್ಲಿ ಅತೀ ಅನಿರೀಕ್ಷಿತ ಸಾವುಗಳ ಸಂಭವಿಸಿದ ಬಳಿಕ ಪುನರ್ಜನ್ಮದ ಅವಧಿ ಮತ್ತಷ್ಟು ಕಡಿಮೆಯಾಗಲಿದೆ ಎಂದಿದೆ. ಅತೀ ಅನಿರೀಕ್ಷಿತ ಸಾವು ಹಾಗೂ ಪುನರ್ಜನ್ಮದ ಅವಧಿ ಸರಾಸರಿ 16 ತಿಂಗಳಿಗಿಂತ ಶೇಕಡಾ 40ರಷ್ಟು ಕಡಿತಗೊಳ್ಳಲಿದೆ ಎಂದಿದೆ. ಅಂದರೆ ಅತೀ ಅನಿರೀಕ್ಷಿತ ಸಾವಿನ ಬಳಿಕ ಪುನರ್ಜನ್ಮದ ಅವಧಿ 8 ರಿಂದ 10 ದಿನ. ಈ ದಿನದ ಒಳಗೆ ಪುನರ್ಜನ್ಮವೆತ್ತಿ ಮತ್ತೆ ಬರಲಿದ್ದಾರೆ.
ಪುನರ್ಜನ್ಮದ ಕುರಿತು ಅಂಕಿ ಅಂಶಗಳು, ಡೇಟಾಗಳ ಪರಿಶೀಲಿಸಿ ಸರಾಸರಿ ಅವಧಿಯನ್ನು ಅಧ್ಯಯನ ತಂಡ ಹೇಳಿದೆ. ಆದರೆ ಇದು ಪುನರ್ಜನ್ಮ ಸಾಬೀತುಪಡಿಸುವ ಅಧ್ಯಯನವಲ್ಲ ಎಂದಿದೆ. ಪುನರ್ಜನ್ಮ ನಂಬಕದ ಹಲವು ಕುಟುಂಬಗಳಲ್ಲಿ ಬಲವಾದ ಕಾರಣಗಳು ಗೋಚರಿಸಿದೆ. ಆದರೆ ಇದ್ಯಾವುದು ಪುನರ್ಜನ್ಮವನ್ನು ಸಾಬೀತುಪಡಿಸುವ ಅಂಶಗಳಲ್ಲ ಎಂದು ವರ್ಜಿನಿಯಾ ವಿಶ್ವವಿದ್ಯಾಲಯ ತಂಡ ಸ್ಪಷ್ಟಪಡಿಸಿದೆ. ಇದೇ ವೇಳೆ ಪುನರ್ಜನ್ಮ ಕುರಿತು ಅಧ್ಯಯನ ಮುಂದುವರಿದಿದೆ. ಪುನರ್ಜನ್ಮ ಕಟ್ಟು ಕತೆ ಎಂದು ತಳ್ಳಿ ಹಾಕುವುದು ಕಷ್ಟ ಎಂದು ತಜ್ಞರು ಅಧ್ಯಯನದ ಬಳಿಕ ಹೇಳಿದ್ದಾರೆ.ಮುಂದಿನ ಅಧ್ಯಯನ ವರದಿಯಲ್ಲಿ ಒಂದಷ್ಟು ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ ಎಂದು ಅಧ್ಯಯನ ತಂಡ ಹೇಳಿದೆ.
ಅಮೆರಿಕದ ವಿಶ್ವವಿದ್ಯಾಲಯದ ಪುನರ್ಜನ್ಮ ಅಧ್ಯಯನ ಇದೀಗ ಭಾರತದಲ್ಲಿ ಈಗಾಗಲೇ ಲಭ್ಯವಿರುವ ಹಲವು ಪುರಾಣ, ಪೌರಾಣಿಕ ಕತೆಗಳ, ಗ್ರಂಥಗಳಲ್ಲಿನ ಉಲ್ಲೇಖಕ್ಕೂ ಹಲವು ಸಾಮ್ಯತೆಗಳು ಕಾಣಿಸುತ್ತಿದೆ. ಮುಂದಿನ ಅಧ್ಯಯನ ಪುನರ್ಜನ್ಮ ಕುರಿತು ಹಲವು ರೋಚಕ ಮಾಹಿತಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.