ಉಲ್ಟಾ ಆಗುತ್ತಾ ಭೂಮಿ? ಪೃಥ್ವಿಯ ನಾರ್ತ್ ಹಾಗೂ ಸೌತ್ ಪೋಲ್ ಸ್ಥಾನ ಬದಲು ಪತ್ತೆ ಹಚ್ಚಿದ ಅಧ್ಯಯನ

Published : Oct 21, 2026, 11:23 AM IST
earth North and South Poles

ಸಾರಾಂಶ

ಭೂಮಿಯ ಅಧ್ಯಯನದಲ್ಲಿ ಅಚ್ಚರಿ ಮಾಹಿತಿಯೊಂದು ಬಯಲಾಗಿದೆ. ಭೂಮಿ ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವ ಸ್ಥಾನ ಬದಲಿಸಿರುವ ಮಾಹಿತಿ ಲಭ್ಯವಾಗಿದೆ. ಇದರಿಂದ ಆಗುತ್ತಿರುವ ಪರಿಣಾಮದ ಕುರಿತು ಅಧ್ಯಯನ ವಿವರಿಸಿದೆ.

ಭೂಮಿ ತಿರುಗುತ್ತದೆ ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ ಭೂಮಿ ತನ್ನ ಸ್ಥಾನ ಬದಲಿಸುತ್ತಾ? ಭೂಮಿಯ ನಾರ್ತ್ ಫೋಲ್ ಹಾಗೂ ಸೌತ್ ಪೋಲ್ ಸ್ಥಾನ ಬದಲಿಸುತ್ತಾ? ಈ ಕುರಿತು ಹಲವು ಕುತೂಹಲಕ್ಕೆ ವಿಜ್ಞಾನಿಗಳ ಅಧ್ಯಯನ ತಂಡ ಖಚಿತ ಮಾಹಿತಿ ನೀಡಿದೆ. ಟ್ರು ಪೋಲಾರ್ ವ್ಯಾಂಡರ್ ಎಂದು ವಿಜ್ಞಾನಿಗಳು ಈ ಚಲನೆಯನ್ನು ಕರೆದಿದ್ದಾರೆ. ಬರೋಬ್ಬರಿ ನಾಲ್ಕು ಬಾರಿ ಭೂಮಿಯ ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವ ಸ್ಥಾನ ಬದಲಿಸಿದೆ. ಈ ಮೂಲಕ ಭೂಮಿ ಕುರಿತು ಮಹತ್ವದ ಮಾಹಿತಿಯೊಂದನ್ನು ವಿಜ್ಞಾನಿಗಳು ನೀಡಿದ್ದಾರೆ. ಭೂಮಿಯಲ್ಲಿ ಆಗುತ್ತಿರುವ ಪ್ರಾಕೃತಿಕ ಬದಲಾವಣೆಗೂ ಧ್ರುವ ಚಲನೆಗೂ ಸಂಬಂಧ ಇದೆ.

320 ದಶಲಕ್ಷ ವರ್ಷಗಳ ಭೂಮಿ ಚಲನೆ ಅಧ್ಯಯನ

ಕಳೆದ 320 ದಶಲಕ್ಷ ವರ್ಷಗಳಲ್ಲಿ ಭೂಮಿಯ ಚಲನೆಯನ್ನು ಅಧ್ಯಯನ ಮಾಡಲಾಗಿದೆ. ವಿಶೇಷ ಅಂದರೆ 320 ದಶಲಕ್ಷ ವರ್ಷಗಳಲ್ಲಿ ಭೂಮಿ ನಾಲ್ಕು ಬಾರಿ ಸೌತ್ ಪೋಲ್ ಹಾಗೂ ನಾರ್ತ್ ಪೋಲ್ ಸ್ಥಾನ ಬದಲಿಸಿದೆ. ಈ ಕುರಿತು ಅಕ್ಟೋಬರ್ 19 ರಂದು ಸ್ಮಿತ್‌ಸೋನಿಯನ್ ಮ್ಯಾಗಜಿನ್‌ನಲ್ಲಿ ಅಧ್ಯಯನ ವರದಿ ಪ್ರಕಟಿಸಲಾಗಿದೆ. ಜರ್ನಲ್ ಸೈನ್ಸ್ ನಡೆಸಿದ ಈ ಅಧ್ಯಯನ ವರದಿ ಹಲವು ಅಚ್ಚರಿಗೆ ಕಾರಣವಾಗಿದೆ.

10 ಸೆಂಟಿಮೀಟರ್ ವೇಗದಲ್ಲಿ ಚಲನೆ

ಸೌತ್ ಹಾಗೂ ನಾರ್ತ್ ಪೋಲ್ ಸ್ಥಾನ ಬದಲಾವಣೆ ಪತ್ತೆ ಹಚ್ಚುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಸಮುದ್ರ ಮಟ್ಟದ ಬದಲಾವಣೆಯನ್ನು ಪ್ರಮುಖ ಆಧಾರವಾಗಿಟ್ಟುಕೊಂಡು ಭೂಮಿಯ ಅಧ್ಯಯನ ನಡೆಸಲಾಗಿದೆ. ಭೂಮಿಯ ಧ್ರುವಗಳು ವರ್ಷಕ್ಕೆ 10 ಸೆಂಟಿಮೀಟರ್ ವೇಗದಲ್ಲಿ ಚಲಿಸುತ್ತದೆ. ಹೀಗಾಗಿ ಧ್ರುವಗಳ ಸ್ಥಾನ ಬದಲಾವಣೆ ವೇಗ ಅತೀ ಕಡಿಮೆಯಾದರೂ ಬದಲಾವಣೆ ಖಚಿತ. ಕೊನೆಯ ಬಾರಿಗೆ ಭೂಮಿಯ ಪೋಲಾರ್ ವ್ಯಾಂಡರ್ ಬದಲಾವಣೆ 48 ರಿಂದ 56 ದಶಲಕ್ಷ ವರ್ಷಗಳ ಹಿಂದೆ ಸಂಭವಿಸಿದೆ. ಮುಂದೆಯೂ ಸಂಭವಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಧ್ರುವ ಸ್ಥಾನ ಬದಲಾವಣೆಯಿಂದ ಆಗೋ ಪರಿಣಾಮವೇನು?

ಭೂಮಿಯ ಸ್ಥಾನ ಅತ್ಯಂತ ಪ್ರಮುಖವಾಗಿದೆ. ಸೌರಮಂಡಲದಲ್ಲಿನ ಪ್ರತಿಯೊಂದು ಗ್ರಹಗಳ ಸ್ಥಾನ ಪಲ್ಲಟ ಭಾರಿ ಪರಿಣಾಮ ಬೀರಲಿದೆ. ತನ್ನ ಅಕ್ಷೆಯಲ್ಲಿ ಗ್ರಹಗಳು ಸುತ್ತುತ್ತವೆ. ಆದರೆ ಸ್ಥಾನ ಪಲ್ಲಟವಾದಾಗ ಇತರ ಗ್ರಹಗಳ ಮೇಲೂ ಪರಿಣಾಮ ಬೀರಲಿದೆ. ಭೂಮಿಯ ದಕ್ಷಿಣ ಧ್ರುವ ಹಾಗೂ ಉತ್ತರ ಧ್ರುವಗಳ ಸ್ಥಾನ ಬದಲಾವಣೆಯಿಂದ ಭೂಮಿಯ ಸಮುದ್ರ ಮಟ್ಟದಲ್ಲಿ ಭಾರಿ ಏರಿಳಿತಗಳಾಗುತ್ತದೆ. ಈ ಏರಿಳಿತಗಳು ಅಪಾಯಕ್ಕೂ ಕಾರಣವಾಗಲಿದೆ.

ಸಮುದ್ರ ಮಟ್ಟದಲ್ಲಿ ಆದ ಏರಿಳಿತಗಳಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸಿದೆ. ಇವೆಲ್ಲವೂ ಭೂಮಿಯ ಸ್ಥಾನ ಪಲ್ಲಟನೆಯಿಂದ ಆಗಿರುವ ಅನಾಹುತಗಳು ಎಂದು ಹೇಳಲು ಸಾಧ್ಯವಿಲ್ಲ. ಆದರೆ ನಾರ್ತ್ ಫೋಲ್ ಹಾಗೂ ಸೌತ್ ಪೋಲ್ ಸ್ಥಾನ ಬದಲಾವಣೆಗಳಿಂದ ಸಮುದ್ರ ಮಟ್ಟದಲ್ಲಿ ಏರಿಳಿತ ಉಂಟಾಗಲಿದೆ ಅನ್ನೋದು ಖಚಿತ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಬೆಂಗ್ಳೂರಿನಿಂದ 7 ಗಂಟೆ ದೂರದಲ್ಲಿ ಮಂಗಳ ಗ್ರಹದ ಭೂ ವಿನ್ಯಾಸ ಪತ್ತೆ ಹಚ್ಚಿದ ವಿಜ್ಞಾನಿಗಳು
ವಿಷಕಾರಿ ಹಾವುಗಳ ಮೈಮೇಲಿನ ಆ ಕಣ್ಣು ಕುಕ್ಕುವ ಬಣ್ಣಗಳ ರಹಸ್ಯವೇನು? ರೋಮಾಂಚನಕಾರಿ ವೈಜ್ಞಾನಿಕ ವರದಿ ಇಲ್ಲಿದೆ