ಡ್ಯಾಮ್ ನೀರು ಸಂಗ್ರಹದಿಂದ ಭೂಮಿಯ ಧ್ರುವ ಸ್ಥಳಾಂತರ, ಅಧ್ಯಯನ ವರದಿ ಬಿಚ್ಚಿಟ್ಟ ಅಪಾಯ

Published : Jul 21, 2025, 06:34 PM IST
mullai periyar dam

ಸಾರಾಂಶ

ಅಣೆಕಟ್ಟು ನಿರ್ಮಿಸಿ ನೀರು ಸಂಗ್ರಹ ಮಾಡಲಾಗುತ್ತಿದೆ. ಇದರಿಂದ ನೀರು ಸರಾಗವಾಗಿ ಹರಿದು ಸಮುದ್ರ ಸೇರುತ್ತಿಲ್ಲ. ಇದರ ಪರಿಣಾಮ ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ. ಈ ರೀತಿ ಡ್ಯಾಮ್ ನಿರ್ಮಾಣ ಹಾಗೂ ನೀರಿನ ಸಂಗ್ರಹದಿಂದ ಅರ್ಥ್ ಪೋಲ್ ಸ್ಥಳಾಂತರಗೊಂಡಿದೆ.

ವಾಶಿಂಗ್ಟನ್ (ಜು.21) ಅಂತರ್ಜಲ ಮಟ್ಟ ಕುಸಿಯುತ್ತಿದೆ. ನೀರಿಗಾಗಿ ಹಾಹಾಕಾರ ಸೃಷ್ಟಿಯಾಗುತ್ತಿದೆ. ಹೀಗಾಗಿ ಎಲ್ಲೆಡೆ ನದಿಗಳಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತದೆ. ಭಾರತ ಸೇರಿದಂತೆ ವಿಶ್ವದೆಲ್ಲೆಡೆ ನೀರಿನ ಪ್ರಮುಖ ಮೂಲ ಡ್ಯಾಮ್. ಮಳೆಗಾಲದಲ್ಲಿ ಸಂಗ್ರವಾಗುವ ನೀರಿನಲ್ಲಿ ಇಡೀ ವರ್ಷ ಸಾಗುವ ಹಲವು ದೇಶಗಳಿವೆ. ಆದರೆ ಮಾನವ ನಿರ್ಮಿತ, ಪ್ರಕೃತಿಗೆ ವಿರುದ್ಧವಾದ ಈ ಅಣೆಕಟ್ಟುಗಳಿಂದ ಅಪಾಯವೇ ಹೆಚ್ಚು ಎಂದು ಅಧ್ಯಯನ ವರದಿ ಹೇಳಿದೆ. ಮುಖ್ಯವಾಗಿ ಅಣೆಕಟ್ಟು ನಿರ್ಮಾಣ, ನೀರು ಸಂಗ್ರಹದಿಂದ ಭೂಮಿಯ ಧ್ರುವ (ಅರ್ಥ್ ಪೋಲ್ ) 1 ಮೀಟರ್‌ನಷ್ಟೂ ಸ್ಥಳಾಂತರಗೊಂಡಿದೆ ಎಂದು ವರದಿ ಹೇಳುತ್ತಿದೆ.

ಭೂಮಿಗಿದೆ ಅಪಾಯ

ಜಿಯೋಫಿಸಿಕಲ್ ರಿಸರ್ಚ್ ಲೆಟರ್ ಜರ್ನಲ್‌ನಲ್ಲಿ ಈ ಕುರಿತು ವಿವವರಾದ ಅಧ್ಯಯನ ವರದಿ ಪ್ರಕಟವಾಗಿದೆ. ಮಾನವ ನಿರ್ಮಿತ ಡ್ಯಾಮ್ ಪ್ರಕೃತಿಗೆ ವಿರುದ್ಧವಾಗಿದೆ. ನದಿಯ ಒಡಲು ಬತ್ತಿಹೋಗುತ್ತಿದೆ. ಇದರು ಪರಿಸರದ ಮೇಲೆ ಮಾತ್ರವಲ್ಲ ಭೂಮಿಯನ್ನೇ ಅಪಾಯಕ್ಕೆ ತಳ್ಳುತ್ತಿದೆ ಎಂದು ವರದಿ ಹೇಳುತ್ತಿದೆ.

ಯಾವ ಅಣೆಕಟ್ಟಿನಿಂದ ಸಮಸ್ಯೆ

ಭೂಮಿ ಅರ್ಥ್ ಪೋಲ್ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅಣೆಕಟ್ಟು ಮೂಲಕ ನೀರು ಸಂಗ್ರಹ ಮಾಡಲಾಗುತ್ತಿದೆ. ಇದರಿಂದ ದ್ರವ್ಯರಾಶಿಗಳು ವಿಂಗಡನೆ ಅಥವಾ ಪುನರ್ವಿತರಣೆಯಾಗುತ್ತಿದೆ. ಈ ದ್ರವ್ಯರಾಶಿಗಳ ವಿತರಣೆಯಲ್ಲಿನ ಮಹತ್ವದ ಬದಲಾವಣೆ ಭೂಮಿಯ ಮೇಲ್ಮೈ ಹಾಗೂ ಆಂತಿರಕ ಕಾಂತೀಯ ಬದಲಾಗುತ್ತಿದೆ. 1835ರಿಂದ 2011ರ ವರೆಗೆ ಅರ್ಥ್ ಪೋಲ್ ಮೇಲೆ ಅತ್ಯಂದ ದೊಡ್ಡದಾದ ಅಥವಾ ಅತೀ ಹೆಚ್ಚು ನೀರು ಶೇಖರಣೆಯಾಗುತ್ತಿರುವ 6,962 ಅಣೆಕಟ್ಟಗಳು ಹಾಗೂ ಅದರ ಪರಿಣಾಮ ಕುರಿತು ಅಧ್ಯಯನ ನಡೆಸಲಾಗಿದೆ.

ಭೂಮಿಯ ಉತ್ತರ ಧ್ರುವ ಸ್ಥಳಾಂತರ ಒಂದು ರಾತ್ರಿಯಲ್ಲಿ ಆಘಿಲ್ಲ. ಇದು 1835ರಿಂದ 1954ರ ಅವಧಿಯಲ್ಲಿ ಅರ್ಥ್ ಪೋಲ್ ಪೂರ್ವಕ್ಕೆ ಅಂದರೆ ರಷ್ಯಾ ಭಾಗಕ್ಕೆ 20 ಸೆಂಟಿಮೀಟರ್ ಸ್ಥಳಾಂತರಗೊಂಡಿದೆ. ಇದು ಉತ್ತರ ಅಮೆರಿಕ ಹಾಗೂ ಯೋರೂಪ್‌ನಲ್ಲಿ ನಿರ್ಮಾಣವಾದ ಡ್ಯಾಮ್ ಪರಿಣಾಮವಾಗಿದೆ. ಇನ್ನು ಪಶ್ಚಿಮಕ್ಕೆ ಪೋಲ್ ಅರ್ಥ್ 57 ಸೆಂಟಿಮೀಟರ್ ತಳ್ಳಲ್ಪಟ್ಟಿದೆ. ಇದು ಏಷ್ಯಾ ಹಾಗೂ ಪೂರ್ವ ಆಫ್ರಿಕಾದಲ್ಲಿ 1954ರಿಂದ 2011ರ ವರೆಗೆ ನಿರ್ಮಾಣವಾದ ಡ್ಯಾಮ್ ಪರಿಣಾಮವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಅರ್ಥ್ ಪೋಲ್ ಸ್ಥಳಾಂತರದ ಪರಿಣಾಮವೇನು?

ಅರ್ಥ್ ಪೋಲ್ ಸೆಂಟಿಮೀಟರ್ ಪ್ರಕಾರ ತಳ್ಳಲ್ಪಡುತ್ತಿದೆ. ಭಾರಿ ಪ್ರಮಾಣದಲ್ಲಿ ಅಣೆಕಟ್ಟ ನಿರ್ಮಾಣ ಹಾಗೂ ನೀರು ಸಂಗ್ರಹ ಭೂಮಿಯ ದ್ರವ್ಯರಾಶಿ ಮೇಲೆ ಪರಿಣಾಮ ಬೀರುತ್ತಿದೆ. ಇದರ ಪರಿಣಾಮ ಸಮುದ್ರ ಮಟ್ಟ ಹೆಚ್ಚಾಗಲಿದೆ. ಸಮುದ್ರಗಳು ಭೂಮಿಯನ್ನು ಆವರಿಸಿಕೊಳ್ಳಲಿದೆ. ಇದು ನಿಧಾನವಾಗಿ ಆಗಲಿದೆ. ಸಮುದ್ರ ಮಟ್ಟ ಹೆಚ್ಚಳ ಈಗಾಗಲೇ ಅಧಿಕೃತವಾಗಿ ದಾಖಲಾಗಿದೆ. ಹೀಗಾಗಿ ಅಪಾಯ ದಿನಗಳು ದೂರವಿಲ್ಲ ಅನ್ನೋದು ಅಧ್ಯಯನ ವರದಿ ಹೇಳುತ್ತಿದೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ