
ಜೀ ಕನ್ನಡದ ಅಮೃತಧಾರೆ ಸೀರಿಯಲ್ನಲ್ಲಿ ಭೂಮಿಕಾಗೆ ಅವಳಿ ಮಕ್ಕಳು ಹೊಟ್ಟೆಯಲ್ಲಿ ಇದ್ದುದು ಗರ್ಭಿಣಿಯಾಗಿದ್ದಾಗ ವೈದ್ಯರಿಗೇ ತಿಳಿದಿರಲಿಲ್ಲ ಎಂದು ಇದು ಸಕತ್ ಟ್ರೋಲ್ಗೆ ಒಳಗಾಗಿರೋದು ಸೀರಿಯಲ್ ಪ್ರಿಯರಿಗೆ ಗೊತ್ತೇ ಇದೆ. ಒಂದು ಮಗು ಹುಟ್ಟಿದ ಬಳಿಕ ಮತ್ತೆ ನೋವು ಕಾಣಿಸಿಕೊಂಡಾಗ ಎರಡನೆಯ ಮಗು ಹೊಟ್ಟೆಯಲ್ಲಿ ಇದ್ದುದು ವೈದ್ಯರಿಗೆ ತಿಳಿದು ಪ್ರಸವ ಮಾಡಿಸಿದ್ದರು. ಮೊದಲ ಮಗು ಕಿಡ್ನ್ಯಾಪ್ ಆಗಿದ್ದು, ಅದನ್ನು ಹುಡುಕಲು ಈಗ ನಾಯಕ ಗೌತಮ್ ಹೋಗಿದ್ದಾನೆ. ಇದು ಬಿಡಿ ಸೀರಿಯಲ್ನಲ್ಲಿ ಏನು ಬೇಕಾದ್ರೂ ಆಗತ್ತೆ. ಆದರೆ ರಿಯಲ್ ಆಗಿಯೂ ಇಂಥದ್ದೇ ಒಂದು ವಿಚಿತ್ರ ಘಟನೆ ನಡೆದಿದೆ. ಆದರೆ ಇಲ್ಲಿ ಇಬ್ಬರು ಮಕ್ಕಳಲ್ಲ, ಬದಲಿಗೆ ಮೂವರು ಮಕ್ಕಳು ಹುಟ್ಟಿದ್ದಾರೆ. ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ, ತಾಯಿಯ ಹೊಟ್ಟೆಯಲ್ಲಿ ಮತ್ತೊಂದು ಮಗು ಇರುವುದು ತಿಳಿದು ವೈದ್ಯರೇ ಶಾಕ್ ಆಗಿದ್ದಾರೆ. ಇದೊಂದು ರೀತಿಯಲ್ಲಿ ವಿಚಿತ್ರ ಘಟನೆಯೂ ಹೌದು.
ಈ ಘಟನೆ ನಡೆದಿರುವುದು ಚೀನಾದಲ್ಲಿ. ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ, ತಾಯಿಯ ಹೊಟ್ಟೆಯಲ್ಲಿ ಮತ್ತೊಂದು ಮಗು ಪತ್ತೆಯಾಯಿತು. ಸಿಸೇರಿಯನ್ ನಂತರ ತಾಯಿಗೆ ಹೊಟ್ಟೆಯಲ್ಲಿ ಚಲನೆ ಅನುಭವಿಸಿ ವೈದ್ಯರಿಗೆ ತಿಳಿಸಿದರು. ಅಲ್ಟ್ರಾಸೌಂಡ್‌ನಲ್ಲಿ ಕಾಣಿಸದಿದ್ದ ಮೂರನೇ ಮಗುವನ್ನು ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತವಾಗಿ ಹೊರತೆಗೆಯಲಾಯಿತು. ಕುಟುಂಬವು ಮೂರು ಮಕ್ಕಳನ್ನು ಸ್ವಾಗತಿಸಿತು. ವೈದ್ಯಕೀಯ ಲೋಕ ಎಷ್ಟೇ ಮುಂದುವರೆದಿದ್ದರೂ ಕೆಲವೊಮ್ಮೆ ವೈದ್ಯರ ಊಹೆಗೂ ನಿಲುಕದ ಘಟನೆಗಳು ಸಂಭವಿಸಿಬಿಡುತ್ತವೆ. ಅದುವೇ ಪ್ರಕೃತಿಯ ವಿಸ್ಮಯ. ಅದೇ ರೀತಿ ಅವಳಿ-ಜವಳಿ ಹುಟ್ಟುತ್ತದೆ ಎಂದು ಮೊದಲೇ ವೈದ್ಯರು ಹೇಳಿದಂತೆ ಸಿಸರಿನ್ ಮೂಲಕ ಅವಳಿ ಮಕ್ಕಳು ಹುಟ್ಟಿದ ಬಳಿಕ ಇನ್ನೇನು ಹೊಟ್ಟೆಗೆ ಹೊಲಿಗೆ ಹಾಕಬೇಕು ಎನ್ನುವಷ್ಟರಲ್ಲಿ ಮತ್ತೊಂದು ಮಗು ಹೊಟ್ಟೆಯಲ್ಲಿ ಇರುವುದು ಮಹಿಳೆಗೆ ಗೊತ್ತಾಗಿ ಆಘಾತವಾಗಿರುವ ಘಟನೆ ನಡೆದಿದೆ.
ಚೀನಾದ ಶಾಂಘೈನಲ್ಲಿರುವ ಮಹಿಳೆ ಸಿಸೇರಿಯನ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು, ಆಪರೇಷನ್ ಮಾಡಬೇಕಾಗುತ್ತದೆ, ಅವಳಿ ಮಕ್ಕಳು ಎಂದು ವೈದ್ಯರು ಮೊದಲೇ ಹೇಳಿದ್ದರಿಂದ ಅದು ಕೂಡ ಆಯಿತು. ಇನ್ನೇನು ಸಿಸೇರಿಯನ್ ಬಳಿಕ ಆಪರೇಷನ್ ಮಾಡಲು ಮುಂದಾದಾಗ, ಹೊಟ್ಟೆಯಲ್ಲಿ ಏನೋ ಚಲಿಸುತ್ತಿರುವಂತೆ ಮಹಿಳೆಗೆ ಭಾಸವಾಗಿದೆ. ಅದನ್ನು ಕೂಡಲೇ ಆಕೆ ವೈದ್ಯರಿಗೆ ಹೇಳಿದಾಗ ವೈದ್ಯರೂ ಗಾಬರಿ ಬಿದ್ದಿದ್ದಾರೆ. ವೈದ್ಯಕೀಯ ಸಿಬ್ಬಂದಿ ತುರ್ತು ಕಾರ್ಯಾರಣೆ ನಡೆಸಿದರು. ಬಳಿಕ ಪರೀಕ್ಷೆ ಮಾಡಿದಾಗ ಮತ್ತೊಂದು ಮಗು ಹೊಟ್ಟೆಯಲ್ಲಿ ಇರುವಂತೆ ಭಾಸವಾಯಿತು. ಭ್ರೂಣದ ಚಲನೆ ಇದೆ ಎಂದು ಪರೀಕ್ಷೆ ಮಾಡಿದ ನರ್ಸ್ ಹೇಳಿದರು.
ವೈದ್ಯರು ಬೇಗನೆ ಕಾರ್ಯಪ್ರವೃತ್ತರಾಗಿ ಮತ್ತಷ್ಟು ಪರೀಕ್ಷೆಗಳನ್ನು ನಡೆಸಿದರು, ಇದು ಮಹಿಳೆಯ ಗರ್ಭಾಶಯದಲ್ಲಿ ಮೂರನೇ ಮಗುವನ್ನು ಕಂಡುಹಿಡಿಯಲು ಕಾರಣವಾಯಿತು. ಆಕೆಗೆ ಅಲ್ಟ್ರಾಸೌಂಡ್ ಮೂಲಕ ಪರೀಕ್ಷೆ ಮಾಡಿದ್ದಾಗ ಅದರಲ್ಲಿ ಎರಡೇ ಮಕ್ಕಳು ಕಾನಿಸುತ್ತಿದ್ದರು. ಬಹುಶಃ ಮತ್ತೊಂದು ಮಗು ವಿಶೇಷ ಸ್ಥಾನದಲ್ಲಿ ಇದ್ದುದರಿಂದ ಅಲ್ಟ್ರಾಸೌಂಡ್ ದೃಷ್ಟಿಗೆ ಬೀಳಲಿಲ್ಲಾ ಎಂದಿದ್ದಾರೆ ವೈದ್ಯರು. ಕೊನೆಯಲ್ಲಿ, ಮೂರನೇ ಮಗುವನ್ನು ಸುರಕ್ಷಿತವಾಗಿ ಆಪರೇಷನ್ ಮಾಡುವ ಮೂಲಕ ತರಲಾಯಿತು, ಅವಳಿ ಮಕ್ಕಳ ಜೊತೆ ಮೂರನೆಯ ಮಗುವನ್ನು ಕೂಡ ಕುಟುಂಬವು ಆದರಿಂದ ಬರಮಾಡಿಕೊಂಡಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.