Latest Videos

ಇಸ್ರೋ ಪರಿಶ್ರಮಕ್ಕೆ ಸಿಕ್ಕಿದ ಫಲ, ಯಶಸ್ವಿಯಾಗಿ ಚಂದ್ರನ ವೃತ್ತಕಾರ ಕಕ್ಷೆ ಸೇರಿದ ವಿಕ್ರಂ ಲ್ಯಾಂಡರ್!

By Suvarna NewsFirst Published Aug 16, 2023, 11:15 AM IST
Highlights

ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಇಸ್ರೋ ಇದೀಗ ಮತ್ತೊಂದು ಮಹತ್ಪದ ಘಟ್ಟವನ್ನು ಯಶಸ್ವಿಯಾಗಿ ಪೂರೈಸಿದೆ. ಭಾರತದ ಚಂದ್ರಯಾನ3 ನೌಕೆಯಿಂದ ವಿಕ್ರಂ ಲ್ಯಾಂಡರ್ ಬೇರ್ಪಡಿಸಿ ಚಂದ್ರನ ವೃತ್ತಕಾರದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ. ಲ್ಯಾಂಡರ್ ಇದೀಗ 153 ಕಿಮೀ x 163 ಕಿಮೀ ಕಕ್ಷೆಗೆ ಸೇರಿಸಲಾಗಿದೆ.

ನವದೆಹಲಿ(ಆ.16) ಭಾರತದ ಚಂದ್ರಯಾನ3 ಹಂತ ಹಂತವಾಗಿ ಯಶಸ್ಸು ಪಡೆಯುತ್ತಿದೆ. ಇದೀಗ ಚಂದ್ರನ  153 ಕಿಮೀ x 163 ಕಿಮೀ ಕಕ್ಷೆಗೆ ಸೇರಿಸುವ ಕಾರ್ಯ ಯಶಸ್ವಿಯಾಗಿದೆ. ನೌಕೆಯಿಂದ ವಿಕ್ರಂ ಲ್ಯಾಂಡರ್ ಬೇರ್ಪಡಿಸಿ ಚಂದ್ರನ ವೃತ್ತಕಾರಾದ ಕಕ್ಷೆಗೆ ಸೇರಿಸಲಾಗಿದೆ. ಈ ಮೂಲಕ ಚಂದ್ರಯಾನ 3 ಐದನೇ ಹಾಗೂ ಅಂತಿಮ ಸುತ್ತುವ ಮಾನುವರ್ ಪೂರ್ಣಗೊಳಿಸಿದೆ. ಈ ಕುರಿತು ಇಸ್ರೋ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ. 

ಆಗಸ್ಟ್ 16ರ ಬೆಳಗ್ಗೆ 8.30ಕ್ಕೆ ಚಂದ್ರಯಾನ3 ನೌಕೆಯನ್ನು ಚಂದ್ರನ ಅಂತಿಮ ಕಕ್ಷೆಗೆ ಸೇರಿಸಲು ಇಸ್ರೋ ತಯಾರಿ ಮಾಡಿಕೊಂಡಿತ್ತು. ಇದರಂತೆ ಯಶಸ್ವಿ ಫೈರಿಂಗ್ ಮೂಲಕ ಚಂದ್ರಯಾನ 3ನ್ನು ಉದ್ದೇಶಿಸಿದ 153 ಕಿಮೀ x 163 ಕಿಮೀ ಕಕ್ಷೆಗೆ ಸೇರಿಸಲಾಗಿದೆ.  ಇದರೊಂದಿಗೆ ಚಂದ್ರನ ಬಂಧಿತ ಕುಶಲತೆಯು ಪೂರ್ಣಗೊಂಡಿದೆ.ಇದೀಗ ಪ್ರೊಪಲ್ಷನ್ ಮಾಡ್ಯೂಲ್ ಹಾಗೂ ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕ ಪ್ರಯಾಣಕ್ಕೆ ಇಸ್ರೋ ತಯಾರಿ ಮಾಡಿಕೊಳ್ಳುತ್ತಿದೆ. ಆಗಸ್ಟ್ 17 ರಂದು ಲ್ಯಾಂಡರ್ ಮಾಡ್ಯೂಲ್‌ನ್ನು ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಡಿಸಲು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರಿಸಲಾಗುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಭಾರತದ ಸೂರ್ಯ ಶಿಖಾರಿ.. 'ಆದಿತ್ಯ' ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದ ಇಸ್ರೋ!

ನೌಕೆಯಿಂದ ಬೇರ್ಪಡಿಸಿದ ವಿಕ್ರಂ ಲ್ಯಾಂಡರ್ ಇದೀಗ ಚಂದ್ರನ ವೃತ್ತಕಾರಾದ ಕಕ್ಷೆಗೆ ಸೇರಿಸಲಾಗಿದೆ.ಈ ಪ್ರಕ್ರಿಯೆಯಿಂದ ನೌಕೆಯು, ಚಂದ್ರನಿಂದ ಕೇವಲ 100 ಕಿ.ಮೀ ದೂರದ ಪ್ರದೇಶವನ್ನು ಪ್ರವೇಶಿಸಿದೆ. ಪ್ರೊಪಲ್ಷನ್‌ ಮಾಡೆಲ್‌ನಿಂದ ಲ್ಯಾಂಡರ್‌ ಮತ್ತು ರೋವರ್‌ ಒಳಗೊಂಡಿರುವ ಲ್ಯಾಂಡಿಂಗ್‌ ಮಾಡೆಲ್‌ ಬೇರ್ಪಟ್ಟಿದೆ.  ನಂತರದಲ್ಲಿ ಲ್ಯಾಂಡಿಂಗ್‌ ಮಾಡೆಲ್‌ ಡೀಬೂಸ್ಟ್‌ (ವೇಗ ಕಡಿಮೆ ಮಾಡುವ ಪ್ರಕ್ರಿಯೆ) ಪ್ರಕ್ರಿಯೆಗೆ ಒಳಪಡಲಿದೆ. ಈ ಮೂಲಕ ಆ.23ರಂದು ಚಂದ್ರನ ಮೇಲೆ ಸಾಫ್‌್ಟಲ್ಯಾಂಡಿಂಗ್‌ಗೆ ಪ್ರಯತ್ನ ಮಾಡಲಿದೆ.

ಆಗಸ್ಟ್ 5 ರಂದು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರ್ಪಡೆಯಾಗಿದ್ದ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ಹತ್ತಿರದಿಂದ ಚಂದ್ರನ ದೃಶ್ಯಗಳನ್ನು ಸೆರೆ ಹಿಡಿದು ರವಾನಿಸಿದೆ. ಕಕ್ಷೆ ಪ್ರವೇಶಿಸಿದ ಬಳಿಕ ನೌಕೆ ತಾನು ಮೊದಲ ಬಾರಿಗೆ ಸೆರೆಹಿಡಿದ ಚಂದ್ರನ ದೃಶ್ಯಗಳನ್ನು ರವಾನಿಸಿತ್ತು. ಇದನ್ನು ಇಸ್ರೋ ಟ್ವೀಟರ್‌ನ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿತ್ತು.  

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಂಚಲನ; ಚಂದ್ರ-ಭೂಮಿಯ ಫೋಟೋ ಕಳುಹಿಸಿದ ಉಪಗ್ರಹ!

ಚಂದ್ರಯಾನ-3 ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ‘ಲೂನಾರ್‌ ಆರ್ಬಿಟ್‌ ಇಂಜೆಕ್ಷನ್‌ (ಎಲ್‌ಒಐ)’ ಪ್ರಕ್ರಿಯೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆ.5ರ ಸಂಜೆ 7 ಗಂಟೆಗೆ ನಡೆಸಿತ್ತು. ಈ ಕುರಿತಾಗಿ ಟ್ವೀಟ್‌ ಮಾಡಿದ್ದ ಇಸ್ರೋ, ‘ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ವರ್ಗಾಯಿಸಲಾಗಿದೆ. ಬೆಂಗಳೂರಿನಲ್ಲಿರುವ ಇಸ್ರೋ ಕಚೇರಿಯಲ್ಲಿ ಯಶಸ್ವಿಯಾಗಿ ಪೆರಿಲ್ಯೂನ್‌ ರೆಟ್ರೋ ಬರ್ನಿಂಗ್‌ (ಚಂದ್ರನ ಕಕ್ಷೆಯತ್ತ ನೌಕೆಯನ್ನು ತಳ್ಳುವ ಪ್ರಕ್ರಿಯೆ) ಕೈಗೊಳ್ಳಲಾಗಿದೆ ಎಂದಿತ್ತು. 

ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್‌ ಧವನ್‌ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ಲಾಂಚ್‌ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ ರೋವರ್‌ನ್ನು ಹೊತ್ತ ರಾಕೆಟ್‌ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿ ಕಡೆಗೆ ಪ್ರಯಾಣ ಬೆಳೆಸಿದೆ. ಕ್ಷಣಕ್ಷಣಕ್ಕೂ ಭಾರತದ ’ಚಂದ್ರಯಾನ-3’ ನೌಕೆ ಚಂದ್ರನಿಗೆ ಹತ್ತಿರವಾಗುತ್ತಿದೆ. ಮುಂದಿನ ಹಂತಗಳಿಗೆ ಚಂದ್ರಯಾನ ನೌಕೆ ಸಜ್ಜಾಗುತ್ತಿದ್ದು ಭಾರತ ಇತಿಹಾಸ ನಿರ್ಮಿಸಲಿದೆ..  
 

click me!