ಇಂದು ವರ್ಷದ ಮೊದಲ ಚಂದ್ರಗ್ರಹಣ:ಹಲವೆಡೆ ಬ್ಲಡ್‌ ಮೂನ್‌ ಗೋಚರ

By Suvarna NewsFirst Published May 16, 2022, 8:05 AM IST
Highlights

* ಈ ವರ್ಷದ ಮೊದಲ ಚಂದ್ರಗ್ರಹಣ ಭಾನುವಾರ 

* ಪ್ರಪಂಚದ ಹಲವು ಭಾಗಗಳಲ್ಲಿ ಬ್ಲಡ್‌ ಮೂನ್‌ ಕಾಣಿಸಿಕೊಳ್ಳಲಿದೆ

* ಭಾರತೀಯ ಕಾಲಮಾನದಂತೆ ಸೋಮವಾರ ಬೆಳಿಗ್ಗೆ 7.57 ಸುಮಾರಿಗೆ ಗ್ರಹಣ ಆರಂಭ

ನವದೆಹಲಿ(ಮೇ/.16): ಈ ವರ್ಷದ ಮೊದಲ ಚಂದ್ರಗ್ರಹಣ ಭಾನುವಾರ ಘಟಿಸಲಿದೆ. ಇದು ಪೂರ್ಣ ಚಂದ್ರ ಗ್ರಹಣವಾಗಿರುವುದರಿಂದ ಪ್ರಪಂಚದ ಹಲವು ಭಾಗಗಳಲ್ಲಿ ಬ್ಲಡ್‌ ಮೂನ್‌ ಕಾಣಿಸಿಕೊಳ್ಳಲಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ. ಭಾರತೀಯ ಕಾಲಮಾನದಂತೆ ಸೋಮವಾರ ಬೆಳಿಗ್ಗೆ 7.57 ಸುಮಾರಿಗೆ ಗ್ರಹಣ ಆರಂಭವಾಗಲಿದೆ.

ಬ್ಲಡ್‌ಮೂನ್‌ 10.15 ಗಂಟೆಗೆ ಕಾಣಿಸಿಕೊಳ್ಳಲಿದೆ. ಪೂರ್ಣ ಗ್ರಹಣದ ಸಮಯದಲ್ಲಿ ಚಂದ್ರ ಕೆಂಪು ಬಣ್ಣದಲ್ಲಿ ಗೋಚರವಾಗುವುದರಿಂದ ಇದನ್ನು ಬ್ಲಡ್‌ ಮೂನ್‌ ಎಂದು ಕರೆಯಲಾಗುತ್ತದೆ. ದಕ್ಷಿಣಾರ್ಧ ಗೋಳದಲ್ಲಿ ಬ್ಲಡ್‌ ಮೂನ್‌ ಸಂಪೂರ್ಣವಾಗಿ ಕಾಣಿಸಲಿದೆ.

ದಕ್ಷಿಣ ಅಮೆರಿಕ, ಯುರೋಪ್‌ ಮತ್ತು ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಅಲ್ಪ ಪ್ರಮಾಣದಲ್ಲಿ ಗ್ರಹಣ ಗೋಚರವಾಗಲಿದೆ.

ಇದು ಏಕೆ ನಡೆಯುತ್ತದೆ?
ಚಂದ್ರನು ಭೂಮಿಯ ನೆರಳಿನಲ್ಲಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ, ಅಂದರೆ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಆಗ ಸೂರ್ಯನ ಪ್ರಕಾಶಮಾನ ಕಿರಣ ಭೂಮಿಯ ಮೇಲೆ ಬಿದ್ದು, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಚಂದ್ರನು ಭೂಮಿಯ ನೆರಳಿನ ಕಪ್ಪು ಭಾಗವನ್ನು ಪ್ರವೇಶಿಸಿದಾಗ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತದೆ.  ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲೇ ವೀಕ್ಷಿಸಬಹುದಾಗಿದೆ, ಇದರಿಂದ ಯಾವುದೇ ಅಪಾಯವಿಲ್ಲ. 

ಮೇ 15 ಮತ್ತು 16ರಂದು ನಡೆಯಲಿರುವ ಚಂದ್ರಗ್ರಹಣ 2022 ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ, ಆದಾಗ್ಯೂ ಕೆಲವು ಸ್ಥಳಗಳು ಸೂರ್ಯನು ದಿಗಂತದ ಮೇಲಿರುವಾಗ ವೀಕ್ಷಣಾ ಹಂತಗಳನ್ನು ಕಳೆದುಕೊಳ್ಳುತ್ತವೆ. ಚಂದ್ರಗ್ರಹಣದ ಗೋಚರತೆಯು ಸಮಯ ವಲಯವನ್ನು ಅವಲಂಬಿಸಿರುತ್ತದೆ. ಈ ಬಾರಿ ಭಾರತದಲ್ಲಿ ಈ ಚಂದ್ರಗ್ರಹಣ ಗೋಚರವಾಗುವುದಿಲ್ಲ. ಹಾಗಂಥ ಭಾರತೀಯ ಖಗೋಳಪ್ರಿಯರು ಚಂದ್ರಗ್ರಹಣ ವೀಕ್ಷಣೆ ತಪ್ಪಿ ಹೋಯ್ತೆಂದು ಕೊರಗುವ ಅಗತ್ಯವಿಲ್ಲ. ತಂತ್ರಜ್ಞಾನ ಮುಂದಿರುವ ಈ ಕಾಲದಲ್ಲಿ ಎಲ್ಲವೂ ಸಾಧ್ಯವಾಗುತ್ತದೆ. 

ಚಂದ್ರಗ್ರಹಣ 2022: ನೀವು ತಿಳಿಯಬೇಕಾದ ಸಂಪೂರ್ಣ ವಿವರ ಇಲ್ಲಿದೆ..

ಹೇಗೆ ವೀಕ್ಷಿಸುವುದು?(How to watc

ಹೌದು, ಈ ಬಾರಿ ಚಂದ್ರಗ್ರಹಣವು ಭಾರತದಲ್ಲಿ ಗೋಚರವಾಗುತ್ತಿಲ್ಲವಾದ ಕಾರಣ, ಚಂದ್ರಗ್ರಹಣ ನೋಡಬಯಸುವವರು ನಾಸಾವು ಈ ವಿದ್ಯಮಾನವನ್ನು ಆನ್‌ಲೈನ್‌ನಲ್ಲಿ ಲೈವ್ ಸ್ಟ್ರೀಮ್ ಮಾಡುವುದನ್ನು ವೀಕ್ಷಿಸಬಹುದು. 

ಎಲ್ಲಿ ಗೋಚರಿಸುತ್ತದೆ?

ಇದು ಇಡೀ ದಕ್ಷಿಣ ಅಮೆರಿಕಾ(South America) ಮತ್ತು ಉತ್ತರ ಅಮೆರಿಕಾ(North America)ದ ಪೂರ್ವ ಭಾಗಗಳಲ್ಲಿ ಗೋಚರಿಸುತ್ತದೆ. ಬಹುಪಾಲು ಅಮೆರಿಕ ಮತ್ತು ಅಂಟಾರ್ಕ್ಟಿಕಾದಿಂದ ಗೋಚರಿಸುತ್ತದೆ, ಜೊತೆಗೆ ಯುರೋಪ್ ಮತ್ತು ಆಫ್ರಿಕಾದ ಪಶ್ಚಿಮ ಭಾಗಗಳು ಮತ್ತು ಪೆಸಿಫಿಕ್‌ನ ಪೂರ್ವ ಭಾಗದಿಂದ ಗೋಚರಿಸುತ್ತದೆ. 
ನ್ಯೂಜಿಲೆಂಡ್, ಮಧ್ಯಪ್ರಾಚ್ಯ ಮತ್ತು ಪೂರ್ವ ಯುರೋಪಿನ ಆಕಾಶವೀಕ್ಷಕರು ಸಹ ಭಾಗಶಃ ಗ್ರಹಣವನ್ನು ಅನುಭವಿಸುತ್ತಾರೆ, ಅಂದರೆ, ಈ ಸಮಯದಲ್ಲಿ ಭೂಮಿಯ ನೆರಳಿನ ಅಂಚು ಮಾತ್ರ ಚಂದ್ರನ ಮೇಲೆ ಬೀಳುವುದು ಇವರಿಗೆ ಗೋಚರವಾಗುತ್ತದೆ.

ವರ್ಷದ ಮೊದಲ ಚಂದ್ರಗ್ರಹಣ; ಈ ರಾಶಿಗಳು ಪಡೆಯಲಿವೆ ಭಾರೀ ಲಾಭ!

ಬ್ಲಡ್ ಮೂನ್: ಚಂದ್ರ ಏಕೆ ಕೆಂಪು?

ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತದ ಪ್ರಕಾರ, ಚಂದ್ರನ ಮೇಲ್ಮೈಯನ್ನು ತಲುಪುವ ಏಕೈಕ ಬೆಳಕು ಭೂಮಿಯ ವಾತಾವರಣದ ಅಂಚುಗಳಿಂದ. ಭೂಮಿಯ ವಾತಾವರಣದಿಂದ ಗಾಳಿಯ ಅಣುಗಳು ಹೆಚ್ಚಿನ ನೀಲಿ ಬೆಳಕನ್ನು ಚದುರಿಸುತ್ತವೆ. ಉಳಿದ ಬೆಳಕು ಚಂದ್ರನ ಮೇಲ್ಮೈಯಲ್ಲಿ ಕೆಂಪು ಹೊಳಪಿನಿಂದ ಪ್ರತಿಫಲಿಸುತ್ತದೆ, ಅದು ರಾತ್ರಿಯ ಆಕಾಶದಲ್ಲಿ ಚಂದ್ರನನ್ನು ಕೆಂಪು ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ.

click me!