ಜುಲೈ 29ಕ್ಕೆ ಕಾಣಿಸಲಿದೆ ಗೋಲ್ಡನ್ Buck Moon: ಈ ಅಪರೂಪದ ಚಂದ್ರನ ದರ್ಶನ ತಪ್ಪಿಸಿಕೊಳ್ಳಬೇಡಿ!

Published : Jul 28, 2026, 03:14 PM IST
Buck Moon 2026 to Appear Golden on July 29 What to Know

ಸಾರಾಂಶ

2026ರ ಜುಲೈ 29ರಂದು 'ಬಕ್ ಮೂನ್' ಎಂದು ಕರೆಯಲ್ಪಡುವ ಹುಣ್ಣಿಮೆಯ ಚಂದ್ರನು ಆಕಾಶದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಭೂಮಿಯ ವಾತಾವರಣದ ಪರಿಣಾಮದಿಂದಾಗಿ ಇದು ಕಿತ್ತಳೆ ಮತ್ತು ಬಂಗಾರದ ಬಣ್ಣದಲ್ಲಿ ಗೋಚರಿಸಲಿದ್ದು, ಭಾರತದಲ್ಲಿ ಇದನ್ನು ನೋಡಲು ಅತ್ಯುತ್ತಮ ಸಮಯ ಯಾವುದು ಎಂದು ತಿಳಿಯಿರಿ.

2026ರ ಜುಲೈ 29ರಂದು ಆಕಾಶದಲ್ಲಿ ಒಂದು ಸುಂದರ ದೃಶ್ಯ ಕಾದಿದೆ. ಅಂದು ಜುಲೈ ತಿಂಗಳ ಹುಣ್ಣಿಮೆಯಾದ 'ಬಕ್ ಮೂನ್' (Buck Moon) ಕಾಣಿಸಿಕೊಳ್ಳಲಿದ್ದು, ಸಂಜೆ ಮತ್ತು ಮುಂಜಾನೆಯ ಸಮಯದಲ್ಲಿ ಇದು ಬಂಗಾರ, ಕಿತ್ತಳೆ ಹಾಗೂ ಕೆಂಪು ಬಣ್ಣಗಳಲ್ಲಿ ಕಂಗೊಳಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8:05ಕ್ಕೆ ಪರಿಪೂರ್ಣವಾಗಿ ಕಾಣಿಸಲಿದೆ. ಆಗಸದಲ್ಲಿ ನಡೆಯುವ ಈ ಖಗೋಳ ವಿಸ್ಮಯನ್ನು ಭಾರತದಲ್ಲಿಯೂ ಗೋಚರಿಸಲಿದೆ. ಹಾಗಂತ, ಚಂದ್ರನೇನೂ ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುವುದಿಲ್ಲ. ಚಂದ್ರನ ಮೇಲ್ಮೈ ಎಂದಿನಂತೆ ಇದ್ದರೂ, ಭೂಮಿಯ ವಾತಾವರಣದಲ್ಲಿ ನಡೆಯುವ ಒಂದು ವಿದ್ಯಮಾನದಿಂದಾಗಿ ನಮಗೆ ಬಂಗಾರದ ಬಣ್ಣದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಇದು ಕೇವಲ ಒಂದು ದೃಶ್ಯದ ವೈಚಿತ್ರ್ಯವೇ ಹೊರತು ಚಂದ್ರನ ನಿಜವಾದ ಬಣ್ಣವಲ್ಲ.

ಬಂಗಾರದ ಬಣ್ಣದಲ್ಲಿ ಕಾಣಲು ಕಾರಣವೇನು?

ಈ ಬಣ್ಣ ಬದಲಾವಣೆಯ ಹಿಂದಿರುವುದು 'ರೇಲೀ ಸ್ಕ್ಯಾಟರಿಂಗ್' (Rayleigh Scattering) ಎಂಬ ವೈಜ್ಞಾನಿಕ ವಿದ್ಯಮಾನ. ಚಂದ್ರನು ದಿಗಂತದ ಸಮೀಪ ಅಂದರೆ ಕೆಳಮಟ್ಟದಲ್ಲಿ ಇರುವಾಗ, ಅದರ ಬೆಳಕು ಭೂಮಿಯ ವಾತಾವರಣದ ದಪ್ಪನೆಯ ಪದರದ ಮೂಲಕ ಹೆಚ್ಚು ದೂರ ಸಾಗಬೇಕಾಗುತ್ತದೆ. ಬೆಳಕಿನ ಈ ಪಯಣದಲ್ಲಿ ವಾತಾವರಣದಲ್ಲಿರುವ ಧೂಳು ಮತ್ತು ನೀರಿನ ಕಣಗಳು ಕಡಿಮೆ ತರಂಗಾಂತರವಿರುವ ನೀಲಿ ಮತ್ತು ನೇರಳೆ ಬಣ್ಣದ ಬೆಳಕನ್ನು ಚದುರಿಸುತ್ತವೆ. ಇದರ ಪರಿಣಾಮವಾಗಿ, ಹೆಚ್ಚು ತರಂಗಾಂತರವಿರುವ ಕೆಂಪು ಮತ್ತು ಕಿತ್ತಳೆ ಬಣ್ಣದ ಬೆಳಕು ಮಾತ್ರ ಚದುರದೆ ನೇರವಾಗಿ ನಮ್ಮ ಕಣ್ಣುಗಳನ್ನು ತಲುಪುತ್ತದೆ. ಇದೇ ಕಾರಣಕ್ಕೆ ಸೂರ್ಯಾಸ್ತ ಮತ್ತು ಸೂರ್ಯೋದಯದ ಸಮಯದಲ್ಲಿ ಆಕಾಶ ಕೆಂಪಾಗಿ ಕಾಣಿಸುವಂತೆ ಚಂದ್ರನು ಕೂಡ ದಿಗಂತದ ಬಳಿ ಇರುವಾಗ ಬಂಗಾರದ ಬಣ್ಣದಲ್ಲಿ ಗೋಚರಿಸುತ್ತಾನೆ.

ವೀಕ್ಷಣೆಗೆ ಅತ್ಯುತ್ತಮ ಸಮಯ ಯಾವುದು?

ಖಗೋಳಶಾಸ್ತ್ರದ ಪ್ರಕಾರ ಈ ಹುಣ್ಣಿಮೆಯು ತನ್ನ ಪರಿಪೂರ್ಣ ಹಂತವನ್ನು ಅಮೆರಿಕದ ಪೂರ್ವ ಸಮಯ (ET) ಬೆಳಗ್ಗೆ 10:35ಕ್ಕೆ ತಲುಪಲಿದೆ. ಭಾರತೀಯ ಕಾಲಮಾನದ ಪ್ರಕಾರ ಇದು ಜುಲೈ 29ರ ರಾತ್ರಿ 8:05 ಆಗಿರುತ್ತದೆ. ಭಾರತದಲ್ಲಿ ಈ ವಿದ್ಯಮಾನವು ಸಂಜೆಯ ಹೊತ್ತಿಗೆ ಸಂಭವಿಸುವುದರಿಂದ, ಸೂರ್ಯಾಸ್ತದ ನಂತರ ಚಂದ್ರೋದಯದ ಸಮಯದಲ್ಲಿಯೇ ಈ ಬಣ್ಣದ ಚಂದ್ರನನ್ನು ಸ್ಪಷ್ಟವಾಗಿ ನೋಡಬಹುದು. ಆದರೆ, ಈ ಬಣ್ಣದ ಚಂದ್ರ ಎಲ್ಲರಿಗೂ ಒಂದೇ ರೀತಿ ಕಾಣಿಸುವುದಿಲ್ಲ. ನಿಮ್ಮ ಪ್ರದೇಶದ ವಾತಾವರಣದಲ್ಲಿರುವ ಧೂಳು, ತೇವಾಂಶ ಮತ್ತು ಮಾಲಿನ್ಯದ ಪ್ರಮಾಣವನ್ನು ಅವಲಂಬಿಸಿ ಬಣ್ಣದ ತೀವ್ರತೆ ಬದಲಾಗಬಹುದು. ಚಂದ್ರನು ಆಕಾಶದಲ್ಲಿ ಮೇಲಕ್ಕೆ ಏರುತ್ತಿದ್ದಂತೆ, ವಾತಾವರಣದ ಪದರವನ್ನು ಕಡಿಮೆ ಹಾದುಹೋಗುವುದರಿಂದ ಕ್ರಮೇಣ ತನ್ನ ಬಣ್ಣವನ್ನು ಕಳೆದುಕೊಂಡು ಎಂದಿನ ತಿಳಿ ಬಿಳಿ ಬಣ್ಣಕ್ಕೆ ಮರಳುತ್ತಾನೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಮಾನವನಿಗೆ 2 ಕಣ್ಣು ಹುಟ್ಟಿದ್ದು ಹೇಗೆ? 600 ಮಿಲಿಯನ್ ವರ್ಷಗಳ ಹಿಂದಿನ ರಹಸ್ಯ ಭೇದಿಸಿದ ಸಂಶೋಧಕರು!
Moon Recession: ದೂರ ಆಗುತ್ತಿರೋದ್ಯಾಕೆ ಪ್ರೀತಿಯ ಚಂದಮಾಮಾ? ದೂರವಾಗಿದೆಷ್ಟು ಚಂದ್ರ?