ಒಂದು ನಿಮಿಷ ಜಗತ್ತಿನ ಶೇ.99ರಷ್ಟು ಜನರಿಗೆ ಏಕಕಾಲದಲ್ಲಿ ಸೂರ್ಯನ ಬೆಳಕು ದರ್ಶನ, ಖಗೋಳ ವಿಸ್ಮಯ

Published : Jul 08, 2026, 06:04 PM IST
World Witnessed Sunlight Together

ಸಾರಾಂಶ

ಖಗೋಳದ ಹಲವು ವಿಸ್ಮಯಗಳು ಅಚ್ಚರಿ ನೀಡುವುದು ಮಾತ್ರವಲ್ಲ, ಕೆಲವು ಹಲವರ ಅನುಭವಕ್ಕೂ ಬರುತ್ತದೆ. ಇಂದು ವಿಶೇಷ ವಿದ್ಯಮಾನ ಒಂದು ನಡೆದಿದೆ. ಒಂದು ನಿಮಿಷಗಳ ಕಾಲ ವಿಶ್ವದ ಶೇಕಡಾ 99ರಷ್ಟು ಜನರಿಗೆ ಏಕಕಾಲದಲ್ಲಿ ಸೂರ್ಯನ ಬೆಳಕಿನ ದರ್ಶನ ವಾಗಿದೆ.

ಖಗೋಳದಲ್ಲಿ ಪ್ರತಿ ನಿಮಿಷವೂ ಹಲವು ವಿಸ್ಮಯಗಳು ಘಟಿಸುತ್ತದೆ. ಕೆಲವು ಸಾಮಾನ್ಯ ಘಟನೆಗಳಾಗಿದ್ದರೆ, ಮತ್ತೆ ಕೆಲವು ವಿಶೇಷವಾಗಿರುತ್ತದೆ. ಇಂದು ಖಗೋಳದಲ್ಲಿ ನಡೆದ ವಿಶೇಷ ವಿದ್ಯಮಾನವೊಂದು ನಡೆದಿದೆ. ಸೂರ್ಯ ದರ್ಶನ, ಸೂರ್ಯನ ಬೆಳಕಿನ ದರ್ಶನ ಎಲ್ಲಾ ದೇಶಗಳಲ್ಲಿ ಏಕಾಕಾಲಕ್ಕೆ ಆಗುವುದಿಲ್ಲ. ಇದೇ ಕಾರಣಕ್ಕೆ ಒಂದೆಡೆ ಬೆಳಕಾಗಿದ್ದರೆ, ಮತ್ತೊಂದೆಡೆ ರಾತ್ರಿ. ಆದರೆ ಇಂದು ಜಗತ್ತಿನ ಎಲ್ಲೆಡೆ ಅಂದರೆ ಶೇಕಡಾ 99ರಷ್ಟು ಜನರಿಗೆ ಸೂರ್ಯನ ಬೆಳಕು ಏಕಕಾಲದಲ್ಲಿ ದರ್ಶನವಾಗಿದೆ. ಕೇವಲ ಒಂದು ನಿಮಿಷಗಳ ಕಾಲ ಜಗತ್ತಿನ ಶೇಕಡಾ 99ರಷ್ಟು ಮಂದಿಗೆ ಏಕಕಾಲದಲ್ಲಿ ಬೆಳಕಿನ ದರ್ಶನವಾಗಿದೆ.

ಭಾರತದಲ್ಲಿ ಸಂಜೆ 4.45ಕ್ಕೆ ವಿದ್ಯಮಾನ ಗೋಚರ

ಇಂದು (ಜುಲೈ 08) 11.10ಕ್ಕೆ (GMT) ಈ ಘಟನೆ ನಡೆದಿದೆ. ಭಾರತೀಯ ಕಾಲಮಾನದ ಪ್ರಕಾರ 4.45ಕ್ಕೆ ಭಾರತದಲ್ಲೂ ಈ ಘಟನೆ ಗೋಚರಿಸಿದೆ. ದೇಶದ ಎಲ್ಲಾ ಭೂಭಾಗದ ಜನರು ಏಕಾಕಲದಲ್ಲಿ ಸೂರ್ಯನ ಬೆಳಕಿನ ದರ್ಶನ ಮಾಡಿದ್ದಾರೆ. ಕೇವಲ ಶೇಕಡಾ 1ರಷ್ಟು ಜನರು ಮಾತ್ರ ಕತ್ತಲಲ್ಲಿ ಉಳಿದಿದ್ದರು.

ಕತ್ತಲಾಗಿದ್ದರೂ ಬೆಳಕು

ವಿಶ್ವದ ಜನಸಂಖ್ಯೆಯ 820 ಕೋಟಿ ಮಂದಿ ಪೈಕಿ 690 ಕೋಟಿ ಜನರಿಗೆ ಏಕಾಕಲದಲ್ಲಿ ಸೂರ್ಯನ ಬೆಳಕಿನ ದರ್ಶನವಾಗಿದೆ. ಶೇಕಡಾ 7ರಷ್ಟು ಜನ ಅಂದರೆ 58.1 ಕೋಟಿ ಮಂದಿ ಸೂರ್ಯ ಮುಳುಗಿದ್ದರೂ ಸೂರ್ಯನ ಬೆಳಕಿನ ದರ್ಶನವಾಗಿದೆ. ಶೇಕಡಾ 6ರಷ್ಟು ಜನ ಆಕಾಶವೇ ಕತ್ತಲಾಗಿದ್ದರೂ ಆಗಸದ ಇಳಿ ಸಂಜೆ ವಾತಾವರಣದ ರೀತಿ ಬದಲಾಗಿತ್ತು. ಇನ್ನು 24.9 ಕೋಟಿ ಮಂದಿ ಕತ್ತಲಾಗುತ್ತಿದ್ದರೂ ಆಗಸ ಮಾತ್ರ ಬೆಳಕಿನಿಂದ ಕೂಡಿತ್ತು.

ಕತ್ತಲು ಬೆಳಕಿನ ಆಟ

ಭಾರತ ಸೇರಿದಂತೆ ಏಷ್ಯಾ ದೇಶಗಳು, ಉತ್ತರ ಅಮೆರಿಕ, .ಯೂರೋಪ್, ಆಫ್ರಿಕಾ ಸೇರಿದಂತೆ ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳು ಸೂರ್ಯನ ಬೆಳಕಿನ ಅನುಭವ ಪಡೆದಿದೆ. ಇನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಗ್ನೇಯ ಏಷ್ಯಾದ ಕೆಲವು ಭಾಗಗಳು ಹಾಗೂ ಅಂಟಾರ್ಕ್ಟಿಕಾ ಖಂಡಗಳು ಮತ್ತು ಪೆಸಿಫಿಕ್ ಮಹಾಸಾಗರ ಪ್ರದೇಶಗಳು ಕತ್ತಲಲ್ಲಿ ಮುಳುಗಿತ್ತು.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Diamond Rain Planet: ನಿಗೂಢ ಗ್ರಹ ಪತ್ತೆ ಹಚ್ಚಿದ ವಿಜ್ಞಾನಿಗಳು… ಇಲ್ಲಿ ನೀರಲ್ಲ… ವಜ್ರದ ಮಳೆಯಾಗುತ್ತೆ!
ಕಡಲತೀರಕ್ಕೆ ಬಂದು ಬಿದ್ದ ಕುತೂಹಲಕಾರಿ ಬೃಹತ್ ಗೋಳಗಳು, ವಿಷಕಾರಿ ರಾಸಾಯನಿಕಗಳ ಎಚ್ಚರಿಕೆ