ಸುನೀತಾ ವಿಲಿಯಮ್ಸ್‌ ಇಲ್ಲದೆ ಭೂಮಿಗೆ ವಾಪಾಸಾಗಲಿದೆ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆ, ಸೀಟ್ ಕಳಚಿದ ಗಗನಯಾತ್ರಿಗಳು!

Published : Sep 05, 2024, 03:31 PM IST
ಸುನೀತಾ ವಿಲಿಯಮ್ಸ್‌ ಇಲ್ಲದೆ ಭೂಮಿಗೆ ವಾಪಾಸಾಗಲಿದೆ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆ, ಸೀಟ್ ಕಳಚಿದ ಗಗನಯಾತ್ರಿಗಳು!

ಸಾರಾಂಶ

ನಾಸಾ ಗಗನಯಾತ್ರಿಗಳು ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಭೂಮಿಗೆ ಮರಳಲು ಸಿದ್ಧರಾಗಿದ್ದಾರೆ, ಕೆಲವು ಸರಕುಗಳನ್ನು ಹೊತ್ತು ತರುತ್ತಿದ್ದಾರೆ ಮತ್ತು ಸುರಕ್ಷಿತ ಮರಳುವಿಕೆಗಾಗಿ ತಪಾಸಣೆ ನಡೆಸುತ್ತಿದ್ದಾರೆ. ಈ ಹಾರಾಟವು ನಾಸಾದ ಕಮರ್ಷಿಯಲ್ ಕ್ರ್ಯೂ ಪ್ರೋಗ್ರಾಂಗೆ ನಿರ್ಣಾಯಕವಾಗಿದೆ.

ನವದೆಹಲಿ (ಸೆ.5): ನಾಸಾ ಗಗನಯಾತ್ರಿಗಳಾದ ಬಚ್‌ ವಿಲ್ಮೋರ್‌ ಹಾಗೂ ಸುನೀತಾ ವಿಲಿಯಮ್ಸ್‌ ಶುಕ್ರವಾರ ಭೂಮಿಗೆ ವಾಪಾಸಾಗಲಿರುವ ಬೋಯಿಂಗ್‌ ಸ್ಟಾರ್‌ಲೈನರ್‌ ಏರ್‌ಕ್ರಾಫ್ಟ್‌ನ ಸಿದ್ಧತೆಯಲ್ಲಿ ತೊಡಗಿದ್ದಾರೆ. ಯಾವುದೇ ಗಗನಯಾತ್ರಿಗಳಿಲ್ಲದೆ ಖಾಲಿಯಾಗಿ ಸ್ಟಾರ್‌ಲೈನರ್‌ ಭೂಮಿಗೆ ಮರಳಲಿದೆ.  ಖಾಲಿಯಾಗಿ ತೆರಳುವ ಬದಲು ಈ ನೌಕೆಯಲ್ಲಿ ಕೆಲವು ಕಾರ್ಗೋ ಗೂಡ್ಸ್‌ಗಳನ್ನು ಗಗನಯಾತ್ರಿಗಳು ಲೋಡ್‌ ಮಾಡಿದ್ದು,  ಕೊನೆ ಹಂತದ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಶುಕ್ರವಾರ  (ಭಾರತೀಯ ಕಾಲಮಾನ ಶನಿವಾರ)ಬಾಹ್ಯಾಕಾಶ ನಿಲ್ದಾಣವನ್ನು ಬೋಯಿಂಗ್‌ ಸ್ಟಾರ್‌ಲೈನರ್‌ ನೌಕೆ ಬೀಳ್ಕೊಡಲಿದೆ. ಇಡೀ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಆಯೋಜನೆ ಮಾಡಲಾಗಿದ್ದು, ವಿಲ್ಮೋರ್ ಮತ್ತು ವಿಲಿಯಮ್ಸ್ ಸರಕು ಸಂಗ್ರಹಣೆಗಾಗಿ ಹೆಚ್ಚಿನ ಜಾಗವನ್ನು ಮಾಡುವ ನಿಟ್ಟಿನಲ್ಲಿ ಸ್ಟಾರ್‌ಲೈನರ್‌ ನೌಕೆಯಲ್ಲಿದ್ದ ಗಗನಯಾತ್ರಿಗಳ ಸೀಟ್‌ಗಳನ್ನು ಕೂಡ ತೆಗೆದುಹಾಕಿದ್ದಾರೆ.
ಈ ತಾತ್ಕಾಲಿಕ ಮಾರ್ಪಾಡಿನಲ್ಲಿ ಭೂಮಿಗೆ ಮರಳಲು ಉದ್ದೇಶಿಸಲಾದ ವಸ್ತುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ಯಾಕಿಂಗ್ ಮಾಡಲು ಅನುಮತಿಸುತ್ತದೆ. ಗಗನಯಾತ್ರಿಗಳು ನಂತರ ಸಂಪೂರ್ಣ ಛಾಯಾಚಿತ್ರ ಸಮೀಕ್ಷೆಯನ್ನು ನಡೆಸಿದ್ದಾರೆ.  ಬಾಹ್ಯಾಕಾಶ ನೌಕೆಯ ಕ್ಯಾಬಿನ್‌ನ ತಪಾಸಣೆ ನಡೆಸಿದರು, ಮುಂಬರುವ ನಿರ್ಗಮನಕ್ಕೆ ಎಲ್ಲಾ ವ್ಯವಸ್ಥೆಗಳು ಸಿದ್ಧವಾಗಿವೆ ಎನ್ನುವುದನ್ನು ಖಚಿತಪಡಿಸಿಕೊಂಡಿದ್ದಾರೆ.

ಬಾಹ್ಯಾಕಾಶ ನೌಕೆಯ ಸಿದ್ಧತೆಗಳ ಬಳಿಕ ಇಬ್ಬರೂ ದೃಷ್ಟಿ ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಕಣ್ಣಿನ ಚಾರ್ಟ್‌ನಿಂದ ಅಕ್ಷರಗಳನ್ನು ಓದಿದರು. ಈ ಮೌಲ್ಯಮಾಪನವು ಗಗನಯಾತ್ರಿಗಳ ದೃಷ್ಟಿ ತೀಕ್ಷ್ಣತೆಯನ್ನು ಮೌಲ್ಯಮಾಪನ ಮಾಡಲು ಭೂಮಿಯಲ್ಲಿನ ಕಣ್ಣಿನ ವೈದ್ಯರಿಗೆ ಅನುವು ಮಾಡಿಕೊಡುತ್ತದೆ, ಇದು ದೀರ್ಘಾವಧಿಯ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಪ್ರಮುಖ ಆರೋಗ್ಯ ತಪಾಸಣೆ ಆಗಿದೆ.

ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್‌ ಬಳಿ ಇರೋದು ಕೇವಲ 96 ಗಂಟೆಗಳ ಆಮ್ಲಜನಕ ಮಾತ್ರ!

ಬಾಹ್ಯಾಕಾಶ ನಿಲ್ದಾಣದ ಹಾರ್ಮನಿ ಮಾಡ್ಯುಲ್‌ನಲ್ಲಿ ಡಾಕಿಂಗ್‌ ಆಗಿರುವ ಬೋಯಿಂಗ್‌ ಸ್ಟಾರ್‌ಲೈನರ್‌, ಭಾರತೀಯ ಕಾಲಮಾನ ಶನಿವಾರ ಮುಂಜಾನ 3.34ಕ್ಕೆ ಅನ್‌ಡಾಕ್‌ ಆಗಲಿದೆ. ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ಬಳಿಕ ಸ್ಟಾರ್‌ಲೈನರ್‌ ಆರು ಗಂಟೆಗಳ ಕಾಲ ಪ್ರಯಾಣ ಮಾಡಿ ನ್ಯೂ ಮೆಕ್ಸಿಕೋ ಬಳಿ ಲ್ಯಾಂಡ್‌ ಆಗಬೇಕಿದೆ.

8 ದಿನಕ್ಕಾಗಿ ಬಾಹ್ಯಾಕಾಶಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್‌ ಇನ್ನು ಬರೋದು 2025ರ ಫೆಬ್ರವರಿಯಲ್ಲಿ!

ಈ ಸಿಬ್ಬಂದಿರಹಿತ ರಿಟರ್ನ್ ಫ್ಲೈಟ್ ನಾಸಾದ ಕಮರ್ಷಿಯಲ್ ಕ್ರ್ಯೂ ಪ್ರೋಗ್ರಾಂನಲ್ಲಿ ನಿರ್ಣಾಯಕ ಹಂತವನ್ನು ಗುರುತಿಸುತ್ತದೆ, ಏಕೆಂದರೆ ಇದು ಮರುಪ್ರವೇಶ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಸ್ಟಾರ್‌ಲೈನರ್‌ನ ಕಾರ್ಯಕ್ಷಮತೆಯ ಮೌಲ್ಯಯುತ ಡೇಟಾವನ್ನು ಒದಗಿಸುತ್ತದೆ. ಸ್ಟಾರ್‌ಲೈನರ್‌ ಯಶಸ್ವಿಯಾಗಿ ಭೂಮಿಗೆ ವಾಪಾಸದಲ್ಲಿ, ಜೂನ್‌ನಲ್ಲಿ ಬಾಹ್ಯಾಕಾಶಕ್ಕೆ ಉಡಾವಣೆಯಾದ ನಂತರ ತಾಂತ್ರಿಕ ದೋಷಗಳಿಗೆ ಒಳಗಾದ ಬೋಯಿಂಗ್ ಬಾಹ್ಯಾಕಾಶ ನೌಕೆಯ ಸಂಪೂರ್ಣ ತಪಾಸಣೆಗೆ ದಾರಿ ಮಾಡಿಕೊಡುತ್ತದೆ.
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ