ವಿಶ್ವದಲ್ಲಿರುವ ಪಕ್ಷಿ ಸಂಕುಲಗಳಲ್ಲಿ 78 ಪಕ್ಷಿಗಳ ವಿಧವು ಭಾರತದಲ್ಲಿ ಬಿಟ್ಟು ಬೇರೆಲ್ಲೂ ಕಾಣಸಿಗುವುದಿಲ್ಲ ಎಂದು ವರದಿಯೊಂದು ಹೇಳಿದೆ. ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆ ಹೊರತಂದ ವರದಿಯಲ್ಲಿ ವಿಶ್ವದಲ್ಲಿ ಒಟ್ಟು 10,906 ತಳಿಗಳ ಪಕ್ಷಿಗಳು ವಾಸಿಸುತ್ತಿದ್ದು, ಈ ಪೈಕಿ ಭಾರತದಲ್ಲಿ ಒಟ್ಟು 1,353 ವಿಧದ ಪಕ್ಷಿಗಳು ಆವಾಸಗೊಂಡಿದೆ.
ಕೋಲ್ಕತಾ: ವಿಶ್ವದಲ್ಲಿರುವ ಪಕ್ಷಿ ಸಂಕುಲಗಳಲ್ಲಿ 78 ಪಕ್ಷಿಗಳ ವಿಧವು ಭಾರತದಲ್ಲಿ ಬಿಟ್ಟು ಬೇರೆಲ್ಲೂ ಕಾಣಸಿಗುವುದಿಲ್ಲ ಎಂದು ವರದಿಯೊಂದು ಹೇಳಿದೆ. ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆ ಹೊರತಂದ ವರದಿಯಲ್ಲಿ ವಿಶ್ವದಲ್ಲಿ ಒಟ್ಟು 10,906 ತಳಿಗಳ ಪಕ್ಷಿಗಳು ವಾಸಿಸುತ್ತಿದ್ದು, ಈ ಪೈಕಿ ಭಾರತದಲ್ಲಿ ಒಟ್ಟು 1,353 ವಿಧದ ಪಕ್ಷಿಗಳು ಆವಾಸಗೊಂಡಿದೆ. ಇದು ವಿಶ್ವದಲ್ಲಿರುವ ಹಕ್ಕಿಗಳ ಪೈಕಿ ಶೇ.12.4ರಷ್ಟಿದೆ. ಇದರಲ್ಲಿ 78 ತಳಿಯ ಪಕ್ಷಿಗಳು ಭಾರತದಲ್ಲಿ ಹೊರತುಪಡಿಸಿದರೆ ಬೇರೆಲ್ಲೂ ಕಾಣ ಸಿಗುವುದಿಲ್ಲ ಎಂದು ಹೇಳಿದೆ. ಈ 78 ತಳಿಯ ಪಕ್ಷಿಗಳಲ್ಲಿ 28 ಪಶ್ಚಿಮಘಟ್ಟ, 25 ಅಂಡಮಾನ್ ನಿಕೋಬಾರ್ ದ್ವೀಪ, 4 ಪೂರ್ವ ಹಿಮಾಲಯ, ದಕ್ಷಿಣ ದಕ್ಕನ್ ಪ್ರಸ್ತಭೂಮಿ ಹಾಗೂ ಮಧ್ಯಭಾರತದ ಅರಣ್ಯದಲ್ಲಿ ತಲಾ 1 ಪಕ್ಷಿಗಳು ಕಾಣಸಿಗುತ್ತದೆ.ಆತಂಕ ರೇಖೆಯಲ್ಲಿರುವ 25 ತಳಿ ಪಕ್ಷಿಗಳ ಪೈಕಿ 3 ತೀವ್ರ ಅಳಿವಿನಂಚಿನಲ್ಲಿದ್ದು, 5 ಅಳಿವಿನಂಚಿನಲ್ಲಿದೆ ಹಾಗೂ 17 ಪಕ್ಷಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ವರದಿ ಪ್ರಕಾರ ಮಣಿಪುರ ಬುಷ್ ಕ್ವೈಲ್ ಹಕ್ಕಿಯು 1907ರ ಬಳಿಕ ಕಂಡಿಲ್ಲ, ಹಿಮಾಲಯನ್ ಕ್ವೈಲ್ ಪಕ್ಷಿ 1876 ಬಳಿಕ 2009ರಲ್ಲಿ ಕೊನೆಯ ಬಾರಿ ಪ್ರತ್ಯಕ್ಷವಾಗಿತ್ತು.