ಏರ್ ಇಂಡಿಯಾದಿಂದ 5,000 ಕೋಟಿಯ ಖರೀದಿ: ರತನ್ ಟಾಟಾ ವೈಮಾನಿಕ ಕನಸಿನತ್ತ ಹೆಜ್ಜೆಯೇ?

Published : Oct 12, 2024, 11:31 AM IST
ಏರ್ ಇಂಡಿಯಾದಿಂದ 5,000 ಕೋಟಿಯ ಖರೀದಿ: ರತನ್ ಟಾಟಾ ವೈಮಾನಿಕ ಕನಸಿನತ್ತ ಹೆಜ್ಜೆಯೇ?

ಸಾರಾಂಶ

ವಿಮಾನಯಾನ ಸಂಸ್ಥೆಗಳು ತಮ್ಮ ಸ್ಪರ್ಧಾತ್ಮಕ ಮೇಲುಗೈ ಉಳಿಸಿಕೊಳ್ಳಲು ಮತ್ತು ಎದುರಾಳಿ ಸಂಸ್ಥೆಗಳಿಂದ ತಮ್ಮ ವಿಮಾನ ಬಳಗದ ಯೋಜನೆಯನ್ನು ರಹಸ್ಯವಾಗಿಡಲು ಈ ತಂತ್ರವನ್ನು ಅನುಸರಿಸುತ್ತವೆ.

ಗಿರೀಶ್ ಲಿಂಗಣ್ಣ, (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಅಕ್ಟೋಬರ್ 9, ಬುಧವಾರದಂದು ಏರ್‌ಬಸ್‌ ಸಂಸ್ಥೆ ತನ್ನ ಓರ್ವ ಗ್ರಾಹಕ ಸಂಸ್ಥೆ 5,000 ಕೋಟಿ ರೂಪಾಯಿಗೂ (6 ಬಿಲಿಯನ್ ಡಾಲರ್) ಹೆಚ್ಚು ಮೌಲ್ಯದ ಬಹುದೊಡ್ಡ ವಿಮಾನ ಖರೀದಿ ಆದೇಶ ಸಲ್ಲಿಸಿದೆ ಎಂದು ಬಹಿರಂಗಪಡಿಸಿತು. ಬಲ್ಲ ಮೂಲಗಳಿಂದ ಬಂದಿರುವ ಇತ್ತೀಚಿನ ವರದಿಗಳ ಪ್ರಕಾರ, ಇಷ್ಟು ದೊಡ್ಡ ಪ್ರಮಾಣದ ವಿಮಾನಗಳ ಖರೀದಿಗೆ ಮುಂದಾಗಿರುವುದು ಭಾರತದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ. ವೈಮಾನಿಕ ಉದ್ಯಮದಲ್ಲಿ ಇಂತಹ ಖರೀದಿಯ ವಿಚಾರವನ್ನು ರಹಸ್ಯವಾಗಿಡುವುದು ಅಸಹಜ ಬೆಳವಣಿಗೆ ಏನೂ ಅಲ್ಲ. 

ವಿಮಾನಯಾನ ಸಂಸ್ಥೆಗಳು ತಮ್ಮ ಸ್ಪರ್ಧಾತ್ಮಕ ಮೇಲುಗೈ ಉಳಿಸಿಕೊಳ್ಳಲು ಮತ್ತು ಎದುರಾಳಿ ಸಂಸ್ಥೆಗಳಿಂದ ತಮ್ಮ ವಿಮಾನ ಬಳಗದ ಯೋಜನೆಯನ್ನು ರಹಸ್ಯವಾಗಿಡಲು ಈ ತಂತ್ರವನ್ನು ಅನುಸರಿಸುತ್ತವೆ. ಅಕ್ಟೋಬರ್ 10ರಂದು, ಟಾಟಾ ಸಮೂಹದ ಮಾಜಿ ಮುಖ್ಯಸ್ಥರಾದ ರತನ್ ಟಾಟಾ ಅವರು ಇಹಲೋಕ ತ್ಯಜಿಸಿದ್ದರಿಂದ ಟಾಟಾ ಸಮೂಹ ದುಃಖತಪ್ತವಾಗಿತ್ತು. ಇದೇ ಟಾಟಾ ಸಮೂಹ ಈಗ ಏರ್ ಇಂಡಿಯಾ ಸಂಸ್ಥೆಯ ಮಾಲೀಕತ್ವ ಹೊಂದಿದೆ. ಭಾರತದ ವಾಣಿಜ್ಯಿಕ ವೈಮಾನಿಕ ಉದ್ಯಮವನ್ನು ರೂಪಿಸುವಲ್ಲಿ ರತನ್ ಟಾಟಾ ಅವರದೂ ಪ್ರಧಾನ ಹೆಸರಾಗಿದ್ದು, ಅವರ ಛಾಪು ವೈಮಾನಿಕ ಉದ್ಯಮದಲ್ಲಿ ಸದಾ ಉಳಿದಿರಲಿದೆ.

ತುಕ್ಕು ನಿರೋಧಕ ಉಕ್ಕು: ಜನಜೀವನದಲ್ಲಿ ಸ್ಟೇನ್‌ಲೆಸ್ ಸ್ಟೀಲಿನ ಮಹತ್ವ

ಪ್ರಮುಖ ಬದಲಾವಣೆ ಮತ್ತು ಸಾಂಸ್ಥಿಕ ಹೊಸತನದ ಅವಧಿ: ಏರ್ ಇಂಡಿಯಾ ಸಂಸ್ಥೆ 75 ಏರ್‌ಬಸ್‌ ಎ320 ವಿಮಾನಗಳು, 10 ದೀರ್ಘ ವ್ಯಾಪ್ತಿಯ ಏರ್‌ಬಸ್‌ ಎ350 ಜೆಟ್‌ಗಳನ್ನು ಖರೀದಿಸಿರುವುದು ಅದು ತನ್ನ ಸಣ್ಣ, ಮಧ್ಯಮ ಮತ್ತು ದೀರ್ಘ ಮಾರ್ಗವನ್ನು ಇನ್ನಷ್ಟು ಹೆಚ್ಚಿಸಲು ಸಿದ್ಧತೆ ನಡೆಸಿರುವುದಕ್ಕೆ ಸಾಕ್ಷಿಯಾಗಿದೆ. ಹಲವಾರು ಮೂಲಗಳು ಈ ರಹಸ್ಯಮಯ ಖರೀದಿ ಆದೇಶ ಏರ್ ಇಂಡಿಯಾ ಸಂಸ್ಥೆಯದೇ ಆಗಿದೆ ಎಂದು ಖಾತ್ರಿಪಡಿಸಿವೆ. ಏರ್ ಇಂಡಿಯಾ ತನ್ನ ಸಂಪೂರ್ಣ ವಿಮಾನ ಬಳಗವನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಏರ್‌ಬಸ್‌ ಮತ್ತು ಅಮೆರಿಕನ್ ವಿಮಾನ ಉತ್ಪಾದಕ ಬೋಯಿಂಗ್ ಜೊತೆ ಬಹುತೇಕ 500 ವಿಮಾನಗಳ ಖರೀದಿಗೆ ಒಪ್ಪಂದ ನಡೆಸಿತ್ತು. ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಏರ್ ಇಂಡಿಯಾ ಈಗ ಇನ್ನೊಂದು ಖರೀದಿಗೆ ಆದೇಶ ಸಲ್ಲಿಸಿದೆ.

ಕಳೆದ ವರ್ಷ ಏರ್‌ಬಸ್‌ ಮತ್ತು ಬೋಯಿಂಗ್ ಸಂಸ್ಥೆಗಳಿಂದ ಖರೀದಿ ನಡೆಸಿದ ಬಳಿಕ, ಏರ್ ಇಂಡಿಯಾ ತನ್ನ ಖರೀದಿ ಆಯ್ಕೆಯನ್ನು ಮುಕ್ತವಾಗಿಟ್ಟಿತ್ತು. ಇವೆಲ್ಲ ಅವಶ್ಯಕತೆಗಳನ್ನೂ ಏರ್ ಇಂಡಿಯಾ ಇತ್ತೀಚಿನ ರಹಸ್ಯ ಖರೀದಿ ಆದೇಶದ ಮೂಲಕ ಪೂರ್ಣಗೊಳಿಸುವಂತೆ ಕಾಣುತ್ತಿದೆ. ಅಕ್ಟೋಬರ್ 10ರಂದು ತನ್ನ ತಿಂಗಳ ವರದಿಯಲ್ಲಿ ಏರ್‌ಬಸ್‌ ಈ ಖರೀದಿ ಆದೇಶವನ್ನು ವಿವರಿಸಿದೆ ಎಂದು ಸಿಂಪಲ್ ಫ್ಲೈಯಿಂಗ್ ಮಾಧ್ಯಮ ಸಂಸ್ಥೆ ಹೇಳಿದೆ. ಟಾಟಾ ಕುಟುಂಬವನ್ನು ಸುದೀರ್ಘ ಅವಧಿಗೆ ಮುನ್ನಡೆಸಿದ್ದ, 86 ವರ್ಷದ ರತನ್ ಟಾಟಾ ಅವರ ನಿಧನದ ಬಳಿಕ, ಏರ್ ಇಂಡಿಯಾದ ಮಾಲಿಕ ಸಂಸ್ಥೆಯಾಗಿರುವ ಟಾಟಾ ಸಮೂಹಕ್ಕೆ ಭವಿಷ್ಯದ ಮಾರ್ಗದರ್ಶನಕ್ಕೆ ಹೊಸ ನಾಯಕತ್ವ ಲಭಿಸಬೇಕಿದೆ.

ಏರ್ ಇಂಡಿಯಾವನ್ನು ಬದಲಾಯಿಸಲಿವೆ ಮೂರು ಪ್ರಮುಖ ಖರೀದಿಗಳು
2023ರಲ್ಲಿ, ಏರ್ ಇಂಡಿಯಾ ತಾನು ಅಮೆರಿಕಾದ ಬೋಯಿಂಗ್ ಸಂಸ್ಥೆಯಿಂದ 220 ವಿಮಾನಗಳು, ಮತ್ತು ಯುರೋಪಿನ ಅದರ ಪ್ರತಿಸ್ಪರ್ಧಿ ಏರ್‌ಬಸ್‌ ಸಂಸ್ಥೆಯಿಂದ 250 ವಿಮಾನಗಳನ್ನು ಖರೀದಿಸುವ ಯೋಜನೆ ಹೊಂದಿರುವುದಾಗಿ ಹೇಳಿತ್ತು. ಈ ಹೊಸ ವಿಮಾನಗಳು ಏರ್ ಇಂಡಿಯಾದ ವಿಮಾನ ಬಳಗದಲ್ಲಿ ಭಾರೀ ಸುಧಾರಣೆ ತರಲಿವೆ. ಏರ್ ಇಂಡಿಯಾ ಖರೀದಿಸುವ ವಿಮಾನಗಳಲ್ಲಿ ಈ ಕೆಳಗಿನ ಮಾದರಿಗಳು ಒಳಗೊಂಡಿವೆ:

1. ಬೋಯಿಂಗ್ 787 ಡ್ರೀಮ್‌ಲೈನರ್
2. ಬೋಯಿಂಗ್ 777ಎಕ್ಸ್
3. ಬೋಯಿಂಗ್ 737 ಮ್ಯಾಕ್ಸ್
4. ಏರ್‌ಬಸ್‌ ಎ320 ನಿಯೋ
5. ಏರ್‌ಬಸ್‌ ಎ350-900
6. ಏರ್‌ಬಸ್‌ ಎ350-1000

ಇವೆರಡೂ ಖರೀದಿ ಒಪ್ಪಂದಗಳ ಪ್ರಕಾರ, ಏರ್ ಇಂಡಿಯಾ ಇನ್ನೂ ಹೆಚ್ಚಿನ ವಿಮಾನಗಳ ಖರೀದಿ ನಡೆಸಬಹುದು. ಬೋಯಿಂಗ್ ಪ್ರಕಾರ, ಈ ಒಪ್ಪಂದದಡಿ ಏರ್ ಇಂಡಿಯಾ ಇನ್ನೂ 70 ಹೆಚ್ಚುವರಿ ವಿಮಾನಗಳನ್ನು ಖರೀದಿಸಬಹುದಾಗಿತ್ತು. ಅಕ್ಟೋಬರ್ 10ರ ಖರೀದಿ ಆದೇಶದ ಅನುಸಾರ, ಏರ್ ಇಂಡಿಯಾ ಏರ್‌ಬಸ್‌ ಸಂಸ್ಥೆಯೊಡನೆ ಇದ್ದ ಆಯ್ಕೆಗಳಲ್ಲಿ 85 ವಿಮಾನಗಳನ್ನು ಖರೀದಿಸಲು ನಿರ್ಧರಿಸಿದೆ. ಇದರಲ್ಲಿ ಈ ಕೆಳಕಂಡ ವಿಮಾನಗಳ ಮಾದರಿಗಳು ಸೇರಿವೆ:

* ಏರ್‌ಬಸ್‌ ಎ320ನಿಯೋ: 75 ವಿಮಾನಗಳು
* ಏರ್‌ಬಸ್‌ ಎ350: 10 ವಿಮಾನಗಳು

ಏರ್ ಇಂಡಿಯಾ ಬಳಿ ಈಗಾಗಲೇ ಇರುವ ವಿಮಾನಗಳು ಹಳೆಯವಾಗಿದ್ದು, ಹೊಸದಾದ ವಿಮಾನಗಳ ಖರೀದಿ ಏರ್ ಇಂಡಿಯಾಗೆ ವಿಮಾನಗಳ ನಿರ್ವಹಣಾ ವೆಚ್ಚ ಕಡಿಮೆಗೊಳಿಸಿ, ಹೊಸದಾದ, ಹೆಚ್ಚು ಇಂಧನ ದಕ್ಷತೆ ಹೊಂದಿರುವ ಕಡಿಮೆ ಅಗಲ ಮತ್ತು ಹೆಚ್ಚು ಅಗಲದ (ನ್ಯಾರೋ ಬಾಡಿ ಮತ್ತು ವೈಡ್ ಬಾಡಿ) ವಿಮಾನಗಳನ್ನು ಬಳಸಲು ಅನುಕೂಲ ಕಲ್ಪಿಸುತ್ತದೆ. ಭಾರತದಲ್ಲಿ ಏರ್ ಇಂಡಿಯಾಗೆ ಪ್ರಮುಖ ಸ್ಪರ್ಧೆಯನ್ನು ಇಂಡಿಗೋ ವಿಮಾನಯಾನ ಸಂಸ್ಥೆ ಒಡ್ಡುತ್ತಿದೆ. ತನ್ನ ಕಡಿಮೆ ಬೆಲೆಯ ವಿಮಾನಯಾನ ಸೇವೆಯ ಕಾರಣದಿಂದಾಗಿ ಇಂಡಿಗೋ ಭಾರತದ ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಹೊಂದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ಸಿದ್ಧತೆ ನಡೆಸುತ್ತಿದೆ.

ಭಾರತದ ರಾಷ್ಟ್ರೀಯ ಬಾಹ್ಯಾಕಾಶ ದಿನ: ಚಂದ್ರನಂಗಳ ದಾಟಿ, ಜನಜೀವನದಲ್ಲಿ ಬದಲಾವಣೆ ತರುವ ಸಾಧನೆ

ಏರ್ ಇಂಡಿಯಾ ಹೆಚ್ಚು ಇಂಧನ ದಕ್ಷತೆ ಹೊಂದಿರುವ, ನ್ಯಾರೋ ಬಾಡಿ ವಿಮಾನಗಳನ್ನು ಖರೀದಿಸಲು ಆದೇಶ ಸಲ್ಲಿಸಿರುವುದರಿಂದ, ಅದು ದೇಶೀಯ ಮಾರುಕಟ್ಟೆಯಲ್ಲಿ ಇಂಡಿಗೋ ಜೊತೆ ಸ್ಪರ್ಧಿಸಲು ಸಿದ್ಧತೆ ನಡೆಸಿದೆ ಎನ್ನುವುದನ್ನು ತೋರಿಸುತ್ತದೆ. ಏರ್ ಇಂಡಿಯಾ ತನ್ನ ಕಾರ್ಯಾಚರಣಾ ವೆಚ್ಚವನ್ನು ತಗ್ಗಿಸಿ, ವಿಮಾನಯಾನ ದರವನ್ನೂ ಕಡಿತಗೊಳಿಸುವ ಗುರಿ ಹೊಂದಿದೆ. ಇನ್ನು ಇಂಡಿಗೋ ಸಂಸ್ಥೆ ಇತ್ತೀಚೆಗೆ ಏರ್‌ಬಸ್‌ ಎ350 ವಿಮಾನಗಳನ್ನು ಖರೀದಿಸಲು ಆದೇಶ ಸಲ್ಲಿಸಿದ್ದು, ದೀರ್ಘ ಮಾರ್ಗಗಳಲ್ಲಿ ಸಂಚರಿಸಲು ಸಿದ್ಧತೆ ನಡೆಸುತ್ತಿದೆ. ಏರ್ ಇಂಡಿಯಾ ಹೆಚ್ಚು ಇಂಧನ ದಕ್ಷವಾದ, ವೈಡ್ ಬಾಡಿ ವಿಮಾನಗಳನ್ನು ಖರೀದಿಸಲು ನಿರ್ಧರಿಸಿರುವುದು ಇಂಡಿಗೋಗೆ ಕಾರ್ಯತಂತ್ರದ ಪ್ರತಿಕ್ರಿಯೆ ಎಂಬಂತೆ ತೋರುತ್ತಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ