
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಹಾಗೂ ಸಿದ್ಧರಾಮಯ್ಯ ಅಪ್ಪಟ ಅಭಿಮಾನಿಯಾಗಿದ್ದ ರಾಮಕೃಷ್ಣ (24) ಡೆತ್ ನೋಟ್ ಬರೆದು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಡಿದೊಡ್ಡಿ ಗ್ರಾಮದಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ನಟ ಯಶ್ ಟ್ಟೀಟ್ ಮಾಡಿದ್ದಾರೆ.
ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ: ಅಭಿಮಾನಿಯ ಕೊನೆ ಆಸೆ ಈಡೇರಿಸಿದ ಸಿದ್ದರಾಮಯ್ಯ
ಯಶ್ ಟ್ಟೀಟ್:
'ಅಭಿಮಾನಿಗಳ ಅಭಿಮಾನವೇ ನಮ್ಮ ಬದುಕು, ಜೀವನ ಹೆಮ್ಮೆ. ಆದರೆ ಮಂಡ್ಯದ ರಾಮಕೃಷ್ಣನ ಅಭಿಮಾನಕ್ಕೆ ಹೆಮ್ಮ ಪಡಲು ಸಾಧ್ಯವೇ? ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ. ಕೋಡಿದೊಡ್ಡಿ ರಾಮಕೃಷ್ಣನ ಆತ್ಮಕ್ಕೆ ಚಿರಶಾಂತಿ ಸಗಲಿ. ಓಂ ಶಾಂತಿ' ಎಂದು ಯಶ್ ಟ್ಟೀಟ್ ಮಾಡಿದ್ದಾರೆ.
ಡೆತ್ ನೋಟ್ ಬರೆದಿರುವ ರಾಮಕೃಷ್ಣ ನಟ ಯಶ್ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ತಮ್ಮ ಅಂತ್ಯ ಸಂಸ್ಕಾರಕ್ಕೆ ಆಗಮಿಸಬೇಕು ಎಂದು ಬರೆದಿದ್ದಾನೆ. ವಿಷಯ ಗೊತ್ತಾಗುತ್ತಿದ್ದಂತೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಾಗಿ ಸಿದ್ಧರಾಮಯ್ಯ ನಿರ್ಧರಿಸಿದ್ದಾರೆ. ಆದರೆ ಅಭಿಮಾನಿಯ ಹುಚ್ಚಾಟಕ್ಕೆ ಯಶ್ ಬೇಸರ ವ್ಯಕ್ತಪಡಿಸಿ, ಈ ಸಾವು ಮಾದರಿಯಾಗಬಾರದು ಎಂದು ಹೇಳಿದ್ದಾರೆ.
ಅಂಬರೀಷ್ ಕೊನೆಯುಸಿರೆಳೆದ ವರ್ಷವೂ ಯಶ್ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲವೆಂದು ನಿರ್ಧರಿಸಿದ್ದರು. ಮನೆ ಸಮೀಪ ಅಭಿಮಾನಿಗಳು ಬಾರದಂತೆ ಮನವಿ ಮಾಡಿಕೊಂಡಿದ್ದರು. ಇದರಿಂದ ನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೂ ಯಶ್ ವಿಪರೀತ ನೊಂದಿದ್ದರು. ಮೃತರ ಕುಟುಂಬಕ್ಕೆ ಸಹಾಯ ದನವನ್ನೂ ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.