ಹೀಗ್ಯಾಕೆ ಬರೆದುಕೊಂಡ್ರು ವಿಜಯ ರಾಘವೇಂದ್ರ? ಒಂದು ಮಾತು, ಹತ್ತಾರು ಅರ್ಥ- ಫ್ಯಾನ್ಸ್​ ಕಣ್ಣೀರು...

Published : May 18, 2025, 05:35 PM ISTUpdated : May 19, 2025, 10:36 AM IST
ಹೀಗ್ಯಾಕೆ ಬರೆದುಕೊಂಡ್ರು ವಿಜಯ ರಾಘವೇಂದ್ರ? ಒಂದು ಮಾತು, ಹತ್ತಾರು ಅರ್ಥ- ಫ್ಯಾನ್ಸ್​ ಕಣ್ಣೀರು...

ಸಾರಾಂಶ

ಪತ್ನಿ ಸ್ಪಂದನಾ ಅಗಲಿಕೆಯ ನಂತರ, ವಿಜಯ್ ರಾಘವೇಂದ್ರ ಒಂಟಿಯಾಗಿ ಮಗ ಶೌರ್ಯನನ್ನು ಪೋಷಿಸುತ್ತಿದ್ದಾರೆ. ಮಗನ ಓದಿಗೆ ಆದ್ಯತೆ ನೀಡುತ್ತಿರುವ ವಿಜಯ್, ಅವನಿಗೆ ಆಸರೆಯಾಗಲು ಪ್ರಯತ್ನಿಸುತ್ತಿದ್ದಾರೆ. ಎರಡನೇ ಮದುವೆಯ ಗಾಳಿಸುದ್ದಿಗಳ ನಡುವೆ, "ಭರವಸೆಯೇ ಶಾಶ್ವತ ಜ್ಯೋತಿ" ಎಂಬ ವಿಜಯ್‌ರ ಬರಹವು ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಅವರು ವಿಜಯ್‌ಗೆ ಧೈರ್ಯ ತುಂಬಿ, ಮುಂದಿನ ಹೆಜ್ಜೆ ಇಡಲು ಪ್ರೇರೇಪಿಸುತ್ತಿದ್ದಾರೆ.

ನಟ ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರನ್ನು ಅಗಲಿ, ಒಂದೂವರೆ ವರ್ಷಗಳಾಗಿವೆ. ಸದ್ಯ ವಿಜಯ ರಾಘವೇಂದ್ರ ಅವರು ಒಂಟಿಯಾಗಿ ಮಗನನ್ನು ಸಾಕುತ್ತಿದ್ದಾರೆ. ಸದ್ಯ ಮಗನ ಪಾಲಿಗೆ ಅಪ್ಪ- ಅಮ್ಮ ಎಲ್ಲವೂ ಅವರೇ. ಅಷ್ಟಕ್ಕೂ ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ, ಗಣ್ಯರು, ಸೆಲೆಬ್ರಿಟಿಗಳೇ ಆಗಿದ್ದರೂ ಮಕ್ಕಳ ಪಾಲಿಗೆ ಅವರು ಕೇವಲ ಅಪ್ಪ- ಅಮ್ಮ ಅಷ್ಟೇ.  ಮನೆಯಲ್ಲಿ ಕಾಲಿಗೊಬ್ಬ, ಕೈಗೊಬ್ಬ ಆಳು-ಕಾಳುಗಳು ಇದ್ದರೂ ಬಹುತೇಕ ಗಣ್ಯರು ಕೂಡ ತಮ್ಮ ಮಕ್ಕಳಿಗಾಗಿ ವೈಕ್ತಿಗತ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಆ ಕ್ಷಣದಲ್ಲಿ ಅಪ್ಪ-ಅಮ್ಮನ ಪಾತ್ರ ನಿಭಾಯಿಸುತ್ತಾರೆ. ಅದೇ ರೀತಿ ವಿಜಯ ರಾಘವೇಂದ್ರ ಅವರು ತಮ್ಮ ಸಿನಿಮಾ ಲೈಫ್​ ನಡುವೆಯೇ ಮಗನ ಓದಿನ ಬಗ್ಗೆ ಸಾಕಷ್ಟು ಸಮಯವನ್ನು ಮೀಸಲು ಇರಿಸುತ್ತಿದ್ದಾರೆ. ಈಚೆಗಷ್ಟೇ,  ವಿಜಯ್ ರಾಘವೇಂದ್ರ ಮಗನ ಪರೀಕ್ಷೆ ಮುಗಿದ ನಂತರವೇ ಆತನಿಗೆ ಬೇಸರವನ್ನು ಮರೆಸಲೆಂದು ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಅಮ್ಮನ ಸ್ಥಾನವನ್ನು ತುಂಬುವುದಕ್ಕೆ ಪ್ರಯತ್ನ ಮಾಡಿದ್ದರು.  

ಆದರೆ ಒಂಟಿತನ ಮತ್ತು ಅಗಲಿದ ಪತಿ-ಪತ್ನಿಯ ನೆನಪು ಎಂಥವರನ್ನೂ ನಲುಗಿಸುವುದು ಸಹಜವೇ. ಅದರಲ್ಲಿಯೂ ಸೆಲೆಬ್ರಿಟಿಯಾದವರು ಮುಂದಿನ ಹೆಜ್ಜೆ ಇಡಬೇಕಾದರೂ, ನೂರು ಸಲ ಯೋಚನೆ ಮಾಡಬೇಕಾದ ಸ್ಥಿತಿ ಉಂಟಾಗುತ್ತದೆ. ಏಕೆಂದರೆ ಇಂಥ ಸಮಯದಲ್ಲಿ ಎಲ್ಲರ ಕಣ್ಣೂ ಅವರ ಮೇಲೆಯೇ ನೆಟ್ಟಿರುತ್ತದೆ. ಆದ್ದರಿಂದ ಸಾಮಾನ್ಯ ಜನರಿಗಿಂತಲೂ ಭಿನ್ನವಾಗಿಯೇ ಯೋಚಿಸಬೇಕಾಗುತ್ತದೆ ಚಿತ್ರ ತಾರೆಯರು. ಇನ್ನು ವಿಜಯ ರಾಘವೇಂದ್ರ ಅವರ ವಿಷಯದಲ್ಲಿ ಹೇಳುವುದಾದರೆ, ಇತ್ತೀಚೆಗೆ ಅವರ ಎರಡನೆಯ ಮದುವೆಯ ಕುರಿತು ಸೋಷಿಯಲ್​  ಮೀಡಿಯಾದಲ್ಲಿ ಇಲ್ಲ ಸಲ್ಲದ ಗಾಳಿಸುದ್ದಿಯೂ ಹರಡಿ ಅವರನ್ನು ಬೇಸರಕ್ಕೆ ದೂಡಿದ್ದೂ ನಿಜ. ಇವುಗಳ ನಡುವೆಯೇ, ನಟ, ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿರುವ ಬರಹವೊಂದು ಅಭಿಮಾನಿಗಳನ್ನು ಭಾವುಕತೆಗೆ ನೂಕಿದೆ. ಇದನ್ನು ನೋಡಿ ಫ್ಯಾನ್ಸ್​ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮಗನ ಬಗ್ಗೆ ಬಿಗ್​ ಅಪ್​ಡೇಟ್​ ಕೊಟ್ಟ ವಿಜಯ ರಾಘವೇಂದ್ರ: ಸ್ಪಂದನಾ ಫೋಟೋಗೆ ಅಭಿಮಾನಿಗಳ ಕಣ್ಣೀರು!

ಅಷ್ಟಕ್ಕೂ ವಿಜಯ ರಾಘವೇಂದ್ರ ಅವರು, ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ Hope is the eternal flame ಎಂದು ಬರೆದುಕೊಂಡಿದ್ದಾರೆ. ಇದರ ಅರ್ಥ ಭರವಸೆಯೇ ಶಾಶ್ವತ ಜ್ಯೋತಿ ಎನ್ನುವುದು. ಈ ಒಂದು ಮಾತು ಅವರ ಮನಸ್ಸಿನಲ್ಲಿ ಇರುವ ನೋವುಗಳನ್ನು ಹೇಳುತ್ತದೆ ಎನ್ನುವುದಾಗಿ ಅರ್ಥ ಮಾಡಿಕೊಂಡಿರುವ ಅಭಿಮಾನಿಗಳು, ಸರ್​ ನಿಮ್ಮ ವಿಷಯದಲ್ಲಿ ಬಹಳ ಅನ್ಯಾಯವಾಯಿತು ಎಂದು ಕಂಬನಿ ಮಿಡಿಯುತ್ತಿದ್ದಾರೆ. ಆಗಿದ್ದನ್ನೆಲ್ಲಾ ಮರೆತು ಮುಂದಿನ ಹೆಜ್ಜೆ ಇಡಿ ಎಂದು ಹಲವರು ಹಾರೈಸುತ್ತಿದ್ದಾರೆ. ಒಂಟಿತನ ಕಾಡುವಾಗ ಏನೇನೋ ಯೋಚನೆಗಳು ಬರುವುದು ಸಹಜ, ಆದ್ದರಿಂದ ಖಿನ್ನತೆಗೆ ಜಾರದೇ ಮುಂದಿನ ಹೆಜ್ಜೆ ಇಡಿ ಎಂದೆಲ್ಲಾ ನಟನಿಗೆ ಧೈರ್ಯ ತುಂಬುತ್ತಿದ್ದಾರೆ ಅಭಿಮಾನಿಗಳು.  
 
ಅಂದಹಾಗೆ ವಿಜಯ ರಾಘವೇಂದ್ರ ಮತ್ತು ಸ್ಪಂದನಾ 2007ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮಗ ಶೌರ್ಯನಿಗೆ ಪಾಲಕರಾಗಿದ್ದಾರೆ. ಅದರೆ ಸ್ಪಂದನಾ ಅವರು 2023ರಲ್ಲಿ ಎಲ್ಲರನ್ನೂ ಬಿಟ್ಟು ಅಗಲಿದರು. ಇದೀಗ ಮಗನಿಗಾಗಿ ಜೀವನವನ್ನು ಮುಡುಪಾಗಿಟ್ಟಿದ್ದಾರೆ ವಿಜಯ್​ ಅವರು. ಮಗನ ಪರೀಕ್ಷೆಯ ಸಂದರ್ಭದಲ್ಲಿ ವಿಜಯ್​ ರಾಘವೇಂದ್ರ ಜೊತೆ ಪತ್ನಿ ಸ್ಪಂದನಾ ಕೂಡ ಹೀಗೆ ಕಾಳಜಿ ತೋರುತ್ತಿದ್ದರು. ವಿಧಿಯ ಆಟದ ಮುಂದೆ ಏನು ಹೇಳಬೇಕು ಎಂದು ಅಭಿಮಾನಿಗಳು ವಿಜಯ್​ ಅವರ ವಿಡಿಯೋಗೆ ಕಮೆಂಟ್​ ಮೂಲಕ ಕಂಬನಿ ಮಿಡಿಯುತ್ತಿದ್ದಾರೆ. ಮಗ ಶೌರ್ಯನಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸುತ್ತಿದ್ದಾರೆ. ಆತ ಕೂಡ ಅಪ್ಪನಂತೆ ಸಿನಿಮಾದಲ್ಲಿ ಮಿಂಚಲಿ ಎನ್ನುವುದು ಅಭಿಮಾನಿಗಳ ಹಾರೈಕೆ. 

ಮಗನಿಗಾಗಿ ರಾತ್ರಿಯಿಡೀ ನಿದ್ದೆಗೆಟ್ಟ ನಟ ವಿಜಯ ರಾಘವೇಂದ್ರ: ವಿಧಿಯ ಆಟಕ್ಕೆ ಅಭಿಮಾನಿಗಳ ಕಂಬನಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ
‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್