ಹಿರಿಯ ನಟ ಶಂಖನಾದ ಅರವಿಂದ್ ಕೊರೋನಾಗೆ ಬಲಿ

By Suvarna News  |  First Published May 7, 2021, 1:59 PM IST

ಉಸಿರಾಟದ ತೊಂದರೆಯಿಂದ ಕನ್ನಡ ಚಿತ್ರರಂಗದ ಹಿರಿಯ ನಟ ಶಂಖನಾದ ಅರವಿಂದ್ (70) ಮೃತಪಟ್ಟಿದ್ದಾರೆ. 


ಬೆಂಗಳೂರು (ಮೇ.7): ಬೆಟ್ಟದ ಹೂವು ಖ್ಯಾತಿಯ ನಟ ಶಂಖನಾದ ಅರವಿಂದ್‌ಗೆ ಕೊರೋನಾ ಸೋಂಕು ತಗುಲಿತ್ತು. ಕಳೆದ ಹತ್ತು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ತೊಂದರೆ ಹೆಚ್ಚಾದ ಕಾರಣ ಮೇ 7, 2021ರಂದು ಕೊನೆಯುಸಿರೆಳೆದರು. ಅವರಿಗೆ 70 ವರ್ಷ ವಯಸ್ಸು.

ಜನವರಿ 23ರಂದು ಅರವಿಂದ್ ಪತ್ನಿ ರಮಾ ಕೂಡ ಉಸಿರಾಟದ ತೊಂದರೆಯಿಂದ ಕೊನೆಯುಸಿರೆಳೆದ್ದರು.  ರಮಾ ಕನ್ನಡ ಚಿತ್ರರಂಗದಲ್ಲಿ ಹಿನ್ನಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ಈ ಹಾಸ್ಯ ನಟ ಮೂರು ಮಕ್ಕಳನ್ನು ಅಗಲಿದ್ದಾರೆ. 

Tap to resize

Latest Videos

ಕನ್ನಡ ಚಿತ್ರರಂಗದ ಮತ್ತೊಂದು ಧ್ವನಿ ಇನ್ನಿಲ್ಲ..! 

70-80ರ ದಶಕದಲ್ಲಿ ಅರವಿಂದ್ ಬಹು ಬೇಡಿಕೆಯ ಕಲಾವಿದನಾಗಿ ಗುರುತಿಸಿಕೊಂಡಿದ್ದರು. ಕಾಶಿನಾಥ್ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು. ಇತ್ತೀಚಿಗೆ ಕನ್ನಡದ ಕೆಲವೊಂದು ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದರು. 

ಕನ್ನಡ ಚಿತ್ರರಂಗ ಒಳ್ಳೆ ಕಲಾವಿನದನ್ನು ಇಂದು ಕಳೆದುಕೊಂಡಿದೆ. ಅರವಿಂದ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

click me!