ಅಮೆರಿಕಾ ಆಸ್ಪತ್ರೆಯಿಂದ ಶಿವಣ್ಣ ಡಿಸ್ಚಾರ್ಜ್, ಭಾರತಕ್ಕೆ ಬರೋದು ಯಾವಾಗ?

By Shriram Bhat  |  First Published Jan 4, 2025, 1:54 PM IST

ನಟ ಶಿವಣ್ಣ ಅವರು ಕಳೆದ ಹಲವಾರು ತಿಂಗಳುಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರೂ ಅದನ್ನು ದೊಡ್ಡ ಸುದ್ದಿ ಮಾಡದೇ ತಮ್ಮ ಪಾಡಿಗೆ ತಾವು ಕೆಲಸದಲ್ಲಿ ನಿರತರಾಗಿದ್ದರು. ಜೊತೆಗೆ, ಅಗತ್ಯವಿದ್ದ ಟ್ರೀಟ್‌ಮೆಂಟ್ ಹಾಗೂ ಮುನ್ನಚ್ಚರಿಕೆ ತೆಗೆದುಕೊಳ್ಳುತ್ತಿದ್ದರು. ವೈದ್ಯರ ಸಲಹೆ ಮೇರೆಗೆ..


ಸ್ಯಾಂಡಲ್‌ವುಡ್ ನಟ, ಕರುನಾಡು ಚಕ್ರವರ್ತಿ ಖ್ಯಾತಿಯ ಶಿವರಾಜ್‌ಕುಮಾರ್ (Shiva Rajkumar) ಅವರು ಅಮೆರಿಕಾ ಅಸ್ಪತ್ರೆಯಿಂದ ಸರ್ಜರಿ ಬಳಿಕ ಬಿಡುಗಡೆ ಆಗಿದ್ದಾರೆ. ಕಳೆದ ತಿಂಗಳು, ಅಂದರೆ ಡಿಸೆಂಬರ್ 22 ರಂದು ಪ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಗೆ ಆಡ್ಮಿಟ್ ಆಗಿದ್ದ ಶಿವಣ್ಣ ಅವರು ಕ್ಯಾನ್ಸರ್‌ 24 ರಂದು ಸರ್ಜರಿ ಮಾಡಿಸಿಕೊಂಡಿದ್ದರು. ಈಗ, 14 ದಿನಗಳ ನಂತ್ರ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ ನಟ ಶಿವರಾಜ್‌ಕುಮಾರ್. ಪ್ರತಿ ದಿನ ಜನರಲ್ ಚೆಕಪ್ ಜೊತೆ ವಾಕಿಂಗ್ ಮಾಡಲು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಯ ಬಳಿ ಇರುವ ಖಾಸಗಿ ಹೋಟೆಲ್ ಒಂದರಲ್ಲಿ ಶಿವರಾಜ್‌ಕುಮಾರ್ ಫ್ಯಾಮಿಲಿ ಉಳಿದುಕೊಂಡಿದೆ. ಸರ್ಜರಿ ಬಳಿಕ ಇನ್ನೂ ಎರಡು ಚೆಕಪ್ ಬಾಕಿ ಇದೆ. ಅದನ್ನು ಮುಗಿಸಿಕೊಂಡು ಜನವರಿ 24 ರಾತ್ರಿ ಶಿವಣ್ಣ ಬೆಂಗಳೂರಿಗೆ ಹೊರಡಲಿದ್ದಾರೆ. ಜನವರಿ 26 ರಂದು ಶಿವಣ್ಣ ಅವರು  ಬೆಂಗಳೂರು ತಲುಪಲಿದ್ದಾರೆ ಎನ್ನಲಾಗಿದೆ. ಸದ್ಯ ಅಮೆರಿಕದ ಆಸ್ಪತ್ರೆಯ ಆವರಣದಲ್ಲಿ ತಾವು ಕುಟುಂಬ ಸಮೇತ ಇರುವ ಫೋಟೋವನ್ನು ಶಿವಣ್ಣ ತಮ್ಮ ಸೋಷಿಯಲ್ ಮೀಡಿಯಾ ಕುಟುಂಬದಲ್ಲಿ ಹಂಚಿಕೊಂಡಿದ್ದಾರೆ. 

Tap to resize

Latest Videos

ಶಿವಣ್ಣ ಮನೆ ನಾಯಿ ನೀಮೋ ನಿಧನ, ಕಣ್ಣೀರು ಉಕ್ಕಿಸುವ ಪತ್ರ ಬರೆದ ಗೀತಾ ಶಿವರಾಜ್‌ಕುಮಾರ್!

ನಟ ಶಿವಣ್ಣ ಅವರು ಕಳೆದ ಹಲವಾರು ತಿಂಗಳುಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರೂ ಅದನ್ನು ದೊಡ್ಡ ಸುದ್ದಿ ಮಾಡದೇ ತಮ್ಮ ಪಾಡಿಗೆ ತಾವು ಕೆಲಸದಲ್ಲಿ ನಿರತರಾಗಿದ್ದರು. ಜೊತೆಗೆ, ಅಗತ್ಯವಿದ್ದ ಟ್ರೀಟ್‌ಮೆಂಟ್ ಹಾಗೂ ಮುನ್ನಚ್ಚರಿಕೆ ತೆಗೆದುಕೊಳ್ಳುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ನಟ ಶಿವಣ್ಣ ಅವರು ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಅದನ್ನು ಖುಷಿಯಿಂದ ಹಂಚಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಇಡೀ ಕನ್ನಡ ನಾಡು ಸೇರಿದಂತೆ, ಅವರ ಅಭಿಮಾನಿಗಳು ಖುಷಿ ಪಡುವುದು ಗ್ಯಾರಂಟಿ. 

ಒಟ್ಟಿನಲ್ಲಿ, ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ತಮ್ಮಗಿರುವ ಕಾಯಿಲೆಯಿಂದ ಚೇತರಿಸಿಕೊಂಡಿರುವ ನಟ ಶಿವರಾಜ್‌ಕುಮಾರ್‌ ಅವರು ಸದ್ಯ ಖುಷಿಯಲ್ಲಿ ಇದ್ದಾರೆ. ಅಲ್ಲಿ ಮಗಳು, ಅಳಿಯ ಹಾಗೂ ಪತ್ನಿಯ ಜೊತೆ ಖುಷಿಯಾಗಿರುವ ನಟ ಶಿವಣ್ಣ ಅವರು ಇನ್ನೇನು ಸ್ವಲ್ಪ ದಿನಗಳಲ್ಲಿ ಭಾರತಕ್ಕೆ ಮರಳಲಿದ್ದಾರೆ. ಬಳಿಕ, ಫೆಬ್ರವರಿಯಲ್ಲಿ ಎಂದಿನಂತೆ ತಮ್ಮ ಸಿನಿಮಾ ನಟನೆ ಮುಂದುವರಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಾಕಷ್ಟು ಸಿನಿಮಾಗಳು ಟನ ಶಿವಣ್ಣ ಅವರ ಕೈನಲ್ಲಿದ್ದು, ಎಲ್ಲವನ್ನೂ ಮುಗಿಸಿಕೊಡುವತ್ತ ಶಿವಣ್ಣ ತಮ್ಮ ದೃಷ್ಟಿ ಹರಿಸಲಿದ್ದಾರೆ. 

ದೊಡ್ಮನೆಯ ದೊಡ್ಮಗನಿಗೆ ಕಿಚ್ಚ ಸುದೀಪ್‌ ಕಾಲ್? ಶಿವಣ್ಣ ಬಿಟ್ಟು ಕೊಟ್ಟಿದ್ದು ನಿಜವೇ?

click me!