ತಮಿಳುನಾಡಿನಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ-ರಶ್ಮಿಕಾ' ಮಧ್ಯೆ ನಡೆದ ಈ ಕಥೆ ವೈರಲ್!

Published : Nov 15, 2025, 03:33 PM IST
Rashmika Mandanna Salumarada Thimmakka

ಸಾರಾಂಶ

ಮಕ್ಕಳಿಲ್ಲದ ಕಾರಣಕ್ಕೆ ಸಸಿಗಳನ್ನೇ ಮಕ್ಕಳಂತೆ ಬೆಳೆಸಿ, 385 ಆಲದ ಮರಗಳು ಸೇರಿದಂತೆ 8,000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ವೃಕ್ಷಮಾತೆ ಅಂತ ಕರೆಸಿಕೊಂಡವರು ತಿಮ್ಮಕ್ಕ. ದೇಶ, ವಿದೇಶದ ಅತ್ಯುತ್ತನ ಗೌರವಗಳನ್ನ ಪಡೆದ ತಿಮ್ಮಕ್ಕ ಜಗತ್ತಿಗೆ ಆದರ್ಶಪ್ರಾಯವಾದವರು. ಇದರಲ್ಲಿ ರಶ್ಮಿಕಾ ಕಥೆ ನೋಡಿ..

ಸಾಲುಮರದ ತಿಮ್ಮಕ್ಕ-ರಶ್ಮಿಕಾ ಮಧ್ಯೆ ಏನು ನಡೆದಿತ್ತು?

ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ (Saalumarada Thimmakka) ನಮ್ಮನ್ನ ಅಗಲಿದ್ದಾರೆ. ಇಡೀ ನಾಡು ತಿಮ್ಮಕ್ಕನ ಅಗಲಿಕೆಗೆ ಕಣ್ಣೀರು ಮಿಡಿದಿದೆ. ಈ ನಡುವೆ ತಿಮ್ಮಕ್ಕ ನ ನೆಪದಲ್ಲಿ ಎಲ್ಲರೂ ರಶ್ಮಿಕಾ ಮಂದಣ್ಣ (Rashmika Mandanna) ಅವರನ್ನು ನೆನಪು ಮಾಡಿಕೊಳ್ತಾ ಇದ್ದಾರೆ. ಅರೇ ತಿಮ್ಮಕ್ಕನಿಗೂ ರಶ್ಮಿಕಾನೂ ಏನ್ ಸಂಬಂಧ ಅಂತೀರಾ..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಅಗಲಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ..!

ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ನಿಧನರಾಗಿದ್ದಾರೆ. 114 ವರ್ಷದ ತಿಮ್ಮಕ್ಕ ವಯೋಸಹಜ ಅನಾರೋಗ್ಯದಿಂದ ಇಹಲೋಕವನ್ನ ತ್ಯಜಿಸಿದ್ದಾರೆ. ಇಡೀ ನಾಡು ವೃಕ್ಷಮಾತೆಯ ಅಗಲಿಕೆಗೆ ಕಂಬನಿ ಮಿಡಿದಿದೆ. ಮತ್ತೆ ಕರುನಾಡಿನಲ್ಲಿ ಹುಟ್ಟಿ ಬಾ ತಿಮ್ಮಕ್ಕ ಅಂತ ಪ್ರಾರ್ಥಿಸಿದೆ.

ತಿಮ್ಮಕ್ಕನ ನೆಪದಲ್ಲಿ ರಶ್ಮಿಕಾಗೆ ತಿವಿದ ಜನ..!

ಯೆಸ್ ತಿಮ್ಮಕ್ಕನ ಅಗಲಿಕೆ ಟೈಂನಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಅನೇಕರು ರಶ್ಮಿಕಾ ಹೆಸರನ್ನ ಎಳೆದು ತಂದಿದ್ರು. ಅರೇ ಎಲ್ಲಿಯ ತಿಮ್ಮಕ್ಕ ಎಲ್ಲಿಯ ರಶ್ಮಿಕಾ ಅಂತೀರಾ..? ಇದಕ್ಕೂ ಒಂದು ಕಾರಣ ಇದೆ.

6 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ FW Achievers Awards ಕಾರ್ಯಕ್ರಮ ನಡೆದಿತ್ತು. ಅದ್ರಲ್ಲಿ ಸಾಲುಮರದ ತಿಮ್ಮಕ್ಕನನ್ನ ಕರೆದು ಜೀವಮಾನದ ಸಾಧನೆ ಪ್ರಶಸ್ತಿ ಕೊಟ್ಟು ಗೌರವ ಸಲ್ಲಿಸಿದ್ರು ತಮಿಳುನಾಡಿನ ಮಂದಿ.

ಆದೇ ಇವೆಂಟ್​ನಲ್ಲಿ ನಮ್ಮ ಕಿರಿಕ್ ಬ್ಯೂಟಿ ರಶ್ಮಿಕಾ ಕೂಡ ಇದ್ರು. ತಿಮ್ಮಕ್ಕನನ್ನ ಗೌರವಿಸಿ ವೇದಿಕೆ ಕರೆಯಲಾಯ್ತು. ತಿಮ್ಮಕ್ಕನಿಗೆ ಕನ್ನಡ ಬಿಟ್ರೆ ಬೇರೆ ಭಾಷೆ ಬರೋದಿಲ್ಲ. ಕನ್ನಡದಲ್ಲಿ ಅವರು ಮಾತನಾಡಿದ್ರು.

ಆಗ ಅಲ್ಲಿದ್ದ ನಿರೂಪಕಿ ರಶ್ಮಿಕಾನ ವೇದಿಕೆಗೆ ಕರೆದು ನೀವು ಕನ್ನಡದವರೇ ಅಲ್ವಾ, ತಿಮ್ಮಕ್ಕನ ಮಾತು ಅನುವಾದ ಮಾಡಿ ಹೇಳಿ ಅಂತ ಕೇಳಿದ್ರು. ತಿಮ್ಮಕ್ಕನ ಮಾತನ್ನ ಇಂಗ್ಲೀಷ್‌ನಲ್ಲಿ ಅನುವಾದ ಮಾಡೋದಕ್ಕೆ ಶುರುಮಾಡಿದ್ರು ಕಿರಿಕ್ ಬ್ಯೂಟಿ ರಶ್ಮಿಕಾ.

ರಶ್ಮಿಕಾಗೆ ತಿಮ್ಮಕ್ಕನ ಬಗ್ಗೆ ತಲೆ ಬುಡವೂ ಗೊತ್ತಿಲ್ಲ ಅನ್ನೋದು ಆಗಲೇ ಜಗಜ್ಜಾಹೀರಾಗಿತ್ತು. ತಡಬಡಾಯಿಸ್ತಾ ಇದ್ದ ರಶ್ಮಿಕಾ ಕೈಯಿಂದ ಮೈಕ್ ಇಸಿದುಕೊಂಡ ತಮಿಳು ನಟ ವಿವೇಕ್, ತಿಮ್ಮಕ್ಕನ ಸಾಧನೆಯನ್ನ ತಮ್ಮ ಭಾಷೆಯಲ್ಲಿ ವರ್ಣಿಸಿದ್ರು. ವೇದಿಕೆಯಲ್ಲಿದ್ದ ಜನರು ಮುಗಿಲು ಮುಟ್ಟುವಂತೆ ಚಪ್ಪಾಳೆ ತಟ್ಟಿದ್ರು.

ಈ ವೇದಿಕೆ ಮೇಲೆ ರಶ್ಮಿಕಾರ ಪೆದ್ದುತನ ಜಗಜ್ಜಾಹೀರಾಗಿತ್ತಷ್ಟೇ ಅಲ್ಲ , ಕನ್ನಡಿಗರಿಗೆಲ್ಲಾ ಒಂದು ರೀತಿ ಮುಜುಗರ ಆಗಿತ್ತು. ರಶ್ಮಿಕಾ ಅದೃಷ್ಟ ಬಲದಿಂದ ಅದೆಷ್ಟು ದೊಡ್ಡ ನಟಿಯಾಗಿ ಬೆಳೆದರೂ ಆಕೆಗೆ, ನಾಡು, ನುಡಿ, ನಮ್ಮ ನಡುವಿನ ಸಾಧಕರ ಬಗ್ಗೆ ಎಳ್ಳಷ್ಟು ಜ್ಞಾನ ಇಲ್ಲ ಅನ್ನೋದು ಪ್ರಪಂಚಕ್ಕೆ ಗೊತ್ತಾಗಿತ್ತು.

'ಕಿರಿಕ್' ಬ್ಯೂಟಿಗೆ ಪಾಠ ಹೇಳಿದ ಕನ್ನಡಿಗರು

ಹೌದು, ಇದೀಗ ವೃಕ್ಷಮಾತೆ ಪದ್ಮಶ್ರೀ ಪುರಸ್ಕ್ರತೆ ಸಾಲು ಮರದ ತಿಮ್ಮಕ್ಕ ನಿಧನರಾಗಿದ್ದಾರೆ. ರಾಜ್ಯ, ದೇಶದ ಗಣ್ಯಾತಿಗಣ್ಯರು ತಿಮ್ಮಕ್ಕನಿಗೆ ಶೃದ್ದಾಂಜಲಿ ಸಲ್ಲಿಸಿದ್ದಾರೆ. ತಿಮ್ಮಕ್ಕನ ಸಾಧನೆಯನ್ನ ಕೊಂಡಾಡ್ತಾ ಇದ್ದಾರೆ.

ಮಕ್ಕಳಿಲ್ಲದ ಕಾರಣಕ್ಕೆ ಸಸಿಗಳನ್ನೇ ಮಕ್ಕಳಂತೆ ಬೆಳೆಸಿ, 385 ಆಲದ ಮರಗಳು ಸೇರಿದಂತೆ 8,000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ವೃಕ್ಷಮಾತೆ ಅಂತ ಕರೆಸಿಕೊಂಡವರು ತಿಮ್ಮಕ್ಕ. ದೇಶ, ವಿದೇಶದ ಅತ್ಯುತ್ತನ ಗೌರವಗಳನ್ನ ಪಡೆದ ತಿಮ್ಮಕ್ಕ ಜಗತ್ತಿಗೆ ಆದರ್ಶಪ್ರಾಯವಾದವರು. ಇಂಥ ತಿಮ್ಮಕ್ಕನ ಬಗ್ಗೆ ಈಗಲಾದ್ರೂ ತಿಳಿದುಕೊಳ್ಳಿ ಅಂತ ರಶ್ಮಿಕಾಗೆ ಹಲವರು ಸಲಹೆ ನೀಡಿದ್ದಾರೆ..

ರಶ್ಮಿಕಾ ನಟಿಯಾಗಿ ತನ್ನದೇ ಸ್ಥಾನ ಪಡೆದುಕೊಂಡಿದ್ದಾರೆ. ದೇಶ ವಿದೇಶದಲ್ಲಿ ತನ್ನ ಸೌಂದರ್ಯ, ನಟನೆಯಿಂದ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. ಆದ್ರೆ ಅದರ ಜೊತೆಗೆ ನಮ್ಮ ನಾಡು, ನುಡಿ, ನಮ್ಮ ನೆಲದ ಸಾಧಕರ ಬಗ್ಗೆ ಕೊಂಚವಾದ್ರೂ ತಿಳಿದುಕೊಂಡಿದ್ರೆ ಒಳ್ಳೇದು. ಇಲ್ಲದೇ ಹೋದ್ರೆ ದೊಡ್ಡ ವೇದಿಕೆಗಳಲ್ಲಿ ಅವರ ಗೌರವನೂ ಹೋಗುತ್ತೆ. ಅವರ ನೆಪದಲ್ಲಿ ಕನ್ನಡಿಗರ ಗೌರವವೂ ಮಣ್ಣುಪಾಲಾಗುತ್ತೆ ಎಂದು ಜನರು ಮಾತನ್ನಾಡುತ್ತಿದ್ದಾರೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ