ರಮ್ಯಾ-ರಕ್ಷಿತಾ ಸಿನಿಮಾ ಬಗ್ಗೆ ನಿರ್ಮಾಪಕರು ಹೇಳಿದ್ದೇನು; ಸಕ್ಸಸ್‌ಗೆ ಯಾವ ಫಾರ್ಮುಲಾ ಬಳಸಿದ್ರು?

By Shriram Bhat  |  First Published Jun 19, 2024, 2:56 PM IST

ತಮಿಳು ನಟ ಶಾಮ್ ಅವರನ್ನು ಹೀರೋ ಆಗಿ ಆಯ್ಕೆ ಮಾಡಿಕೊಂಡಿದ್ದರು. ಕಾರಣ, ತನನಂ ತನನಂ ಎನ್ನುವುದು ನಾಯಕಿ ಪ್ರಧಾನ ಸಬ್ಜೆಕ್ಟ್. ಅದರಲ್ಲೂ ಕೂಡ ಇಬ್ಬರು ನಾಯಕಿಯರು. ಹೀರೋ ಹೈಲೈಟ್ ಆಗುವಂತಿಲ್ಲ.


'ತನನಂ ತನನಂ' ಚಿತ್ರವನ್ನು ಮಾಡುವಾಗ ನಡೆದ ಘಟನೆ ಹಾಗೂ ಇದ್ದ ಚಾಲೆಂಜ್ ಬಗ್ಗೆ ನಿರ್ಮಾಪಕರು ಹೇಳಿಕೊಂಡಿದ್ದಾರೆ. 'ತನನಂ ತನನಂ (Tananam Tananam) ಸಿನಿಮಾ ಮಾಡಿದ್ದ ವೇಳೆ ನಟಿಯರಾದ ರಮ್ಯಾ (Ramya) ಹಾಗೂ ರಕ್ಷಿತಾ (Rakshitha) ಇಬ್ಬರಿಗೂ ಆಗಿಬರುತ್ತಿರಲಿಲ್ಲ. 'ಎತ್ತಿಗೆ ಏರಿಗೆ ಎಳೆದರೆ ಕೋಣ ನೀರಿಗೆ' ಎಂಬಂತೆ ಅವರಿಬ್ಬರೂ ಇದ್ದಾಗಲೂ ಕೂಡ ಅವರಿಬ್ಬರ ಮಧ್ಯೆ ಯಾವುದೇ ಕಾಂಟ್ರೋವರ್ಸಿ ಆಗದಂತೆ ನೋಡಿಕೊಳ್ಳಲಾಗಿತ್ತು. ಹಾಗೇ, ಅವರಿಬ್ಬರ ಗೌರವಕ್ಕೆ ಯಾವುದೇ  ರೀತಿಯಲ್ಲೂ ಧಕ್ಕೆ ಆಗದಂತೆ, ವ್ಯತ್ಯಾಸ ಆಗದಂತೆ ನೋಡಿಕೊಳ್ಳಲಾಗಿತ್ತು. 

ಕವಿತಾ ಲಂಕೇಶ್ ನಿರ್ದೇಶನದ 'ತನನಂ ತನನಂ' ಸಿನಿಮಾ ನಿರ್ಮಾಪಕರು ಎನ್‌ಎಮ್ ಸುರೇಶ್. ಸದ್ಯ ಅವರು ಕರ್ನಾಟಟಕ ಫಿಲಂ ಚೇಂಬರ್ ಅಧ್ಯಕ್ಷರೂ ಹೌದು. ಕವಿತಾ ಲಂಕೇಶ್ (Kavitha Lankesh) ನಿರ್ದೇಶನದ 'ತನನಂ ತನನಂ ಸಿನಿಮಾವನ್ನು 2006ರಲ್ಲಿ ನಿರ್ಮಾಣ ಮಾಡಿ ಯಶಸ್ಸು ಪಡೆದಿದ್ದರು ಎನ್‌ಎಮ್‌ ಸುರೇಶ್. ಚಿತ್ರವು ವಿಮರ್ಶಾತ್ಮವಾಗಿಯೂ ಮೆಚ್ಚುಗೆ ಗಳಿಸಿತ್ತು. ಆ ವೇಳೆಯಲ್ಲಿ ಕನ್ನಡದ ಟಾಪ್ ಹೀರೋಯಿನ್‌ಗಳಾದ್ದ ರಮ್ಯಾ ಹಾಗು ರಕ್ಷಿತಾ ಅವರನ್ನು ಓಂದೇ ಸಿನಿಮಾದಲ್ಲಿ ನಟಿಸುವಂತೆ ಮಾಡುವುದು ಸುಭದ ಮಾತಾಗಿರಲಿಲ್ಲ. 

Tap to resize

Latest Videos

ಕರ್ನಾಟಕದ ಋಣ ತೀರಿಸೋಕಾಗಲ್ಲ, ಆದ್ರೂ ನನ್ ಕರ್ತವ್ಯ ಮಾಡ್ತೀನಿ; ರಾಕಿಂಗ್ ಸ್ಟಾರ್ ಯಶ್

ತಮಿಳು ನಟ ಶಾಮ್ ಅವರನ್ನು ಹೀರೋ ಆಗಿ ಆಯ್ಕೆ ಮಾಡಿಕೊಂಡಿದ್ದರು. ಕಾರಣ, ತನನಂ ತನನಂ ಎನ್ನುವುದು ನಾಯಕಿ ಪ್ರಧಾನ ಸಬ್ಜೆಕ್ಟ್. ಅದರಲ್ಲೂ ಕೂಡ ಇಬ್ಬರು ನಾಯಕಿಯರು. ಹೀರೋ ಹೈಲೈಟ್ ಆಗುವಂತಿಲ್ಲ. ಜೊತೆಗೆ, ಇಬ್ಬರೂ ಕನ್ನಡದಲ್ಲಿ ಅಂದಿನ ಟಾಪ್ ನಾಯಕಿಯರು. ಹೀಗಾಗಿ ಅವರಬ್ಬರನ್ನೂ ಒಂದೇ ಸಿನಿಮಾದಲ್ಲಿ ಒಟ್ಟಿಗೇ ತೋರಿಸುವುದೇ ಮಹಾ ಸಾಹಸ. ಅದರಲ್ಲೂ ಯಾವುದೇ ಭಿನ್ನಾಭಿಪ್ರಾಯ ಮೂಡದೇ ಸಿನಿಮಾ ಮುಗಿಸುವುದು ಇನ್ನೂ ದೊಡ್ಡ ಚಾಲೆಂಜ್. ಅದನ್ನು ನಿರ್ಮಾಪಕರು ಸಮರ್ಥವಾಗಿ ನಿಭಾಯಿಸಿ ಈ ಸಿನಿಮಾದಲ್ಲಿ ಸಕ್ಸಸ್ ಕೂಡ ಪಡೆದರು. 

ರೋಬೋಟ್ ತರ ಕೆಲಸ ಮಾಡಬೇಡಿ, ಫ್ಯಾಷನ್ ಇರಲಿ; ಪ್ರಿಯಾಂಕಾ ಚೋಪ್ರಾ ಕಿವಿ ಮಾತು!

ಈ ಸಂಗತಿಯನ್ನು ಎನ್‌ಎಮ್ ಸುರೇಶ್‌ ಅವರು ಹಂಚಿಕೊಂಡಿರುವ ವೀಡಿಯೋ ಇದೀಗ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಈಗ ನಟಿಯರಾದ ರಮ್ಯಾ ಹಾಗು ರಕ್ಷಿತಾ ಇಬ್ಬರೂ ನಟನೆಯಲ್ಲಿ ಸಕ್ರಿಯರಾಗಿಲ್ಲ. ರಮ್ಯಾ ಸಿಂಗಲ್ ಆಗಿದ್ದು, ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆ, ರಕ್ಷಿತಾ ಅವರು ನಿರ್ದೇಶಕರಾದ ಪ್ರೇಮ್ ಅವರನ್ನು ಮದುವೆಯಾಗಿ ಮಗನೊಂದಿಗೆ ದಾಂಪತ್ಯ ಜೀವನದಲ್ಲಿದ್ದಾರೆ. ಕವಿತಾ ಲಂಕೇಶ್‌ ಅವರು ಅಪರೂಪಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಎನ್‌ಎಮ್ ಸರೇಶ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಶಿವರಾಜ್‌ಕುಮಾರ್‌ ಕಾಲೇಜಿಗೆ ಹೋಗ್ವಾಗ ದಿನಾಲೂ ಎರಡೇ ರೂ. ಕೊಡ್ತಿದ್ರಂತೆ ಡಾ ರಾಜ್‌ಕುಮಾರ್‌!

click me!