ರಿಷಬ್​ ಶೆಟ್ಟಿ ಪದೇ ಪದೇ ಹೇಳೋ ಸುಳ್ಳು ಇದೇ ಅಂತೆ! ಪತಿಯ ಗುಟ್ಟು ರಿವೀಲ್​ ಮಾಡಿದ ಪ್ರಗತಿ

By Suchethana D  |  First Published Sep 17, 2024, 1:47 PM IST

ತಮ್ಮ ಪತಿ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಅವರು ಪದೇ ಪದೇ ತಮಗೆ ಹೇಳುವ ಸುಳ್ಳಿನ ಕುರಿತು ಆ್ಯಂಕರ್​ ಅನುಶ್ರೀ ಷೋನಲ್ಲಿ ಪ್ರಗತಿ ಶೆಟ್ಟಿ ಹೇಳಿದ್ದೇನು?
 


ರಿಷಬ್​ ಶೆಟ್ಟಿಯವರ ಪರಿಚಯ ಸದ್ಯ ಯಾವ ಕನ್ನಡಿಗರೂ ಬೇಕಿಲ್ಲ. ಚಿಕ್ಕ ಬಜೆಟ್​ನಲ್ಲಿ ತಯಾರಾಗುವ ಚಿತ್ರವೊಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿಯೂ ಗುರುತಿಸಿಕೊಳ್ಳಬಹುದು ಎಂಬುದನ್ನು ಕಾಂತಾರ ಚಿತ್ರದ ಮೂಲಕ ಸಾಬೀತು ಮಾಡಿರುವ ರಿಷಬ್​ ಅವರು, ಈಗ ಭಾರತ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿಯೂ ಚಿರಪರಿಚಿತ ನಟರಾದವರು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರ್ತಾಳೆ ಎನ್ನುವುದು ರಿಷಬ್​ ಶೆಟ್ಟಿ ಅವರ ಜೀವನದಲ್ಲಿಯೂ ಸಾಬೀತಾಗಿದೆ. ಅವರೇ ಪ್ರಗತಿ ಶೆಟ್ಟಿ.  2017ರಲ್ಲಿ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಂದಾಪುರದಲ್ಲಿ ಪ್ರಗತಿ-ರಿಷಬ್ ಮದುವೆ ನಡೆಯಿತು. ಈ ದಂಪತಿಗೆ ಮಗ ರಣ್ವಿತ್ ಶೆಟ್ಟಿ ಹಾಗೂ ಮಗಳು ರಾಧ್ಯ ಶೆಟ್ಟಿ ಮಕ್ಕಳಿದ್ದಾರೆ. 

ಅಷ್ಟಕ್ಕೂ ರಿಷಬ್​ ಮತ್ತು ಪ್ರಗತಿ ಅವರ ಲವ್​ಸ್ಟೋರಿಯೂ ಚೆನ್ನಾಗಿದೆ. 'ರಿಕ್ಕಿ' ಸಿನಿಮಾ ನೋಡಲು ಪ್ರಗತಿಯವರು ಫ್ರೆಂಡ್ಸ್​ ಜೊತೆ ಹೋದಾಗ,   ಚಿತ್ರತಂಡ ಕೂಡ ಅಲ್ಲಿತ್ತು.  ಅಲ್ಲಿಯವರೆಗೆ ಪ್ರಗತಿ ಅವರಿಗೆ ರಿಷಬ್​ ಯಾರು ಎಂದೇ ಗೊತ್ತಿರಲಿಲ್ಲ. ಸಿನಿಮಾ ಮುಗಿದ ಬಳಿಕ ಅಲ್ಲೇ ಇದ್ದ ರಿಷಬ್ ಶೆಟ್ಟಿಯವರ ಪರಿಚಯವನ್ನು ಸ್ನೇಹಿತೆಯರು ಮಾಡಿಸಿದಾಗ  ಫೋಟೋ ಹೊಡೆಸಿಕೊಂಡು ಬಂದಿದ್ದರು.  ಇಬ್ಬರೂ ಕರಾವಳಿಯವರು ಎಂದು ಗೊತ್ತಾದದ್ದೇ ತಡ, ಬಳಿಕ ಫೇಸ್‌ಬುಕ್‌ನಲ್ಲಿ ಪ್ರಗತಿಯವರನ್ನು ಹುಡುಕಿ ರಿಷಬ್ ಶೆಟ್ಟಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರಂತೆ. ಅಲ್ಲಿಂದಲೇ ಲವ್​ ಶುರುವಾದದ್ದು. ಒಂದು ವರ್ಷದಲ್ಲಿಯೇ ಪ್ರೀತಿ, ಪ್ರಪೋಸ್​, ಮನೆಯಲ್ಲಿ ಎಲ್ಲರನ್ನೂ ಒಪ್ಪಿಸಿ ಮದುವೆಯೂ ಆಗಿದೆ.  ಪತ್ನಿಯ ಸಹಕಾರವನ್ನು ರಿಷಬ್​ ಸದಾ ಬಣ್ಣಿಸುತ್ತಲೇ ಇರುತ್ತಾರೆ.  

Tap to resize

Latest Videos

ಮೇಕಪ್​ ಮಾಡುವಾಗಲೇ ನಟಿ ಸೋನಲ್​ ಅರಿಶಿಣದ ಕೊಂಬು ಮಾಯ! ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​

ಇದೀಗ ಪ್ರಗತಿ ಅವರು, ಆ್ಯಂಕರ್​ ಅನುಶ್ರೀ ಅವರ ಜೊತೆಗಿನ ಸಂದರ್ಶನದಲ್ಲಿ ರಿಷಬ್​ ಶೆಟ್ಟಿಯವರ ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಇಬ್ಬರ ಲವ್​ ಸ್ಟೋರಿ ಬಗ್ಗೆ ಕೇಳಿದಾಗ, ಅಯ್ಯೋ ಎಷ್ಟೊಂದು ಸಂದರ್ಶನಗಳಲ್ಲಿ ಲವ್​ ಸ್ಟೋರಿ ಹೇಳಿ ಹೇಳಿ ಸಾಕಾಗಿದೆ. ಈಗ ಇಬ್ಬರು ಮಕ್ಕಳೂ ಆಗೋದ್ವು. ಇನ್ನೇನು ಮತ್ತೆ ಲವ್​ ಸ್ಟೋರಿ ಹೇಳೋದು ಎಂದು ನಕ್ಕಿದ್ದಾರೆ ಪ್ರಗತಿ. ಇದೇ ವೇಳೆ ರಿಷಬ್​ ಶೆಟ್ಟಿ ಪದೇ ಪದೇ ನಿಮ್ಮಲ್ಲಿ ಹೇಳುವ ಸುಳ್ಳು ಯಾವುದು ಎಂದು ಪ್ರಶ್ನಿಸಿದಾಗ, ಪ್ರಗತಿ ಅದನ್ನು ರಿವೀಲ್​ ಮಾಡಿದ್ದಾರೆ. ಅದೇನೆಂದರೆ, ಈ ಸಿನಿಮಾ ಆದ್ಮೇಲೆ ಖಂಡಿತವಾಗಿಯೂ  ಫ್ಯಾಮಿಲಿಗೆ ಟೈಮ್​ ಕೊಡ್ತೇನೆ ಅಂತಾರೆ. ಇದಕ್ಕಿಂತ ದೊಡ್ಡ ಸುಳ್ಳು ಪ್ರತಿ ಬಾರಿಯೂ ಬೇರೆ ಯಾವುದೂ ಹೇಳಲ್ಲ ಎಂದು ಹೇಳಿದ್ದಾರೆ. ಪ್ರೆಗ್ನೆಂಟ್​ ಟೈಮ್​ನಲ್ಲಿಯೂ ಕಾಂತಾರಕ್ಕೆ ಫ್ಯಾಷನ್​ ಡಿಸೈನಿಂಗ್​ ಮಾಡಿದ್ದೇನೆ. ರಿಷಬ್​ ಅವ್ರನ್ನು ಸ್ವಲ್ಪನಾದ್ರೂ ಬಿಟ್​ಬಿಡಿ ಎಂದು ಆವಾವಾಗ ನಿರ್ದೇಶಕರನ್ನು ಕೇಳ್ತೀನಿ ಎಂದು ಪ್ರಗತಿ ತಮಾಷೆ ಮಾಡಿದ್ದಾರೆ. 
 
ರಿಷಬ್​ ಅವರನ್ನು ಮೊದಲ ಬಾರಿ ನೋಡಿಯಾಗ ಹೇಳಿದ್ದೇನು ಎಂಬ ಪ್ರಶ್ನೆಗೆ ಪ್ರಗತಿ ಅವರು,  ಪ್ಲೀಸ್​ ಊಟ ಮಾಡು, ಐಸ್​ಕ್ರೀಮ್​ ಕೊಡ್ತೀನಿ ಎಂದಿದ್ದೆ ಎಂದು ಹೇಳಿ ನಕ್ಕಿದ್ದಾರೆ. ಕೊನೆಗೆ ದಿನವೂ  ಲೇಟಾಗಿ ಮಲಗ್ತೀವಿ, ಬೆಳಿಗ್ಗೆ ಲೇಟಾಗಿ ಏಳೋದೇ ಆಗಿದೆ ಎನ್ನುವ ದಿನಚರಿಯ ಕುರಿತೂ ಹೇಳಿದ್ದಾರೆ. ಪತಿಯನ್ನು ಆರಂಭದಲ್ಲಿ ಪ್ರೀತಿ ಜಾಸ್ತಿಯಾದಾಗಲೆಲ್ಲಾ ಪುತ್ತೂಸ್​ ಅಂತ ಎಂದು ಕರೆಯುತ್ತಿದ್ದೆ ಎಂದು ತಿಳಿಸಿದ್ದಾರೆ. ಇನ್ನು ರಿಷಬ್​ ಶೆಟ್ಟಿ ಅವರನ್ನು ಸಂದರ್ಶನ ಮಾಡಿದ್ರೆ ನಿಮ್ಮ ಬಗ್ಗೆ ಹೇಳೋ ಮಾತೇನು ಎಂದು ಅನುಶ್ರೀ ಕೇಳಿದಾಗ, ಪ್ರಗತಿ, ಅವಳು ಕೆಲ್ಸ ಮಾಡೋ ರೀತಿ ಸರಿಯಲ್ಲ, ಅವಳಿಗೆ ಭಾಷೆ ಸರಿ ಇಲ್ಲ ಎನ್ನುತ್ತಾರೆ ಅಷ್ಟೇ ಎಂದಿದ್ದಾರೆ. ಇನ್ನು ಅನುಶ್ರೀ, ಅಭಿಮಾನಿಗಳ ಪ್ರಶ್ನೆ ಕಾಂತಾರ-2 ಯಾವಾಗ ನೋಡ್ಬೋದು ಎನ್ನೋ ಪ್ರಶ್ನೆಗೆ ಪ್ರಗತಿ ಸೈಲೆಂಟ್​ ಆಗಿ ನಕ್ಕಿದ್ದಾರೆ. 

ಮಗಳ ಪಾಲನೆಯೇ ಸರ್ವಸ್ವ ಎಂದಿದ್ದ ದೀಪಿಕಾ ಹೊಸ ಕೆಲಸಕ್ಕೆ ಸಹಿ! ಉದ್ಯೋಗ ಕಳಕೊಂಡ ರಣವೀರ್​ ಸಿಂಗ್

  ಇನ್ನು ಪ್ರಗತಿ ಕುರಿತು ಹೇಳುವುದಾದರೆ,  ಮದುವೆ ಬಳಿಕ ಸಿನಿಮಾ ರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಪ್ರಗತಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿದ್ದಾರೆ. ಹಲವು ಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನಿಂಗ್​ ಮಾಡಿದ್ದಾರೆ.  ಸ.ಹಿ.ಪ್ರಾ. ಶಾಲೆ, ಬೆಲ್ ಬಾಟಂ, ಕಥಾಸಂಗಮಕ್ಕೆ ಪ್ರಗತಿ ಶೆಟ್ಟಿ ಸೇರಿದಂತೆ  ರುದ್ರಪ್ರಯಾಗ’, ‘777 ಚಾರ್ಲಿ’ ಚಿತ್ರಗಳಿಗೂ ಕಾಸ್ಟ್ಯೂಮ್ ಡಿಸೈನಿಂದ  ಮಾಡಿದ್ದಾರೆ. 

click me!