* ಹಿರಿಯ ನಟ ರಾಜಾ ರಾಮ್ ನಿಧನ ಕೋವಿಡ್ ಸೊಂಕಿಗೆ ಬಲಿ.
* ರಾಜಾರಾಮ್ ರವರಿಗೆ 84 ವರ್ಷ ವಯಸ್ಸಾಗಿತ್ತು
* ಸಿನಿಮಾ ಧಾರಾವಾಹಿ ಹಾಗೂ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಹಿರಿಯ ನಟ
* ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಹಿರಿಯ ಜೀವ ಪ್ರಾಣಬಿಟ್ಟಿದೆ.
ಬೆಂಗಳೂರು(ಮೇ. 10) ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಹಿರಿಯ ಜೀವ ಪ್ರಾಣಬಿಟ್ಟಿದೆ. ದಿನವೆಲ್ಲಾ ಹುಡುಕಾಟ ನಡೆಸಿದರೂ ವೆಂಟಿಲೇಟರ್ ಬೆಡ್ ಸಿಕ್ಕಿಲ್ಲ. ಕನ್ನಡದ ಹಿರಿಯ ನಟ ರಾಜಾ ರಾಮ್ ಕೊರೋನಾ ಸೋಂಕಿನಿಂದ ನಿಧನರಾಗಿದ್ದಾರೆ. ರಾಜಾ ರಾಮ್ ಅವರಿಗೆ 84 ವರ್ಷ ವಯಸ್ಸಾಗಿತ್ತು.
ಭಾನುವಾರ ರಾಜಾರಾಮ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಸಂಜೆ ಪಾಸಿಟಿವ್ ರಿಪೋರ್ಟ್ ಕೂಡ ಬಂದಿತ್ತು. ಬೆಡ್ ಸಿಗದ ಕಾರಣ ಮನೆಯಲ್ಲಿಯೇ ಹೋಂ ಕ್ವಾರಟೈನ್ ಮಾಡಲಾಗಿತ್ತು. ಸೋಮವಾರ ಉಸಿರಾಟದ ತೊಂದರೆ ಹೆಚ್ಚಾಗಿ ಮನೆಯಲ್ಲಿ ನಿಧನರಾಗಿದ್ದಾರೆ.
ಮಾಲಾಶ್ರೀ ಪತಿ ರಾಂಉ ಕೋಟಿ ನಿರ್ಮಾಪಕರಾದ ಕತೆ
ಕೊರೋನಾ ರುದ್ರನರ್ತನ ಮುಂದಿವರಿಸಿದೆ. ಕನ್ನಡದ ಹಿರಿಯ ನಟ ರಾಜಾ ರಾಮ್ ಕೊರೋನಾ ಸೋಂಕಿನಿಂದ ನಿಧನರಾಗಿದ್ದಾರೆ. ರಾಜಾ ರಾಮ್ ಅವರಿಗೆ 84 ವರ್ಷ ವಯಸ್ಸಾಗಿತ್ತು.
ಸಿನಿಮಾ ಧಾರಾವಾಹಿ ಹಾಗೂ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಹಿರಿಯ ನಟ ನೂರಾರು ನಾಟಕಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದರು. ಹಾಸ್ಯಪಾತ್ರಗಳಲ್ಲಿ ಮಿಂಚಿದ್ದರು.
ಕೊರೋನಾ ಸ್ಯಾಂಡಲ್ ವುಡ್ ಮೇಲೆ ಕರಿನರೆಳು ಬೀರುತ್ತಿದೆ. ಕೋಟಿ ನಿರ್ಮಾಪಕ ರಾಮು ಕೆಲ ದಿನಗಳ ಹಿಂದೆ ಕೊರೋನಾಕ್ಕೆ ಬಲಿಯಾಗಿದ್ದರು. ರಾಜ್ಯ ಸರ್ಕಾರದ ಆದೇಶದಂತೆ ಇದೀಗ ಶೂಟಿಂಗ್ ಗೂ ಬ್ರೇಕ್ ಹಾಕಲಾಗಿದೆ.
Really saddened by ur demise. Miss u RAJARAM uncle. Will never forget the time spent with u. Love u forever. Om Shanthi. 😣😣😞😞 pic.twitter.com/GAPlHRZHbk
— srujan lokesh (@srujanlokesh)