ಬೇಡಿಕೆಯ ಸಂಗೀತ ನಿರ್ದೇಶಕ, ಗಾಯಕ, ಸೆಲೆಬ್ರಿಟಿ ವಾಸುಕಿ ವೈಭವ್ ಬ್ಯಾಚುಲರ್ ಲೈಫ್ ಈ ತಿಂಗಳಿಗೆ ದಿ ಎಂಡ್. ಅವರನ್ನು ಕೈ ಹಿಡಿಯೋ ಹುಡುಗಿ ಯಾರು ಗೊತ್ತಾ?
ವಾಸುಕಿ ವೈಭವ್ ಅಂದರೆ ಅವರ ದನಿ, ಅವರ ಸಂಯೋಜನೆಯ ಮಧುರವಾದ ಹಾಡುಗಳು ನೆನಪಾಗುತ್ತವೆ. ಬಿಗ್‌ಬಾಸ್ ಪ್ರಿಯರಿಗೆ ಅವರು ಬಿಗ್‌ಬಾಸ್ ನಲ್ಲಿ ಆಡಿದ ಆಟ, ತುಂಟಾಟಗಳು ನೆನಪಾಗಬಹುದು. ಸರಳತೆ, ಖುಷ್ ಖುಷಿಯಾಗಿರೋ ಈ ಹುಡುಗನಿಗೆ ಅಪಾರ ಸ್ನೇಹಿತರ ಬಳಗವೂ ಇದೆ. ಬಿಗ್ ಬಾಸ್ ಕನ್ನಡ ಸೀಸನ್ 7' ಶೋ ಮೂಲಕ ಜನರ ಮನಸ್ಸು ಗೆದ್ದ ಸಂಗೀತ ಸಂಯೋಜಕ ವಾಸುಕಿ ವೈಭವ್ ಅವರು ನವೆಂಬರ್ 16ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ. ಅದು ತುಂಬ ಜನಕ್ಕೆ ಗೊತ್ತಾಗಿದ್ದು ಇಂಟರ್‌ವ್ಯೂ ಒಂದರಲ್ಲಿ. ಅಂದಹಾಗೆ ಡಾಲಿ ಧನಂಜಯ ನಿರ್ಮಿಸಿರೋ 'ಟಗರು ಪಲ್ಯ' ಸಿನಿಮಾ ಹೆಚ್ಚು ಕಮ್ಮಿ ಸಕ್ಸಸ್ ಸಿನಿಮಾವಾಗಿ ಹೊರಹೊಮ್ಮಿದ್ದು ನಿಮ್ಗೆಲ್ಲ ಗೊತ್ತು. ಆ ಸಿನಿಮಾದ ಪ್ರಮೋಶನ್‌ಗಾಗಿ ಸಿನಿಮಾ ಟೀಮ್ ಫೇಮಸ್ ಯೂಟ್ಯೂಬ್ ಚಾನೆಲ್‌ಗೆ ಹೋಗಿದೆ. ಅಲ್ಲಿ ಇವರ ಮದುವೆ ಸುದ್ದಿ ಲೀಕ್ ಆಗಿದೆ. ಅಂದ ಹಾಗೆ ತಮಗೆ ಗೊತ್ತಿಲ್ಲದೇ ಈ ಸುದ್ದಿ ಹೊರ ಹಾಕಿರೋದು ಬೇರೆ ಯಾರೂ ಅಲ್ಲ ಖ್ಯಾತ ಅಭಿನೇತ್ರಿ ತಾರಾ ಅನೂರಾಧ.
ಸಂದರ್ಶಕಿ ತನ್ನ ಮಾತಿನ ನಡುವೆ ವಾಸುಕಿ ವೈಭವ್‌ಗೆ ಹುಡುಗಿ ವಿಚಾರವಾಗಿ ಕಾಲೆಳೆಯೋ ಪ್ರಶ್ನೆ ಕೇಳಿದ್ದಾರೆ. ಆಗ ವಾಸುಕಿ ಪಕ್ಕ ಕೂತ ತಾರಾ ಅನೂರಾಧ, 'ಅವ್ರಿಗೆ ಈ ತಿಂಗಳೇ ಮದುವೆ ಅಲ್ವಾ' ಅಂದಿದ್ದಾರೆ. ಕೂಡಲೇ ವಾಸುಕಿ ಅವರಿಗೆ ವಿಷಯ ಹೇಳಬೇಡಿ ಅಂತ ಸನ್ನೆ ಮಾಡಿದ್ದಾರೆ. ತನ್ನಿಂದಾದ ಅಚಾತುರ್ಯಕ್ಕೆ ಕ್ಷಮೆ ಯಾಚಿಸಿದ ತಾರಾ ಪ್ಲೀಸ್ ಇದನ್ನು ಕಟ್ ಮಾಡಿ ಅಂದಿದ್ದಾರೆ. ಆದರೆ ಆ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಾಸುಕಿ ವೈಭವ್ ಅವರದ್ದು ಲವ್ ಮ್ಯಾರೇಜ್ ಎನ್ನಲಾಗಿದ್ದು, ಬಹುಕಾಲದ ಗೆಳತಿಯನ್ನು ಅವರು ಮದುವೆ ಆಗಲಿದ್ದಾರಂತೆ. ವಾಸುಕಿ ವೈಭವ್ ಪ್ರೀತಿ ಮಾಡಿದ ಹುಡುಗಿ ಯಾರು? ಎಲ್ಲಿ ಮದುವೆ ಅನ್ನೋದು ಹಲವರ ಕುತೂಹಲ. ಅಂದಹಾಗೆ ಇವರ ಮದುವೆ ನವೆಂಬರ್ 16ರಂದು ನಡೆಯಲಿದೆ ಎನ್ನಲಾಗಿದೆ. ಎಲ್ಲಿ ಮದ್ವೆ ನಡೆಯುತ್ತೆ, ಹುಡುಗಿ ಯಾರು ಅನ್ನೋ ಬಗ್ಗೆ ವಾಸುಕಿ ವೈಭವ್ ಅವರು ಅಧಿಕೃತ ಹೇಳಿಕೆ ಕೊಟ್ಟಿಲ್ಲ.
ಮಹಾರಾಷ್ಟ್ರ ಸ್ಟೈಲ್ ಸೀರೆಯುಟ್ಟು ಕಣ್ಣಲ್ಲೇ ಕಿಚ್ಚು ಹಚ್ಚಿದ ಭೂಮಿ ಶೆಟ್ಟಿ
ಆದರೆ ಈ ಬಗ್ಗೆ ಹೆಚ್ಚಿನವರು ಒಬ್ಬ ಹುಡುಗಿಯನ್ನು ಗೆಸ್ (guess) ಮಾಡುತ್ತಿದ್ದಾರೆ. ಈ ಹಿಂದೆ ವಾಸುಕಿ ವೈಭವ್ ಅವರು ಚಂದನಾ ಅನಂತಕೃಷ್ಣ ಅವರ ಜೊತೆಗೆ ಫೋಟೋ ಶೂಟ್ (photo shoot) ಮಾಡಿಸಿಕೊಂಡಾಗ ನಟಿ ರಮ್ಯಾ ಕಂಗ್ರಾಜ್ಯುಲೇಶನ್ಸ್ ಅಂತ ಹೇಳಿ, ನಿಮ್ಮ ಎಂಗೇಜ್ ಮೆಂಟ್ ಆಯ್ತು ಅಂದುಕೊಂಡೆ ಅಂದಿದ್ದರು. ಜೊತೆಗೆ ಇವರಿಬ್ಬರ ನಿಶ್ಚಿತಾರ್ಥ (engagement) ಆಗಿದೆ ಅನ್ನೋ ಮಾತು ಓಡಾಡ್ತಿತ್ತು. ಈ ಜೋಡಿಯ ಬಗ್ಗೆ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಅವರು ತಮ್ಮ ಬಹುಕಾಲದ ಗೆಳತಿಯ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ ಅಂದಾಗ ಹಲವರ ಮನಸ್ಸಲ್ಲಿ ಬಂದದ್ದು ಚಂದನಾ ಹೆಸರು.
ಸ್ಯಾಂಡಲ್‌ವುಡ್‌ನಲ್ಲಿ ತುಂಬ ಕಡಿಮೆ ಸಮಯದಲ್ಲಿ ವಾಸುಕಿ ವೈಭವ್ ಅವರು ಅನೇಕ ಹಿಟ್ (hit song) ಗೀತೆಗಳನ್ನು ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಅವರು ರಚಿಸಿದ 'ಮನ್ಸಿಂದ ಯಾರೂನೂ ಕೆಟ್ಟವರಲ್ಲ' ಎನ್ನುವ ಹಾಡು ಬಹಳ ಜನಪ್ರಿಯತೆಯನ್ನು ಪಡೆದಿದೆ. 'ಹಾಡು ಕರ್ನಾಟಕ' ರಿಯಾಲಿಟಿ ಶೋ ವೇದಿಕೆಯಲ್ಲಿ ಮೂರುವರೆ ವರ್ಷದ ಪುಟ್ಟ ಪೋರಿ ಈ ಹಾಡನ್ನು ಹಾಡಿದ್ದಳು, ಕಿಚ್ಚ ಸುದೀಪ್ ಕೂಡ ಈ ಹಾಡು ಹಾಡಿದ್ದು ವಿಶೇಷ. ಮೂಲತಃ ರಂಗಭೂಮಿ ಕಲಾವಿದನಾಗಿದ್ದ ವಾಸುಕಿ ಇಂದು ಚಿತ್ರರಂಗದಲ್ಲಿ ಬೇಡಿಕೆಯ ಸಂಗೀತ ಸಂಯೋಜಕನಾಗಿ (music composer) ಗುರುತಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅವರ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು', 'ಒಂದಲ್ಲ ಎರಡಲ್ಲ', 'ಫ್ರೆಂಚ್ ಬಿರಿಯಾನಿ', 'ಬಡವ ರಾಸ್ಕಲ್', 'ಮ್ಯಾನ್ ಒನ್ ದಿ ಮ್ಯಾಚ್', 'ಹರಿಕಥೆ ಅಲ್ಲ ಗಿರಿಕಥೆ', 'ತತ್ಸಮ ತದ್ಭವ' ಮೊದಲಾದ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದೀಗ ಈ ಯುವ ಸಂಗೀತ ನಿರ್ದೇಶಕನ ಕೈ ಹಿಡಿಯೋ ಚದುರೆ ಯಾರಿರಬಹುದು ಅಂತ ಜನ ಕುತೂಹಲದಿಂದ ಕಾಯುತ್ತಿದ್ದಾರೆ.
ರಾತ್ರಿ ಅಮ್ಮ ನೆನಪಾಗ್ತಾಳೆ!: ಬಿಗ್‌ಬಾಸ್ ಕಂಟೆಸ್ಟೆಂಟ್ ಭಾಗ್ಯಶ್ರೀ ಮಗನ ಮಾತು ವೈರಲ್