ಸರ್ಕಾರದಿಂದ ಆಸ್ತಿ ತೆರಿಗೆ ವಿನಾಯಿತಿ ಹಾಗೂ ಆರ್ಥಿಕ ನೆರವು ನೀಡುವಂತೆ ಪ್ರದರ್ಶಕರಿಂದ ಮನವಿ!

Suvarna News   | Asianet News
Published : May 14, 2021, 11:22 AM IST
ಸರ್ಕಾರದಿಂದ ಆಸ್ತಿ ತೆರಿಗೆ ವಿನಾಯಿತಿ ಹಾಗೂ ಆರ್ಥಿಕ ನೆರವು ನೀಡುವಂತೆ ಪ್ರದರ್ಶಕರಿಂದ ಮನವಿ!

ಸಾರಾಂಶ

ಲಾಕ್‌ಡೌನ್‌ನಿಂದ ಕನ್ನಡ ಚಿತ್ರರಂಗದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು, ಕರ್ನಾಟಕ ಚಿತ್ರ ಪ್ರದರ್ಶನಕರ ಸಂಘಕ್ಕೆ ನೆರವು ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ಕರ್ನಾಟಕದಲ್ಲಿ ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ, ಪ್ರತೀ ಸಲವೂ ಮೊದಲು ಲಾಕ್‌ ಮಾಡುವುದು ಚಿತ್ರಮಂದಿರವನ್ನು, ಸಿನಿಮಾ ಅಥವಾ ಧಾರಾವಾಹಿ ಚಿತ್ರೀಕರಣವನ್ನು. ಇದರಿಂದ ಕಲಾವಿದರು, ನಿರ್ದೇಶಕರು ಮಾತ್ರವಲ್ಲದೇ ಪ್ರದರ್ಶಕರೂ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ತಮ್ಮ ಸಹಾಯಕ್ಕೆ ಸರ್ಕಾರ ನಿಲ್ಲಬೇಕು ಎಂದು ಪ್ರದರ್ಶನಕರ ಸಂಘ ಮನವಿ ಮಾಡಿಕೊಂಡಿದೆ. 

ಜನತಾ ಕರ್ಫ್ಯೂ: ಸೀರಿಯಲ್, ಸಿನಿಮಾ ಚಿತ್ರೀಕರಣ ಬಂದ್, ಬಿಗ್ ಬಾಸ್ ಕಥೆ ಏನು?

2020ರ ಲಾಕ್‌ಡೌನ್‌ ಸಮಯದಲ್ಲಿ ಸುಮಾರು 8 ತಿಂಗಳ ಕಾಲ ಚಿತ್ರಪ್ರದರ್ಶನವನ್ನು ಬಂದ್ ಮಾಡಲಾಗಿತ್ತು. ಈ ಲಾಕ್‌ಡೌನ್‌ನಲ್ಲೂ ಅದೇ ರೀತಿ ಸ್ಥಗಿತಗೊಳಿಸಲಾಗಿದೆ. ಈ ಹಿಂದೆಯೇ ಉಂಟಾದ ಆರ್ಥಿಕ ನಷ್ಟದ ಬಗ್ಗೆ ನೆರವು ನೀಡುವ ಭರಸವೆಯನ್ನು ಸರ್ಕಾರ ನೀಡಿತ್ತು. 11.11.2020 ಉಪ ಮುಖ್ಯಮಂತ್ರಿ ಶೀ ಅಶ್ವಥ್ ನಾರಾಯಣ್ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿ, ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳಿಗೆ ಟಿಪ್ಪಣಿ ಮೂಲಕ ಆದೇಶ ನೀಡಿದ್ದರು. 

20.4.2021ರಂದು ವಾರ್ತಾ ಸಚಿವರಾದ ಶ್ರೀ ಸಿ.ಸಿ ಪಾಟೀಲರು ಸಹ ಸಭೆ ನಡೆಸಿದರು, ಈ ಸಂದರ್ಭದ ಸಂಕಷ್ಟವನ್ನು ಅವರ ಗಮನಕ್ಕೆ ತರಲಾಗಿತ್ತು. ಅರ್ಥಿಕ ನೆರವು ನೀಡುವ ಭರವಸೆಯನ್ನು ನೀಡಿದ್ದರು.  ಕಳೆದ ಸಾಲಿನ ಬೇಡಿಕೆಗಳಾದ ಮಾಸಿಕ ವಿದ್ಯುತ್ ಮತ್ತು ನೀರಿನ ಶುಲ್ಕ, ಆಸ್ತಿ ತೆರಿಗೆ ರಿಯಾಯಿತಿ, ಕಾರ್ಮಿಕರಿಗೆ ಧನಸಹಾಯ, ಚಿತ್ರರಂಗವನ್ನು ಕೈಗಾರಿಕಾ ವಲಯ ಘೋಷಣೆ... ಹೀಗೆ ಬೇಡಿಕೆಗಳಿಗೆ ಪರಿಹಾರ ನೀಡುವಂತೆ ಕೋರಲಾಗಿತ್ತು. ಅಲ್ಲದೆ ಸರ್ಕಾರವೇ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿರುವ ಕಾರಣ ಪ್ರಸ್ತುತ ರಾಜ್ಯದ ಎಲ್ಲಾ ಚಿತ್ರಮಂದಿರಗಳ ಆಸ್ತಿ ತೆರಿಗೆ ಪಾವತಿ ಮಾಡಲು ಶಕ್ತರಲ್ಲದ ಕಾರಣ ಹಾಗೂ ಆರ್ಥಿಕ ಸಂಕಷ್ಟ ಹೊಂದಿರುವುದರಿಂದ 20-21ನೇ ಪಾಲಿನ ಆಸ್ತಿ ತೆರಿಗೆ ಪಾವತಿಗೆ ರಿಯಾಯಿತಿಯನ್ನು ನೀಡಬೇಕೆಂದು ಆಗ್ರಹಿಸಲಾಗಿದೆ. 

Kannada News Entertainment Sandalwood ಜೂನ್‌‌ವರೆಗೂ ಚಿತ್ರಮಂದಿರಗಳು ಕ್ಲೋಸ್‌; ಕೆಜಿಎಫ್ 2 ರಿಲೀಸ್ ಆಗಲ್ಲ? 

ಚಿತ್ರರಂಗವನ್ನು ಕೈಗಾರಿಕಾ ವಲಯವೆಂದು ಘೋಷಿಸುವ ಬಗ್ಗೆ ಕಾರ್ಯಪ್ರವೃತ್ತವಾಗಬೇಕೆಂದು ಪ್ರದರ್ಶಕರ ಸಂಘದ ಪರವಾಗಿ ಕೆ.ವಿ.ಚಂದ್ರಶೇಖರ್ ಪ್ರದರ್ಶಕರ ಸಂಘದ ಪರವಾಗಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ ಮನವಿ ಸಲ್ಲಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಒಂದೇ ದಿನದಲ್ಲಿ ದಾಖಲೆ ಬರೆದ ಸುದೀಪ್​ Mark Trailer​: ಇಷ್ಟೊಂದು Views​ ಆಗಿದ್ದು ನಿಜನಾ? ಏನಿದು ಚರ್ಚೆ?
ಸಲಗ Vs ರೂಲರ್: ಅಳಿದು ಉಳಿದವರ ಲ್ಯಾಂಡ್ ಲಾರ್ಡ್ ದುನಿಯಾದಲ್ಲಿ ಶೆಟ್ಟರ ವಾರ್!