ಸದ್ಯವೇ ಕನ್ನಡ ಚಿತ್ರೋದ್ಯಮ ಬಂದ್; ಉಪೇಂದ್ರರ 'A' ರೀ-ರಿಲೀಸ್‌ಗೆ ಪೆಟ್ಟು ಕೊಡುವ ಹುನ್ನಾರವೇ?

By Shriram Bhat  |  First Published May 22, 2024, 12:02 PM IST

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಸಿನಿಮಾಗಳು ಇತ್ತೀಚೆಗೆ ರಿಲೀಸ್ ಆಗದೇ ಬಹಳ ಕಾಲವಾಯ್ತು. ಈ ಹಿನ್ನೆಲೆಯಲ್ಲಿ ಹೊಸಬರ ಚಿತ್ರಗಳು ಹೀಗೆ ಬಂದು ಹಾಗೆ ಹೋಗುತ್ತಿವೆ. ಪ್ರತಿವಾರವೂ ಚೇಂಜ್‌ ಆಗುವ ಚಿತ್ರಗಳು ಯಾವ ಪ್ರೇಕ್ಷಕರಿಗೂ ತಲುಪುತ್ತಿಲ್ಲ. ಕಾರಣ...


ಕನ್ನಡ ಚಿತ್ರೋದ್ಯಮ ಬಂದ್ ಮಾಡುತ್ತಿದ್ದಾರೆ. ಇದು ಶಾಶ್ವತ ಬಂದ್‌ ಅಲ್ಲ, ಒಂದು ತಿಂಗಳು ಮಟ್ಟಿಗೆ ಬಂದ್ ಆಗಲಿವೆ' ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾಗಳು ಹಾಗೂ ಹಲವು ಯೂಟ್ಯೂಬ್ ಚಾನೆಲ್‌ ಮೂಲಕ ಹರಡುತ್ತಿವೆ. ಹಾಗಿದ್ದರೆ ಇದೇನು ಸುದ್ದಿ? ನಿಜವಾಗಿಯೂ ಒಂದು ತಿಂಗಳ ಮಟ್ಟಿಗೆ ಬಂದ್ ಆಗುತ್ತದೆಯೇ? ಯಾಕೆ ಹೀಗೆ ಮಾಡಲಿದ್ದಾರೆ? ಉಪೇಂದ್ರ ನಿರ್ದೇಶನ ಹಾಗೂ ನಟನೆಯ A ಸಿನಿಮಾ ರೀ-ರಿಲೀಸ್ ಆಗಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವಾಗಲೇ ಯಾಕೆ ಇಂಥದ್ದೊಂದು ನಿರ್ಧಾರದ ಸುದ್ದಿ ಹರಿದಾಡುತ್ತಿದೆ? ಇದೊಂದು ಹುನ್ನಾರವೇ? ಅಥವಾ ಇದರ ಹಿಂದಿನ ಅಸಲಿಯತ್ತೇನು? 

ಈ ಬಗ್ಗೆ ಬೆಳಕು ಚೆಲ್ಲಲು ಹೊರಟರೆ, ಚಿತ್ರೋದ್ಯಮ ಬಂದ್ ಮಾಡುವ ಬಗ್ಗೆ ಮಾತುಕತೆ ನಡೆದಿಲ್ಲ. ಆದರೆ ಪುನಶ್ಚೇತನ ಬಗ್ಗೆ ಮಾತುಕತೆ ನಡೆಯುತ್ತಿದೆ. ತೆಲುಗು ಚಿತ್ರೋದ್ಯಮ ಎರಡು ತಿಂಗಳು ಕೆಲಸಗಳನ್ನು ಬಂದ್ ಮಾಡಿಕೊಂಡು ಕುಳಿತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ವದಂತಿ ಹಬ್ಬಿದೆ ಅಷ್ಟೇ. ಟಾಲಿವುಡ್‌ ಮಾಡಿದಂತೆ ಸ್ಯಾಂಡಲ್‌ವುಡ್ ಕೂಡ ಅನುಸರಿಸಬಹುದು ಎಂಬ ಊಹಾಪೋಹವೇ ಈ ಸುದ್ದಿಗೆ ಅಸಲಿ ಕಾರಣ ಎನ್ನಲಾಗುತ್ತಿದೆ. ಆದರೆ, ಅಲ್ಲಿನ ನಿರ್ಧಾರವೇ ಬೇರೆ, ಇಲ್ಲಿನ ನಿರ್ಧಾರವೇ ಬೇರೆ ಎಂಬುದು ನಿಜ ಸಂಗತಿ. 

Tap to resize

Latest Videos

ಉಪೇಂದ್ರರ A ಸಿನಿಮಾ ರೀಮೇಕ್‌ಗೆ ನಿರ್ಧರಿಸಿದ್ರು ಶಾರುಖ್‌ ಖಾನ್, ಯಾಕೆ ಮಾಡ್ಲಿಲ್ಲ?

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಸಿನಿಮಾಗಳು ಇತ್ತೀಚೆಗೆ ರಿಲೀಸ್ ಆಗದೇ ಬಹಳ ಕಾಲವಾಯ್ತು. ಈ ಹಿನ್ನೆಲೆಯಲ್ಲಿ ಹೊಸಬರ ಚಿತ್ರಗಳು ಹೀಗೆ ಬಂದು ಹಾಗೆ ಹೋಗುತ್ತಿವೆ. ಪ್ರತಿವಾರವೂ ಚೇಂಜ್‌ ಆಗುವ ಚಿತ್ರಗಳು ಯಾವ ಪ್ರೇಕ್ಷಕರಿಗೂ ತಲುಪುತ್ತಿಲ್ಲ. ಕಾರಣ, ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರು ಥಿಯೇಟರ್‌ ಕಡೆ ಮುಖ ಕೂಡ ಹಾಕುತ್ತಿಲ್ಲ. ಒಳ್ಳೆಯ ಸಿನಿಮಾಗಳು ಬರುತ್ತಿಲ್ಲವೇ? ಅಥವಾ ಸಿನಿಪ್ರೇಕ್ಷಕರು ಬೇರೆ ಯಾವುದಾದರೂ ಕಾರಣಕ್ಕೆ ಸಿನಿಮಾ ನೋಡುವುದನ್ನು ಕಡಿಮೆ ಮಾಡುತ್ತಿದ್ದಾರೆಯೇ? ಈ ಎಲ್ಲದರ ಬಗ್ಗೆ ಚರ್ಚೆ ನಡೆಯುತ್ತಿದೆ. 

ಪೋರ್ನ್‌ ಸ್ಟಾರ್ ಖ್ಯಾತಿಗೂ ಮೊದಲು ಸನ್ನಿ ಲಿಯೋನ್ ಏನ್ಮಾಡ್ತಿದ್ರು..?

ಹಾಗಿದ್ದರೆ ಅಸಲಿ ಕಾರಣವೇನು? ಕೆಜಿಎಫ್ ಬಳಿಕ ಸ್ಟಾರ್ ಸಿನಿಮಾಗಳು ಹೆಚ್ಚಾಗಿ ಪ್ಯಾನ್ ಇಂಡಿಯಾ ಮೇಕಿಂಗ್ ಹಾದಿ ಹಿಡಿಯುತ್ತಿವೆ. ಹೀಗಾಗಿ ಒಂದು ಸಿನಿಮಾ ಪ್ರೀ-ಪೊಡಕ್ಷನ್, ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಥಿಯೇಟರ್‌ಗೆ ಬರುವಷ್ಟರಲ್ಲಿ ಎರಡು-ಮೂರು ವರ್ಷಗಳು ಹಿಡಿಯುತ್ತಿವೆ, ಕನ್ನಡದಲ್ಲಿ ಈಗಿರುವ ಸ್ಟಾರ್‌ಗಳು ಎಲ್ಲರೂ ಈ ಮೊದಲು ವರ್ಷಕ್ಕೆ ಒಂದೋ ಎರಡೋ ಸಿನಿಮಾಗಳನ್ನು ಮಾಡುತ್ತಿದ್ದರು. ಈಗ ಹಾಗಿಲ್ಲ. ಆದ್ದರಿಂದ ಸಹಜವಾಗಿಯೇ ಥಿಯೇಟರ್‌ ಮಾಲೀಕರು ಹೊಸಬರ ಸಿನಿಮಾ ಪ್ರದರ್ಶನದಿಂದ ಕೈ ಸಟ್ಟುಕೊಳ್ಳುತ್ತಿದ್ದಾರೆ. 

ಅಸಿಸ್ಟಂಟ್ ಡೈರೆಕ್ಟರ್ ಕೆಲಸ ಕೇಳ್ಕೊಂಡು ಬಂದಿದ್ರು ಕಿಚ್ಚ ಸುದೀಪ್‌; ರಿಜೆಕ್ಟ್ ಮಾಡದ್ಯಾಕೆ ಉಪೇಂದ್ರ?

ಸ್ಟಾರ್ ಸಿನಿಮಾ ಬರುವುದನ್ನೇ ಕಾದುಕೊಂಡಿದ್ದಾರೆ. ಅಲ್ಲಯವರೆಗೆ ಥೀಯೇಟರ್‌ ಮಾಲೀಕರ ಜೀವನ ನಿರ್ವಹಣೆ ಹೇಗೆ ಎಂಬ ಪ್ರಶ್ನೆ ಈಗ ತಲೆದೋರಿದೆ. ಹೊಸಬರ ಸಿನಿಮಾ ಪ್ರದರ್ಶನ ಆಗಬಾರದು ಅಂತಲ್ಲ. ಆದರೆ ಪ್ರೇಕ್ಷಕರು ಇಲ್ಲದೇ ಸಿನಿಮಾ ಪ್ರದರ್ಶನ ಅಸಾಧ್ಯವಲ್ಲವೇ? ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರೋದ್ಯಮ ಹಾಗೂ ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸುತ್ತಿದೆ. ಚಿತ್ರೋದ್ಯಮ ಒಂದು ತಿಂಗಳು ಬಂದ್ ಆಗಲಿದೆ ಎಂಬ ಅನಧಿಕೃತ, ಸತ್ಯಕ್ಕೆ ದೂರವಾದ ಸುದ್ದಿ ಈ ಹಿನ್ನೆಲೆಯಲ್ಲಿ ಹಬ್ಬಿದೆ. 

ತೆಲುಗು ಸೀರಿಯಲ್‌ನಲ್ಲಿ ಕನ್ನಡಿಗ ಸಿದ್ದಾರ್ಥ್ ಮಿಂಚು; ಮನೆಮಾತಾದ ಹ್ಯಾಂಡ್‌ಸಮ್ ಬಾಯ್!

ಆದರೆ, ಸದ್ಯ ಚಿತ್ರೋದ್ಯಮ ಸಂಕಷ್ಟದಲ್ಲಿರುವುದಂತೂ ಹೌದು. ಇದಕ್ಕೆ ಪರಿಹಾರದ ದಾರಿ ಹುಡುಕಲಾಗುತ್ತಿದೆ. ಆದರೆ, ಉಪೇಂದ್ರ ಅವರ ಮರುಬಿಡುಗಡೆ ಕಂಡಿರುವ A ಸಿನಿಮಾಗೂ ಈ ಚಿತ್ರೋದ್ಯಮ ಬಂದ್ ಮಾಡುವ ಸುದ್ದಿಗೂ ಯಾವುದೇ ಲಿಂಕ್ ಇಲ್ಲ. ಆದರೆ, ಕನ್ನಡ ಸಿನಿಮಾ ಉದ್ಯಮದ ಪುನಶ್ಚೇತನದ ಬಗ್ಗೆ ದಾರಿಯ ಹುಡುಕಾಟ ಶುರುವಾಗಿರುವುದು ಹೌದು. ಅದಕ್ಕೆ ಬೇರೆ ಯಾವುದೇ ಪರಿಹಾರದ ದಾರಿ ಸಿಗದಿದ್ದರೆ ಕೊನೆಯ ಅಸ್ತ್ರ ಎಂಬಂತೆ, ಮುಂದೆ ಚಿತ್ರೋದ್ಯಮ ಶಾರ್ಟ್ ಟರ್ಮ್ ಬಂದ್ ದಾರಿ ಹಿಡಯಯಬಹುದಷ್ಟೇ!

click me!