ಫ್ಯಾನ್ ಆಫ್ ರೆಬೆಲ್ ಸ್ಟಾರ್: ಅಂಬಿ ಅಭಿಮಾನಿಯ ಕಥೆಗೆ ನಾಯಕನ್ಯಾರು?

Published : Mar 14, 2019, 08:36 AM IST
ಫ್ಯಾನ್ ಆಫ್ ರೆಬೆಲ್ ಸ್ಟಾರ್: ಅಂಬಿ ಅಭಿಮಾನಿಯ ಕಥೆಗೆ ನಾಯಕನ್ಯಾರು?

ಸಾರಾಂಶ

’ಫ್ಯಾನ್ ಆಫ್ ರೆಬೆಲ್ ಸ್ಟಾರ್’ ಎಂಬ ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾವೊಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ನಾಯಕನ್ಯಾರು ಎಂದು ಇನ್ನೂ ಪಕ್ಕಾ ಆಗಿಲ್ಲ. 

ಬೆಂಗಳೂರು (ಮಾ. 14): ಪತಿಬೇಕು ಡಾಟ್ ಕಾಮ್ ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿ ಹೊರ ಹೊಮ್ಮಿರುವವರು ರಾಕೇಶ್. ಈ ಸಿನಿಮಾ ಮೂಲಕ ನವಿರಾದ ಕಥೆ ಹೇಳಿದ್ದ ಶೈಲಿಗೆ ಜನ ಮಾರು ಹೋಗಿದ್ದರು. 

ಈ ಕಾರಣದಿಂದಲೇ ರಾಕೇಶ್ ಮುಂದೆ ಯಾವ ಚಿತ್ರವನ್ನು ನಿರ್ದೇಶನ ಮಾಡಬಹುದೆಂಬ ಬಗ್ಗೆಯೂ ಪ್ರೇಕ್ಷಕರು ಕಾತರ ಹೊಂದಿದ್ದರು. ಅದೀಗ ಜಾಹೀರಾಗಿದೆ! ರಾಕೇಶ್ ಅವರ ಮುಂದಿನ ಚಿತ್ರಕ್ಕೆ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಎಂಬ ಟೈಟಲ್ ನಿಗಧಿಯಾಗಿದೆ.

ಹೆಸರೇ ಹೇಳುವಂತೆ ಇದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಯೊಬ್ಬನ ಕಥೆ ಹೊಂದಿರೋ ಚಿತ್ರ. ಈ ಇಡೀ ಸಿನಿಮಾ ಅಂಬರೀಶ್ ಅವರ ಉಸಿರಿನಂತಿದ್ದ ಮಂಡ್ಯದ ಮಣ್ಣಲ್ಲಿಯೇ ನಡೆಯುತ್ತದೆ. ಅಲ್ಲಿಯೇ ಚಿತ್ರೀಕರಣ ಮಾಡಲೂ ರಾಕೇಶ್ ಯೋಜನೆ ಹಾಕಿಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅಂಬಿ ಅಭಿಮಾನಿಯಾಗಿ ನಟಿಸುತ್ತಿರುವವರ್ಯಾರು ಎಂಬುದನ್ನು ಮಾತ್ರ ಗೌಪ್ಯವಾಗಿಟ್ಟಿದ್ದಾರೆ. 

ಅವರ್ಯಾರೆಂದು ಗೆಸ್ ಮಾಡೋ ಕೆಲಸವನ್ನು ಸದ್ಯಕ್ಕೆ ಜನರಿಗೇ ಬಿಟ್ಟಿದ್ದಾರೆ! ಈ ಚಿತ್ರದ ಹೀರೋ ಅಂಬರೀಶ್ ಆಪ್ತ ವಲಯದಲ್ಲಿದ್ದವರು ಅನ್ನೋದರ ಹೊರತಾಗಿ ಬೇರ್ಯಾವ ಸುಳಿವೂ ಇಲ್ಲ. ವಿಶೇಷ ಅಂದ್ರೆ ಈ ಸಿನಿಮಾವನ್ನು ಓರ್ವ ಉದ್ಯಮಿ ಸೇರಿದಂತೆ ಅಪ್ಪಟ ಅಂಬಿ ಅಭಿಮಾನಿಗಳೇ ಸೇರಿಕೊಂಡು ರೂಪಿಸುತ್ತಿದ್ದಾರೆ.

ಅಂಬರೀಶ್ ಅವರ ಅಂತಿಮ ದರ್ಶನ ನಡೆದಿದ್ದ ಮಂಡ್ಯ ಮೈದಾನದಲ್ಲಿಯೇ ಇದರ ಆರಂಭವಾಗಲಿದೆ. ಇದರ ಹೀರೋ ಯಾರೆಂಬುದರಿಂದ ಮೊದಲ್ಗೊಂಡು ಎಲ್ಲ ಮಾಹಿತಿಗಳನ್ನೂ ಕೂಡಾ ನಿರ್ದೇಶಕ ರಾಕೇಶ್ ಒಂದಾದ ಮೇಲೊಂದರಂತೆ ಜಾಹೀರು ಮಾಡಲಿದ್ದಾರೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?