ಮುಗಿಯೋ ಹಂತದಲ್ಲಿದ್ದ ಡ್ರೋಣ್ ಪ್ರತಾಪ್ ಬಯೋಪಿಕ್; ಕಥೆ ಕೈ ಬಿಟ್ಟ ನಿರ್ದೇಶಕರು?

By Suvarna NewsFirst Published Jul 23, 2020, 3:05 PM IST
Highlights

ಕರ್ನಾಟಕದ ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಬಯೋಪಿಕ್ ಆಗಬೇಕಿದ್ದ ಸಿನಿಮಾ ಈಗ ಯಾವ ಹಂತದಲ್ಲಿದೆ? ಚಿತ್ರ ನಿರ್ದೇಶಕರು ಇದರ ಬಗ್ಗೆ ಏನು ಹೇಳುತ್ತಾರೆ?

ಮಂಡ್ಯದ ಮಳವಳ್ಳಿ ಹುಡುಗ ಡ್ರೋಣ್ ಪ್ರತಾಪ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕರ್ನಾಟಕದ ಯುವ ವಿಜ್ಞಾನಿ ಎಂದೇ ಹೆಸರು ಪಡೆದಿದ್ದ ಪ್ರತಾಪ್ ಈಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.  ತ್ಯಾಜ್ಯ ಎಲೆಕ್ಟ್ರಾನಿಕ್‌ ವಸ್ತುಗಳಿಂದ 600ಕ್ಕೂ ಹೆಚ್ಚು ಡ್ರೋಣ್‌ಗಳನ್ನು ತಯಾರಿಸಿರುವುದಾಗಿ ಹೇಳಿ ಕೊಂಡಿದ್ದ ಈ ಪ್ರತಾಪ್ ಎರಡು ವರ್ಷಗಳಿಂದ ಕನ್ನಡಿಗರಿಗೆ ಹೀರೋನೇ ಆಗಿದ್ದರು.  ಮಕ್ಕಳಿಗೆ, ಅದರಲ್ಲಿಯೂ ಮಧ್ಯಮ ವರ್ಗದ ಮಕ್ಕಳಿಗೆ ಆದರ್ಶಪ್ರಾಯರಾಗಿದ್ದರು.

ಭಾರತವನ್ನು ಅನೇಕ ದೇಶಗಳಲ್ಲಿ ಪ್ರತಿನಿಧಿಸಿ, ಅಂತಾರಾಷ್ಟ್ರೀಯ ವಿಜ್ಞಾನ ಪ್ರದರ್ಶನದಲ್ಲಿ ಚಿನ್ನದ ಪದಕ ಪಡೆದುಕೊಂಡಿರುವುದಾಗಿ ಪ್ರತಾಪ್‌ ಹೇಳಿರುವುದೆಲ್ಲವೂ ಸುಳ್ಳೆಂದು ವೆಬ್‌ಸೈಟ್‌‌ವೊಂದು ರಿಪೋರ್ಟ್‌ ಮಾಡಿತ್ತು. ಆ ನಂತರ ಅನೇಕ ಮಾಧ್ಯಮಗಳು ಪ್ರತಾಪ್‌ರನ್ನು ಮಾತನಾಡಿಸಿ, ತರಾಟೆಗೆಗ ತೆಗದುಕೊಂಡು ವಿಚಾರಣೆ ಮಾಡಲು ಪ್ರಾರಂಭಿಸಿದ್ದರು. ಈ ವಿಚಾರವಾಗಿ ಪ್ರತಾಪ್‌ ಊಹಿಸಿಕೊಳ್ಳಲಾಗದಷ್ಟು ಟ್ರೋಲ್‌ ಆದರು.

ಬಡ ರೈತನ ಮಗನ ಸಾಧನೆ:
ಬಡ ರೈತನ ಪುತ್ರ ಮಾಡಿರುವ ಸಾಧನೆಯನ್ನು ಸಿನಿಮಾ ರೂಪದಲ್ಲಿ ತೋರಿಸಬೇಕೆಂದು ನಿರ್ದೇಶಕ ರಾಜಶೇಖರ್ ನಿರ್ಧರಿಸಿದ್ದರು. ಇದೀಗ ರಾಜಶೇಖರ್ ನೀಡಿರುವ ಹೇಳಿಕೆಯನ್ನು ಖಾಸಗಿ ವೆಬ್‌ಸೈಟ್‌ ವರದಿ ಮಾಡಿದ್ದು, ಎಲ್ಲೆಡೆ ವೈರಲ್ ಆಗತ್ತಿದೆ.

ಶುರುವಾಯ್ತು ಬಿಗ್ ಬಾಸ್‌ ಸೀಸನ್‌-8; ಮೊದಲ ಸ್ಪರ್ಧಿ ಇವರೇ ನೋಡಿ!

'ಪ್ರತಾಪ್ ತಮ್ಮ ಸಾಧನೆ ಬಗ್ಗೆ ನೀಡಿರುವ ಸುಳ್ಳು ಹೇಳಿಕೆಯನ್ನು ಸತ್ಯ ಎಂದುಕೊಂಡು ಸಿನಿಮಾ ಮಾಡಿ ಯುವ ಜನಾಂಗಕ್ಕೆ ಸ್ಫೂರ್ತಿ ತುಂಬಲು ತೀರ್ಮಾನಿಸಿದ್ದೆ.  ಆದರೆ ಪ್ರತಾಪ್ ಯಾವ ಸಾಧನೆಯನ್ನೇ ಮಾಡಿಲ್ಲ ಎಂದು ತಿಳಿದು ಸಿನಿಮಾ ಮಾಡುವ ನಿರ್ಧಾರವನ್ನು ಕೈ ಬಿಟ್ಟಿದ್ದೇನೆ,' ಎಂದು ನಿರ್ದೇಶಕ ರಾಜಶೇಖರ್‌ ಹೇಳಿದ್ದಾರೆ.  ಅಷ್ಟೇ ಅಲ್ಲದೆ ಚಿತ್ರ ನಿರ್ಮಿಸಲು ಅನುಮತಿ ಕೋರಿ, ಅಡ್ವಾನ್ಸ್‌ ಆಗಿ ನೀಡಿರುವ ಹಣವನ್ನು ಹಿಂದಿರುಗಿಸುವಂತೆ ಪ್ರತಾಪ್‌ಗೆ ಹೇಳಿದ್ದಾರೆ.

ಪ್ರತಾಪ್‌ ಜೀವನ ಚರಿತ್ರೆಯನ್ನು ಕಥೆ ಮಾಡಲು 2 ಲಕ್ಷ ರೂ. ಹಣ ಸಂಭಾವನೆ ಮತ್ತು ಚಿತ್ರ  ಗಳಿಸುವ ಲಾಭದಲ್ಲಿ ಶೇ.20ರಷ್ಟು ಪ್ರತಾಪ್ ಅವರಿಗೆ ನೀಡಬೇಕೆಂದು ಒಪ್ಪಂದ ನಡೆದಿತ್ತು ಎನ್ನಲಾಗಿದೆ.  ಚಿತ್ರಕ್ಕೆ ಶೇ.90  ಪೂರ್ಣಗೊಂಡಿದ್ದು ಕ್ಲೈಮ್ಯಾಕ್ಸ್‌ ಚಿತ್ರೀಕರಣ ಮಾತ್ರ ಬಾಕಿ ಉಳಿದಿತ್ತು ಎನ್ನಲಾಗಿದೆ.

click me!