
ಸ್ಯಾಂಡಲ್‌ವುಡ್ ಯುವ ನಟ ಚಿರಂಜೀವಿ ಸರ್ಜಾಗೆ ಅಕ್ಟೋಬರ್ 17ಕ್ಕೆ 35 ವಸಂತಗಳು ತುಂಬುತ್ತಿತ್ತು. ಈ ಸವಿ ನೆನಪಿನ ಪ್ರಯುಕ್ತ ಹಾಗೂ ಇದೇ ಸಂದರ್ಭದಲ್ಲಿ ಚಿರು ಪತ್ನಿ ಮೇಘನಾಗೂ ಡ್ಯೂ ಡೇಟ್ ಇರುವ ಪ್ರಯುಕ್ತ ಪ್ರಯುಕ್ತ ಧ್ರುವ ಸರ್ಜಾ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ. ಬೆಂಗಳೂರಿನ ಐಟಿಸಿ ಗಾರ್ಡನಿಯಾದಲ್ಲಿ ಮೇಘನಾ ರಾಜ್‌ಗೆಂದು ಆಯೋಜಿಸಲಾಗಿದ್ದ ಸರ್ಪ್ರೈಸ್ ಬೇಬಿ ಶವರ್ ಮೊಮೆಂಟ್ಸ್ ಅನ್ನು ಈ ವಿಡಿಯೋ ತೋರಿಸಲಾಗಿದೆ.
ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬ ಪುಟ್ಟ ಕಂದಮ್ಮನ ನಿರೀಕ್ಷೆಯಲ್ಲಿದ್ದಾರೆ. ಚಿರು ಮತ್ತೆ ಮಗುವಾಗಿ ನಮ್ಮಲ್ಲಿ ಹುಟ್ಟಿ ಬರಲಿದ್ದಾರೆ ಎಂದು ಕುಟುಂಬ ಕಾಯುತ್ತಿದೆ. ಬೇಬಿ ಶವರ್‌ನಲ್ಲಿ ಥ್ರೀ ಲೇಯರ್ ಕೇಕ್ ಕಟ್ ಮಾಡುವ ಮೂಲಕ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲು ಚಿರು ಕುಟುಂಬದ ಸದಸ್ಯರು, ಮೇಘನಾಗೆ ಶುಭ ಹಾರೈಸಿದ್ದಾರೆ. ಅಲ್ಲದೇ ಆರ್ಜುನ್ ಸರ್ಜಾ ಬರ್ತಡೇ ಹಾಡಿಗೆ ವಿಶೇಷವಾದ ಪದಗಳನ್ನು ಸೇರಿಸಿ ವಿಭಿನ್ನವಾಗಿ ಚಿರಂಜೀವಿ ಸರ್ಜಾ, ಮೇಘನಾ ಹಾಗೂ ಹುಟ್ಟಲಿರುವ ಮಗುವಿಗೆ ವಿಶ್ ಮಾಡಿದ್ದಾರೆ.
"
ಧ್ರುವ ಆಯೋಜಿಸಿದ್ದ ಸರ್ಪ್ರೈಸ್ ಬೇಬಿ ಶವರ್ ನೋಡಿ ಮೇಘನಾ ಸಂತೋಷದಿಂದ ಕಣ್ಣೀರಿಟ್ಟಿದ್ದಾರೆ. ಮಧ್ಯದಲ್ಲಿ ಚಿರು ನಗುತ್ತಿರುವ ಪೋಟೋ ಇದ್ದು, ಅಕ್ಕ-ಪಕ್ಕದಲ್ಲಿ ಅವರಿಬ್ಬರ ಮದುವೆ ಫೋಟೋವನ್ನೂ ಹಾಕಲಾಗಿತ್ತು. ಆಪ್ತರು ಮಾತ್ರ ಕಾರ್ಯಕ್ರದಲ್ಲಿ ಭಾಗಿಯಾಗಿದ್ದರು.
ಮೇಘನಾ ರಾಜ್‌ಗೆ ಸರ್ಪ್ರೈಸ್ ಬೇಬಿ ಶವರ್ ಮಾಡಿಸಿದ ಧ್ರುವ; ಫೋಟೋ ನೋಡಿ!
'ಹ್ಯಾಪಿ ಬರ್ತಡೇ ಚಿರು. ಮೈ ಲವ್ ಫಾರ್‌ಎವರ್. ಜೂನಿಯರ್ ಚಿರು ಶೀಘ್ರದಲ್ಲಿ ಆಗಮಿಸಿಲಿದ್ದಾನೆ,' ಎಂದು ಧ್ರುವ ಸರ್ಜಾ ಬರೆದುಕೊಂಡಿದ್ದಾರೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ಇದೇ ವಿಡಿಯೋವನ್ನು ಮೇಘನಾ ಸ್ಟೋರಿಯಲ್ಲಿ 'sometimes you don't loose you keep gaining,'ಎಂದು ಹೇಳಿದ್ದಾರೆ.
ಇನ್ನು ಚಿತ್ರಮಂದಿರಗಳಲ್ಲಿ ಏಳು ತಿಂಗಳ ನಂತರ ಪ್ರದರ್ಶನಗಳು ಶುರುವಾಗಿವೆ. ಈಗಾಗಲೇ ರಿಲೀಸ್ ಆಗಿರುವ ಚಿರಂಜೀವಿ ಸರ್ಜಾ ಅಭಿನಯದ 'ಶಿವಾರ್ಜುನ' ಮತ್ತೆ ರಿಲೀಸ್ ಆಗಿದೆ. ಚಿರು ತಾಯಿ ಅಮ್ಮಾಜಿ ಹಾಗೂ ಸ್ನೇಹಿತರು ಕೆಜಿ ರಸ್ತೆಯ ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ಹಾಗೂ ಅಕ್ಟೋಬರ್ 17ರಂದು ರಾಜಮಾರ್ತಾಂಡ ಚಿತ್ರದ ವಿಡಿಯೋ ಸಾಂಗ್ ಬಿಡುಗಡೆ ಮಾಡಲಾಗುತ್ತಿದೆ. ಇದು ಚಿರಂಜೀವಿ ಕನಸಿನ ಸಿನಿಮಾವಾದ ಕಾರಣ ಮಿಸ್ ಮಾಡದೇ ನೋಡಬೇಕೆಂದು ಮೇಘನಾ ರಾಜ್ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಜೂನ್ 8ರಂದು ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದರು. ಇದೀಗ ಮೇಘನಾ ರಾಜ್ ತುಂಬು ಗರ್ಭಿಣಿಯಾಗಿದ್ದು ಯಾವ ಸಂದರ್ಭದಲ್ಲಿ ಬೇಕಾದರೂ ಮಗುವಿಗೆ ಜನ್ಮ ನೀಡಬಹುದು. ಪತಿಯನ್ನು ಕಳೆದುಕೊಂಡ ದುಃಖದಲ್ಲಿ ಇರುವ ಮೇಘನಾಳ ಮುಖದಲ್ಲಿ ನಗು ತರಿಸಲು ಆಪ್ತರು ಸಾಕಷ್ಟು ಶ್ರಮಿಸಿದ್ದಾರೆ. ಮೇಘನಾಗೆ ಒಳ್ಳೇಯದಾಗಲಿ. ಸುಖ ಪ್ರಸವವಾಗಲಿ ಎಂಬುವುದು ಎಲ್ಲರ ಹಾರೈಕೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.