
ಸ್ಯಾಂಡಲ್‌ವುಡ್ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಿನಸಿ ಸಾಮಾಗ್ರಿ ಹಾಗೂ ಆಹಾರ ಕಿಟ್ ವಿತರಣೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದ್ದಾರೆ.
ಸಂಕಷ್ಟದಲ್ಲಿದವರ ಜತೆ ನಿಲ್ಲುವುದು ನಮ್ಮ ಜವಾಬ್ದಾರಿ ಅಂದ ನಟಿ ರಾಗಿಣಿ ದ್ವಿವೇದಿ
'ರಕ್ತದಾನ ಮಾಡಿರುವೆ. ಇಂದು ತುಂಬಾನೇ ಸ್ಪೆಷಲ್ ದಿನ. ಈ ನನ್ನ ಮೊದಲ ಹೆಜ್ಜೆ ಅನೇಕರಿಗೆ ಸ್ಫೂರ್ತಿಯಾಗಲಿದೆ ಎಂದು ನಂಬಿರುವೆ. ಏಕೆಂದರೆ ಈ ಸಮಯದಲ್ಲಿ ರಕ್ತ ಹಾಗೂ ಪ್ಲಾಸ್ಮಾ ಅಗತ್ಯ ತುಂಬಾ ಇದೆ. ರಕ್ತದಾನ ಮಾಡಿದರೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ದಯವಿಟ್ಟು ರಕ್ತದಾನ ಮಾಡಿ, 5 ಜೀವನಗಳನ್ನು ಉಳಿಸಿ' ಎಂದು ರಾಗಿಣಿ ಬರೆದುಕೊಂಡಿದ್ದಾರೆ.
ರಾಗಿಣಿ ತಮ್ಮ Genext ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿ ದಿನವೂ 500 ಮಂದಿಗೆ ಆಹಾರ ವಿತರಿಸುತ್ತಿದ್ದಾರೆ. ಹಾಗೂ ದಾಸರಹಳ್ಳಿ ಬಳಿ ಇರುವ ಮಂಗಳಮುಖಿಯರ ಸಮುದಾಯಕ್ಕೆ 600 ಪ್ಯಾಕೆಟ್ ರೇಷನ್ ಕಿಟ್ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಸ್ಮಶಾನದಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಅವರ ಕುಟುಂಬಕ್ಕೆ ಉಚಿತ ದಿನಸಿ ಸಾಮಾಗ್ರಿಗಳನ್ನು ಹಂಚಿದ್ದರು. ಲಾಕ್‌ಡೌನ್ ಮುಗಿಯುವವರೆಗೂ ಪ್ರತಿ ದಿನವೂ ಹೀಗೆ ಮಾಡುತ್ತಾರಂತೆ. ಕಳೆದ ವರ್ಷ ಆದ ಲಾಕ್‌ಡೌನ್‌ನಲ್ಲಿಯೂ ರಾಗಿಣಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಈ ವರ್ಷವೂ ಅದೇ ಹಾದಿಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.