
ಏಪ್ರಿಲ್ 22ರಿಂದ ಒಟ್ಟು ಮೂರು ಹಂತಗಳಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ನಡೆಯಲಿದೆ. ಮೊದಲ ಹಂತ ಬೆಳಗಾವಿ, ಎರಡನೇ ಹಂತದ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಲಿದ್ದು, ಮೂರನೇ ಶೆಡ್ಯೂಲ್ ಶೂಟಿಂಗ್ ಎಲ್ಲಿ ಎಂಬುದು ಇನ್ನೂ ಪ್ಲಾನ್ ಆಗಿಲ್ಲ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬರುತ್ತಿರುವ ಸಿನಿಮಾ ಇದಾಗಿದ್ದು, ಕಲಾವಿದರು ಕೂಡ ಎರಡೂ ಭಾಷೆಗೆ ಗೊತ್ತಿರುವವರು ಬೇಕು. ಹೀಗಾಗಿಯೇ ನಾಯಕಿ ಪಾತ್ರಕ್ಕೆ ಹರಿಪ್ರಿಯಾ ಆಯ್ಕೆ ಆಗಿದ್ದಾರೆ. ದೇವರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಉಪೇಂದ್ರ ಸಿನಿಮಾಗಾಗಿ ಒಂದೇ ಕಡೆ 40 ಸೆಟ್ ನಿರ್ಮಾಣ
‘ಕೌಟುಂಬಿಕ ಮನರಂಜನೆಯ ಸಿನಿಮಾ ಇದು. ನನ್ನ ಮತ್ತು ಉಪೇಂದ್ರ ಅವರ ಸ್ಟೈಲಿನ ಸಿನಿಮಾ ಆಗಿರುತ್ತದೆ. ಯುಗಾದಿ ಹಬ್ಬಕ್ಕೆ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿದ್ದೇವೆ. ಶೇಖರ್ ಚಂದ್ರು ಕ್ಯಾಮೆರಾ, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಭಾರೀ ಬಜೆಟ್‌ನ ಭಾರೀ ತಾರಾಗಣ ಇರುವ ಸಿನಿಮಾ ಇದು.
ಮೈಸೂರು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಟಿ ಹರಿಪ್ರಿಯಾ; 'ಪೆಟ್ರೋಮ್ಯಾಕ್ಸ್' ಪಯಣ!
‘ಕಬ್ಜ’ ಹಾಗೂ ನನ್ನ ನಿರ್ದೇಶನದ ಸಿನಿಮಾ ಏಕಕಾಲದಲ್ಲಿ ಚಿತ್ರೀಕರಣ ನಡೆಯಲಿದೆ’ ಎನ್ನುತ್ತಾರೆ ನಿರ್ದೇಶಕ ಶಶಾಂಕ್. ನಾಯಕಿ ಪಾತ್ರಕ್ಕೆ ಹರಿಪ್ರಿಯಾ ಆಗಮಿಸುವ ಮೂಲಕ ಚಿತ್ರದ ಕೆಲಸಗಳಿಗೆ ಮತ್ತಷ್ಟುಚಾಲನೆ ಸಿಕ್ಕಿದೆ. ಹರಿಪ್ರಿಯಾ ನಟನೆಯಲ್ಲಿ ಚಿತ್ರೀಕರಣ ಮುಗಿಸಿರುವ ‘ಪೆಟ್ರೋಮ್ಯಾಕ್ಸ್’, ‘ಅಮೃತಮತಿ’ ಚಿತ್ರಗಳು ತೆರೆಗೆ ಬರಬೇಕಿದೆ. ತೆಲುಗಿನ ‘ಎವರು’ ರೀಮೇಕ್ ಹಾಗೂ ‘ಬೆಲ್‌ಬಾಟಂ 2’ ಚಿತ್ರಗಳು ಶೂಟಿಂಗ್ ಮೈದಾನದಲ್ಲಿವೆ. ಮತ್ತೆರಡು ಚಿತ್ರಗಳ ಜತೆಗೆ ಈಗ ಉಪೇಂದ್ರ ನಟನೆಯ ಚಿತ್ರವನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ ಹರಿಪ್ರಿಯಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.