
'ಗಾಳಿಪಟ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಭಾವನಾ ರಾವ್ ತೆರೆ ಮೇಲಿನ ಅಬ್ಬರ ಕಡಿಮೆ ಆಗಿದ್ದರೂ, ತೆರೆ ಹಿಂದಿನ ಮಾಡೋ ಸದ್ದು ಜೋರಾಗಿರುತ್ತದೆ. ನಿರ್ದೇಶಕಿಯಾಗಲು ರೆಡಿಯಾಗಿರುವ ಭಾವನಾ ಇದ್ದಕ್ಕಿದ್ದಂತೆ ಬಾತ್‌ಟಬ್‌ನಲ್ಲಿ ಮೇಕಪ್ ಹಿಡಿದು ಪೋಸ್ ಕೊಟ್ಟಿದ್ದಾರೆ.
'ಎಲ್ಲಾ ರೂಲ್ಸ್ ಮರಿಯಿರಿ. ಇಷ್ಟ ಪಡಿ, ಧರಿಸಿಕೊಳ್ಳಿ,' ಎಂದು ಮಾಡಿರುವ ಪೋಸ್ಟಿಗೆ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಬ್ಲಾಕ್ ಆ್ಯಂಡ್ ಬ್ಲಾಕ್ ಔಟ್‌ಫಿಟ್‌ನಲ್ಲಿ ಬಾತ್‌ಟಬ್‌ನಲ್ಲಿ ಕುಳಿತು ಕ್ಯಾಮೆರಾಗೆ ಸ್ಮೈಲ್ ಮಾಡಿದ್ದಾರೆ. ಹೀಲ್ಸ್ ಚಪ್ಪಲಿ ಎಲ್ಲೆಲ್ಲೋ ಬಿದ್ದಿವೆ. ಮೇಕಪ್ ಪ್ಯಾಲೇಟ್ ಪಕ್ಕದಲೇ ಇದೆ. ಫೋಟೋ ಏನೋ ಒಂಥರಾ ಡಿಫರೆಂಟ್ ಆಗಿದ್ದು, ಆಕರ್ಷಕವಾಗಿದೆ.
ಪಡ್ಡೆ ಹುಡುಗರ ಗಮನ ಸೆಳೆಯುತ್ತಿರುವ ಭಾವನಾ ಯಾಕೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ಎಂಬುವುದು ಎಲ್ಲರ ಪ್ರಶ್ನೆ ಆಗಿದೆ. 2019ರಲ್ಲಿ 'ಬೈಪಾಸ್ ರೋಡ್' ಚಿತ್ರದ ಮೂಲಕ ಬಿ-ಟೌನ್‌ಗೆ ಎಂಟ್ರಿ ಕೊಟ್ಟ ಭಾವನಾ ಎಲ್ಲೋ ಕಾಣೆಯಾಗಿದ್ದಾರೆ. 2018ರಲ್ಲಿ ಬಿಡುಗಡೆಯಾದ Rambo 2 ಹಾಗೂ ದಿ ವಿಲನ್ ಕೊನೆಯ ಚಿತ್ರವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.