ವಿವಾಹಿತನ ಸಂಬಂಧ ಮಾಡಿ ಮಕ್ಕಳೇ ಬೇಡ ಅಂದ್ಬಿಟ್ರು 'ಅಣ್ಣಯ್ಯ'ನ ಅಮ್ಮ ಅರುಣಾ ಇರಾನಿ!

Published : May 27, 2024, 08:56 PM ISTUpdated : May 27, 2024, 08:59 PM IST
ವಿವಾಹಿತನ ಸಂಬಂಧ ಮಾಡಿ ಮಕ್ಕಳೇ ಬೇಡ ಅಂದ್ಬಿಟ್ರು 'ಅಣ್ಣಯ್ಯ'ನ ಅಮ್ಮ ಅರುಣಾ ಇರಾನಿ!

ಸಾರಾಂಶ

ವಿವಾಹಿತನೊಂದಿಗೆ ಲವ್ವಲ್ಲಿ ಬೀಳುವುದು, ಆತನನ್ನು ಮದುವೆಯಾಗುವುದು ನಟಿ ಅರುಣಾ ಇರಾನಿಗೆ ಸಂಸಾರ ಹಾಳು ಮಾಡಿದ್ದು ಎನ್ನಿಸಿಲ್ಲ. ಆದರೆ, ಆತನಿಂದ ಮಕ್ಕಳನ್ನು ಪಡೆದರೆ ಅದು ಸಂಸಾರ ಹಾಳು ಮಾಡಿದಂತೆ..

ನಟಿ ಅರುಣಾ ಇರಾನಿ ಯಾರಿಗೆ ಗೊತ್ತಿಲ್ಲ? ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಹಲವಾರು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯ ನಟಿ ಎನಿಸಿದ್ದಾರೆ ಅರುಣಾ ಇರಾನಿ. ಹೆಚ್ಚಾಗಿ ವಿಲನ್ರೋಲ್‌ಗಳಲ್ಲೇ ಮಿಂಚಿರುವ ನಟಿ ಅರುಣಾ ಇರಾನಿ ಅವರು, ಕನ್ನಡದಲ್ಲಿ 'ಅಣ್ಣಯ್ಯ' ಚಿತ್ರದಲ್ಲಿ ಸಹ ನಟಿಸಿದ್ದಾರೆ. ಸೊಸೆಯನ್ನು ಗೋಳುಹುಯ್ದುಕೊಳ್ಳುವ ಪಾತ್ರದಲ್ಲಿ ನಟಿಸಿ ಸಾಕಷ್ಟು ಜನರ ಸಿಟ್ಟಿಗೆ ಕಾರಣವಾಗಿರುವ ನಟಿ ಅರುಣಾ ಇರಾನಿ ಅವರು ತಮ್ಮ 44ನೆಯ ವಯಸ್ಸಿನಲ್ಲಿ ವಿವಾಹಿತ ಕುಕು ಕೊಹ್ಲಿ ಅವರನ್ನು ಮದುವೆಯಾಗಿದ್ದಾರೆ. 

ನಟಿ ಅರುಣಾ ಇರಾನಿ ಅವರದು ಬಹಳ ವಿಶಿಷ್ಠ ವ್ಯಕ್ತಿತ್ವ ಎನ್ನಬಹುದು. ತಮ್ಮ 44ನೆಯ ವಯಸ್ಸಿನಲ್ಲಿ ಕುಕು ಕೊಹ್ಲಿ ಎಂಬ ವಿವಾಹಿತನೊಂದಿಗೆ ಲವ್ವಲ್ಲಿ ಬಿದ್ದು ಮದುವೆ ಮಾಡಿಕೊಂಡಿರುವ ಅರುಣಾ ಇರಾನಿ ಆ ಬಳಿಕ ಎಚ್ಚೆತ್ತುಕೊಂಡರು ಎನ್ನಬಹುದೇ? ಏಕೆಂದರೆ, 'ವಿವಾಹಿತನೊಂದಿಗೆ ಮದುವೆಯಾಗಿರುವ ನಾನು ಆತನ ಸಂಸಾರವನ್ನು ಹಾಳು ಮಾಡಬಾರದು ಎಂದು ಮಕ್ಕಳನ್ನೇ ಮಾಡಿಕೊಳ್ಳದಿರಲು ನಿರ್ಧರಿಸಿದೆ' ಎಂದಿದ್ದಾರೆ. ಇದೊಂದು ವಿಚಿತ್ರ ರೀತಿಯ ತರ್ಕ ಎನ್ನಬಹುದು. 

ಬಾಲಿವುಡ್‌ ಆಫರ್‌ ಮುಗಿದ ಹೋದ ಚಾಪ್ಟರ್‌ ಆಗಿರಬಹುದು; ಮೌನ ಮುರಿದ ಜ್ಯೋತಿಕಾ!

ವಿವಾಹಿತನೊಂದಿಗೆ ಲವ್ವಲ್ಲಿ ಬೀಳುವುದು, ಆತನನ್ನು ಮದುವೆಯಾಗುವುದು ನಟಿ ಅರುಣಾ ಇರಾನಿಗೆ ಸಂಸಾರ ಹಾಳು ಮಾಡಿದ್ದು ಎನ್ನಿಸಿಲ್ಲ. ಆದರೆ, ಆತನಿಂದ ಮಕ್ಕಳನ್ನು ಪಡೆದರೆ ಅದು ಸಂಸಾರ ಹಾಳು ಮಾಡಿದಂತೆ ಎಂಬುದು ಸ್ವಲ್ಪ ವಿಚಿತ್ರವಾದ ತರ್ಕ ಎನಿಸುತ್ತದೆ. ಅದೇನೇ ಇರಲಿ, ಅದು ಅವರ ಜೀವನ, ಅವರದೇ ತರ್ಕದ ಪ್ರಕಾರ ನಡೆಯಲಿ ಬಿಡಿ. ಆದರೆ, ಬಹಳಷ್ಟು ನಟಿಯರೇಕೆ ವಿವಾಹಿತ ಪುರುಷರ ಜತೆಗೇ ಲವ್ವಲ್ಲಿ ಬಿದ್ದು ಅವರನ್ನು ಮದುವೆಯಾಗುತ್ತಾರೆ ಎಂಬ ಯಕ್ಷ ಪ್ರಶ್ನೆಗೆ ಯಾರಾದರೂ ಉತ್ತರ ಕೊಡಬಹುದೇ? 

ಜಡೇಜಾ ಫ್ಯಾಮಿಲಿ ಸೊಸೆಯಾಗಲಿಲ್ಲ ಮಾಧುರಿ ದೀಕ್ಷಿತ್; ಕ್ರಿಕೆಟಿಗನ ಲವ್ ಬ್ರೇಕಪ್‌ ಆಗಿದ್ದೇಕೆ?

ಈ ನಟನಟಿಯರನ್ನೇ ದೇವರೆಂದು, ರೋಲ್ ಮಾಡೆಲ್‌ಗಳು ಎಂದು ಆರಾಧಿಸುವ ಸಾಮಾನ್ಯ ಜನರು ಇತ್ತೀಚಿಗಂತೂ ಅವರನ್ನೇ ಅನುಸರಿಸತೊಡಗಿದ್ದಾರೆ ಎನ್ನಬಹುದು. ಸದ್ಯ ಸಮಾಜ ಯಾವ ರೀತಿ ಎಂದರೆ, ಮದುವೆಯಾದವರಲ್ಲಿ ಅರ್ಧದಷ್ಟು ಜನ ಡಿವೋರ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದರೆ ಅತಿಶಯೋಕ್ತಿ ಅಲ್ಲ ಎಂಬಂತಾಗಿದೆ. ಹಾಗಿದ್ದರೆ, ಯಾಕೆ ನಟಿಯರು, ನಟರು ಹೀಗೆ ಮಾಡುತ್ತಾರೆ? ಕಲಾವಿದರು ಜೀವನಕ್ಕಿಂತ ಭಾವನೆಗೆ ಜಾಸ್ತಿ ಬೆಲೆ ಕೊಡುತ್ತಾರೆ ಎನ್ನಬಹುದು.

'ಕಾಮ ಕಸ್ತೂರಿ' ಖ್ಯಾತಿ ನಟಿ ಪೂನಂ ಧಿಲ್ಲಾನ್ ಈಗೆಲ್ಲಿದ್ದಾರೆ? ಮುರಿದು ಬಿದ್ದ ಮದುವೆಗಳೆಷ್ಟು? 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ